ಚಂದನ್ ಶೆಟ್ಟಿ ಎರಡನೇ ಮದ್ವೆಗೆ ರೆಡಿ?... ಹುಡ್ಗಿ ಹೀಗಿರ್ಬೇಕಂತೆ ನೋಡ್ರೀ..!

ಆ ರೀತಿಯಾಗಿರೋ ಹುಡ್ಗಿ ನಂಗೆ ಸಿಕ್ಕಿದ್ರೆ ಖಂಡಿತವಾಗಿಯೂ ನಾನು ಮದ್ವೆ ಆಗ್ತೀನಿ.. 'ಎಂದಿದ್ದಾರೆ ಚಂದನ್ ಶೆಟ್ಟಿ. ಜೊತೆಗೆ, 'ಮೊದಲ ಮದ್ವೆ ಡಿವೋರ್ಸ್ ಆಗಿರೋ ಬಗ್ಗೆ ಚಿಂತೆ ಮಾಡಿ.. 

Rapper Chandan Shetty speaks about his second marriage

ರಾಪರ್, ನಟ ಹಾಗೂ ಸಂಗೀತ ನಿರ್ದೇಶಕ ಚಂದನದ ಶೆಟ್ಟಿ (Chandan Shetty) ಅವರು ತಮ್ಮ ಎರಡನೇ ಮದುವೆ ಬಗ್ಗೆ ಮಾತನ್ನಾಡಿದ್ದಾರೆ. ಯುಟ್ಯೂಬ್ ಸಂದರ್ಶನದಲ್ಲಿ ಆ ಬಗ್ಗೆ ಮಾತನ್ನಾಡಿರುವ ಚಂದನ್ ಶೆಟ್ಟಿ ಅವರು ತಮಗೆ ಕೇಳಿರುವ ಪ್ರಶ್ನೆಗೆ ಅದೇನು ಹೇಳಿದ್ದಾರೆ ನೋಡಿ.. 'ಫಸ್ಟ್ ಆಪ್ ಆಲ್, ನಂಗೆ ಅವ್ಳನ್ನ ಮದ್ವೆ ಆಗ್ಬೇಕು ಅಂತ ಅನ್ನಿಸ್ಬೇಕು, ಹಾಗೆ ಆ ಹುಡ್ಗಿ ಇರ್ಬೇಕು.. ಬರುವಂತಹ ಹುಡುಗಿ ನನ್ನ ಅಷ್ಟು ಜಾಸ್ತಿ ಪ್ರೀತಿ ಮಾಡ್ಬೇಕು.. ನಾನಂತೂ ನನ್ ಲೈಫಲ್ಲಿ ಬರೋ ಹುಡ್ಗಿನಾ ಪ್ರೀತಿ ಮಾಡ್ತೀನಿ, ಆದ್ರೆ ಅವ್ಳು ನನಗಿಂತ ಜಾಸ್ತಿ ಪ್ರೀತಿ ಮಾಡ್ಬೇಕು.. 

ಆ ರೀತಿಯಾಗಿರೋ ಹುಡ್ಗಿ ನಂಗೆ ಸಿಕ್ಕಿದ್ರೆ ಖಂಡಿತವಾಗಿಯೂ ನಾನು ಆ ಬಗ್ಗೆ ಯೋಚ್ನೆ ಮಾಡ್ತೀನಿ, ಮದ್ವೆನೂ ಆಗ್ತೀನಿ.. 'ಎಂದಿದ್ದಾರೆ ಚಂದನ್ ಶೆಟ್ಟಿ. ಜೊತೆಗೆ, 'ಮೊದಲ ಮದ್ವೆ ಡಿವೋರ್ಸ್ ಆಗಿರೋ ಬಗ್ಗೆ ಚಿಂತೆ ಮಾಡಿ ಸಣ್ಣ ಆಗಿದೀರಾ' ಎಂಬ ಪ್ರಶ್ನೆಗೆ ಕೂಡ ಚಂದನ್ ಶೆಟ್ಟ ಉತ್ತರಿಸಿದ್ದಾರೆ. ಈ ಬಗ್ಗೆ ತುಂಬಾ ಬುದ್ದಿವಂತಿಕೆಯಿಂದ ಉತ್ತರಿಸಿದ್ದಾರೆ ಎಂದೂ ಕೂಡ ಹೇಳಬಹುದು. ಅದೇನು ಹೇಳಿದ್ದಾರೆ ಗೊತ್ತಾ? ಮುಂದೆ ನೋಡಿ..

Latest Videos

ನಿವೇದಿತಾ ಗೌಡ ರೀಲ್ಸ್ ಮಾಡ್ತಾರೆ, ಆದರೆ ಕಾಮೆಂಟ್ಸ್ ನೋಡಲ್ವಂತೆ? ಅಲ್ಲೇ ಇರೋದು ಮ್ಯಾಟರ್..

'ನಾನು ಡಯಟ್ ಮಾಡಿ ಸಣ್ಣ ಆಗಿರೋದು, ಯೋಚ್ನೆ ಮಾಡಿ ಅಲ್ಲ.. ಹಾಗೆ ನೋಡಿದ್ರೆ ಡಿಪ್ರೆಶನ್‌ನಲ್ಲಿ ಇರೋರೇ ಜಾಸ್ತಿ ತಿಂದು ದಪ್ಪ ಆಗೋದು, ನಾನು ಹೆಲ್ತಿ ಫುಡ್ ತಿಂದು, ಡೈಲಿ ಜಿಮ್, ಎಕ್ಸರಿಸೈಜ್ ಮಾಡಿ, ಡಯಟ್ ಮಾಡಿ ಸಣ್ಣ ಆಗಿರೋದು.. ನಾನು ಖಂಡಿತವಾಗಿಯೂ ತುಂಬಾ ಖುಷಿಯಾಗಿದೀನಿ..ನಂಗೆ ಯಾವ್ದೇ ಚಿಂತೆ ಇಲ್ಲ ಈಗ, ಆರಾಮ್ ಆಗಿದೀನಿ.. ನಾನೀಗ ಹೆಚ್ಚು ಹೆಚ್ಚು ಕೆಲಸದ ಬಗ್ಗೆ ಮನಸ್ಸು ಕೇಂದ್ರೀಕರಿಸ್ತಾ ಇದೀನಿ.. ನಾನು ಇನ್ನೂ ನೋಡದಿರುವ ಜಾಗಗಳನ್ನು ನೋಡ್ತಾ, ನನ್ನ ಲೈಫ್‌ನ ಎಂಜಾಯ್ ಮಾಡ್ತಾ ಇದೀನಿ..' ಎಂದಿದ್ದಾರೆ ಚಂದನ್ ಶೆಟ್ಟಿ. 

ಹೌದು, ನಟ ಚಂದನ್ ಶೆಟ್ಟಿ ಅವರ ವೈಯಕ್ತಿಕ ಬದುಕು ಈಗ ಹಲವರಿಗೆ ಯೋಚ್ನೆ ಮಾಡೋದಕ್ಕೆ, ಪ್ರಶ್ನೆ ಮಾಡೋದಕ್ಕೆ, ಅವರ ಉತ್ತರ ಏನಿರುತ್ತೆ ಎಂಬ ಕುತೂಹಲಕ್ಕೆ ದಾರಿ ಆಗಿಬಿಟ್ಟಿದೆ. ಸಮಾಜವೇ ಹಾಗೆ, ತಾವು ಸಮಸ್ಯೆಯಲ್ಲಿ ಇದ್ದರೂ ಬೇರೆಯವರು ಸಮಸ್ಯೆಯಲ್ಲಿ ಇದ್ದಾರೆ ಎಂಬುದನ್ನು ತಿಳಿದರೆ ಅಲ್ಲೇ ಸ್ವಲ್ಪ ಸಮಾಧಾನ ಪಡುವಂಥ ಮೆಂಟಾಲಿಟಿಯೇ ಜಾಸ್ತಿ. ಒಟ್ಟಿನಲ್ಲಿ, ತಮಗೆ ಕೇಳೀರೋ ಪ್ರಶ್ನೆಗೆ ಚಂದನ್ ಶೆಟ್ಟಿಯವರು ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳಿದ್ದಾರೆ. ಅವರು ಮತ್ತೊಂದು ಮದುವೆ ಆಗೋತನಕವೂ ಇಂತಹ ಪ್ರಶ್ನೆಗಳು ಅವರನ್ನು ಬಿಡುವ ಯಾವುದೇ ಲಕ್ಷಣ ಸದ್ಯಕ್ಕಂತೂ ಇಲ್ಲ ಎನ್ನಬಹುದೇನೋ..! 

ನಿವೇದಿತಾ ಗೌಡ ಈಗ 'ಮುದ್ದು ರಾಕ್ಷಸಿ'.. ಆ ಖುಷಿಯಲ್ಲಿ ನೋಡಿ ಬಿನ್ನಾಣಗಿತ್ತಿ ಫೋಟೋಸ್!

vuukle one pixel image
click me!