ಯಾಕಿಂಗ್‌ ಆಡ್ತಾರೆ?!.. ಧನ್ವೀರ್ ಗೌಡ 'ವಾಮನ' ಟ್ರೈಲರ್ ಲಾಂಚ್ ವೇಳೆ ದರ್ಶನ್ ಫ್ಯಾನ್ಸ್ ಪುಂಡಾಟ!

ನಾಳೆ ಶುಕ್ರವಾರ ಹೊಸ ಸಿನಿಮಾ ರಿಲೀಸ್ ಇದೆ. ಸಾಕಷ್ಟು ಸೀಟ್ ಗಳು ಮುರಿದು ಹೋಗಿವೆ. ನಾಳೆ ಹೇಗೆ ಸಿನಿಮಾ ರಿಲೀಸ್ ಗೆ ಥಿಯೇಟರ್ ಕೊಡೊದು? ದರ್ಶನ್ ಫ್ಯಾನ್ಸ್ ನಡೆಗೆ ಥಿಯೇಟರ್ ಸಿಬ್ಬಂದಿ ಬೇಸರ..

Darshan Thoogudeepa fans damaged prasanna theater seats and window doors

ಇಂದು ನಟ ದರ್ಶನ್ ಆಪ್ತ ಧನ್ವೀರ್ ಗೌಡ ಅವರ ಮುಂಬರುವ ವಾಮನ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ ಇತ್ತು. ಅಲ್ಲಿಗೆ ನಟ ದರ್ಶನ್ ಬಂದಿರಲಿಲ್ಲ ಅನ್ನೋದು ಒಂದು ಸಂಗತಿಯಾದರೆ, ಅದಕ್ಕಿಂತಲೂ ಹೆಚ್ಚು ಈಗ ಇನ್ನೊಂದು ಸುದ್ದಿ ಓಡಾಡುತ್ತಿದೆ. ವಾಮನ ಟ್ರೇಲರ್ ರಿಲೀಸ್‌ ಈವೆಂಟ್‌ನಲ್ಲಿ ನಟ ದರ್ಶನ್ ಫ್ಯಾನ್ಸ್ ಗಳು ಹುಚ್ಚಾಟ ಮಾಡಿದ್ದಾರೆ ಎನ್ನಲಾಗಿದೆ. ಧನ್ವೀರ್ ಗೌಡ ಅವರು ದರ್ಶನ್‌ಗೆ ತುಂಬಾ ಆಪ್ತರಾಗಿರುವ ಕಾರಣಕ್ಕೆ ದರ್ಶನ್‌ ಫ್ಯಾನ್ಸ್ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. 

ಪ್ರಸನ್ನ ಚಿತ್ರಮಂದಿರದಲ್ಲಿ ನಡೆದ ವಾಮನ ಚಿತ್ರದ ಟ್ರೈಲರ್ ಲಾಂಚ್ ವೇಳೆ ಏನಾಗಿದೆ ಅಲ್ಲಿ? ಪ್ರಸನ್ನ ಚಿತ್ರಮಂದಿರದ ಚೇರ್‌ಗಳು ಹಾಗೂ ಕಿಟಕಿ ಡೋರ್ ಗಳನ್ನು ಡ್ಯಾಮೇಜ್ ಮಾಡಲಾಗಿದೆ. ಟ್ರೈಲರ್ ಲಾಂಚ್ ಗೆ ಬಂದಿದ್ದವರು ಪುಂಡಾಟ ಮೆರೆದಿರುವ ಘಟನೆ ನಡೆದಿದೆ. ಅವರೆಲ್ಲರೂ ಸಹಜವಾಗಿಯೇ ದರ್ಶನ್ ಫ್ಯಾನ್ಸ್ ಬಳಗ ಎನ್ನಲಾಗಿದೆ. ಪ್ರಸನ್ನ  ಥಿಯೇಟರ್ ನ ಸೆಂಕೆಂಡ್ ಕ್ಲಾಸ್ ನಲ್ಲಿ 80 ಸೀಟ್ ಗಳು, ಬಾಲ್ಕನಿಯಲ್ಲಿ 10 ಸೀಟ್ ಗಳನ್ನು ದರ್ಶನ್ ಫ್ಯಾನ್ಸ್ ಮುರಿದು ಹಾಕಿದ್ದಾರೆ ಎನ್ನಲಾಗಿದೆ. 

Latest Videos

ಆಪ್ತ ಬಾಂಧವ ಧನ್ವೀರ್ ಸಹಾಯಕ್ಕೂ ಬರ್ಲಿಲ್ಲ ದರ್ಶನ್.. 'ವಾಮನ'ನಿಂದಲೂ ದೂರ ಉಳಿದ್ದಿದ್ದೇಕೆ?

ನಾಳೆ ಶುಕ್ರವಾರ ಹೊಸ ಸಿನಿಮಾ ರಿಲೀಸ್ ಇದೆ. ಸಾಕಷ್ಟು ಸೀಟ್ ಗಳು ಮುರಿದು ಹೋಗಿವೆ. ನಾಳೆ ಹೇಗೆ ಸಿನಿಮಾ ರಿಲೀಸ್ ಗೆ ಥಿಯೇಟರ್ ಕೊಡೊದು? ದರ್ಶನ್ ಫ್ಯಾನ್ಸ್ ನಡೆಗೆ ಥಿಯೇಟರ್ ಸಿಬ್ಬಂದಿ ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ನಟ ದರ್ಶನ್ ಅವರು ಖಂಡಿತವಾಗಿಯೂ ಧನ್ವೀರ್ ಗೌಡ ಟ್ರೇಲರ್‌ ರಿಲೀಸ್‌ಗೆ ಬಂದೇ ಬರ್ತಾರೆ ಅಂತ ಅಂದುಕೊಂಡಿದ್ದ ಫ್ಯಾನ್ಸ್, ಬರಲಿಲ್ಲ ಎಂಬ ಬೇಸರಕ್ಕೆ ಹಾಗೆ ಮಾಡಿರಬಹುದು. ಒಟ್ಟಿನಲ್ಲಿ, ಯಾಕೆ ದರ್ಶನ್‌ ಫ್ಯಾನ್ಸ್ ಯಾವಾಗಲೂ ದರ್ಶನ್‌ ಮುಖಕ್ಕೆ ಮಸಿ ಬಳಿಯುವ ಎಲ್ಲಾ ಪ್ರಯತ್ನ ಮಾಡುತ್ತಾರೆ ಎಂಬುದು ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ..!

ಇನ್ನು, ಕನ್ನಡದ ಸ್ಟಾರ್ ನಟ ದರ್ಶನ್ ಅವರು 'ವಾಮನ' ಸಿನಿಮಾದ 'ಟ್ರೈಲರ್ ಲಾಂಚ್​​'ಗೆ ಬರಲಿಲ್ಲ. ಧನ್ವಿರ್ ಗೌಡ ನಟನೆಯ 'ವಾಮನ' ಚಿತ್ರದ ಟ್ರೈಲರ್ ರಿಲೀಸ್ ಈವೆಂಟ್‌ನಿಂದಲೂ ನಟ ದರ್ಶನ್ ದೂರ ಉಳಿಇದ್ದು ಹಲವು ಊಹಾಪೋಹಗಳಿಗೆ ಕಾರಣ ಆಗಲಿರುವುದಂತೂ ಖಂಡಿತ. ಇಂದು ನಟ ಹಾಗೂ ದರ್ಶನ್ ಆಪ್ತಮಿತ್ರ, ಆಪ್ತ ಬಾಂಧವ ಧನ್ವೀರ್ ಗೌಡ ನಟನೆಯ 'ವಾಮನ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಅಲ್ಲಿ ಖಂಡಿತವಾಗಿಯೂ ನಟ ದರ್ಶನ್‌ ತೂಗುದೀಪ ಅವರ 'ದರ್ಶನ' ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಅದರೆ.. ದರ್ಶನ್ ಬರಲೇ ಇಲ್ಲ. 

ಶಿವರಾಜ್‌ಕುಮಾರ್‌ಗೆ 'ಬಾರಿಸಿ' ಎಂದಿದ್ದ ಡಾ ರಾಜ್‌ಕುಮಾರ್.. ಸಿಹಿ ಕಹಿ ಚಂದ್ರು ಹೊಡೆದ್ರು, ಆದ್ರೆ..

ಹೌದು, ಧನ್ವೀರ್ ನಟನೆಯ ವಾಮನ ಟ್ರೈಲರ್ ಲಾಂಚ್​ಗೆ ಇವೆಂಟ್​ ನಿಂದಲೂ ನಟ ದರ್ಶನ್ ದೂರವುಳಿದಿದ್ದಾರೆ. ಅಲ್ಲಿಗೆ ನಟ ದರ್ಶನ್‌ ಬಗೆಗಿನ ಹಲವರ ಲೆಕ್ಕಾಚಾರ ಸುಳ್ಆಗಿದೆ. ದರ್ಶನ್ ಅಲ್ಲಿಗೆ ಬರಲಿಲ್ಲ, ಕೇಳಬೇಕಾಗಿದ್ದ ಪ್ರಶ್ನೆ, ಸಿಗಬೇಕಾಗಿದ್ದ ಉತ್ತರ ಯಾವುದೂ ಕೂಡ ಸಿಗಲಿಲ್ಲ. ಆದರೆ, ಟ್ರೈಲರ್ ನೋಡಿ, ವಿಡಿಯೋ ಬೈಟ್  ಮೂಲಕ ವಾಮನ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ ದರ್ಶನ್. ಅಲ್ಲಿಗೆ 'ಇಲ್ಲಿಗೀ ಈ ಕಥೆ ಮುಗಿಯಿತು..' ಎಂಬಂತೆ ಆಟ ಆಡಿದ್ದಾರೆ ದರ್ಶನ್. 

ಪ್ರಸನ್ನ ಚಿತ್ರಮಂದಿರದಲ್ಲಿ ದರ್ಶನ್ ಬರುವ ನಿರೀಕ್ಷೆಯೊಂದಿಗೆ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ, ಅಲ್ಲಿಗೆ ದರ್ಶನ್ ಬರಲಿಲ್ಲ. ನಿಜ ಹೇಳಬೇಕು ಎಂದರೆ, ನಟ ದರ್ಶನ್ ಇವತ್ತು ಬೆಂಗಳೂರಿನಲ್ಲಿ ಇಲ್ಲ. ಅವರು ರಾಜಸ್ಥಾನದಲ್ಲಿ 'ದಿ ಡೆವಿಲ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ವಕೀಲರ ಸಲಹೆ ಮೇರೆಗೆ ಇನ್ನಷ್ಟು ಕಾಲ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿಯಲು ದರ್ಶನ್ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಆಪ್ತ ಧನ್ವೀರ್ ಗೌಡ ಸೇರಿದಂತೆ ಯಾವುದೇ ಕಾರ್ಯಕ್ರಮಗಳೀಗೆ ಸದ್ಯ ಹಾಜರಿ ಹಾಕೋದಿಲ್ಲ ಎನ್ನಲಾಗಿದೆ. ಇವಿಷ್ಟು ನಟ ದರ್ಶನ್, ಧನ್ವೀರ್ ಹಾಗೂ ವಾಮನ ಟ್ರೈಲರ್ ಲಾಂಚ್ ಕಥೆ..!

ಚಂದನ್ ಶೆಟ್ಟಿ ಎರಡನೇ ಮದ್ವೆಗೆ ರೆಡಿ?... ಹುಡ್ಗಿ ಹೀಗಿರ್ಬೇಕಂತೆ ನೋಡ್ರೀ..!

vuukle one pixel image
click me!