vuukle one pixel image

News Hour: ಬಸನಗೌಡ ಯತ್ನಾಳ್‌ ಉಚ್ಛಾಟನೆ, ಮುಂದಿನ ನಡೆ ಏನು?

Santosh Naik  | Published: Mar 27, 2025, 11:46 PM IST

ಬೆಂಗಳೂರು (ಮಾ.27): ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಇದು ಕಮಲದಲ್ಲಿನ ಆಂತರಿಕ ದಂಗೆಯ ಅಂತ್ಯವೋ? ಆರಂಭವೋ? ಅನ್ನೋದು ಅರ್ಥವಾಗಿಲ್ಲ. ಯತ್ನಾಳ್‌ ಅವರ ಮುಂದಿನ ನಡೆ ಏನು ಅನ್ನೋದರ ಬಗ್ಗೆಯೂ ಕುತೂಹಲ ಆರಂಭವಾಗಿದೆ.

ಬಿಜೆಪಿಯಿಂದ ಯತ್ನಾಳ್‌ ಮೂರನೇ ಬಾರಿಗೆ ಪಕ್ಷದಿಂದ ಉಚ್ಛಾಟನೆಯಾಗಿದ್ದಾರೆ. ವಾಜಪೇಯಿ ಅವರ ಕ್ಯಾಬಿನೆಟ್‌ನಲ್ಲಿ ಸಚಿವರಾಗಿದ್ದ ಯತ್ನಾಳ್‌, ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆಯ ಬಗ್ಗೆ ಮಾತನಾಡಿದ್ದಕ್ಕಾಗಿ ಮೊದಲ ಬಾರಿಗೆ ಉಚ್ಛಾಟನೆಯಾಗಿದ್ದರು.

ಯತ್ನಾಳ್ ಉಚ್ಚಾಟನೆ, ಸೆಂಚುರಿ ದಾಟಿದ ಪದಾಧಿಕಾರಿಗಳು ರಾಜೀನಾಮೆ ವಿಜಯಪುರ ಬಿಜೆಪಿ ಮಂಡಲವೇ ಖಾಲಿ! ಮುಂದೇನು?

ಯತ್ನಾಳ್‌ ಅವರ ಉಚ್ಛಾಟನೆಯನ್ನು ನಾನು ಸಂಭ್ರಮಿಸಲಾರೆ, ಇದು ದುರದೃಷ್ಟಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಯತ್ನಾಳ್‌ ಉಚ್ಛಾಟನೆಯನ್ನು ಜಯ ಮೃತ್ಯುಂಜಯ ಸ್ವಾಮೀಜಿಗಳು ವಿರೋಧಿಸಿದ್ದಾರೆ.