ಶಿಶು ಮರಣ ಇಳಿಕೆಯಲ್ಲಿ ಭಾರತದ ಪ್ರಗತಿ: ವಿಶ್ವಸಂಸ್ಥೆ ಪ್ರಶಂಸೆ!

Published : Mar 28, 2025, 07:45 AM ISTUpdated : Mar 28, 2025, 08:04 AM IST
ಶಿಶು ಮರಣ ಇಳಿಕೆಯಲ್ಲಿ ಭಾರತದ ಪ್ರಗತಿ: ವಿಶ್ವಸಂಸ್ಥೆ ಪ್ರಶಂಸೆ!

ಸಾರಾಂಶ

ವಿಶ್ವಸಂಸ್ಥೆಯ ವರದಿಯ ಪ್ರಕಾರ, ಶಿಶು ಮರಣ ದರವನ್ನು ಕಡಿಮೆ ಮಾಡುವಲ್ಲಿ ಭಾರತದ ಪ್ರಯತ್ನಗಳು ಮಾದರಿಯಾಗಿವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ವ್ಯವಸ್ಥೆಯಲ್ಲಿನ ಹೂಡಿಕೆ ಮತ್ತು ಆರೋಗ್ಯ ಸೌಲಭ್ಯಗಳ ಹೆಚ್ಚಳದಿಂದ ಮರಣ ದರ ಗಣನೀಯವಾಗಿ ಇಳಿಕೆಯಾಗಿದೆ.

ವಾಷಿಂಗ್ಟನ್‌: ಶಿಶು ಮರಣ ದರ ಇಳಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ಶ್ರಮ ಹಾಗೂ ಪ್ರಗತಿ ‘ಮಾದರಿ’ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ. ಮಂಗಳವಾರ ಬಿಡುಗಡೆಯಾದ ಶಿಶು ಮರಣ ಅಂದಾಜು ವರದಿಯಲ್ಲಿ ಭಾರತ, ನೇಪಾಳ, ಸೆನೆಗಲ್‌, ಘಾನಾ ಹಾಗೂ ಬುರುಂಡಿ ದೇಶಗಳು ತಡೆಗಟ್ಟಬಹುದಾದ ಮಕ್ಕಳ ಸಾವುಗಳನ್ನು ಕಡಿಮೆ ಮಾಡಲು ಅಳವಡಿಸಿಕೊಂಡ ವೈವಿಧ್ಯಮಯ ತಂತ್ರಗಳನ್ನು ಉಲ್ಲೇಖಿಸಿ, ‘ಮಾದರಿ ರಾಷ್ಟ್ರಗಳು’ ಎಂದು ಶ್ಲಾಘಿಸಿದೆ.

‘ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್‌ ಭಾರತದಡಿ ಪ್ರತಿ ಕುಟುಂಬಕ್ಕೆ 4.7 ಲಕ್ಷ ರು. ಮೊತ್ತದ ವಿಮೆ ಒದಗಿಸಲಾಗುತ್ತಿದೆ. ಈ ಮೂಲಕ ಆರೋಗ್ಯ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಿರುವ ಭಾರತವು ಲಕ್ಷಾಂತರ ಜೀವಗಳನ್ನು ಉಳಿಸಿದೆ 2000ದಿಂದೀಚೆಗೆ 5 ವರ್ಷಕ್ಕಿಂತ ಚಿಕ್ಕ ಮಕ್ಕಳ ಮರಣದರದಲ್ಲಿ ಶೇ.70ರಷ್ಟು ಮತ್ತು ನವಜಾತ ಶಿಶುಗಳ ಮರಣದರದಲ್ಲಿ ಶೇ.61ರಷ್ಟು ಇಳಿಕೆಯಾಗಿದೆ. ಆರೋಗ್ಯ ಸೌಲಭ್ಯಗಳ ವ್ಯಾಪ್ತಿ ಹೆಚ್ಚಳ, ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಯ ಮೂಲಕ ಇದನ್ನು ಸಾಧಿಸಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಹಿಮಾಚಲ ಪ್ರದೇಶದಲ್ಲಿ 60 ದಿನಗಳ ವಿಶೇಷ ಹೆರಿಗೆ ರಜೆ ನೀಡಿದ ಕಾಂಗ್ರೆಸ್‌ ಸರ್ಕಾರ!

ಜಾಗತಿಕ ಹಸಿವು ಸೂಚ್ಯಂಕದಲ್ಲಿ 127 ದೇಶಗಳ ಪೈಕಿ ಭಾರತಕ್ಕೆ ಆತಂಕಕಾರಿ ಸ್ಥಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!