ನಾನು ಸೀನ್‌ಗೆಲ್ಲಾ ರೆಡಿಯಾಗ್ತಾ ಇದ್ದೆ, ಅಣ್ಣವ್ರು ಬಂದ್ಬಿಟ್ರು.. ಏನ್ ತಮ್ಮಾ, ನಿನ್ನೆ ಬಹಳ ಚೆನ್ನಾಗಿ ಆಕ್ಟ್ ಮಾಡಿದ್ರಂತೆ.. ಅದಕ್ಕೇ ನೋಡೋಕೆ ಬಂದೆ ನಾನು ಅಂದ್ರು.. ಸಿನಿಮಾ ರಾಜ್‌ಕುಮಾರ್ ಅವ್ರದ್ದು ಅಲ್ವೇ ಅಲ್ಲ, ಅದು ಶಿವರಾಜ್‌ಕುಮಾರ್..
ಕನ್ನಡ ಸಿನಿಮಾ ಹಾಗೂ ಕಿರುತೆರೆ ನಟ ಸಿಹಿಕಹಿ ಚಂದ್ರು (Sihi Kahi Chandru) ಅವರು ಡಾ ರಾಜ್‌ಕುಮಾರ್ (Dr Rajkumar) ಅವರ ಮುಂದೆ ನಡೆದ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದನ್ನು ತಿಳಿದರೆ ನೀವೂ ಕೂಡ ಚಕಿತರಾಗುತ್ತೀರಿ. ಇದು ನಡೆದಿದ್ದು ಶಿವರಾಜ್‌ಕುಮಾರ್ ನಟನೆಯ ಸಿನಿಮಾವೊಂದರ ಚಿತ್ರೀಕರಣದ ಸಮಯದಲ್ಲಿ. ಅದು ಯಾವ ಸಿನಿಮಾ, ಏನಾಗಿತ್ತು ಅನ್ನೋ ಮಾಹಿತಿ ಇಲ್ಲಿದೆ ನೋಡಿ..
ನಾನು ಸೀನ್‌ಗೆಲ್ಲಾ ರೆಡಿಯಾಗ್ತಾ ಇದ್ದೆ, ಅಣ್ಣವ್ರು ಬಂದ್ಬಿಟ್ರು.. ಏನ್ ತಮ್ಮಾ, ನಿನ್ನೆ ಬಹಳ ಚೆನ್ನಾಗಿ ಆಕ್ಟ್ ಮಾಡಿದ್ರಂತೆ.. ಅದಕ್ಕೇ ನೋಡೋಕೆ ಬಂದೆ ನಾನು ಅಂದ್ರು.. ಸಿನಿಮಾ ರಾಜ್‌ಕುಮಾರ್ ಅವ್ರದ್ದು ಅಲ್ವೇ ಅಲ್ಲ, ಅದು ಶಿವರಾಜ್‌ಕುಮಾರ್ ಅವರದ್ದು, ಅರಳಿದ ಹೂಗಳು ಅಂತ.. ಅವ್ರ ಮನೆನಲ್ಲಿ ಶೂಟಿಂಗ್, ಅದೂ ಇದು ಅಂತ ವಿಷ್ಯ ಬಂದಾಗ, ಶೂಟಿಂಗು, ಸಿಹಿಕಹಿ ಚಂದ್ರು ಅಂತೆಲ್ಲಾ ಬಂದಾಗ ಸಹಿಕಹಿ ಚಂದ್ರು ಚೆನ್ನಾಗಿ ನಟಿಸ್ತಾರೆ ಅಂತ ಸುದ್ದಿ ಅವ್ರ ಕಿವಿಗೆ ಬಿದ್ದಿದೆ. ಹೀಗಾಗಿ ಅವ್ರು ನನ್ ನೋಡೋಕೆ ಬಂದಿದಾರೆ.
ನಾಟಕದ ಸ್ಟೇಜಲ್ಲಿ ಡಾ ರಾಜ್‌ಕುಮಾರ್ ನಡುಗ್ತಾ ಇದ್ರಂತೆ.. ಹಾಗಂತ ಹೇಳಿದ್ದು ಯಾರು ನೋಡಿ!
ಶೂಟಿಂಗ್ ಸೆಟ್ ಗೆ ಬಂದ ಅಣ್ಣಾವ್ರು ಕ್ಯಾಮೆರಾ ಪಕ್ಕ ಬಂದು ಚೇರ್ ಹಾಕ್ಕೊಂಡು ಕೂತ್ಕೊಂಡ್ರುಬಿಟ್ರು. ಸೀನ್ ಏನು ಅಂದ್ರೆ, ನಾನು ಡುಪ್ಲಿಕೇಟ್ ಅಣ್ಣ ಆಗಿ ಕಾಲೇಜ್ ಪ್ರಿನ್ಸಿಪಾಲ್ ಹತ್ರ ಹೋಗಿರ್ತೀನಿ.. ಪ್ರಿನ್ಸಿಪಾಲ್ ಕಂಪ್ಲೆಂಟ್ ಮಾಡಿದಾಗ ನಾನು ಓವರ್ ಆಕ್ಟ್ ಮಾಡ್ಬಿಟ್ಟು, ಶಿವರಾಜ್‌ಕುಮಾರ್‌ಗೆ ಹೊಡ್ದು ಎಲ್ಲಾ ಮಾಡ್ಬಿಡ್ತೀನಿ.. ನನ್ನ ಮಾನ ಮರ್ಯಾದೆ ಎಲ್ಲಾ ಕಳೆದ್ಬಿಟ್ಟ.. ನನ್ ಅಪ್ಪಂಗೆ ನಾನು ಮಾತು ಕೊಟ್ಟಿದ್ದೆ, ನಾನು ಇವ್ನ ಚೆನ್ನಾಗಿ ಬೆಳ್ಸಿ ಓದ್ಸಿ ಎಲ್ಲಾ ಮಾಡ್ತೀನಿ ಅಂತ..
ಇವ್ನು ಹಿಂಗೆಲ್ಲಾ ಮಾಡ್ಬಿಟ್ಟು ನನ್ನ ಮಾನ-ಮರ್ಯಾದೆ ಕಳೆದ್ಬಿಟ್ಟ.. ಅಂತೆಲ್ಲಾ ಹೇಳ್ಬಟ್ಟು ಹೊಡೆಯೋದೆಲ್ಲಾ ಇತ್ತು.. ಅಣ್ಣಾವ್ರು ಕೂತಿದಾರೆ ಅಲ್ಲಿ, ನಾನು ಹೆಂಗೆ ಹೊಡಿಲಿ ಶಿವರಾಜ್‌ಕುಮಾರ್‌ಗೆ ..? ನಂದು ಅಲ್ಲಿ ಒಂಥರಾ ಪರಿಸ್ಥಿತಿ.. ನಾನು ಸಮ್ನೆ ಕೈಯಿಂದ ಹಿಂಗ್ ಅಂದೆ.. ಆಗ ಅಲ್ಲೇ ಇದ್ದ ಅಣ್ಣಾವ್ರು 'ಊಹೂಂ, ಟಚ್ ಆಗ್ಬೇಕು ನಿಮ್ ಕೈ, ಗೊತ್ತಾಗ್ಬಿಡುತ್ತೆ ಕ್ಯಾಮೆರಾಗೆ ಅಂದ್ರು.. ಬಾರ್ಸಿ ಬಾರ್ಸಿ ಅಂದ್ರು.. ನಾನೇನು ಮಾಡ್ಲಿ ಆಗ..? ಅದಕ್ಕೇ ನಾನೊಂದು ಉಪಾಯ ಮಾಡಿದೆ..
ಚಂದನ್ ಶೆಟ್ಟಿ ಎರಡನೇ ಮದ್ವೆಗೆ ರೆಡಿ?... ಹುಡ್ಗಿ ಹೀಗಿರ್ಬೇಕಂತೆ ನೋಡ್ರೀ..!
ನನ್ ಮಾನ, ಮಾರ್ಯದೆ ಕಳೆದ್ಬಿಟ್ಟ ಅಂತ ಫಟ್ ಅಂತ ಹೊಡೆಯೋದು, ತಕ್ಷಣ, ಅಪ್ಪಾಜಿ ಕ್ಷಮಿಸಿಬಿಡ ಅಪ್ಪಾಜಿ, ನಾನು ನಿಮ್ಗೆ ನನ್ ಮಾತು ನಡೆಸಿಕೊಡ್ಲಿಲ್ಲ.. ಅಂತ ಹೇಳ್ಬಿಟ್ಟು ಫಟಾರ್ ಅಂತ ಹೊಡೆಯೋದು ಮಾಡಿದೆ. ಅದು ಡೈಲಾಗ್ ಇರ್ಲಿಲ್ಲ, ಕ್ಷಮಿಸಿಬಿಡಿ ಅಪ್ಪಾಜಿ ಅನ್ನೋದು.. ನಾನೇನೂ ಮಾಡೋ ಹಾಗೆ ಇರ್ಲಿಲ್ಲ, ಎದ್ರುಗಡೆ ಅಪ್ಪಾಜಿ ಕೂತಿದ್ರಲ್ಲ.. ಅದಕ್ಕೇ ಹಾಗೆ ಮಾಡಿದೆ ಅಂತ ಹಳೆಯ ಘಟನೆಯನ್ನು ನೆನಪಿಸಿಕೊಂಡು ಹೇಳಿದ್ದಾರೆ ನಟ ಸಿಹಿಕಹಿ ಚಂದ್ರು.