ಪ್ರಸನ್ನ ಚಿತ್ರಮಂದಿರದಲ್ಲಿ ದರ್ಶನ್ ಬರುವ ನಿರೀಕ್ಷೆಯೊಂದಿಗೆ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ, ಅಲ್ಲಿಗೆ ದರ್ಶನ್ ಬರಲಿಲ್ಲ. ಧನ್ವೀರ್ ನಟನೆಯ ವಾಮನ ಟ್ರೈಲರ್ ರಿಲೀಸ್ ಆಗಿದೆ. ದರ್ಶನ್ ಅಭಿಮಾನಿಗಳು ಧನ್ವೀರ್ ಗೌಡ..
ಹೌದು, ಕನ್ನಡದ ಸ್ಟಾರ್ ನಟ ದರ್ಶನ್ (Darshan Thoogudeepa) ಅವರು 'ವಾಮನ' ಸಿನಿಮಾದ 'ಟ್ರೈಲರ್ ಲಾಂಚ್'ಗೂ ಬರಲಿಲ್ಲ. ಧನ್ವಿರ್ ಗೌಡ (Dhanveer Gowda) ನಟನೆಯ 'ವಾಮನ' (Vamana Trailer) ಚಿತ್ರದ ಟ್ರೈಲರ್ ರಿಲೀಸ್ ಈವೆಂಟ್‌ನಿಂದಲೂ ನಟ ದರ್ಶನ್ ದೂರ ಉಳಿಇದ್ದು ಹಲವು ಊಹಾಪೋಹಗಳಿಗೆ ಕಾರಣ ಆಗಲಿರುವುದಂತೂ ಖಂಡಿತ. ಇಂದು ನಟ ಹಾಗೂ ದರ್ಶನ್ ಆಪ್ತಮಿತ್ರ, ಆಪ್ತ ಬಾಂಧವ ಧನ್ವೀರ್ ಗೌಡ ನಟನೆಯ 'ವಾಮನ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಅಲ್ಲಿ ಖಂಡಿತವಾಗಿಯೂ ನಟ ದರ್ಶನ್ ತೂಗುದೀಪ ಅವರ 'ದರ್ಶನ' ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಅದರೆ.. ದರ್ಶನ್ ಬರಲೇ ಇಲ್ಲ.
ಹೌದು, ಧನ್ವೀರ್ ನಟನೆಯ ವಾಮನ ಟ್ರೈಲರ್ ಲಾಂಚ್ಗೆ ಇವೆಂಟ್ ನಿಂದಲೂ ನಟ ದರ್ಶನ್ ದೂರವುಳಿದಿದ್ದಾರೆ. ಅಲ್ಲಿಗೆ ನಟ ದರ್ಶನ್ ಬಗೆಗಿನ ಹಲವರ ಲೆಕ್ಕಾಚಾರ ಸುಳ್ಆಗಿದೆ. ದರ್ಶನ್ ಅಲ್ಲಿಗೆ ಬರಲಿಲ್ಲ, ಕೇಳಬೇಕಾಗಿದ್ದ ಪ್ರಶ್ನೆ, ಸಿಗಬೇಕಾಗಿದ್ದ ಉತ್ತರ ಯಾವುದೂ ಕೂಡ ಸಿಗಲಿಲ್ಲ. ಆದರೆ, ಟ್ರೈಲರ್ ನೋಡಿ, ವಿಡಿಯೋ ಬೈಟ್ ಮೂಲಕ ವಾಮನ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ ದರ್ಶನ್. ಅಲ್ಲಿಗೆ 'ಇಲ್ಲಿಗೀ ಈ ಕಥೆ ಮುಗಿಯಿತು..' ಎಂಬಂತೆ ಆಟ ಆಡಿದ್ದಾರೆ ದರ್ಶನ್.
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರ, 'ಮದರ್ ಇಂಡಿಯಾ' ಮನೆ ಫಂಕ್ಷನ್‌ಗೆ ಜೋಡೆತ್ತು ಬರಲಿಲ್ಲ..!
ಪ್ರಸನ್ನ ಚಿತ್ರಮಂದಿರದಲ್ಲಿ ದರ್ಶನ್ ಬರುವ ನಿರೀಕ್ಷೆಯೊಂದಿಗೆ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ, ಅಲ್ಲಿಗೆ ದರ್ಶನ್ ಬರಲಿಲ್ಲ. ಧನ್ವೀರ್ ನಟನೆಯ ವಾಮನ ಟ್ರೈಲರ್ ರಿಲೀಸ್ ಆಗಿದೆ. ದರ್ಶನ್ ಅಭಿಮಾನಿಗಳು ಧನ್ವೀರ್ ಗೌಡ ಅವರ ಅಭಿಮಾನಿಗಳೂ ಸಹ ಆಗಿರುವುದರಿಂದ ದರ್ಶನ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಅಲ್ಲಿ ಸೇರಿದ್ದಾರೆ. ಆದರೆ, ಅವರ 'ಡಿ ಬಾಸ್' ಅಲ್ಲಿ ಬರಲೇ ಇಲ್ಲ. ನಿಜ ಹೇಳಬೇಕು ಎಂದರೆ, ನಟ ದರ್ಶನ್ ಇವತ್ತು ಬೆಂಗಳೂರಿನಲ್ಲಿ ಇಲ್ಲ. ಅವರು ರಾಜಸ್ಥಾನದಲ್ಲಿ 'ದಿ ಡೆವಿಲ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ವಕೀಲರ ಸಲಹೆ ಮೇರೆಗೆ ಇನ್ನಷ್ಟು ಕಾಲ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿಯಲು ದರ್ಶನ್ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಆಪ್ತ ಧನ್ವೀರ್ ಗೌಡ ಸೇರಿದಂತೆ ಯಾವುದೇ ಕಾರ್ಯಕ್ರಮಗಳೀಗೆ ಸದ್ಯ ಹಾಜರಿ ಹಾಕೋದಿಲ್ಲ ಎನ್ನಲಾಗಿದೆ. ಇವಿಷ್ಟ ನಟ ದರ್ಶನ್, ಧನ್ವೀರ್ ಹಾಗೂ ವಾಮನ ಟ್ರೈಲರ್ ಲಾಂಚ್ ಕಥೆ.. ಇಲ್ಲಿಗೆ ಈ ಕಥೆ ಮುಗಿಯಿತು..!
ಶಿವರಾಜ್‌ಕುಮಾರ್‌ಗೆ 'ಬಾರಿಸಿ' ಎಂದಿದ್ದ ಡಾ ರಾಜ್‌ಕುಮಾರ್.. ಸಿಹಿ ಕಹಿ ಚಂದ್ರು ಹೊಡೆದ್ರು, ಆದ್ರೆ..