vuukle one pixel image

ಮಲ್ಲಿಗೆ ತೂಕದ ಚೆಲುವೆ ತಾಪ್ಸಿ ಪನ್ನು ಮೈಮಾಟದ ಗುಟ್ಟೇನು?

Padmashree Bhat  | Updated: Mar 27, 2025, 5:31 PM IST

ತಾಪ್ಸಿ ಪನ್ನು.. ಇಂಡಿಯನ್ ಸಿನಿಲೋಕದಲ್ಲಿ ಕಳೆದ ಒಂದೂವರೇ ದಶಕದಿಂದ ಌಕ್ಟಿವ್ ಆಗಿರೋ ನಟಿಮಣಿ. ಮೊದ ಮೊದಲು ಸೌತ್​ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ತಾಪ್ಸಿ ಈಗ ಬಾಲಿವುಡ್​ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾಳೆ.ತಾಪ್ಸಿ ಸವಾಲಿನ ಪಾತ್ರಗಳಿಗೂ ಸೈ .. ಬೋಲ್ಡ್ ಅವತಾರಕ್ಕೂ ಜೈ ಅನ್ನೋ ಬಿಂದಾಸ್ ಬ್ಯೂಟಿ. ಇಂಡಸ್ಟ್ರಿಗೆ ಬಂದು ಇಷ್ಟು ವರ್ಷ ಕಳೆದರೂ ತಾಪ್ಸಿ ಚೆಲುವು ಒಂಚೂರೂ ಕುಂದಿಲ್ಲ. ಆ ಮಾದಕ ಮೈಮಾಟ, ಮೋಹಕ ನೋಟ, ಆ ಗುಂಗುರು ಮುಂಗುರುಳು.. ಆಹಾ ತಾಪ್ಸಿ ಸೌಂದರ್ಯನ ವರ್ಣಿಸೋಕೆ ಪದಗಳೇ ಸಾಲಲ್ಲ. ಎಲ್ಲಾ ಸಿನಿಲೋಕದ ಚೆಲುವೆಯರು ಹೇಳುವಂತೆ ತಾಪ್ಸಿ ಕೂಡ ತನ್ನ ಮೈಮಾಟದ ಗುಟ್ಟು ನಿಯಮಿತ ವರ್ಕೌಟು ಜೊತೆಗೆ ಯೋಗಾಭ್ಯಾಸ ಅಂತ ಹೇಳ್ತಾಳೆ. ತಾಪ್ಸಿ ಸೋಷಿಯಲ್ ಮಿಡಿಯಾದಲ್ಲಿ ತನ್ನ ವರ್ಕೌಟ್, ಯೋಗಾ ವಿಡಿಯೋಸ್ ಶೇರ್ ಮಾಡ್ತಾ ಇರ್ತಾಳೆ. ತಾಪ್ಸಿ ಸೌಂದರ್ಯದ ಗುಟ್ಟು ತಿಳ್ಕೊಳ್ಳೋದ್ರ ಜೊತೆಗೆ ಒಂಚೂರು ಕಿಕ್ಕು ಬೇಕಂದ್ರೆ ಈ ವಿಡಿಯೋಸ್ ನೋಡಿ..