ಆಸ್ಪತ್ರೆಯಲ್ಲಿ ಮೋದಿ ಹಾಸ್ಯ ಚಟಾಕಿ, ಬಿಗ್‌ಬಾಸ್‌ಗೆ ಹೋಗ್ತಾರಾ ಹಳ್ಳಿ ಹಕ್ಕಿ? ಮಾ.1ರ ಟಾಪ್ 10 ಸುದ್ದಿ!

By Suvarna NewsFirst Published Mar 1, 2021, 4:40 PM IST
Highlights

ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವ ಸೂಜಿ ಬಳಸುತ್ತೀರಿ ಎಂದು ಲಸಿಕೆ ಪಡೆಯಲು ಬಂದ ಪ್ರಧಾನಿ ಮೋದಿ ನರ್ಸ್ ಕೇಳೋ ಮೂಲಕ ಹಾಸ್ಯ ಚಟಾಕಿ ಹಾರಿಸಿದ ಘಟನೆ ನಡೆದಿದೆ. 4 ದಿನದಲ್ಲಿ 2ನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆಯಾಗಿದೆ. ಹೆಚ್ ವಿಶ್ವನಾಥ್ ಬಿಗ್‌ಬಾಸ್ ಮನೆಗೆ ಹೋಗಲು ರೆಡಿ ಇದ್ದಾರೆ ಎಂದಿದ್ದಾರೆ.  ಹೆಚ್‌ಡಿಡಿ ಸಂಬಂಧಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ, 70 ಆಗಿದೆ ನನಗೆ ಲಸಿಕೆ ಬೇಕಿಲ್ಲ ಎಂದು ಖರ್ಗೆ ಟಾಂಗ್ ಸೇರಿದಂತೆ ಮಾರ್ಚ್ 1 ರ ಟಾಪ್ 10 ಸುದ್ದಿ ಇಲ್ಲಿವೆ.

ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವ ಸೂಜಿ? ಹಾಸ್ಯದ ಮೂಲಕ ವಾತಾವರಣ ತಿಳಿಗೊಳಿಸಿದ ಮೋದಿ!...

ಲಸಿಕೆ ನೀಡಲು ಏಮ್ಸ್ ಆಸ್ಪತ್ರೆ ವೈದ್ಯರು, ನರ್ಸ್ ಸೇರಿದಂತೆ ಸಿಬ್ಬಂದಿಗಳು ಬೆಳ್ಳಂಬೆಳಗ್ಗೆ ಸಜ್ಜಾಗಿದ್ದರು. ದಿಢೀರ್ ಪ್ರಧಾನಿ ನರೇಂದ್ರ ಮೋದಿ ಏಮ್ಸ್ ಆಸ್ಪತ್ರೆ ಆಗಮಿಸಿದ್ದಾರೆ. ಪ್ರಧಾನಿ ಆಗಮನದಿಂದ ನರ್ಸ್‌ಗಳು ಕೊಂಚ ಗಲಿಬಿಲಿಗೊಂಡಿದ್ದರು. ಪರಿಸ್ಥಿತಿ ಹಗುರಗೊಳಿಸಲು ಮೋದಿ ದಪ್ಪದ ಚರ್ಮದ ರಾಜಕಾರಣಿಗಳ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಲಸಿಕೆ ನೀಡುವ ವೇಳೆ ಮೋದಿ ಹಾಗೂ ನರ್ಸ್ ನಡುವೆ ನಡೆದ ಸಂಪೂರ್ಣ ಸಂಭಾಷಣೆ ಇಲ್ಲಿದೆ.

ನಾನಿದಕ್ಕೆ ಅರ್ಹನಲ್ಲ; ಬ್ರಹ್ಮಶ್ರೀ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ ಕಟೀಲ್...

'ಬ್ರಹ್ಮಶ್ರಿ' ಪ್ರಶಸ್ತಿಯನ್ನು ವೇದಿಕೆ ಮೇಲೆ ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಇದಕ್ಕೆ ಜನಾರ್ದನ ಪೂಜಾರಿ ಮಾತ್ರ ಅರ್ಹರೆಂದು ಹೇಳಿದ್ದಾರೆ.

ಗಂಡಾಂತರದಿಂದ ಪಾರಾದ ರಿಷಬ್ ಶೆಟ್ಟಿ; ಪೆಟ್ರೋಲ್ ಬಾಂಬ್ ಸಿಡಿಸೋ ವೇಳೆ ರಿಷಬ್‌ಗೆ ಹೊತ್ತಿಕೊಳ್ತು ಬೆಂಕಿ!...

ಹೀರೋ ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿದ್ದ ಭಾರಿ ಅವಗಢ. ಬೆಂಕಿಯಿಂದ ಜಸ್ಟ್‌ ಮಿಸ್‌ ಆದ 'ಹೀರೋ'.

ಬಿಗ್‌ಬಾಸ್‌ಗೆ ಹೋದೋರೆಲ್ಲ ಹೆಸರು ಕೆಡಿಸ್ಕೊಳ್ತಾರಾ? ಚಾನೆಲ್‌ನವ್ರು ಏನಂತಾರೆ?...

ಪ್ರತೀ ವರ್ಷ ಬಿಗ್‌ ಬಾಸ್ ಮನೆಗೆ ಹೋಗಿ ಹೊರಬಂದವರು ತಮ್ಮನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಅಂತ ಕಂಪ್ಲೇಂಟ್ ಮಾಡ್ತಾರೆ. ರಿಯಲ್ ಆಗಿ ಅಲ್ಲಾಗೋದೇನು? ಚಾನೆಲ್‌ನವ್ರು ಈ ಬಗ್ಗೆ ಏನಂತಾರೆ?

ಕೋವಿಡ್ ಲಸಿಕೆ 3ನೇ ಹಂತದ ಅಭಿಯಾನ: ಏಮ್ಸ್‌ನಲ್ಲಿ ಲಸಿಕೆ ಪಡೆದ ಮೋದಿ...

ಭಾರತದಲ್ಲಿ ಮೂರನೇ ಹಂತಕ ಕೊರೋನಾ ವೈರಸ್ ಲಸಿಕಾ ಅಭಿಯಾನ ಆರಂಭವಾಗಿದ್ದು, ದಿಲ್ಲಿಯ ಏಮ್ಸ್‌ನಲ್ಲಿ ಪ್ರಧಾನಿ ಮೋದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 9 ಗಂಟೆಗೆ ಕೋವಿನ್‌ ಆ್ಯಪ್‌, ಆರೋಗ್ಯ ಸೇತುದಲ್ಲಿ ನೋಂದಣಿ ಶುರು ಆಗಲಿದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಯವರೆಗೆ ನೋಂದಣಿ. ಇಷ್ಟವಾದ ಸ್ಥಳ, ಸಮಯದಲ್ಲಿ ಲಸಿಕೆಗೆ ನೋಂದಾಯಿಸಬಹುದು. ಬುಕ್‌ ಮಾಡಲಾಗದವರಿಗೆ ‘ವಾಕ್‌ ಇನ್‌’ ಲಸಿಕೆಗೆ ಅವಕಾಶ.

4 ದಿನದಲ್ಲಿ 2ನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆ; ಜನಸಾಮಾನ್ಯರಿಗೆ ಮತ್ತೆ ಹೊರೆ!...

ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇತ್ತ ಎಲ್‌ಪಿಜಿ ಸಿಲಿಂಡರ್ ಬೆಲೆ ಕೂಡ ಕೈಗೆಟುಕದಂತಾಗಿದೆ. ಇದೀಗ ಕೇವಲ ನಾಲ್ಕೇ ದಿನಕ್ಕೆ ಎಲ್‌ಪಿಜಿ ಬೆಲೆ ಮತ್ತೆ ಏರಿಕೆಯಾಗಿದೆ.

'ಬೆಲೆ ನೀಡದ್ದಕ್ಕೆ ಕೈ ಸೇರಿದೆ' : 25 ವರ್ಷದ ಜೆಡಿಎಸ್ ನಂಟು ಬಿಟ್ಟ HDD ಸಂಬಂಧಿ...

25 ವರ್ಷಗಳಿಗೂ ಹೆಚ್ಚು ಕಾಲ ನಾನು ಜೆಡಿಎಸ್‌ ಪಕ್ಷದಲ್ಲಿದ್ದೆ. ಎಚ್‌.ಡಿ. ದೇವೇಗೌಡರು ಸಹ ನಮಗೆ ಸಂಬಂಧಿಕರೇ. ಆದರೆ ಜೆಡಿಎಸ್‌ ಪಕ್ಷದವರು ತತ್ವ , ಸಿದ್ಧಾಂತ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ನೀಡದ್ದರಿಂದ ಪಕ್ಷ ತೊರೆದೆ ಎಂದು ಮುಖಂಡರೋರ್ವರು ಹೇಳಿದ್ದಾರೆ. 

ತಮಿಳುನಾಡು, ಕೇರಳದಲ್ಲಿ ಉಚಿತವಾಗಿ 4ಜಿ ಸಿಮ್ ನೀಡುತ್ತಿದೆ BSNL!...

ಜಿಯೋ, ಏರ್‌ಟೆಲ್ ಮತ್ತು ವಿಐನಂಥ ಖಾಸಗಿ ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿರುವ ಭಾರತ್ ಸಂಚಾರ್ ನಿಗಮ್  ಲಿ.(ಬಿಎಸ್‌ಎನ್‌ಎಲ್) ಹೊಸ ಬ್ರಾಡ್‌ಬಾಂಡ್ ಮತ್ತು ಲ್ಯಾಂಡ್‌ಲೈನ್ ಸಂಪರ್ಕ ಪಡೆದುಕೊಳ್ಳುವವರಿಗೆ ಉಚಿತವಾಗಿ 4ಜಿ ಸಿಮ್ ನೀಡುತ್ತಿದೆ. ಇದು 75 ರೂ. ಮೌಲ್ಯದ ಆಫರ್‌ ಪ್ಲ್ಯಾನ್‌ನೊಂದಿಗೆ ಸಿಗುತ್ತಿದ್ದು 60 ದಿನಗಳ ವ್ಯಾಲಿಡಿಟಿ ಹೊಂದಿದ್ದು, ನಿತ್ಯ 2 ಜಿಬಿ ಡೇಟಾ ಬಳಸಬಹುದಾಗಿದೆ.

ಬಿಗ್‌ಬಾಸ್‌ ಮನೆಗೆ ಹೋಗಲು ರೆಡಿಯಿದ್ದಾರಂತೆ ಹಳ್ಳಿಹಕ್ಕಿ, ಅಲ್ಲಿಯೂ ಹೊತ್ತಿಸ್ತಾರಾ ರಾಜಕಾರಣದ ಕಿಡಿ!...

ಬಿಗ್ ಬಾಸ್‌ ಮನೆಯೊಳಗೆ ರಾಜಕಾರಣಿ ಒಬ್ಬರು ಎಂಟ್ರಿ ಆಗುತ್ತಾರೆ ಎಂದು ಕಾಯುತ್ತಿದ್ದ ವೀಕ್ಷಕರಿಗೆ ಕೊಂಚ ನಿರಾಸೆ ಆಗಿದೆ. ಆದರೆ ಇದೀಗ ಬಿಸಿ ಬಿಸಿ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.

70 ವರ್ಷ ದಾಟಿರುವ ನನಗೇಕೆ ಕೋವಿಡ್ ಲಸಿಕೆ? ಯುವಕರಿಗೆ ಕೊಡಿ ಎಂದ ಖರ್ಗೆಗೆ ತಿವಿದ ಬಿಜೆಪಿ...

70 ವರ್ಷ ದಾಟಿರುವ ನನಗೇಕೆ ಕೋವಿಡ್ ಲಸಿಕೆ? ಯುವಕರಿಗೆ ಕೊಡಿ ಎಂದ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಸಖತ್ ಟಾಂಗ್ ಕೊಟ್ಟಿದೆ.

click me!