ಪ್ರಜ್ವಲ್‌ ಪ್ರಕರಣದ ಸಂತ್ರಸ್ಥೆ ಅಪಹರಣ, ಸಿಎಂ ಆದೇಶ ಬೆನ್ನಲ್ಲೇ ಕಾಣೆಯಾದ ಮೈಸೂರು ಮಹಿಳೆಯ ತೀವ್ರ ಹುಡುಕಾಟ

By Suvarna News  |  First Published May 3, 2024, 2:03 PM IST

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ.ಆರ್.ನಗರ ತಾಲೂಕಿನಲ್ಲಿ ಕಾಣೆಯಾಗಿರುವ ಮಹಿಳೆಗೆ ತೀವ್ರ ಹುಡುಕಾಟ ನಡೆಯುತ್ತಿದೆ. 


ಮೈಸೂರು (ಏ.3): ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಪ್ರಕರಣ  ದಿನಕ್ಕೊಂದು ತಿರುವು ಪಡೆಯುತ್ತಿದೆ.  ಮೈಸೂರಿನ ಕೆ.ಆರ್.ನಗರ ತಾಲೂಕಿನಲ್ಲಿ ಕಾಣೆಯಾಗಿರುವ ಮಹಿಳೆಗೆ ತೀವ್ರ ಹುಡುಕಾಟ ನಡೆಯುತ್ತಿದೆ.

ಪ್ರಜ್ವಲ್ ರೇವಣ್ಣ ಮೇಲೆ ರೇಪ್ ಕೇಸ್ ಹಿನ್ನೆಲೆ ಸಂತ್ರಸ್ಥೆಯನ್ನು ರೇವಣ್ಣ ಆಪ್ತರು ಕಿಡ್ನಾಪ್‌ ಮಾಡಿಸಿದ್ದಾರೆ ಎಂದು ದೂರು ದಾಖಲಾಗಿರುವ ಹಿನ್ನೆಲೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿರುವ  ಸಿಎಂ ಸಿದ್ದರಾಮಯ್ಯ,  ಆ ಹೆಣ್ಣು‌ಮಗಳು ಎಲ್ಲಿ ಹೋಗಿದ್ದಾರೆ ಎಂದು ಪತ್ತೆ ಹಚ್ಚಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

Tap to resize

Latest Videos

ಪ್ರಕರಣ ಮುಚ್ಚಿ ಹಾಕಲು ಮಹಿಳೆಯ ಕಿಡ್ನಾಪ್‌ ಮಾಡಿಸಿದ್ರಾ HD ರೇವಣ್ಣ? ಸಂತ್ರಸ್ಥೆ ಮಗನ ದೂರಿನನ್ವಯ ಓರ್ವ ವಶಕ್ಕೆ!

ಎಸ್‌ಐಟಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆಂಬ ಎಚ್.ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಅವರು ಅಪ್ಪನೂ ಅವನು ಲಾಯರ್ ಗಳನ್ನ ಯಾಕೆ ಕರೆಸ್ತಿದ್ದಾರೆ.  ದೇವೆಗೌಡರು ಹಾಗೂ ಕುಮಾರಸ್ವಾಮಿ ಲಾಯರ್ ಜೊತೆ ಯಾಕೆ ಚರ್ಚೆ ಮಾಡಿದ್ದಾರೆ. ನಾವು ಬೇರೆ ಬೇರೆ ಆಗಿಬಿಟ್ಟಿದ್ದೀವಿ, ರೇವಣ್ಣ ಬೇರೆ ನಾವು ಬೇರೆ ಅಂತಾರೆ. ಚುನಾವಣಾ ಪ್ರಚಾರದಲ್ಲಿ ರೇವಣ್ಣ ಮಗ ಬೇರೆಯಲ್ಲ, ನನ್ನ ಮಗ ಬೇರೆ ಅಲ್ಲ ಅಂತಾರೆ. ರಾಜಕೀಯ ಮಾಡೋದು ಒಟ್ಟಿಗೆ, ಕುಕೃತ್ಯ ಮಾಡೋದು ಒಟ್ಟಿಗೆ, ತಪ್ಪು ಮಾಡೋದೋ ಒಟ್ಟಿಗೆ ಎಂದು ಛೇಡಿಸಿದರು.

ಪ್ರಜ್ವಲ್ ರೇವಣ್ಣ ಎಲ್ಲಿಗಾದ್ರೂ ಎಸ್ಕೇಪ್ ಆಗಿರಲಿ. ಯಾವ ದೇಶದಲ್ಲಿದ್ರೂ ಹಿಡ್ಕೊಂಡು ಬರ್ತೀವಿ. ಪಾಸಪೋರ್ಟ್ ರದ್ದು ಮಾಡಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ. ಪಾಸಪೋರ್ಟ್ ಕ್ಯಾನ್ಸಲ್‌ ಆದ ಮೇಲೆ‌ ವಿದೇಶದಲ್ಲಿ ಇರಲಿಕ್ಕೆ ಆಗಲ್ವಲ್ಲಾ. ಪ್ರಧಾನಿ‌ ಪಾಸ್‌ಪೋರ್ಟ್ ಕ್ಯಾನ್ಸಲ್‌ ಮಾಡಲಿ ಎಂದು ಸಿಎಂ‌ ಸವಾಲ್ ಎಸೆದ್ರು ಜೊತೆಗೆ  ಟಿಕೆಟ್ ಕೊಟ್ಟುಬಿಟ್ಟು ಬಿಜೆಪಿಯವ್ರ ನಿಲುವು ಏನು ಎಂದು ಪ್ರಶ್ನಿಸಿದ್ರು.

Hassan Obscene Video Case: ಜಾಮೀನು ಅರ್ಜಿ ಹಿಂಪಡೆದ ಹೆಚ್.ಡಿ.ರೇವಣ್ಣ

ಮೈಸೂರಿನಲ್ಲಿ  ಸಂತ್ರಸ್ಥೆ ಅಪಹರಣ ಪ್ರಕರಣ, ಭವಾನಿ ರೇವಣ್ಣ ಸಂಬಂಧಿ ವಶಕ್ಕೆ:
ಸಂತ್ರಸ್ಥೆಯ ಪುತ್ರ ತಮ್ಮ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. 
ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಅಪಹರಣ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು,  ಈ ಮೂಲಕ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತರ ಕೇಸ್ ನಲ್ಲಿ ಮೊದಲ ನಾಪತ್ತೆ  ಕೇಸ್ ದಾಖಲಾಗಿದೆ.

ಸಂತ್ರಸ್ಥೆಯ ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸರು ಸತೀಶ್ ಬಾಬುವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಸತೀಶ್ ಬಾಬು ವಿಚಾರಣೆ ನಡೆಸುತ್ತಿರುವ ಪೊಲೀಸರು ಕೆಲವೇ ಕ್ಷಣಗಳಲ್ಲಿ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಿದ್ದಾರೆ. ಸತೀಶ್ ಬಾಬು ಭವಾನಿ ರೇವಣ್ಣ ಸಂಬಂಧಿಯಾಗಿದ್ದು, ತನ್ನ ತಾಯಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಯುವಕ ದೂರು ಕೊಟ್ಟಿದ್ದಾನೆ.

click me!