ಪ್ರಕರಣ ಮುಚ್ಚಿ ಹಾಕಲು ಮಹಿಳೆಯ ಕಿಡ್ನಾಪ್‌ ಮಾಡಿಸಿದ್ರಾ HD ರೇವಣ್ಣ? ಸಂತ್ರಸ್ಥೆ ಮಗನ ದೂರಿನನ್ವಯ ಓರ್ವ ವಶಕ್ಕೆ!

Published : May 03, 2024, 12:54 PM ISTUpdated : May 03, 2024, 02:05 PM IST
ಪ್ರಕರಣ ಮುಚ್ಚಿ ಹಾಕಲು ಮಹಿಳೆಯ ಕಿಡ್ನಾಪ್‌ ಮಾಡಿಸಿದ್ರಾ HD ರೇವಣ್ಣ? ಸಂತ್ರಸ್ಥೆ ಮಗನ ದೂರಿನನ್ವಯ ಓರ್ವ ವಶಕ್ಕೆ!

ಸಾರಾಂಶ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹೆಚ್‌ ಡಿ ರೇವಣ್ಣ ಪ್ರಕರಣ ಸಂಬಂಧ ಮೈಸೂರಿನಲ್ಲಿ ಮಹಿಳೆಯ ಕಿಡ್ನಾಪ್‌ ಮೊದಲ ಪ್ರಕರಣ ದಾಖಲು. ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಸಂಬಂಧಿ ಪೊಲೀಸ್‌ ವಶಕ್ಕೆ

ಮೈಸೂರು (ಏ.3): ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಪ್ರಕರಣ  ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣವೀಗ ಮೈಸೂರಿಗೂ ವ್ಯಾಪಿಸಿದೆ. ಕೆ.ಆರ್.ನಗರ ತಾಲೂಕಿನಲ್ಲಿ ಸಂತ್ರಸ್ಥೆ ಎನ್ನಲಾಗುತ್ತಿರುವವರ ಪುತ್ರನೋರ್ವ ತಮ್ಮ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಅಪಹರಣ ಮಾಡಿಸಿದ್ದಾರೆ ಎಂದು ದೂರು ನೀಡಿದ್ದು, ಕಿಡ್ನಾಪ್‌ ಪ್ರಕರಣದಲ್ಲಿ ಭವಾನಿ ರೇವಣ್ಣ ಸಂಬಂಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಮೂಲಕ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತರ ಕೇಸ್ ನಲ್ಲಿ ಮೊದಲ ನಾಪತ್ತೆ  ಕೇಸ್ ದಾಖಲಾಗಿದೆ. ಪ್ರಕರಣ ಮುಚ್ಚಿ ಹಾಕಲು ಮಹಿಳೆ ಕಿಡ್ನಾಪ್ ಮಾಡಿರುವ ಆರೋಪ ಕೇಳಿಬಂದಿದ್ದು, ಮಾಜಿ ಶಾಸಕರೊಬ್ಬರು ಪ್ರಕರಣ ಮುಚ್ಚಿಹಾಕಲು ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆಯ ಪುತ್ರ ಈಗಾಗಲೇ ದೂರು ಕೊಟ್ಟಿದ್ದು, ಪೆನ್ ಡ್ರೈವ್ ನಲ್ಲಿದ್ದ ಮಹಿಳೆಯರನ್ನ ದೂರು ಕೊಡದಂತೆ ಒತ್ತಡ ಹೇರಲಾಗಿದೆ ಎಂದು ಕೆ.ಆರ್‌‌.ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Hassan Obscene Video Case: ಜಾಮೀನು ಅರ್ಜಿ ಹಿಂಪಡೆದ ಹೆಚ್.ಡಿ.ರೇವಣ್ಣ

ಮೈಸೂರು ಜಿಲ್ಲೆ ಕೆ.ಆರ್. ನಗರ ಠಾಣೆಗೆ ಸಂತ್ರಸ್ತೆ ಪುತ್ರ ಮೈಸೂರು ಜಿಲ್ಲೆ ಕೆ.ಆರ್. ನಗರ ಠಾಣೆಗೆ ದೂರು ನೀಡಿದ್ದು, ಮಾಜಿ ಸಚಿವ ಎಚ್.ಡಿ. ರೇವಣ್ಣ, ಸಂಬಂಧಿ ಸತೀಶ್ ಬಾಬು ವಿರುದ್ಧ ತಡರಾತ್ರಿ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಮೈಸೂರು ಹೆಚ್ಚುವರಿ ಪೊಲೀಸ್ ಆಯುಕ್ತೆ ನಂದಿನಿ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. 

ಪೆನ್ ಡ್ರೈವ್ ವಿವಾದದಲ್ಲಿ ತನ್ನ ತಾಯಿಯ ಚಿತ್ರವೂ ಇದೆ. ವಿಡಿಯೋ ಬಹಿರಂಗ ಬಳಿಕ ಸತೀಶ್ ಬಾಬು ಹಾಗೂ ರೇವಣ್ಣ ಕರೆಯುತ್ತಿದ್ದರು. ತಾಯಿಯನ್ನು ಅವರು ಕರೆದೊಯ್ದರು. ಆಗಿನಿಂದ ನಾಪತ್ತೆಯಾಗಿದ್ದಾರೆ ಎಂದು ಸಂತ್ರಸ್ಥೆ ಪುತ್ರ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಸತೀಶ್ ಬಾಬು ಭವಾನಿ ರೇವಣ್ಣ ಅವರ ಸಂಬಂಧಿ ಎಂದು ತಿಳಿದುಬಂದಿದೆ. 

ಸಂತ್ರಸ್ಥೆ ಪುತ್ರನ ದೂರಿನಡಿ ಕೆ.ಆರ್.ನಗರ ಠಾಣೆಯಲ್ಲಿ  ಸೆಕ್ಷನ್ 364(A) ,365, ಹಾಗು 34 ಅಡಿ ಪ್ರಕರಣ ದಾಖಲಾಗಿದ್ದು, ರೇವಣ್ಣ A1 ಆರೋಪಿ ಮತ್ತು ಸತೀಶ್ ಬಾಬು ಪ್ರಕರಣದ A2 ಆರೋಪಿಯಾಗಿದ್ದಾರೆ.  ಸತೀಶ್ ಬಾಬು ಮಹಿಳೆಯನ್ನು ಬೈಕಿನಲ್ಲಿ ಕರೆದೊಯ್ದಿದ್ದಾರೆ. ಮಹಿಳೆಯು ಹೊಳೆನರಸೀಪುರದ ಚೆನ್ನಾಂಬಿಕಾ ಥಿಯೇಟರ್ ಪಕ್ಕದಲ್ಲಿರುವ ರೇವಣ್ಣ ಮನೆಯಲ್ಲಿ ಸುಮಾರು 6 ವರ್ಷಗಳ ಕಾಲ ಕೆಲಸ ಮಾಡಿದ್ದರು. ಸುಮಾರು 03 ವರ್ಷಗಳ ಹಿಂದೆ ಹೆಚ್.ಡಿ, ರೇವಣ್ಣ ರವರ ಮನೆಯಿಂದ ಕೆಲಸವನ್ನು ಬಿಟ್ಟು ಬಂದು ನಮ್ಮೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಲೋಕಸಭಾ ಚುನಾವಣೆ ವೇಳೆ ಸತೀಶ್ ಕರೆದುಕೊಂಡು‌ ಹೋಗಿದ್ದರು ಎಂದು   ದೂರಿನಲ್ಲಿ ವಿವರವಾಗಿ ಸಂತ್ರಸ್ತೆಯ ಮಗ ವಿವರಿಸಿದ್ದಾನೆ.

ಡಿಕೆಶಿ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್, ಸಿದ್ದರಾಮಣ್ಣ ನೀವು ಸ್ವಲ್ಪ ಹುಷಾರಾಗಿರಿ ಎಂದ ರಾಜೂಗೌಡ!

ಚುನಾವಣೆಗೆ  3-4 ದಿವಸಗಳು ಮುಂಚೆ ನಮ್ಮ ಊರಿನವರೇ ಆದ ನಮಗೆ ಪರಿಚಯವಿರುವ ಹೆಬ್ಬಾಳುಕೊಪ್ಪಲಿನ ಸತೀಶ್ ಬಾಬು ಮನೆಗೆ ಬಂದು ಭವಾನಿ ಅಕ್ಕರವರು ಕರೆಯುತ್ತಾರೆ ಎಂದು ಹೇಳಿ ನನ್ನ ತಾಯಿರವರನ್ನು ಹೊಳೆನರಸಿಪುರಕ್ಕೆ ಕರೆದುಕೊಂಡು ಹೋದರು. ಚುನಾವಣೆಯ ದಿವಸ ಬೆಳಿಗ್ಗೆ ನನ್ನ ತಾಯಿಯನ್ನು ಬಾಬಣ್ಣ ರವರು ವಾಪಸ್‌ ಕರೆದುಕೊಂಡು ಬಂದು ಬಿಟ್ಟರು. ನನ್ನ ತಂದೆ ಮತ್ತು ತಾಯಿಗೆ ಪೊಲೀಸಿನವರು ಬಂದರೆ ಏನು ಹೇಳಬೇಡಿ ಅವರಿಗೆ ಸಿಗಬೇಡಿ, ನಿಮ್ಮ ಮೇಲೆ ಕೇಸ್ ಆಗುತ್ತದೆ, ಬಂದರೆ ನನಗೆ ತಿಳಿಸಿ ನಾನು ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋದರು.

ಬಳಿಕ ವಾಪಸ್‌ ಏಪ್ರಿಲ್ 29 ರಾತ್ರಿ   9 ಗಂಟೆಗೆ ಸತೀಶ್ ಬಂದು ತಾಯಿಯನ್ನು ಕರೆದೊಯ್ದಿದ್ದಾರೆ. ರೇವಣ್ಣ ಸಾಹೇಬರು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ಒತ್ತಾಯ ಮಾಡಿ ತಾಯಿಯನ್ನು ಸತೀಶ್ ಕರೆದುಕೊಂಡು ಹೋಗಿದ್ದಾರೆ. ಹಿರೋಹೊಂಡ ಸ್ಪೈಂಡರ್ ಬೈಕ್ ನಲ್ಲಿ ಕರೆದೊಯ್ದರು. ನನ್ನ ತಾಯಿಯನ್ನ ಎಲ್ಲಿಗೆ ಕರೆದೊಯ್ದರು ಗೊತ್ತಿಲ್ಲ. ಮೇ. 1 ರಂದು ಗೆಳೆಯರ ಮೂಲಕ ಅಶ್ಲೀಲ ವಿಡಿಯೋ ಬಂತು. ನಿನ್ನ ಅಮ್ಮನ ಕಾಲು ಕಟ್ಟಿದರು, ಪ್ರಜ್ವಲ್ ಬಲತ್ಕಾರ ಮಾಡಿದ್ದಾರೆ ಎಂದು ಗೆಳೆಯರು ತಿಳಿಸಿದ್ರು. ಈ ಸಂಬಂಧ ದೊಡ್ಡ ಕೇಸ್ ಆಗಿದೆ ಎಂದು ಗೆಳೆಯರೇ ಮಾಹಿತಿ ನೀಡಿದ್ರು‌. ಆ ಸಂದರ್ಭದಲ್ಲಿ ನನ್ನ ತಾಯಿಯನ್ನು ವಾಪಸ್ ಕರೆತರಲು ಸತೀಶ್ ಗೆ ಹೇಳಿದೆ. ಹಲ್ಲೆ ಪ್ರಕರಣದಲ್ಲಿ ನಿಮ್ಮ ತಾಯಿ ಆರೋಪಿ ಅಂತಾ ಸುಳ್ಳು ಹೇಳಿದ್ರು‌. ನನ್ನ ತಾಯಿಯನ್ನ ಒತ್ತಾಯಪೂರ್ವಕವಾಗಿ ಕೂಡಿಹಾಕಿದ್ದಾರೆ ಎಂದು ಸಂತ್ರಸ್ತೆ ಪುತ್ರ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾನೆ.

ಸತೀಶ್ ಬಾಬು ಪೊಲೀಸ್ ವಶಕ್ಕೆ:
ಸಂತ್ರಸ್ಥೆಯ ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸರು ಸತೀಶ್ ಬಾಬುವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಸತೀಶ್ ಬಾಬು ವಿಚಾರಣೆ ನಡೆಸುತ್ತಿರುವ ಪೊಲೀಸರು ಕೆಲವೇ ಕ್ಷಣಗಳಲ್ಲಿ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಿದ್ದಾರೆ. ಸತೀಶ್ ಬಾಬು ಭವಾನಿ ರೇವಣ್ಣ ಸಂಬಂಧಿಯಾಗಿದ್ದು, ತನ್ನ ತಾಯಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಯುವಕ ದೂರು ಕೊಟ್ಟಿದ್ದಾನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?