ತಮಿಳುನಾಡು, ಕೇರಳದಲ್ಲಿ ಉಚಿತವಾಗಿ 4ಜಿ ಸಿಮ್ ನೀಡುತ್ತಿದೆ BSNL!
ಜಿಯೋ, ಏರ್‌ಟೆಲ್ ಮತ್ತು ವಿಐನಂಥ ಖಾಸಗಿ ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿರುವ ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್‌ಎನ್‌ಎಲ್) ಹೊಸ ಬ್ರಾಡ್‌ಬಾಂಡ್ ಮತ್ತು ಲ್ಯಾಂಡ್‌ಲೈನ್ ಸಂಪರ್ಕ ಪಡೆದುಕೊಳ್ಳುವವರಿಗೆ ಉಚಿತವಾಗಿ 4ಜಿ ಸಿಮ್ ನೀಡುತ್ತಿದೆ. ಇದು 75 ರೂ. ಮೌಲ್ಯದ ಆಫರ್ ಪ್ಲ್ಯಾನ್‌ನೊಂದಿಗೆ ಸಿಗುತ್ತಿದ್ದು 60 ದಿನಗಳ ವ್ಯಾಲಿಡಿಟಿ ಹೊಂದಿದ್ದು, ನಿತ್ಯ 2 ಜಿಬಿ ಡೇಟಾ ಬಳಸಬಹುದಾಗಿದೆ.
ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್ಸೆನ್ನೆಲ್) ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಗಾಗ ಆಫರ್‌ಗಳನ್ನು ಘೋಷಿಸುತ್ತಲೇ ಇರುತ್ತದೆ. ರಿಲಯನ್ಸ್‌ನ ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್-ಐಡಿಯಾ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಬಿಸ್ಸೆನ್ನೆಲ್ ಇದೀಗ ಹೊಸ ಬ್ರಾಡ್‌ಬಾಂಡ್ ಮತ್ತು ಲ್ಯಾಂಡ್‌ಲೈನ್ ಸಂಪರ್ಕದ ಮೇಲೆ ಉಚಿತವಾಗಿ 4ಜಿ ಸಿಮ್ ಕಾರ್ಡ್ ನೀಡುತ್ತಿದೆ.
ಶೀಘ್ರ ಸ್ಯಾಮ್ಸಂಗ್ ಗ್ಯಾಲಕ್ಸಿ A32 ಫೋನ್ ಬಿಡುಗಡೆ: ಕ್ಯಾಮೆರಾ, ಬ್ಯಾಟರಿ ಸೂಪರ್!
ಈ ಹೊಸ ಆಫರ್ ಸದ್ಯಕ್ಕೆ ಕೇರಳ ಮತ್ತು ತಮಿಳುನಾಡು ಸರ್ಕಲ್‌ಗಳಲ್ಲಿ ಮಾತ್ರವೇ ಲಭ್ಯವಿದ್ದು, ಈಗಾಗಲೇ ಆಫರ್ ಆರಂಭವಾಗಿದೆ ಮತ್ತು ಮಾರ್ಚ್ 31ರವರೆಗೂ ಈ ಆಫರ್ ದೊರೆಯಲಿದೆ. ಟ್ವಿಟರ್‌ನಲ್ಲಿ ಕೇರಳ ಬಿಎಸ್ಸೆನ್ನೆಲ್ ಮಾಡಿರುವ ಟ್ವೀಟ್‌ನಲ್ಲಿ ಈ ಮಾಹಿತಿಯನ್ನು ಕಂಡುಕೊಳ್ಳಬಹುದು. ಆದರೆ, ತಮಿಳುನಾಡು ಮತ್ತು ಕೇರಳ ಹೊರತಪಡಿಸಿದಂತೆ ಬಿಎಸ್ಸೆನ್ನೆಲ್‌ನ ಬೇರೆ ಸರ್ಕಲ್‌ಗಳಲ್ಲಿ ಈ ಆಫರ್ ಇರುವ ಬಗ್ಗೆ ಮಾಹಿತಿ ಇಲ್ಲ.
ಈ ಹೊಸ ಆಫರ್‌ನಡಿ ಗ್ರಾಹಕರು ಹೊಸ ಬಿಎಸ್ಸೆನ್ನೆಲ್ ಬ್ರಾಡ್‌ಬಾಂಡ್ ಅಥವಾ ಬಿಸ್ಸೆಎನ್ನೆಲ್ ಲ್ಯಾಂಡ್‌ಲೈನ್ ಸಂಪರ್ಕವನ್ನು ಪಡೆದುಕೊಂಡರೆ 75 ರೂ. ಮೌಲ್ಯದ ಪ್ಲ್ಯಾನ್ ವೋಚರ್ ಸಿಗಲಿದೆ. ಬಿಸ್ಸೆನ್ನೆಲ್ ಭಾರತ್ ಫೈಬರ್, ಬ್ರಾಡ್‌ಬ್ಯಾಂಡ್ ಮತ್ತು ಲ್ಯಾಂಡ್‌ಲೈನ್ ಆಫರ್‌ಗಳ ಇದರಲ್ಲಿ ಸೇರಿಕೊಂಡಿವೆ.
ಈ 75 ರೂ. ಮೌಲ್ಯ ಪ್ಲ್ಯಾನ್ ವೋಚರ್‌ನಲ್ಲಿ ಬಳಕೆದಾರರಿಗೆ 100 ಮಿನಿಟ್ಸ್ ಉಚಿತ ವಾಯ್ಸ್ ಕರೆಗಳು ಮತ್ತು 60 ದಿನಗಳವರೆಗೆ ದಿನಕ್ಕೆ 2 ಜಿಬಿ ಡೇಟಾ ಕೂಡ ಸಿಗಲಿದೆ.
ಖಾಸಗಿ ಟೆಲಿಕಾಂ ಕಂಪನಿಗಳಿಂದ ತೀವ್ರ ಪೈಪೋಟಿ ಹಾಗೂ ಸ್ಪರ್ಧೆಯನ್ನು ಎದುರಿಸುತ್ತಿರುವ ಬಿಎಸ್ಸೆನ್ನೆಲ್ ಈ ಹಿಂದೆಯೂ ಇಂಥ ಅನೇಕ ಆಫರ್‌ಗಳನ್ನು ಘೋಷಿಸಿದೆ. ಈಗಲೂ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆದುಕೊಳ್ಳಲು 75 ರೂ. ಮೌಲ್ಯದ ವೋಚರ್ ಪ್ಲ್ಯಾನ್ ಹಾಗೂ ಬ್ರಾಡ್‌ಬಾಂಡ್ ಅಥವಾ ಲ್ಯಾಂಡ್‌ಲೈನ್ ಕನೆಕ್ಷನ್ ಮೇಲೆ ಹೊಸ 4 ಜಿ ಸಿಮ್ ಅನ್ನು ಉಚಿತವಾಗಿ ನೀಡುತ್ತಿದೆ.
ವಾಟ್ಸಾಪ್‌ಗೆ 12 ಹರೆಯ, ನಿತ್ಯ ನೂರು ಕೋಟಿ ಕರೆಗಳ ನಿರ್ವಹಣೆ!
ಇತ್ತೀಚಿನ ದಿನಗಳಲ್ಲಿ ತಂತು ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ಹೆಚ್ಚಳವಾಗಿರುವುದನ್ನು ಗಮನಿಸಬಹುದಾಗಿದೆ. ಬಹುಶಃ ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನವರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ವೈರ್ಡ್ ಬ್ರಾಡ್‌ಬಾಂಡ್ ಕನೆಕ್ಷನ್ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಬಿಎಸ್ಸೆನ್ನೆಲ್ ಭಾರತ್ ಫೈಬರ್ ಪ್ಲ್ಯಾನ್ ಪರಿಚಿಯಿಸಿತ್ತು. ಈ ಪ್ಲ್ಯಾನ್ 449 ರೂಪಾಯಿಂದ ಆರಂಭವಾಗುತ್ತದೆ. ಭಾರತ್ ಫೈಬರ್ ಪ್ಲ್ಯಾನ್ ಬಜೆಟ್ ಪ್ಲ್ಯಾನ್ ಆಗಿದ್ದು, ಬಹಳಷ್ಟು ಈ ಪ್ಲ್ಯಾನ್ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.
ಕೇರಳ ಮತ್ತು ತಮಿಳುನಾಡು ಸರ್ಕಲ್‌ಗಳಲ್ಲಿ ಬಿಎಸ್ಸೆನ್ನೆಲ್‌ನ ಈ ಸೇವೆಗೆ ಹೆಚ್ಚು ಬೇಡಿಕೆಯ ಸೃಷ್ಟಿಯಾಗಿರುವ ಕಾರಣದಿಂದಲೇ ಈ ಸರ್ಕಲ್ ತನ್ನ ಪ್ರಸ್ತುತೆಯನ್ನು ಹೆಚ್ಚಿಸಲು ಕಂಪನಿ ಆಫರ್‌ಗಳನ್ನು ಘೋಷಿಸುತ್ತಿದೆ ಎಂದು ಭಾವಿಸಬಹುದಾಗಿದೆ. ಈ ಎರಡೂ ರಾಜ್ಯಗಳಲ್ಲಿ ಬಿಎಸ್ಸೆನ್ನೆಲ್ ಬ್ರಾಡ್‌ಬಾಂಡ್ ಸಂಪರ್ಕಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಕಾಣಬಹುದಾಗಿದೆ. ಇದೇ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಕಂಪನಿ ಪ್ರತಿ ಬ್ರಾಡ್‌ಬಾಂಡ್ ಹಾಗೂ ಲ್ಯಾಂಡ್‌ಲೈನ್ ಕನೆಕ್ಷನ್ ಮೇಲೆ ಉಚಿತವಾಗಿ 4ಜಿ ಸಿಮ್ ನೀಡುವ ಆಫರ್ ಅನ್ನು ಒದಗಿಸಿದೆ. ಈ ಆಫರ್ ಮಾರ್ಚ್ ಅಂತ್ಯದವರೆಗೂ ಇರಲಿದೆ.
ಖಾಸಗಿ ಕಂಪನಿಗಳ ಪೈಪೋಟಿ ನಡುವೆ ಹಾಗೂ ಕೆಲವು ನೀತಿಗಳ ಅಡ್ಡ ಪರಿಣಾಮದ ಮಧ್ಯೆಯೂ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವ ಬಿಎಸ್ಸೆನ್ನೆಲ್ ಈಗ ಹಲವು ಸರ್ಕಲ್‌ಗಳಲ್ಲಿ 4ಜಿ ಸೇವೆಯನ್ನು ಆರಂಭಿಸಿದೆ. ಈ ಸೇವೆಯನ್ನು ತನ್ನ ಗ್ರಾಹಕರಲ್ಲಿ ಪ್ರಚಾರ ಮಾಡುವುದಕ್ಕಾಗಿಯೇ ಕಂಪನಿ 4ಜಿ ಸಿಮ್‌ಗಳನ್ನು ಉಚಿತವಾಗಿ ನೀಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಮೂಲಕ ಪ್ರತಿ ಸ್ಪರ್ಧಿ ಕಂಪನಿಗಳಿಗೆ ಸವಾಲು ಒಡ್ಡುವ ಪ್ರಯತ್ನಕ್ಕೆ ಮುಂದಾಗಿ ಬಿಎಸ್ಸೆನ್ನೆಲ್ ಎನ್ನಬಹುದು.
ಹುವೈ ಮಡಚುವ ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಕೇಳಿದ್ರಾ..?