ಲಡಾಖ್‌ನಲ್ಲಿ ಯೋಧರ ಯೋಗ, 40 ವರ್ಷದ ನಂತ್ರ ಅಜ್ಜಿ ಹುಡುಕಿದ ಮೊಮ್ಮಗ; ಜೂ.21ರ ಟಾಪ್ 10 ಸುದ್ದಿ!

By Suvarna NewsFirst Published Jun 21, 2020, 5:01 PM IST
Highlights

ವಿಶ್ವದೆಲ್ಲಡೆ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ಲಡಾಖ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರು ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಗಮನಸೆಳೆದಿದ್ದಾರೆ. 18 ವರ್ಷಗಳ ಬಳಿಕ ಸಂಭವಿಸಿದ ಕಂಕಣ ಸೂರ್ಯಗ್ರಹಣಕ್ಕೆ ನಭೋಮಂಡಲ ಸಾಕ್ಷಿಯಾಗಿದೆ. ಮುಂಬೈ ದಾಳಿ ಕೋರ ಅಮೆರಿಕದಲ್ಲಿ ಬಂಧನ. ಕಾಂಗ್ರೆಸ್ ನಾಯಕನಿಗೆ ತಗುಲಿದ ಕೊರೋನಾ ವೈರಸ್, 40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ ಸೇರಿದಂತೆ ಜೂನ್ 21ರ ಟಾಪ್ 10 ಸುದ್ದಿ ಇಲ್ಲಿವೆ.

ಗಾಯಾಳು ಯೋಧನ ತಂದೆ ವಿಡಿಯೋ ಟ್ವೀಟ್‌ ಮಾಡಿ ರಾಹುಲ್‌ಗೆ ಶಾ ಟಾಂಗ್‌!

ಭಾರತ-ಚೀನಾ ಗಡಿ ಸಂಘರ್ಷದ ವಿಷಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿರುದ್ಧ ಲಡಾಖ್‌ ಗಡಿ ಸಂಘರ್ಷದಲ್ಲಿ ತೀವ್ರ ಗಾಯಗೊಂಡಿರುವ ಯೋಧನೊಬ್ಬನ ವೃದ್ಧ ತಂದೆಯ ವಿಡಿಯೋವನ್ನು ಟ್ವೀಟ್‌ ಮಾಡಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟಾಂಗ್‌ ನೀಡಿದ್ದಾರೆ.

ಸೂರ್ಯಗ್ರಹಣ 2020: ಬೇರೆ ದೇಶಗಳಲ್ಲಿ ಸೂರ್ಯ ಗೋಚರಿಸಿದ್ದು ಹೀಗೆ..!

ಇಂದು ರಾಹುಗ್ರಸ್ತ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ ನಭೋಮಂಡಲ. ಸೂರ್ಯ ಪ್ರಕಾಶಮಾನವಾದ ಉಂಗುರದಂತೆ ಕಾಣಿಸುತ್ತಾನೆ. ಬರೋಬ್ಬರಿ 18 ವರ್ಷಗಳ ನಂತರ ಈ ಗ್ರಹಣ ಗೋಚರಿಸುತ್ತಿದೆ. ಬಹಳ ವಿಶೇಷವಾದ ಗ್ರಹಣ ಇದಾಗಿದೆ. ಗ್ರಹಣದ ಬಗ್ಗೆ ಸಾಕಷ್ಟು ಭಯ, ಮಿಥ್ಯೆಗಳಿವೆ.

ಮೈ ಕೊರೆಯುವ ಚಳಿಯಲ್ಲೂ ಲಡಾಖ್ ಗಡಿಯಲ್ಲಿ ನಮ್ಮ ಯೋಧರಿಂದ ಯೋಗ!

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದಾದ್ಯಂತ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಯೋಗಾಭ್ಯಾಸಕ್ಕೆ ಮಾಡಲಾಗುತ್ತಿದೆ. ಹೀಗಿರುವಾಗ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ದೇಶವನ್ನು ಶತ್ರುಗಳಿಂದ ಕಾಪಾಡುತ್ತಿರುವ ನಮ್ಮ ಧೀರ ಯೋಧರೂ ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಮುಂಬೈ ದಾಳಿ ಸಂಚುಕೋರ ರಾಣಾ ಅಮೆರಿಕದಲ್ಲಿ ಬಂಧನ!...

166 ಜನರ ಬಲಿ ಪಡೆದ 2008ರ ಮುಂಬೈ ದಾಳಿ ಪ್ರಕರಣದ ಸಂಚುಕೋರ, ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹಾವುರ್‌ ರಾಣಾನನ್ನು ಅಮೆರಿಕ ಪೊಲೀಸರು ಮರುಬಂಧನಕ್ಕೆ ಒಳಪಡಿಸಿದ್ದಾರೆ. ಜೊತೆಗೆ ದ್ವಿಪಕ್ಷೀಯ ಒಪ್ಪಂದದ ಅನ್ವಯ ಆತನನ್ನು ಶೀಘ್ರ ಭಾರತಕ್ಕೆ ಗಡೀಪಾರು ಮಾಡುವ ಸಾಧ್ಯತೆ ಇದೆ.

ಕಾಂಗ್ರೆಸ್ ಹಿರಿಯ ನಾಯಕನಿಗೂ ತಗುಲಿದ ಕೊರೋನಾ ಸೋಂಕು..!

ದೇಶಾದ್ಯಂತ ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಾಂಗ್ರೆಸ್ ಹಿರಿಯ ನಾಯಕನಿಗೂ ಸಹ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

IPL ಟೂರ್ನಿಯಿಂದ ಚೀನಾ ಪ್ರಾಯೋಜಕತ್ವಕ್ಕೆ ಕೊಕ್ ನೀಡಲು ಸಭೆ ಕರೆದ BCCI

ಲಡಾಖ್ ಪ್ರಾಂತ್ಯದಲ್ಲಿ ಪ್ರಭುತ್ವ ಸಾಧಿಸಲುು ಮುಂದಾಗಿರುವ ಚೀನಾ ಭಾರತೀಯ ಯೋಧರ ಮೇಲೆ ದಾಳಿ ಮಾಡಿ ಉದ್ದಟತನ ತೋರಿದೆ. ಈ ಸಂಘರ್ಷದ ಬೆನ್ನಲ್ಲೇ ಚೀನಾ ವಸ್ತುಗಳ ಬಹಿಷ್ಕಾರದ ಕೂಗು ಹೆಚ್ಚಾಗುತ್ತಿದೆ. ಇದೀಗ ಬಿಸಿಸಿಐ ಕೂಡ ಚೀನಾ ಪ್ರಾಯೋಜಕತ್ವಕ್ಕೆ ಕೊಕ್ ನೀಡಲು ನಿರ್ಧರಿಸಿದೆ.

ತಮ್ಮ ಕ್ಲಿಯರ್‌ ಸ್ಕಿನ್‌ ರಹಸ್ಯ ಹಂಚಿಕೊಂಡ ಐಶ್ವರ್ಯಾ ರೈ!

ಮಾಜಿ ವಿಶ್ವ ಸುಂದರಿ ಬಾಲಿವುಡ್‌ ತಾರೆ‌ ಐಶ್ವರ್ಯಾ ರೈ ಚೆಲುವಿಗೆಇಡೀ ಜಗತ್ತೇ ಸೋತಿದೆ. ಹಿಂದಿ ಸಿನಿಮಾದ ಜಗತ್ತಿನ ಅಪ್ರತಿಮ ಸುಂದರಿಯರ ಪಟ್ಟಿಯಲ್ಲಿ ಕರಾವಳಿಯ ಬೆಡಗಿಯ ಹೆಸರು ಖಾಯಂ. ಐಶ್ವರ್ಯಾರ ಅಭಿಮಾನಿಗಳ ಪ್ರಕಾರ, ಈಕೆಯಷ್ಟು ಚೆಂದ ಇನ್ಯಾರು ಇಲ್ಲ. ಹಾಗೇ ಇವಳ ಸೌಂದರ್ಯದ ಬಗ್ಗೆ ಸದಾ ಕೂತುಹಲ ಜನರಿಗೆ. ತಮ್ಮ ಕ್ಲಿಯರ್‌ ಸ್ಕಿನ್‌ನ ಸಿಕ್ರೇಟ್‌ ಹಂಚಿಕೊಂಡಿದ್ದಾರೆ ಎವರ್‌ಗ್ರೀನ್‌ ಐಶ್ವರ್ಯಾ ರೈ.

ಹೊಸ ಕಾರಿನ ಕೀ ಪಡೆದ ಮರುಕ್ಷಣದಲ್ಲೇ ಶೋ ರೂಂ ಗೋಡೆಗೆ ಡಿಕ್ಕಿ, ಮಾಲೀಕನ ಕನಸು ಪುಡಿ ಪುಡಿ!...

ಹೊಸ ಕಾರು ಖರೀದಿಸಿದ ಸಂತಸ, ಡೀಲರ್ ಬಳಿಯಿಂದ ಕಾರಿನ ಕೀ ಪಡೆದು, ಡ್ರೈವರ್ ಸೀಟಿನಲ್ಲಿ ಕುಳಿತ ಮಾಲೀಕ ಕನಸಿನ ಲೋಕದಲ್ಲಿ ವಿಹರಿಸಲು ಆರಂಭಿಸಿದೆ. ಇತ್ತ ಕಾರಿನ ಫೀಚರ್ಸ್ ಕುರಿತು ಡೀಲರ್ ಹೇಳುತ್ತಿದ್ದ ಯಾವ ಮಾತು ಕಿವಿಗೆ ಕೇಳಲೇ ಇಲ್ಲ. ಮಾತು ಮುಗಿದ ಬೆನ್ನಲ್ಲೇ ಕಾರು ಸ್ಟಾರ್ಟ್ ಮಾಡಿದ ಮಾಲೀಕನಿಗೆ ಆಘಾತ. ಹೊಸ ಕಾರು ಎದುರಿದ್ದ ಗೋಡೆಗೆ ಕಾರು ಡಿಕ್ಕಿಯಾಗಿತ್ತು. 

ಪಾರ್ಟಿ ಮೇಲೆ ದಾಳಿ: ಮೋಜು-ಮಸ್ತಿ ಮಾಡುತ್ತಿದ್ದ 6 ಯುವತಿಯರು, 19 ಯುವಕರು ಅರೆಸ್ಟ್...

ಜಿಲ್ಲೆಯ ಅವ್ವೇರಹಳ್ಳಿ ರೆಸಾರ್ಟ್‌ವೊಂದರಲ್ಲಿ ಕೋವಿಡ್ 19 ನಿಯಮ ಉಲ್ಲಂಘಿಸಿ ರಾತ್ರಿ ಪಾರ್ಟಿ ಮಾಡುತ್ತಿದ್ದ 26 ಮಂದಿಯನ್ನು ರಾಮನಗರ ಗ್ರಾಮಾಂತ ಪೊಲೀಸರು ಬಂಧಿಸಿದ್ದಾರೆ.

40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ..! ಮೊಮ್ಮಗನ ಜೊತೆ ಹೊರಟು ನಿಂತಾಗ ಊರೇ ಅತ್ತಿತ್ತು

ಅಜ್ಜಿಯ ಮೊಮ್ಮಗ ಪೃಥ್ವಿ ಕುಮಾರ್ ಬಂದು ಅಜ್ಜಿಯನ್ನು ಕರೆದೊಯ್ಯುವಾಗ ಗ್ರಾಮಸ್ಥರೆಲ್ಲ ಪಂಚುಭಾಯಿ ಹೋಗುತ್ತಿರುವ ದಃಖದಲ್ಲಿ ಕಣ್ಣೀರಿಟ್ಟಿದ್ದಾರೆ. 40 ವರ್ಷದಿಂದ ಜೊತೆಗಿದ್ದ ಅಜ್ಜಿಯನ್ನು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

click me!