ಪ್ರಾಣಿ ನಿಗಾ ಕ್ಯಾಮೆರಾ ಬಳಸಿ ಕಾಡಲ್ಲಿ ಸ್ತ್ರೀಯರ ಶೌಚ ಸೆರೆ!

By Kannadaprabha News  |  First Published Nov 27, 2024, 9:18 AM IST

ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ಅಭಯಾರಣ್ಯದಲ್ಲಿ ಪ್ರಾಣಿಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಬಳಸುವ ಕ್ಯಾಮೆರಾಗಳು ಮಹಿಳೆಯರ ಖಾಸಗಿತನವನ್ನು ಚಿತ್ರೀಕರಿಸುತ್ತಿವೆ.


ಡೆಹ್ರಾಡೂನ್ (ನ.27): ಅಭಯಾರಣ್ಯದಲ್ಲಿ ಪ್ರಾಣಿಗಳ ಚಲನವಲನ, ಧ್ವನಿ, ನಡವಳಿಕೆ ಬಗ್ಗೆ ನಿಗಾವಹಿಸಲು ಬಳಸಲಾಗುವ ಕ್ಯಾಮೆರಾ, ಡ್ರೋನ್‌, ಧ್ವನಿಮುದ್ರಕಗಳನ್ನು ಅಧಿಕಾರಿಗಳು ಮಹಿಳೆಯರ ಖಾಸಗಿತನವನ್ನು ಚಿತ್ರೀಕರಿಸಲು ಬಳಸುತ್ತಿರುವ ಆಘಾತಕಾರಿ ಘಟನೆ ಉತ್ತರಾಖಂಡದ ವಿಶ್ವ ವಿಖ್ಯಾತ ಜಿಮ್‌ ಕಾರ್ಬೆಟ್‌ ಅಭಯಾರಣ್ಯದಲ್ಲಿ ನಡೆದಿದೆ.

ಬ್ರಿಟನ್‌ ಮೂಲದ ಕೇಂಬ್ರಿಡ್ಜ್‌ ವಿಶ್ವ ವಿದ್ಯಾಲಯದ ತ್ರಿಶಾಂಕ್‌ ಸಿಮ್ಲೈ ಎಂಬುವರು 14 ತಿಂಗಳು ಕಾಲ ಅಧ್ಯಯನ ನಡೆಸಿ 270 ಮಹಿಳೆಯರೊಂದಿಗೆ ಸಂವಾದ ನಡೆಸಿ ಈ ಮಾಹಿತಿ ಕಲೆಹಾಕಿದ್ದಾರೆ. ಮಹಿಳೆಯರು ಕಾಡಿಗೆ ತೆರಳುವುದರಿಂದ ಹಿಡಿದು ಅವರು ಶೌಚಕ್ಕೆ ಕುಳಿತುಕೊಳ್ಳುವ, ವಿಶ್ರಾಂತಿ ತೆಗೆದುಕೊಳ್ಳುವ ಚಿತ್ರಗಳನ್ನು ಕ್ಯಾಮೆರಾ ಸೆರೆಹಿಡಿದಿದೆ. ಇದಿಷ್ಟೇ ಅರಣ್ಯದಿಂದ ಮಹಿಳೆಯರನ್ನು ಹೊರಗಟ್ಟುವ ಕಾರಣ ಅವರ ತಲೆ ಮೇಲೆ ಡ್ರೋನ್‌ ಹಾರಿಸಿ ಅಧಿಕಾರಿಗಳು ಬೆದರಿಸುತ್ತಿದ್ದಾರೆ ಎಂಬ ಸಂಗತಿ ಹೊರಬಂದಿದೆ.

Tap to resize

Latest Videos

ಅರಣ್ಯ ರಕ್ಷಕರು ಮಹಿಳೆಯರನ್ನು ಅರಣ್ಯದಿಂದ ಹೆದರಿಸಲು ಹಾರುವ ಡ್ರೋನ್‌ಗಳ ಮೂಲಕ ಮೇಲ್ವಿಚಾರಣೆ ಮಾಡಿದ್ದಾರೆ ಮತ್ತು ಆ ಮೂಲಕ ಕಾನೂನುಬದ್ಧವಾಗಿದ್ದರೂ ಯಾವುದೇ ಸಂಪನ್ಮೂಲಗಳನ್ನು ಸಂಗ್ರಹಿಸದಂತೆ ತಡೆಯುತ್ತಾರೆ ಎಂದು ವರದಿ ತಿಳಿಸಿದೆ. "ಮಹಿಳೆಯರು ಈಗ ಕಾಡಿಗೆ ಹೋಗುವುದರ ಬಗ್ಗೆ ಸಂದೇಹ ಹೊಂದಿದ್ದಾರೆ. ದಿನನಿತ್ಯದ ಜಂಜಾಟಗಳಿಂದ ದೂರವಿರಲು ಅವರಿಗೆ ಇದು ಅವರಿಗೆ ಸುರಕ್ಷಿತ ಸ್ಥಳವಾಗಿತ್ತು" ಎಂದು ಪ್ರಮುಖ ಸಂಶೋಧಕ ತ್ರಿಶಾಂತ್ ಸಿಮ್ಲೈ ತಿಳಿಸಿದ್ದಾರೆ.

ಮಹಿಳೆಯರಿಗೆ ಅಹಂ ಸಮಸ್ಯೆ, ಕರ್ನಲ್‌ ಆಗಲು ಅವರು ಅರ್ಹರಲ್ಲ: ಟಾಪ್‌ ಜನರಲ್‌ ವರದಿ

ಪರಿಣಾಮ: ಕಾಡಿನಲ್ಲಿ ಓಡಾಡಲು ಸುಲಭವಾಗಲು ತಾವು ಸಾಂಪ್ರದಾಯಿಕವಾಗಿ ಮೊಣಕಾಲಿನವರೆಗೆ ಸೀರೆ ಉಡುವ ವಿಧಾನವನ್ನು ಮಹಿಳೆಯರು ತ್ಯಜಿಸಿ ಪೂರ್ತಿ ಕಾಲು ಮುಚ್ಚುವ ಬಟ್ಟೆ ಧರಿಸುತ್ತಿದ್ದಾರೆ. ಕೆಲವೊಮ್ಮೆ ಡ್ರೋನ್‌ಗಳಿಗೆ ಅಂಜಿ ಮಹಿಳೆಯರು ದಟ್ಟ ಕಾಡಿನ ಮಧ್ಯೆ ಹೋಗುತ್ತಾರೆ. ಇದರಿಂದ ಪ್ರಾಣಿಗಳಿಂದ ದಾಳಿಗೆ ಹತ್ತಿರವಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

Toll Plaza Exemptions: ಯಾರಿಗೆಲ್ಲಾ ಟೋಲ್‌ ಹಣ ಕಟ್ಟುವುದರಿಂದ ವಿನಾಯಿತಿ ಇದೆ?

click me!