ಹಣಕಾಸು ಅಕ್ರಮಗಳನ್ನು ತಡೆಯಲು ಜಪಾನ್‌ನ ಶಿಕೋಕು ಬ್ಯಾಂಕ್ ಉದ್ಯೋಗಿಗಳಿಂದ 'ಅಕ್ರಮದಲ್ಲಿ ತೊಡಗಿದರೆ ಆತ್ಮಹತ್ಯೆ' ಎಂಬ ರಕ್ತದ ಪ್ರತಿಜ್ಞೆ ಪಡೆದಿದೆ. ಈ ಪ್ರತಿಜ್ಞೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಗಮನ ಸೆಳೆದಿದೆ.
ಟೋಕಿಯೋ (ನ.27): ಹಣಕಾಸು ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಪಾನ್‌ನ ಶಿಕೋಕು ಬ್ಯಾಂಕ್ ವಿಚಿತ್ರ ಹಾಗೂ ವಿಭಿನ್ನ ಕ್ರಮಕ್ಕೆ ಮುಂದಾಗಿದೆ. ಇದರ ಪ್ರಕಾರ ಬ್ಯಾಂಕಿನ ಎಲ್ಲಾ ಉದ್ಯೋಗಿಗಳಿಂದ, ‘ಅಕ್ರಮದಲ್ಲಿ ತೊಡಗಿದರೆ ಆ ಮೊತ್ತವನ್ನು ಕೈಯ್ಯಾರೆ ಭರಿಸಿ ನಂತರ ಆತ್ಮಹತ್ಯೆಗೆ ಶರಣಾಗುತ್ತೇವೆ’ ಎಂಬ ಪ್ರತಿಜ್ಞೆಗೆ ರಕ್ತದಲ್ಲಿ ಸಹಿ ಮಾಡಿಸಿಕೊಳ್ಳಲಾಗಿದೆ. ಈ ಪ್ರತಿಜ್ಞೆಯ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಗಮನ ಸೆಳೆಯುತ್ತಿದೆ. ಈಗಾಗಲೇ ಶಿಕೋಕು ಬ್ಯಾಂಕ್‌ನ ಪೂರ್ವವರ್ತಿಯಾದ ಥರ್ಟಿ- ಸವೆಂತ್ ನ್ಯಾಷನಲ್ ಬ್ಯಾಂಕ್‌ನ ಅಧ್ಯಕ್ಷ ಮಿಯುರಾ ಸೇರಿದಂತೆ ಸೇರಿದಂತೆ ಎಲ್ಲಾ 23 ಉದ್ಯೋಗಿಗಳು ಈ ಪ್ರತಿಜ್ಞೆಗೆ ಸಹಿ ಮಾಡಿರುವುದಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಮಾಹಿತಿ ನೀಡಿದೆ. ಜೊತೆಗೆ, ‘ಬ್ಯಾಂಕ್ ಉದ್ಯೋಗಿಯಾಗಿ ಮಾತ್ರವಲ್ಲದೆ ಸಮಾಜದಲ್ಲಿ ಒಬ್ಬರಾಗಿರುವ ನಮ್ಮ ನೈತಿಕತೆ ಮತ್ತು ಜವಾಬ್ದಾರಿಯನ್ನು ಇದು ಪ್ರತಿಬಿಂಬಿಸುತ್ತದೆ. ಅಂತೆಯೇ, ಇದನ್ನು ಶಿಕೋಕು ಬ್ಯಾಂಕ್‌ನ ಆಸ್ತಿಯಂತೆ ಮುಂದುವರೆಸಿಕೊಂಡು ಹೋಗಲಾಗುತ್ತದೆ’ ತಿಳಿಸಲಾಗಿದೆ.
ಬ್ಯಾಂಕ್‌ನ ಈ ನಿರ್ಧಾರದಿಂದ ಜನ ಬೆರಗಾಗಿದ್ದು, ಇದರಿಂದಲೇ ಆ ಬ್ಯಾಂಕ್‌ನಲ್ಲಿ ಅಷ್ಟೊಂದು ಹಣ ಇಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ವಿವರಿಸಿದಂತೆ, ಅಧ್ಯಕ್ಷ ಮಿಯುರಾ ಸೇರಿದಂತೆ 23 ಉದ್ಯೋಗಿಗಳು ತಮ್ಮ ರಕ್ತದಿಂದ ಸಹಿ ಮಾಡಿದ ಪತ್ರಕ್ಕೆ ಸಹಿ ಹಾಕಿದ್ದಾರೆ, ಯಾವುದೇ ಹಣಕಾಸಿನ ದುರ್ವರ್ತನೆಯಿಂದ ದೂರವಿರಲು ಪ್ರತಿಜ್ಞೆ ಮಾಡಿದ್ದಾರೆ.
ಪ್ರಾಣಿ ನಿಗಾ ಕ್ಯಾಮೆರಾ ಬಳಸಿ ಕಾಡಲ್ಲಿ ಸ್ತ್ರೀಯರ ಶೌಚ ಸೆರೆ!
ಜಪಾನ್‌ನ ಸಮುರಾಯ್ ಯುಗದ ಗೌರವ ಸಂಹಿತೆಯಲ್ಲಿ ಬೇರೂರಿರುವ ಅಸಾಮಾನ್ಯ ನೀತಿಯು ಜಾಗತಿಕ ಗಮನವನ್ನು ಸೆಳೆದಿದೆ. ಬ್ಯಾಂಕ್‌ನ ವೆಬ್‌ಸೈಟ್‌ನಿಂದ ಸ್ಕ್ರೀನ್‌ಶಾಟ್ ಇತ್ತೀಚೆಗೆ Xನಲ್ಲಿ ವೈರಲ್ ಆಗಿದೆ.
ಮಹಿಳೆಯರಿಗೆ ಅಹಂ ಸಮಸ್ಯೆ, ಕರ್ನಲ್ ಆಗಲು ಅವರು ಅರ್ಹರಲ್ಲ: ಟಾಪ್ ಜನರಲ್ ವರದಿ
ಸೋಶಿಯಲ್ ಮೀಡಿಯಾದಲ್ಲಿ ಈ ಪ್ರತಿಜ್ಞೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದೆ. ಆರ್ಥಿಕ ಹಗರಣಗಳಿಂದ ಕೂಡಿದ ಜಗತ್ತಿನಲ್ಲಿ ಸಮಗ್ರತೆಗೆ ಸಾಕ್ಷಿಯಾಗಿ ಈ ಪ್ರತಿಜ್ಞೆ ಇದೆ ಎಂದು ಮೆಚ್ಚಿದ್ದಾರೆ. ಎಷ್ಟು ಸಂತಸದ ವಿಚಾರ. ಜಗತ್ತಿಗೆ ಈ ಮನೋಭಾವದ ಹೆಚ್ಚಿನ ಅಗತ್ಯವಿದೆ ಎಂದು ಒಬ್ಬರು ಬರೆದಿದ್ದಾರೆ.