40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ..! ಮೊಮ್ಮಗನ ಜೊತೆ ಹೊರಟು ನಿಂತಾಗ ಊರೇ ಅತ್ತಿತ್ತು
ಅಜ್ಜಿಯ ಮೊಮ್ಮಗ ಪೃಥ್ವಿ ಕುಮಾರ್ ಬಂದು ಅಜ್ಜಿಯನ್ನು ಕರೆದೊಯ್ಯುವಾಗ ಗ್ರಾಮಸ್ಥರೆಲ್ಲ ಪಂಚುಭಾಯಿ ಹೋಗುತ್ತಿರುವ ದಃಖದಲ್ಲಿ ಕಣ್ಣೀರಿಟ್ಟಿದ್ದಾರೆ. 40 ವರ್ಷದಿಂದ ಜೊತೆಗಿದ್ದ ಅಜ್ಜಿಯನ್ನು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.
ಭೋಪಾಲ್(ಜೂ.21): 40 ವರ್ಷಗಳ ಹಿಂದೆ 53 ವರ್ಷದ ಪಂಚುಭಾಯಿ ಆಕಸ್ಮಿಕವಾಗಿ ಮಧ್ಯಪ್ರದೇಶದ ಹಳ್ಳಿ ಸೇರಿದ್ದರು. ಕಳೆದ 4 ದಶಕಗಳಿಂದ ಅದೇ ಹಳ್ಳಿಯಲ್ಲಿ ಬದುಕಿದ್ದ ಆಕೆ ಕೊನೆಗೂ ತನ್ನ ಕುಟುಂಬವನ್ನು ಸೇರಿದ್ದಾರೆ.
93ರ ಅಜ್ಜಿಯನ್ನು ಆಂಟಿ ಎಂದು ಕರೆಯುತ್ತಿದ್ದ ಗ್ರಾಮಸ್ಥರು ಪಂಚುಭಾಯಿಯನ್ನು ಭಾವುಕರಾಗಿ ಬೀಳ್ಕೊಟ್ಟಿದ್ದಾರೆ. ಪುರುಷರೂ, ಮಹಿಳೆಯರೂ ಅಜ್ಜಿಯನ್ನು ಕಳುಹಿಸುವಾಗ ಭಾವುಕರಾಗಿದ್ದರು. ಗ್ರಾಮಸ್ಥರೆಲ್ಲ ಅಜ್ಜಿಯನ್ನು ಬೀಳ್ಕೊಡುತ್ತಿರುವ ವಿಡಿಯೋ ಕಾಣಬಹುದು.
ಮೈ ಕೊರೆಯುವ ಚಳಿಯಲ್ಲೂ ಲಡಾಖ್ ಗಡಿಯಲ್ಲಿ ನಮ್ಮ ಯೋಧರಿಂದ ಯೋಗ!
ಅಜ್ಜಿಯ ಮೊಮ್ಮಗ ಪೃಥ್ವಿ ಕುಮಾರ್ ಬಂದು ಅಜ್ಜಿಯನ್ನು ಕರೆದೊಯ್ಯುವಾಗ ಗ್ರಾಮಸ್ಥರೆಲ್ಲ ಪಂಚುಭಾಯಿ ಹೋಗುತ್ತಿರುವ ದಃಖದಲ್ಲಿ ಕಣ್ಣೀರಿಟ್ಟಿದ್ದಾರೆ. 40 ವರ್ಷದ ಹಿಂದೆ ಪಂಚುಭಾಯಿಯನ್ನು ರಕ್ಷಿಸಿದ ಕುಟುಂಬದಲ್ಲಿ ಈ ಅಜ್ಜಿ ಮನೆಯ ಸದಸ್ಯರಂತೆಯೇ ಇದ್ದರು. ಅಜ್ಜಿಯನ್ನು ಮನೆಗೆ ಕರೆತಂದ ವ್ಯಕ್ತಿ ನಿಧನರಾದರೂ, ಮನೆಯವರು ಮಾತ್ರ ಅಜ್ಜಿಯ ನಂಟು ಬಿಟ್ಟಿರಲಿಲ್ಲ. ತಮ್ಮ ಸ್ವಂತ ಅಜ್ಜಿಯಂತೆಯೇ ನೋಡಿಕೊಂಡಿದ್ದರು.
ಕೊರೋನಾ ಮಾಹಿತಿ ಹಂಚಿಕೆ: ಕರ್ನಾಟಕ ಬೆಸ್ಟ್, ತಾಲೂಕು ಮಟ್ಟದ ಮಾಹಿತಿಯೂ ಲಭ್ಯ!
ಮೇ 3ರಂದು ಮೊಬೈಲ್ ನೋಡುತ್ತಿದ್ದ ಪಂಚುಭಾಯಿಯ ಮೊಮ್ಮಗ ಆಕೆಯಲ್ಲಿ ಆಕೆಯ ಕುಟುಂಬದ ಬಗ್ಗೆ ಕೇಳಿ ಆ ಮಾಹಿತಿ ಪಡೆದು ಆ ಗ್ರಾಮಸ್ಥರನ್ನು ಸಂಪರ್ಕಿಸಿದ್ದಾನೆ. ವಾಟ್ಸಾಪ್ ಮೂಲಕ ಅಜ್ಜಿಯ ಫೋಟೋ ಕಳುಹಿಸಲಾಗಿತ್ತು. ಸ್ವಲ್ಪ ಸಮಯದಲ್ಲೇ ಅಜ್ಜಿಯ ನಿಜವಾದ ಮೊಮ್ಮಗ, ಅವರ ಕುಟುಂಬದ ಮಾಹಿತಿ ಲಭ್ಯವಾಗಿತ್ತು.
ಅಜ್ಜಿಯನ್ನು ಕರೆದೊಯ್ಯಲು ಬಂದ ಮೊಮ್ಮಗ ಗ್ರಾಮಸ್ಥರ ಪ್ರೀತಿ ಕಂಡು ಅಚ್ಚರಿಗೊಳಗಾಗಿದ್ದಾರೆ. ಗ್ರಾಮಸ್ಥರು ಆಕೆಯನ್ನು ನೋಡಿಕೊಂಡ ರೀತಿಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.