ನವದೆಹಲಿ(ಜೂ.21): ಕಷ್ಟಪಟ್ಟು, ಲೆಕ್ಕಾಚಾರ ಹಾಕಿ ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಕಾರುಗಳನ್ನು ಖರೀದಿಸುತ್ತಾರೆ. ಇನ್ನು ಕೆಲವರು ಪ್ರತಿಷ್ಠೆ, ಆಸ್ತಿ, ಅಂತಸ್ತು ತೋರ್ಪಡಿಕೆಗೂ ಕಾರು ಖರೀದಿಸುತ್ತಾರೆ. ಆದರೆ ಕಾರು ಖರೀದಿಸಬೇಕು ಅನ್ನೋದು ಎಲ್ಲರ ಬಯಕೆ. ಹೀಗೆ ಬರೋಬ್ಬರಿ 30 ಲಕ್ಷ ರೂಪಾಯಿ ನೀಡಿ ಕಾರು ಖರೀದಿಸಿ, ಸಂತಸದಿಂದ ಡೀಲರ್ ಕೈಯಿಂದ ಕೀ ಪಡೆದು ಸ್ಟಾರ್ಟ್ ಮಾಡಿದ ಬೆನ್ನಲ್ಲೇ ಅಪಘಾತವಾಗಿದೆ.

ಇನೋವಾ ಕಾರಿಗೆ ಪ್ರತಿಸ್ಪರ್ಧಿ; ಕಿಯಾ ಕಾರ್ನಿವಲ್ ಲಾಂಚ್!.

ಲಕ್ಸುರಿ ಕಾರಾದ ಕಿಯಾ ಕಾರ್ನಿವಲ್ ಕಾರನ್ನು ಬಹುತೇಕ ಸೆಲೆಬ್ರೆಟಿಗಳು ಸೇರಿದಂತೆ ಉದ್ಯಮಿಗಳು ಖರೀದಿಸುತ್ತಿದ್ದಾರೆ. ದೂರ ಪ್ರಯಾಣ, ಆರಾಮದಾಯಕ ಹಾಗೂ ಸಾಕಷ್ಟು ಸ್ಥಳವಕಾಶವಿರುದರಿಂದ ಕಾರ್ನಿವಲ್ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದೆ. ಬಹುದಿನಗಳಿಂದ ಕಾರು ಖರೀದಿಸುವ ಕನಸಿನಲ್ಲಿದ್ದ ವ್ಯಕ್ತಿಯೊಬ್ಬರು ಕಿಯಾ ಕಾರ್ನಿವಲ್ ಕಾರು ಬುಕ್ ಮಾಡಿದ್ದಾರೆ.  ದಾಖಲೆ ಸೇರಿದಂತೆ ಎಲ್ಲಾ ಪತ್ರ ಹಾಗೂ ಪಾವತಿ ವ್ಯವಹಾರ ಮುಗಿಸಿದ ವ್ಯಕ್ತಿಗೆ ಒಂದೇ ವಾರದಲ್ಲಿ ಕಾರು ಬಂದಿತ್ತು.

ಬೆಂಗಳೂರಿನಲ್ಲಿ ದಾಖಲೆ ಬರೆದ ಕಿಯಾ ಕಾರ್ನಿವಲ್ ಕಾರು!...

ಬಿಳಿ ಬಣ್ಣದ ನೂತನ ಕಿಯಾ ಕಾರ್ನಿವಲ್ ಕಾರು ಪಡೆಯಲು ಶೋ ರೂಂ ಗೆ ತೆರಳಿದ ವ್ಯಕ್ತಿಗೆ ಆರಂಭದಲ್ಲಿ ಆಟೋಮ್ಯಾಟಿಕ್ ಕಿಯಾ ಕಾರು ಹಾಗೂ ಅದರಲ್ಲಿರುವ ಫೀಚರ್ಸ್ ವಿವರಿಸಲಾಯಿತು. ಸಂತಸದಿಂದ ಕಾರು ಸ್ಟಾರ್ಟ್ ಮಾಡಿದ ಮಾಲೀಕ ಶೋ ರೂಂ ಒಳಗಿಂದ ಹೊರತೆಗೆಯಲು ಮುಂದಾಗಿದ್ದಾರೆ. ಸ್ಟಾರ್ಟ್ ಮಾಡಿದ ಬೆನ್ನಲ್ಲೇ ಕಾರು ಚಲಿಸತೊಡಗಿದೆ ಇತ್ತ ಮಾಲೀಕನ ನಿಯಂತ್ರಣಕ್ಕೆ ಸಿಗದ ಕಾರು ಕೆಲವೇ ಅಡಿಗಳ ಅಂತರದಲ್ಲಿದ್ದ ಶೋ ರೂಂ ಕೌಪೌಂಡ್‌ಗೆ ಡಿಕ್ಕಿ ಹೊಡೆದಿದೆ. 

ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರು ಓಡಿಸಿದ್ದ ಮಾಲೀಕನಿಗೆ, ಆಟೋಮ್ಯಾಟಿಕ್ ಕಾರು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಕಣ್ಮುಚ್ಚಿ ತೆರೆಯೊದರೊಳಗೆ ಕಾರು ಡಿಕ್ಕಿಯಾಗಿ ಮುಂಭಾಗ ಪುಡಿಯಾಗಿದೆ. ಇತ್ತ ಶೋ ರೂಂ ಕೆಲಸಕಾಗರರು ಏನಾಯ್ತು ಅನ್ನುವಷ್ಟರಲ್ಲೇ ಕಾರು ಡಿಕ್ಕಿ ಹೊಡೆದಾಗಿದೆ. 

ಕಾರು ಡೆಲಿವರಿ ಮಾಡಿದ ಶೋ ರೂಂ ಕೆಲಸಗಾರರು ಅಲ್ಲೇ ನಿಂತಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಮನಗೆ ಹೊಸ ಕಾರು ತೆಗೆದುಕೊಂಡು ಹೋಗಬೇಕೆಂದುಕೊಂಡಿದ್ದ ಮಾಲೀಕ, ಹೊಸ ಕಾರನ್ನು ಗ್ಯಾರೇಜಿಗೆ ಕೊಂಡೊಯ್ಯಬೇಕಾಯಿತು. ಒಂದು ಪಾರ ಕಿಯಾ ಕಾರ್ನಿವಲ್ ಕಾರು ಕಿಯಾ ಸರ್ವೀಸ್ ಸೆಂಟರ್‌ನಲ್ಲಿ ರಿಪೇರಿ ಮಾಡಲಾಯಿತು.