ಮೈ ಕೊರೆಯುವ ಚಳಿಯಲ್ಲೂ ಲಡಾಖ್ ಗಡಿಯಲ್ಲಿ ನಮ್ಮ ಯೋಧರಿಂದ ಯೋಗ!
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದಾದ್ಯಂತ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಯೋಗಾಭ್ಯಾಸಕ್ಕೆ ಮಾಡಲಾಗುತ್ತಿದೆ. ಹೀಗಿರುವಾಗ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ದೇಶವನ್ನು ಶತ್ರುಗಳಿಂದ ಕಾಪಾಡುತ್ತಿರುವ ನಮ್ಮ ಧೀರ ಯೋಧರೂ ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಲಡಾಖ್ ಸೇರಿದಂತೆ ಭಾರತ-ಚೀನಾ ಗಡಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಸಿಬ್ಬಂದಿ ಯೋಗ ಪ್ರದರ್ಶನ ಮಾಡಿದ್ದು, ಇದರ ಒಂದು ನೋಟ ಇಲ್ಲಿದೆ ನೋಡಿ
ಆರನೇ ಅಂತರಾಷ್ಟ್ರೀಯ ಯೋದ ದಿನವನ್ನು ವಿಶ್ವದ ಮೂಲೆ ಮೂಲೆಯಲ್ಲೂ ಯೋಗಾಭ್ಯಾಸದ ಮೂಲಕ ಆಚರಿಸಲಾಗುತ್ತಿದೆ
ಸದ್ಯ ನಮ್ಮ ವೀರ ಸೈನಿಕರು ಎತ್ತರದ ಗಡಿ ಪ್ರದೇಶಗಳಲ್ಲಿ ಯೋಗ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಲಡಾಖ್ ಸೇರಿದಂತೆ ಭಾರತ-ಚೀನಾ ಗಡಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಸಿಬ್ಬಂದಿ ಯೋಗ ಪ್ರದರ್ಶನ ಮಾಡಿದರು.
ಉತ್ತರಾಖಂಡ್‌ನ ಭದ್ರಿನಾಥ್ ಬಳಿ ಇರುವ 14,000 ಅಡಿ ಎತ್ತರದ ಗಡಿ ಪ್ರದೇಶದಲ್ಲಿ ITBP ಸಿಬ್ಬಂದಿ ಯೋಗ ಮಾಡಿ ಗಮನ ಸೆಳೆದರು.
ಹಿಮದಿಂದಾವೃತವಾದ ಪ್ರದೇಶದಲ್ಲಿ ಯೋಧರ ಯೋಗ ಪ್ರದರ್ಶನ ಅತ್ಯಂತ ಗಮನ ಸೆಳೆಯಿತು.
ಅದರಂತೆ ಖರ್ದುಂಗ್ ಲಾ ಗಡಿ ಪ್ರದೇಶದಲ್ಲಿ 18,000 ಅಡಿ ಎತ್ತರದ ಪ್ರದೇಶದಲ್ಲಿ (ITBP) ಯೋಧರು ಯೋಗ ಮಾಡಿ ಗಮನ ಸೆಳೆದರು.
ಸದ್ಯ ಭಾರತ-ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆ ಬಳಿಕ ಗಡಿಯಲ್ಲಿ ಉದ್ವಿಗ್ನ ವಾತಾವರಣ ಇದೆ.
ಇದರ ನಡುವೆಯೇ ಸೈನಿಕರು ಯೋಗ ಪ್ರದರ್ಶನ ಮಾಡುವ ಮೂಲಕ ದೇಶಕ್ಕೆ ದೈಹಿಕ ಹಾಗೂ ಮಾನಸಿಕ ಸದೃಢತೆಯ ಸಂದೇಶ ಸಾರಿದ್ದಾರೆ.
ಇನ್ನು ಇಂದು ಬೆಳಗ್ಗೆ 06.30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಯೋಗದ ಮಹತ್ವವನ್ನು ಸಾರಿದ್ದಾರೆ
ಯೋಗ ಆರೋಗ್ಯ ಅಭಿವೃದ್ಧಿಗೊಳಿಸುವುದರೊಂದಿಗೆ, ಕೊರೋನಾ ವಿರುದ್ಧ ಹೋರಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.