ಭಾರತೀಯರಿಗೆ ಅಮೆರಿಕ ಪೌರತ್ವದ ಅವಕಾಶ, RCB ಭಾವನಾತ್ಮಕ ಸಂದೇಶ; ನ.8ರ ಟಾಪ್ 10 ಸುದ್ದಿ!

By Suvarna NewsFirst Published Nov 8, 2020, 5:15 PM IST
Highlights

ಸಿಎಂ ಬಿಎಸ್ ಯಡಿಯೂರಪ್ಪ ಶಿರಾ ಹಾಗೂ ಆರ್‌ಆರ್ ನಗರ ಚುನಾವಣೆ ಗೆಲುವಿನ ಅಂತರ ಕುರಿತು ಭವಿಷ್ಯ ನುಡಿದಿದ್ದಾರೆ. ಇತ್ತ ದಾಖಲೆ ರಹಿತ ಭಾರತೀಯರಿಗೆ ಅಮರಿಕ ಪೌರತ್ವದ ಭರವಸೆಯನ್ನು ಜೋ ಬೈಡನ್ ನೀಡಿದ್ದಾರೆ. ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಕರ್ನಾಟಕದಲ್ಲಿ ಡಿಸೆಂಬರ್‌ ತಿಂಗಳಲ್ಲಿ ಶಾಲೆ ಓಪನ್ ಕುರಿತು ಚರ್ಚೆ ನಡೆಯುತ್ತಿದೆ. ಮಾಧ್ಯಮಕ್ಕೆ ದೀಪಿಕಾ ಎಚ್ಚರಿಕೆ, ಸೋಲಿನ ಬಳಿಕ ಭಾವನಾತ್ಮಕ ಸಂದೇಶ ರವಾನಿಸಿದ ಆರ್‌,ಿಬಿ ಸೇರಿದಂತೆ ನವೆಂಬರ್ 7ರ ಟಾಪ್ 10 ಸುದ್ದಿ ಇಲ್ಲಿವೆ.

ಅಚ್ಚರಿಯ ಬೆಳವಣಿಗೆ : ಜೆಡಿಎಸ್ ದೂರ ಇಡಲು ಚುನಾವಣೆಯಲ್ಲಿ ಕಾಂಗ್ರೆಸ್‌- ಬಿಜೆಪಿ ಮೈತ್ರಿ...

ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು ಜೆಡಿಎಸ್ ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮಹಾ ಮೈತ್ರಿ ನಡೆದಿದೆ. 

ಭಾರತೀಯರ ಅಸಮಾಧಾನ, ಟ್ರಂಪ್‌ನ್ನು ಶ್ವೇತ ಭವನದಿಂದ ಹೊರಗಟ್ಟಿದ 6 ವಿಚಾರಗಳು!...

ವಿಶ್ವದ ದೊಡ್ಡಣ್ಣ ಅಮೆರಿಕ ಚುನಾವಣೆಯ ಫಲಿತಾಂಶ ಬಂದಾಗಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭಾರೀನ ಅಂತರದಿಂದ ಸೋಲಿಸಿದ ಜೋ ಬೈಡೆನ್ ಅಧ್ಯಕ್ಷರಾಗಲು ಸಜ್ಜಾಗಿದ್ದಾರೆ. ಹೀಗ್ಇರುವಾಗ ಟ್ರಂಪ್‌ ಜನರ ಪ್ರೀತಿ ಗಳಿಸುವಲ್ಲಿ ಎಡವಿದ್ದೆಲ್ಲಿ? ಅವರಿಗೆ ಮುಳುವಾಗಿದ್ದೇನು? ಇಲ್ಲಿದೆ ನೋಡಿ ಟ್ರಂಪ್‌ರನ್ನು ಶ್ವೇತ ಭವನದಿಂದ ದೂರ ಹೋಗುವಂತೆ ಮಾಡಿದ ಆರು ಅಂಶಗಳು

ಕೈ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ವಿಡಿಯೋ ಶೇರ್ ಮಾಡಿ ಮಹಿಳೆ ಗಂಭೀರ ಆರೋಪ...

ಮಹಿಳೆಯೋರ್ವರು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ವಿಡಿಯೋ ಶೇರ್ ಮಾಡಿ ಗಂಭೀರ ಆರೋಪ ಮಾಡಿದ್ದಾರೆ. 

ಆರ್‌ಸಿಬಿ ಸೋಲಿನ ಬೆನ್ನಲ್ಲೇ ಭಾವನಾತ್ಮಕ ಸಂದೇಶ ನೀಡಿದ ನಾಯಕ ವಿರಾಟ್ ಕೊಹ್ಲಿ..!...

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ನಾಯಕ ಕೊಹ್ಲಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. 

ತಮ್ಮ ಕಾರನ್ನು ಹಿಂಬಾಲಿಸಿ ಬಂದ ಮಾಧ್ಯಮವನ್ನು ಬೆದರಿಸಿದ ನಟಿ ದೀಪಿಕಾ..!...

ತಮ್ಮ ಹಿಂದೆ ಬಂದ ಮಾಧ್ಯಮದವರನ್ನು ಇತರ ಜನರನ್ನೂ ಬೆದರಿಸಿದ ನಟಿ ದೀಪಿಕಾ, ನನ್ನ ಕಾರನನ್ನು ಹಿಂಬಾಲಿಸಿದ್ರೆ ಕಾನೂನು ಕ್ರಮ ಕೈಗೊಳ್ತೇನೆ ಎಂದು ವಾರ್ನ್ ಮಾಡಿದ್ದಾರೆ.

ನಿಸಾನ್ ಮ್ಯಾಗ್ನೈಟ್ ಭಾರತದ ಅತ್ಯಂತ ಕಡಿಮೆ ಬೆಲೆ SUV ಕಾರು!...

ನಿಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಆಕರ್ಷಕ ಲುಕ್, ಎಂಜಿನ್ ಸಾಮರ್ಥ್ಯ ಹೊಂದಿರುವ SUV ಕಾರು ಇದೀಗ ಪ್ರತಿಸ್ಪರ್ಧಿಗಳಿ ಅತೀ ದೊಡ್ಡ ಶಾಕ್ ನೀಡಲು ಸಜ್ಜಾಗಿದೆ. ಬಿಡುಗಡೆ ಮುನ್ನ ನಿಸಾನ್ ಮ್ಯಾಗ್ನೈಟ್ ಕಾರಿನ ಬೆಲೆ ಬಹಿರಂಗವಾಗಿದೆ. 

ಬೈ ಎಲೆಕ್ಷನ್: RR ನಗರ, ಶಿರಾದಲ್ಲಿ ಗೆಲುವಿನ ಮತಗಳ ಅಂತರ ಹೇಳಿದ ಸಿಎಂ...

ಶಿರಾ ಹಾಗೂ ಆರ್‌ಆರ್‌ ನಗರ ಬೈ ಎಲೆಕ್ಷನ್‌ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಇದರ ಸಿಎಂ ಗೆಲುವಿನ ಅಂತರ ಹೇಳಿದ್ದಾರೆ.

5 ಲಕ್ಷ ದಾಖಲೆ ರಹಿತ ಭಾರತೀಯರಿಗೆ ಅಮೆರಿಕ ಪೌರತ್ವ..! ಬೈಡನ್ ಭರವಸೆ...

ಭಾರತದ 5 ಲಕ್ಷ ದಾಖಲೆ ರಹಿತ ಜನರು ಈ ಮೂಲಕ ಅಮೆರಿಕದ ಪೌರತ್ವವನ್ನು ಪಡೆಯಲಿದ್ದಾರೆ.

ಕರ್ನಾಟಕದಲ್ಲಿ ಡಿಸೆಂಬರ್‌ ತಿಂಗಳಲ್ಲಿ ಶಾಲೆ ಓಪನ್ ?...

ರಾಜ್ಯದಲ್ಲಿ ಶಾಲೆಗಳು ಮುಚ್ಚಿ ಒಂದು ವರ್ಷಗಳೇ ಕಳೆಯುತ್ತಾ ಬಂದಿದೆ. ಇದೀಗ ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಶಾಲೆ ತೆರೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಅರ್ನಬ್ ಗೋಸ್ವಾಮಿ ಟಲೋಜ ಜೈಲಿಗೆ ಶಿಫ್ಟ್!...

ರಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಟಲೋಜ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಲಿಭಗ್ ಕ್ವಾರೆಂಟೈನ್‌ ಕೇಂದ್ರದಲ್ಲಿ ಮೊಬೈಲ್ ಉಪಯೋಗಿಸಿದ್ದಕ್ಕೆ ಈ ರೀತಿ ಮಾಡಲಾಗಿದೆ.

click me!