ಭಾಗೇಶ್ವರ ಧಾಮದಲ್ಲಿ ರೆಸ್ಲರ್ ದಲಿಪ್ ಸಿಂಗ್ ರಾಣಾ ಅಲಿಯಾಸ್ ದಿ ಗ್ರೇಟ್ ಖಲಿ ಅವರು ಸಾಧುವೊಬ್ಬರ ಶಿಖೆ ಹಿಡಿದು ಎತ್ತಿದ ಘಟನೆ ನಡೆದಿದೆ.
ದೇಶ ವಿದೇಶಗಳ ಸೆಲೆಬ್ರಿಟಿಗಳ ಆಗಮನದಿಂದಾಗಿ ಗಮನ ಸೆಳೆದಿರುವ ಭಾಗೇಶ್ವರ ಧಾಮದಲ್ಲಿ ರೆಸ್ಲರ್ ದಲಿಪ್ ಸಿಂಗ್ ರಾಣಾ ಅಲಿಯಾಸ್ ದಿ ಗ್ರೇಟ್ ಖಲಿ ಅವರು ಸಾಧುವೊಬ್ಬರ ಶಿಖೆ ಹಿಡಿದು ಎತ್ತಿದ ಘಟನೆ ನಡೆದಿದೆ. ಒಂದೇ ಕೈನಲ್ಲಿ ಅವರು ಸಾಧುವೊಬ್ಬರ ಜುಟ್ಟು ಹಿಡಿದು ಮೇಲೆತ್ತಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಈ ದೈಹಿಕ ಸಾಮರ್ಥ್ಯವನ್ನು ನೋಡಿ ಬಾಗೇಶ್ವರ ಧಾಮದ ಸ್ವಾಮೀಜಿ ಧೀರೇಂದ್ರ ಕೃಷ್ಣ ಶಾಸ್ತ್ರಿ ಅಚ್ಚರಿಯಿಂದ ನೋಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ.
ಭಾಗೇಶ್ವರ ಧಾಮದ ವತಿಯಿಂದ ನಡೆಯುತ್ತಿರುವ ಸನಾತನ್ ಪಾದಯಾತ್ರೆಯಲ್ಲಿ ಮಾಜಿ ರೆಸ್ಲರ್ ದಿ ಗ್ರೇಟ್ ಖಲಿ ಭಾಗವಹಿಸಿದ್ದರು. ವೇಳೆ ಸಾಧುವೊಬ್ಬರು ತನ್ನನ್ನು ಹೀಗೆ ಶಿಖೆ ಹಿಡಿದು ಎತ್ತುವಂತೆ ದಿ ಗ್ರೇಟ್ ಖಲಿ ಬಳಿ ಕೇಳಿದ್ದಾರೆ. ಅದರಂತೆ ದಿ ಗ್ರೇಟ್ ಖಲಿ ಅವರು ತಮ್ಮ ಒಂದೇ ಕೈನಿಂದ ಸ್ವಾಮೀಜಿಯ ಜುಟ್ಟು ಹಿಡಿದು ಮೇಲೆತ್ತುತ್ತಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಧುವಿನ ಜುಟ್ಟಿನ ಪವರ್ ಹಾಗೂ ದಿ ಗ್ರೇಟ್ ಖಲಿಯ ಬಾಹುಬಲದ ಬಗ್ಗೆ ಜನ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೋದಲ್ಲಿ ಖಲಿ ಅವರು ವೇದಿಕೆ ಮೇಲೆ ಭಾಗೇಶ್ವರ ಧಾಮದ ಸ್ವಾಮೀಜಿ ಧೀರೇಂದ್ರ ಕೃಷ್ಣ ಶಾಸ್ತ್ರಿ ಹಾಗೂ ಸಾಧುವಿನ ಪಕ್ಕದಲ್ಲಿ ನಿಂತಿರುವುದು ಕಾಣಿಸುತ್ತಿದೆ. ಸಾಧುವಿನ ಮಾತಿನಂತೆ ಖಲಿ ಸಾಧುವಿನ ಜುಟ್ಟಲ್ಲಿ ಹಿಡಿದು ಮೇಲೆತ್ತಿದ್ದಾರೆ. ಇದನ್ನು ನೋಡಿ ಬಾಗೇಶ್ವರ ಧಾಮದ ಸ್ವಾಮೀಜಿ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸನಾತನ ಏಕತಾ ಪಾದಯಾತ್ರೆಯನ್ನು ಬಾಗೇಶ್ವರ ಧಾಮದ ಬಾಬಾ ಬಾಗೇಶ್ವರ್ ನಡೆಸುತ್ತಿದ್ದು, ದೇಶದ ಸಾವಿರಾರು ಸಾಧುಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಇದಕ್ಕಾಗಿ ಛತ್ರಾಪುರದಿಂದ ಮಧ್ಯಪ್ರದೇಶದ ಒರ್ಚಾದವರೆಗೆ ಒಟ್ಟು 160 ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ. ಈ ಪಾದಯಾತ್ರೆಯಲ್ಲಿ ಬಾಲಿವುಡ್ ನಟ ಸಂಜಯ್ ದತ್, ಕೈಲಾಶ್ ವಿಜಯವರ್ಗೀಯಾ ಸೇರಿದಂತೆ ಹಲವು ಬಾಲಿವುಡ್ ನಟರು, ರಾಜಕಾರಣಿಗಳು, ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
खली ने यात्रा में शामिल एक साधु की चोटी पकड़कर उन्हें एक हाथ से उठाया । pic.twitter.com/QTxHNPBJw6
— ITM MEDIA 24 (@itmmedia24)
ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ದಿ ಗ್ರೇಟ್ ಖಲಿ ಜಾಲಿ ರೈಡ್!
ಇದನ್ನೂ ಓದಿ: ಸೆಲ್ಫಿಗಾಗಿ ಬಂದ ಟೋಲ್ ಸಿಬ್ಬಂದಿಗೆ ಕಪಾಳಕ್ಕೆ ಬಾರಿಸಿದ ರಸ್ಲರ್ ಖಲಿ, Video Viral!