ಮುಂಬೈ(ನ.08): ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಟಲೋಜ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಲಿಭಾಗ್ ಕ್ವಾರಂಟೈನ್‌ ಕೇಂದ್ರದಲ್ಲಿ ಮೊಬೈಲ್ ಉಪಯೋಗಿಸಿದ್ದಕ್ಕೆ ಈ ರೀತಿ ಮಾಡಲಾಗಿದೆ.

2018 ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಅನ್ವಯ್ ನಾಯ್ಕ್ ಎಂಬ ಇಂಟಿರಿಯರ್ ಡಿಸೈನರ್ ಘಟನೆಗೆ ಸಂಬಂಧಿಸಿ ಅರ್ನಬ್ ಅರೆಸ್ಟ್ ಆಗಿದ್ದಾರೆ. ಅನ್ವಯ್ ಅವರ ತಾಯಿ ಸಹ ಶವವಾಗಿ ಪತ್ತೆಯಾಗಿದ್ದರು.

ಅಷ್ಟಕ್ಕೂ ಅರ್ನಾಬ್ ಗೋಸ್ವಾಮಿ ಬಂಧನಕ್ಕೆ ಕಾರಣವಾದ ಪ್ರಕರಣ ಯಾವುದು?

ಅರ್ನಬ್ ಜೈಲಿನಲ್ಲಿದ್ದರೂ ಯಾರದೋ ಮೊಬೈಲ್ ಬಳಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಗೊತ್ತಾಯಿತು. ಅವರನ್ನು ಅರೆಸ್ಟ್ ಮಾಡಿದಾಗ ಅವರ ಮೊಬೈಲ್ ಸೀಝ್ ಮಾಡಿದ್ದೆವು.

ಈ ಪ್ರಕರಣವನ್ನು ನಾನು ತನಿಖೆ ಮಾಡುತ್ತಿರುವುದರಿಂದ ಅಲಿಭಾಗ್ ಜೈಲು ಸೂಪರಿನ್‌ಟೆಂಡೆಂಟ್‌ಗೆ ಈ ಬಗ್ಗೆ ತನಿಖೆ ನಡೆಸುವಂತೆ ತಿಳಿಸಿದ್ದೇನೆ. ನಂತರ ಅವರನ್ನು ಟಲೋಜ ಜೈಲಿಗೆ ಶಿಫ್ಟ್‌ ಮಾಡಲು ನಿರ್ಧರಿಸಲಾಯಿತು ಎಂದು ಪ್ರಕರಣ ತನಿಖೆ ಮಾಡುತ್ತಿರುವ ಜಮೀಲ್ ಶೇಖ್ ತಿಳಿಸಿದ್ದಾರೆ.