ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಹಿಂದೆ ಬಂದ ಮಾಧ್ಯಮದವರನ್ನು ಬೆದರಿಸಿದ ಘಟನೆ ನಡೆದಿದೆ. ಬಾಲಿವುಡ್ ಸೆಲೆಬ್ರಿಟಿಗಳ ಅಪ್‌ಡೇಟ್ ಕೊಡೋ ಮಾಧ್ಯಮ, ಅವರ ಅಭಿಮಾನಿಗಳು ಯಾರಾದ್ರು ನಟ ನಟಿಯರು ಹೊರಗೆ ಬಂದರೆ ಮುತ್ತಿಕೊಂಡುಬಿಡುವುದು ಸಾಮಾನ್ಯ.

ಆದರೆ ಇತ್ತೀಚೆಗೆ ತಮ್ಮ ಹಿಂದೆ ಬಂದ ಮಾಧ್ಯಮದವರನ್ನು ಇತರ ಜನರನ್ನೂ ಬೆದರಿಸಿದ ನಟಿ ದೀಪಿಕಾ, ನನ್ನ ಕಾರನನ್ನು ಹಿಂಬಾಲಿಸಿದ್ರೆ ಕಾನೂನು ಕ್ರಮ ಕೈಗೊಳ್ತೇನೆ ಎಂದು ವಾರ್ನ್ ಮಾಡಿದ್ದಾರೆ.

ಅಮೆರಿಕದ ಹೊಸ ಅಧ್ಯಕ ಜಾನ್‌ ಬೈಡನ್‌ನನ್ನು ಗಜನಿ ಎಂದ ನಟಿ ಕಂಗನಾ..!

ಇತ್ತೀಚೆಗೆ ಧರ್ಮ್‌ ಪ್ರೊಡಕ್ಷನ್‌ಗೆ ದೀಪಿಕಾ ಭೇಟಿ ಕೊಟ್ಟ ಸಂದರ್ಭ ಫ್ಯಾನ್ಸ್ , ಮೀಡಿಯಾದವರು ನಟಿಯನ್ನು ಹಿಂಬಾಲಿಸಿಕೊಂಡುಬಂದಿದ್ದಾರೆ. ಧರ್ಮ ಆಫೀಸ್‌ಗೆ ಬಂದು ಅಲ್ಲಿಂದ ಮರಳುವ ಸಂದರ್ಭ ಘಟನೆ ನಡೆದಿದೆ.

 
 
 
 
 
 
 
 
 
 
 
 
 

Arey Chichaaaaa

A post shared by Viral Bhayani (@viralbhayani) on Nov 5, 2020 at 4:53am PST

ಮಾಧ್ಯಮದಿಂದ ಕಿರಿಕಿರಿಯಾಗಿ ನಟಿ ಕಾರಿಂದ ಇಳಿದುಬಂದು ಎಲ್ಲರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದರೂ, ಫಲವಿಲ್ಲದೆ ಕಾನೂನು ಕ್ರಮ ಕೈಗೊಳ್ಳೋದಾಗಿ ಬೆದರಿಸಿದ್ದಾರೆ.