ಪಶ್ಚಿಮ ಬಂಗಾಳದ ಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಲಿದೆ. ರಾಜ್ಯದಲ್ಲಿ ಎಲ್ಲೆಲ್ಲಿ, ಯಾವಾಗ ಮಳೆಯಾಗಲಿದೆ.
ಬೆಂಗಳೂರು(ನ.26) ಪಶ್ಚಿಮ ಬಂಗಾಳದಲ್ಲಿನ ವಾಯುಭಾರ ಕುಸಿತ ಇದೀಗ ತಮಿಳುನಾಡು, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆ ಪರಿಣಾಮ ಸೃಷ್ಟಿಸಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ನವೆಂಬರ್ 27 ರಂದು ಸೈಕ್ಲೋನ್ ತಮಿಳುನಾಡಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇತ್ತ ಇದೇ ಸೈಕ್ಲೋನ್ ಎಫೆಕ್ಟ್ ಕರ್ನಾಟಕದ ಮೇಲೂ ತಟ್ಟಲಿದೆ. ನಾಳೆ ದಕ್ಷಣ ಒಳನಾಡಿನ ಜಿಲ್ಲೆಗಳಿಗೆ ಮಳೆ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರಮುಖವಾಗಿ ಬೆಂಗಳೂರು, ಬೆಂಗಳೂರು ಸುತ್ತ ಮುತ್ತ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದಿದೆ.
ಬೆಂಗಳೂರು, ರಾಮನಗರ, ಮಂಡ್ಯ, ಕೋಲಾರು, ಚಿಕ್ಕಬಳ್ಳಾಪುರ, ಮೈಸೂರು, ತಮಕೂರು, ಕೊಡುಗು ಜಿಲ್ಲೆಗಳಲ್ಲಿ ಮಳೆಯಾಗವು ಸಾಧ್ಯತೆಯನ್ನು ಐಎಂಡಿ ಹೇಳಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿತ್ತು. ತಮಿಳುನಾಡಿಗೆ ನಾಳೆ ಅಪ್ಪಳಿಸಲಿರುವ ಸೈಕ್ಲೋನ್ ಪರಿಣಾಮದಿಂದ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ಎಚ್ಚರಿಸಿದ್ದಾರೆ. ಪಶ್ಟಿಮ ಬಂಗಾಳದಲ್ಲಿನ ವಾಯುಭಾರ ಕುಸಿತ ತೀವ್ರಗೊಂಡಿದೆ. ಹೀಗಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ. ವಾಯುಭಾರ ತೀವ್ರಗೊಂಡು ಸೈಕ್ಲೋನ್ ಆಗಲಿದೆ. ಈ ಸೈಕ್ಲೋನ್ ನವೆಂಬರ್ 27 ರಂದು ತಮಿಳುನಾಡು ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎಂದಿದೆ.
ಭಾರತದ ಪ್ರತಿಭಾವಂತರ ರಾಜಧಾನಿ ಕರ್ನಾಟಕ; ಎಕ್ಸ್ಫೆನೋ ವರದಿಯಿಂದ ಬಹಿರಂಗ
ಬೆಂಗಳೂರಿನ ಟೆಂಪರೇಚರ್ 16 ಡಿಗ್ರಿ ಸೆಲ್ಶಿಯಸ್‌ಗೆ ಕುಸಿತ ಕಂಡಿದೆ. ನವೆಂಬರ್‌ನಲ್ಲಿರುವ ಸರಾಸರಿ ಉಷ್ಣಾಂಶಕ್ಕಿಂತ ಈ ಬಾರಿ ಬೆಂಗಳೂರಿನಲ್ಲಿ ಟೆಂಪರೇಚರ್ ಕುಸಿತ ತಂಡಿದೆ. 16 ಡಿಗ್ರಿ ಸೆಲ್ಶಿಯಸ್ ವಾತಾವರಣ ಡಿಸೆಂಬರ್‌ನಲ್ಲಿರುತ್ತದೆ. ಆದರೆ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಚಳಿ ವಾತಾವರಣವಿದೆ.ಇತ್ತ ಬೆಂಗಳೂರಿನ ವಾಯು ಗುಣಮಟ್ಟ 116(AQI) ಆಗಿದೆ.
ಕಳೆದ ವಾರದಿಂದ ಬೆಂಗಳೂರಿನ ಉಷ್ಣಾಂಶ ಕುಸಿತ ಕಾಣುತ್ತಿದೆ. ಕಳೆದ ಶುಕ್ರವಾರ 17.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದ ಟೆಂಪರೇಚರ್ ಇದೀಗ 16ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ದಿನದಿಂದ ದಿನಕ್ಕೆ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆ ಉಂಟಾಗಲಿದ್ದು, ಆಗ ಇನ್ನಷ್ಟು ಚಳಿ ಅನುಭವ ಆಗಲಿದೆ. ಡಿಸೆಂಬರ್‌ನಲ್ಲಿ ನಗರದ ವಾಡಿಕೆ ಕನಿಷ್ಠ ಉಷ್ಣಾಂಶವೇ 16.2 ಡಿಗ್ರಿ ಸೆಲ್ಸಿಯಸ್ ಇದ್ದು, ಜನವರಿಯಲ್ಲಿ 15.8 ಡಿಗ್ರಿ ಸೆಲ್ಸಿಯಸ್ ಆಗಿದೆ. ಈ ವರ್ಷ ಅದಕ್ಕಿಂತಲೂ ಕಡಿಮೆ ದಾಖಲಾಗುವ ಸಾಧ್ಯತೆ ಇದೆ. ಚಳಿಯ ನಡುವೆ ಉತ್ತರ ಧಿಕ್ಕಿನಿಂದ ಗಾಳಿ ಬಿಸಿದರೆ ನಗರದ ಜನ ಕೋಲ್ಡ್ ವೇವ್ ಎದುರಿಸಬೇಕಾಗಲಿದೆ. ಆದರೆ, ಸಾಧ್ಯತೆ ತುಂಬಾ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ 1967 ನವೆಂಬರ್ 15 ರಂದು 9.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ಸಾರ್ವಕಾಲಿಕ ದಾಖಲೆಯ ಅತಿ ಕಡಿಮೆ ಕನಿಷ್ಠ ಉಷ್ಣಾಂಶವಾಗಿದೆ. ಉಳಿದಂತೆ ಕಳೆದ 12 ವರ್ಷದಲ್ಲಿ 2012ರ ನ.19ರಂದು ಅತಿ ಕಡಿಮೆ 13.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.