
ಹರ್ಯಾಣ(ನ.26) ಹುತಾತ್ಮ CRPF ಯೋಧ ಸತೀಶ್ ಕುಮಾರ್ ಪುತ್ರಿಯ ವಿವಾದ ಅದ್ಧೂರಿಯಾಗಿ ನಡೆದಿದೆ. ಈ ಮದುವೆಯ ವಿಶೇಷ ಏನಂದರೆ ಸಂಪೂರ್ಣ ಮದುವೆ ಜವಾಬ್ದಾರಿಯನ್ನು CRPF ಯೋಧರೆ ನಿರ್ವಹಿಸಿದ್ದಾರೆ. ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನವನ್ನು ಮಾಡಿದ ವಿಶೇಷ ಭಾವುಕ ಕ್ಷಣದ ಮದುವೆ ಹರ್ಯಾಣದ ಚತ್ತಾರ್ ಗ್ರಾಮದಲ್ಲಿ ನಡೆದಿದೆ. ಸತೀಶ್ ಕುಟುಂಬಸ್ಥರು, ಆಪ್ತರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇದೇ ವೇಳೆ ಯೋಧರ ಪರ ಜೈಕಾರ ಮೊಳಗಿದೆ.
ಚತ್ತಾರ್ ಗ್ರಾಮದ CRPF ಯೋಧ ಸತೀಶ್ ಕುಮಾರ್ 9 ವರ್ಷಗಳ ಹಿಂದೆ, ಅಂದರೆ ಮಾರ್ಚ್ 20, 2015ರಂದು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸತೀಶ್ ಕುಮಾರ್ ಹುತಾತ್ಮರಾಗಿದ್ದರು. ಬಡ ಕುಟುಂಬದ ಸತೀಶ್ ಕುಮಾರ್ ದಿಟ್ಟ CRPF ಜವಾನ ಎಂದೇ ಗುರುತಿಸಿಕೊಂಡಿದ್ದರು. ಉಗ್ರರ ವಿರುದ್ಧದ ಮಿಂಚಿನ ಕಾರ್ಯಾಚರಣೆ ನಡೆಸುವಲ್ಲಿ ಸತೀಶ್ ಕುಮಾರ್ ಸದಾ ಮುಂದಿದ್ದರು. ಆದರೆ ಸತೀಶ್ ಕುಮಾರ್ ನಿಧನ ಕುಟುಂಬಕ್ಕೆ ಅತೀ ದೊಡ್ಡ ಆಘಾತ ನೀಡಿತ್ತು. ಅಂದು CRPF ಜವಾನರರು ಅಂತ್ಯಸಂಸ್ಕಾರದಲ್ಲಿ ಸತೀಶ್ ಕುಮಾರ್ ಪುತ್ರಿ ಹಾಗೂ ಕುಟುಂಬಕ್ಕೆ ಅಭಯ ನೀಡಿದ್ದರು. ಮುಂದಿನ ದಿನಗಳಲ್ಲೂ CRPF ಸದಾ ನಿಮ್ಮೊಂದಿಗಿದೆ ಎಂದಿತ್ತು.
ಮಾವೋವಾದಿಗಳ ಹಾವಳಿಯಿಂದ ರಾಮನಿಗೆ ಮುಕ್ತಿ ನೀಡಿದ ಸಿಆರ್‌ಪಿಎಫ್ ಯೋಧರು: 21 ವರ್ಷಗಳ ಬಳಿಕ ಮತ್ತೆ ಪೂಜೆ
ಸತೀಶ್ ಕುಮಾರ್ ಹುತಾತ್ಮರಾದ 9 ವರ್ಷದ ಬಳಿಕ ಪುತ್ರಿ ನಿಶಾ ಮದುವೆ ಫಿಕ್ಸ್ ಆಗಿದೆ. ಇತ್ತ CRPF ಜವಾನರು ಕಾರ್ಯಪ್ರವೃತ್ತರಾಗಿದ್ದಾರೆ. ನಿಶಾ ತಂದೆ ಸತೀಶ್ ಕುಮಾರ್ ಹುತಾತ್ಮರಾಗಿರುವ ಕಾರಣ ತಂದೆಯ ಕೊರತೆ ಕಾಡಬಾರದು ಅನ್ನೋದು CRPF ಜವಾನರ ಆಶಯವಾಗಿತ್ತು. ನಿಶಾ ಮದುವೆಗೆ ಆಗಮಿಸಿದ CRPF ಜವಾನರು ಎಲ್ಲಾ ಜವಾಬ್ದಾರಿ ನಿರ್ವಹಿಸಿದ್ದಾರೆ. ತಂದೆಯ ಸ್ಥಾನದಲ್ಲಿ ನಿಂತು ನಿಶಾ ಮದುವೆ ಮಾಡಿಸಿದ್ದಾರೆ. ವರ ಹಾಗೂ ವರನ ಕುಟುಂಬಸ್ಥರನ್ನು ಸಿಆರ್‌ಪಿಎಫ್ ಯೋಧರು ಸ್ವಾಗತಿಸಿದ್ದಾರೆ. ಬಳಿಕ ಮದುವೆ ಸಂಪ್ರದಾಯ ಹಾಗೂ ಪದ್ಧತಿಯನ್ನು ನೆರವೇರಿಸಿದ್ದಾರೆ. ಕನ್ಯಾದಾನ ಮಾಡಿ ಅದ್ಧೂರಿಯಾಗಿ ಮದುವೆ ಮಹೋತ್ಸವ ಮಾಡಿದ್ದಾರೆ.
CRPF ಡಿಐಜಿ ಕೋಮಲ್ ಕುಮಾರ್ ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಸತೀಶ್ ಕುಮಾರ್ ನಮ್ಮ ಜೊತೆ CRPF ತಂಡದಲ್ಲಿದ್ದರು. ಇದೀಗ ಈ ಶುಭ ಸಂದರ್ಭದಲ್ಲಿ ಸತೀಶ್ ಕುಮಾರ್ ಪುತ್ರಿಗೆ ತಂದೆಯ ಕೊರಗು ಕಾಡಬಾರದು. ಕನ್ಯಾದಾನ ಮಾಡುವಾಗ ಆಕೆ ನಗು ನಗುತ್ತಲೆ ಇರಬೇಕು. ಹೀಗಾಗಿ ನಾವು ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದೇವೆ ಎಂದಿದ್ದಾರೆ.
CRPF ಯೋಧರು ಆಗಮಿಸಿ ಕನ್ಯಾದಾನ ಮಾಡಿ ರೀತಿ ನಿಶಾ ಹಾಗೂ ಹುತಾತ್ಮ ಸತೀಶ್ ಕುಮಾರ್ ಕುಟುಂಬ, ಮದುವೆಗೆ ಆಗಮಿಸಿದ ಕುಟುಂಬಸ್ಥರನ್ನು ಭಾವುಕರನ್ನಾಗಿ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ