ಶಿವಮೊಗ್ಗ, (ನ.08): ನಾನು ಪ್ರಚಾರದ ವೇಳೆಯಲ್ಲಿಯೇ ಹೇಳಿದ್ದೆ, ಶಿರಾ ಹಾಗೂ ಆರ್‍ಆರ್‌ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ. 2 ಕ್ಷೇತ್ರಗಳನ್ನ ನಾವು ಗೆದ್ದೇ ಗೆಲ್ತೀವಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಂದು (ಭಾನುವಾರ) ಶಿವಮೊಗ್ಗದಲ್ಲಿ ಮಾಧ್ಯವಗಳೊಂದಿಗೆ ಮಾತನಾಡಿದ ಸಿಎಂ, 'ಪ್ರಚಾರದ ವೇಳೆ ಕಾಂಗ್ರೆಸ್ʼನವರು ನಮ್ಮ ಪಕ್ಷದ ಬಗ್ಗೆ ವಿನಾಃ ಕಾರಣ ಟೀಕೆ ಮಾಡುತ್ತಿದ್ದರು. ಶಿರಾದಲ್ಲಿ ಬಿಜೆಪಿ ಠೇವಣಿ ಉಳಿಸಿಕೊಳ್ಳದಿರುವ ಕ್ಷೇತ್ರ. ಆದರೆ ಈ ಬಾರಿ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ 25 ಸಾವಿರ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ಪಷ್ಟಪಡಿಸಿದರು.

'ಚುನಾವಣೆ ಸಮೀಕ್ಷೆಗಳು ಉಲ್ಟಾ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ' 

ಇನ್ನು ಆರ್ ಆರ್ ನಗರದಲ್ಲಿಯೂ 40 ಸಾವಿರ ಅಂತರದಲ್ಲಿ ಗೆಲ್ಲುತ್ತೇವೆ. ಚುನಾವಣೋತ್ತರ ಸಮೀಕ್ಷೆ ಸಹ ಇದೇ ಹೇಳಿದೆ ಎಂದರು.

ಇದೇ ನವೆಂಬರ್ 10ಕ್ಕೆ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಎಲ್ಲದಕ್ಕೂ ಅಂದೇ ಉತ್ತರ ಸಿಗಲಿದೆ.