ಭಾರತೀಯರ ಅಸಮಾಧಾನ, ಟ್ರಂಪ್‌ನ್ನು ಶ್ವೇತ ಭವನದಿಂದ ಹೊರಗಟ್ಟಿದ 6 ವಿಚಾರಗಳು!
ವಿಶ್ವದ ದೊಡ್ಡಣ್ಣ ಅಮೆರಿಕ ಚುನಾವಣೆಯ ಫಲಿತಾಂಶ ಬಂದಾಗಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭಾರೀನ ಅಂತರದಿಂದ ಸೋಲಿಸಿದ ಜೋ ಬೈಡೆನ್ ಅಧ್ಯಕ್ಷರಾಗಲು ಸಜ್ಜಾಗಿದ್ದಾರೆ. ಹೀಗ್ಇರುವಾಗ ಟ್ರಂಪ್ ಜನರ ಪ್ರೀತಿ ಗಳಿಸುವಲ್ಲಿ ಎಡವಿದ್ದೆಲ್ಲಿ? ಅವರಿಗೆ ಮುಳುವಾಗಿದ್ದೇನು? ಇಲ್ಲಿದೆ ನೋಡಿ ಟ್ರಂಪ್‌ರನ್ನು ಶ್ವೇತ ಭವನದಿಂದ ದೂರ ಹೋಗುವಂತೆ ಮಾಡಿದ ಆರು ಅಂಶಗಳು
ಕೊರೋನಾ ಸೋಂಕು ನಿಯಂತ್ರಣಕ್ಕೆ ಟ್ರಂಪ್ ಸರಿಯಾದ ಕೈಗೊಳ್ಳಲಿಲ್ಲ. ಟ್ರಂಪ್ ಆಡಳಿತದ ವೈಫಲ್ಯದಿಂದ ಅಮೆರಿಕ ಕೊರೋನಾದಿಂದ ಅತಿ ಹೆಚ್ಚು ಬಾಧಿತವಾದ ದೇಶ ಎಂಬ ಕುಖ್ಯಾತಿ ಪಡೆಯಬೇಕಾಯಿತು. ಈ ಬಗ್ಗೆ ದೇಶಾದ್ಯಂತ ಅಸಮಾಧಾನ ಇತ್ತು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯರ ಮತಗಳೇ ನಿರ್ಣಾಯಕ. ಆದರೆ ಅಮೆರಿಕಕ್ಕೆ ಕೆಲಸಕ್ಕೆ ಸೇರಲು ಇಚ್ಛಿಸುವ ವಿದೇಶಿಗರಿಗೆ ನೀಡುವ ಎಚ್-1ಬಿ ವೀಸಾ ನಿಯಮಗಳನ್ನು ಟ್ರಂಪ್ ಬಿಗಿಗೊಳಿಸಿದರು. ಇದು ಭಾರತೀಯ ಉದ್ಯೋಗಸ್ಥರ ಅಸಮಾಧಾನಕ್ಕೆ ಕಾರಣವಾಗಿತ್ತು.
ಅಮೆರಿಕ ಜಾಗತಿಕ ಒಪ್ಪಂದಗಳನ್ನು ಶಿಸ್ತುಬದ್ಧವಾಗಿ ಪಾಲಿಸುತ್ತಿತ್ತು. ಆದರೆ ಟ್ರಂಪ್ ಪ್ಯಾರೀಸ್ ಒಪ್ಪಂದ, ಮಾನವ ಹಕ್ಕುಗಳ ಮಂಡಳಿ ಸೇರಿದಂತೆ ಒಂದೊಂದೆ ಒಪ್ಪಂದದಿಂದ ಹೊರ ಬರುವ ನಿರ್ಣಯ ತೆಗೆದುಕೊಂಡಿದ್ದರು. ಟ್ರಂಪ್ ನೀತಿಗಳ ವಿರುದ್ಧ ಅಮೆರಿಕನ್ನರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ.
ಟ್ರಂಪ್ ಸರ್ಕಾರದ ನೀತಿಗಳು ವರ್ಣಭೇದ ನೀತಿಯನ್ನು ಪ್ರಚೋದಿಸುತ್ತಿದ್ದವು.
ಟ್ರಂಪ್ ಅವಧಿಯಲ್ಲಿ ಕೈಗೊಂಡ ದೂರದೃಷ್ಟಿಯಿಲ್ಲದ ಕ್ರಮಗಳು ಆರ್ಥಿಕತೆ ಮೇಲೆ ನೇತ್ಯಾತ್ಮಕ ಪರಿಣಾಮ ಬೀರಿದ್ದವು. ದೇಶದ ಆರ್ಥಿಕತೆ ಕುಸಿದಿತ್ತು.
ಟ್ರಂಪ್ ಅವರ ಅರ್ಥವಿಲ್ಲದ ಮಾತು, ಸಿಡುಕಿನ ಬಗ್ಗೆ ಅಸಮಾಧಾನ ಇತ್ತು.