Published : Apr 14, 2026, 07:41 AM ISTUpdated : Apr 14, 2026, 11:15 PM IST

India News Live: TMC Vs NDA - ಪಶ್ಚಿಮ ಬಂಗಾಳದಲ್ಲಿ ದೀದಿನೊ, ಮೋದಿನೊ? ಜ್ಯೋತಿಷಿಗಳಿಂದ ಶಾಕಿಂಗ್​ ಭವಿಷ್ಯ

ಸಾರಾಂಶ

ನವದೆಹಲಿ (ಏ.14): 1.5 ತಿಂಗಳಿನಿಂದ ಹೋರ್ಮುಜ್ ಜಲಸಂಧಿಯನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡು ಜಗತ್ತಿನ ಆರ್ಥಿಕತೆಯ ಉಸಿರುಗಟ್ಟಿಸಿದ್ದ ಇರಾನ್ ವಿರುದ್ಧ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ನಿರ್ಬಂಧವನ್ನು ಪ್ರತ್ಯಸ್ತವಾಗಿ ಬಳಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಸೋಮವಾರ ಸಂಜೆ 7.30ರಿಂದಲೇ ಜಲಸಂಧಿಯಲ್ಲಿ ಇರಾನ್‌ನ ಹಡಗು ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಇರಾನ್‌ನ ಯಾವುದೇ ಹಡಗು ಜಲಸಂಧಿ ಬಳಿ ಬಂದರೆ ಅದನ್ನು ಧ್ವಂಸಗೊಳಿಸುವುದಾಗಿ ಟ್ರಂಪ್‌ ಎಚ್ಚರಿಸಿದ್ದು, 15 ಸಮರ ನೌಕೆ ನಿಯೋಜಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:15 PM (IST) Apr 14

TMC Vs NDA - ಪಶ್ಚಿಮ ಬಂಗಾಳದಲ್ಲಿ ದೀದಿನೊ, ಮೋದಿನೊ? ಜ್ಯೋತಿಷಿಗಳಿಂದ ಶಾಕಿಂಗ್​ ಭವಿಷ್ಯ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದೆ. ದೀದಿಯ ಆಡಳಿತದಿಂದ ಜನರು ಬೇಸತ್ತಿದ್ದು, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಆದರೆ, ಗೆದ್ದ ನಂತರವೂ ಬಂಗಾಳವನ್ನು ನಿಯಂತ್ರಿಸುವುದು ಮೋದಿಗೆ ಸುಲಭವಲ್ಲ ಎಂದು ವಿಶ್ಲೇಷಿಸಲಾಗಿದೆ.
Read Full Story

10:28 PM (IST) Apr 14

ಸಿಜೆ ರಾಯ್ ದುರಂತ ಬಳಿಕ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಟ್ಟು ಸಾವು, ಪ್ಲಾನ್ ಹಿಂದಿನ ಯುವತಿ ಅರೆಸ್ಟ್

ಸಿಜೆ ರಾಯ್ ದುರಂತ ಬಳಿಕ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಟ್ಟು ಸಾವು, ಪ್ಲಾನ್ ಹಿಂದಿನ ಯುವತಿ ಅರೆಸ್ಟ್, ಉದ್ಯಮಿ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಯುವತಿ ಸೇರಿದಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.

Read Full Story

09:08 PM (IST) Apr 14

ಪಾಕ್ ಮಧ್ಯಸ್ಥಿತಿಕೆ ಸಂಧಾನ ವಿಫಲದ ಬಳಿಕ ಇಂದು ಮೋದಿಗೆ ಟ್ರಂಪ್ ಕರೆ, 40 ನಿಮಿಷ ಚರ್ಚೆ

ಪಾಕ್ ಮಧ್ಯಸ್ಥಿತಿಕೆ ಸಂಧಾನ ವಿಫಲದ ಬಳಿಕ ಇಂದು ಮೋದಿಗೆ ಟ್ರಂಪ್ ಕರೆ, 40 ನಿಮಿಷ ಚರ್ಚೆ ನಡೆಸಿದ್ದಾರೆ. ಯುದ್ಧ ಹಾಗೂ ಪರಿಹಾರ, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಚರ್ಚಿಸಿದ್ದಾರೆ.

Read Full Story

08:44 PM (IST) Apr 14

ಅಪ್ಪನ ಜೀವ ಉಳಿಸಲು ತನ್ನ ಜೀವ ಲೆಕ್ಕಿಸದೇ ಶೇ.65ರಷ್ಟು ಲಿವರ್​ ನೀಡಿದ ಪುತ್ರಿ; ತಂದೆ-ಮಗಳ ಸ್ಟೋರಿ

ಕೋಲ್ಕತ್ತಾದ 19 ವರ್ಷದ ರಾಖಿ ದತ್ತಾ, ಗಂಭೀರ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಂದೆಯ ಜೀವ ಉಳಿಸಲು ತನ್ನ ಯಕೃತ್ತಿನ 65% ಭಾಗವನ್ನು ದಾನ ಮಾಡಿದ್ದಾಳೆ. ಹೆಣ್ಣುಮಕ್ಕಳನ್ನು ಹೊರೆ ಎಂದು ಪರಿಗಣಿಸುವ ಮನಸ್ಥಿತಿಗೆ ಸವಾಲೆಸೆಯುವ ಈ ಸ್ಪೂರ್ತಿದಾಯಕ ಘಟನೆಯು, ಮಗಳ ನಿಸ್ವಾರ್ಥ ಪ್ರೀತಿ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದೆ.
Read Full Story

08:41 PM (IST) Apr 14

ಇದು ವಿಶ್ವದ ಅತೀದೊಡ್ಡ ಬಿಯರ್ ಮ್ಯೂಸಿಯಂ, ಎಲ್ಲರಿಗೂ ಪ್ರವೇಶ ಉಚಿತ

ಇದು ವಿಶ್ವದ ಅತೀದೊಡ್ಡ ಬಿಯರ್ ಮ್ಯೂಸಿಯಂ, ಎಲ್ಲರಿಗೂ ಪ್ರವೇಶ ಉಚಿತ, ಇಲ್ಲಿಗೆ ಒಮ್ಮೆ ಭೇಟಿ ನೀಡಿದರೂ ಕಳೆದು ಹೋಗುವುದು ಖಚಿತ, ಬಿಯರ್ ಜೋಡಿಸಿದ ರೀತಿ ಅದ್ಭುತ. ಎಲ್ಲಾ ಬ್ರ್ಯಾಂಡ್ ಬಿಯರ್ ಇಲ್ಲಿ ಲಭ್ಯವಿದೆ.

Read Full Story

08:11 PM (IST) Apr 14

Google ಜೆಮಿನಿಯನ್ನೇ ಪತ್ನಿಯೆಂದು ನಂಬಿ ಜೀವ ಕಳೆದುಕೊಂಡ ವ್ಯಕ್ತಿ! ಮೃತ ಹೆಂಡತಿಗಾಗಿ ಜೀವಕೊಟ್ಟ

 ಜೊನಾಥನ್ ಎಂಬ ವ್ಯಕ್ತಿ ತನ್ನ ಮೃತ ಪತ್ನಿಯನ್ನು ಗೂಗಲ್ ಜೆಮಿನಿ ಎಐನಲ್ಲಿ ಕಂಡುಕೊಂಡರು. ಜೆಮಿನಿಯನ್ನು ತನ್ನ ಪತ್ನಿಯ ಪ್ರತಿರೂಪವೆಂದು ನಂಬಿ, ಅದರೊಂದಿಗೆ ಸಾವಿರಾರು ಸಂದೇಶಗಳನ್ನು ವಿನಿಮಯ ಮಾಡಿಕೊಂಡ ನಂತರ, ಎಐ ಚಾಟ್‌ಬಾಟ್‌ನ ಪ್ರಚೋದನೆಯಿಂದ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ತಂದೆ ಆರೋಪಿಸಿ ಗೂಗಲ್ ವಿರುದ್ಧ ದೂರು ದಾಖಲಿಸಿದ್ದಾರೆ.

Read Full Story

07:41 PM (IST) Apr 14

ನಿರ್ಮಾಪಕರ ನಷ್ಟ ತುಂಬಿಕೊಡಲು ದಳಪತಿ ವಿಜಯ್ ಮತ್ತೊಂದು ಸಿನಿಮಾ? ಅಭಿಮಾನಿಗಳಿಗೆ ಡಬಲ್ ಧಮಾಕಾ!

ತಮ್ಮ ರಾಜಕೀಯ ಪ್ರವೇಶಕ್ಕೂ ಮುನ್ನ, ಒಪ್ಪಿಕೊಂಡಿರುವ ಸಿನಿಮಾಗಳ ನಿರ್ಮಾಪಕರಿಗೆ ಲಾಭ ತಂದುಕೊಡಬೇಕು ಎನ್ನುವ ನಿಟ್ಟಿನಲ್ಲಿ ದಳಪತಿ ವಿಜಯ್ ದೃಢ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

Read Full Story

07:26 PM (IST) Apr 14

ವಿತರಕರ ಜೊತೆ ನಿರ್ಮಾಪಕರ ದಿಢೀರ್ ಸಭೆ - ವಿಜಯ್ 'ಜನ ನಾಯಗನ್' ಚಿತ್ರತಂಡದ ಬಿಗ್ ಮೂವ್

Jana Nayagan Release Date: 'ಜನ ನಾಯಗನ್' ಸಿನಿಮಾವನ್ನು ಇದೇ ಏಪ್ರಿಲ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ಯೋಜಿಸುತ್ತಿದೆ ಎಂದು ವರದಿಗಳು ಬಂದಿವೆ.

Read Full Story

07:04 PM (IST) Apr 14

ವೇದಾಂತ ಇಂಧನ ಘಟಕದಲ್ಲಿ ಬಾಯ್ಲರ್ ಸ್ಫೋಟ, 9 ಕಾರ್ಮಿಕರು ಸಾವು, 40 ಮಂದಿಗೆ ಗಂಭೀರ ಗಾಯ

ವೇದಾಂತ ಇಂಧನ ಘಟಕದಲ್ಲಿ ಬಾಯ್ಲರ್ ಸ್ಫೋಟ, 9 ಕಾರ್ಮಿಕರು ಸಾವು, 40 ಮಂದಿಗೆ ಗಂಭೀರ ಗಾಯ, ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಹೀಗಾಗಿ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

 

Read Full Story

06:23 PM (IST) Apr 14

ವಯಸ್ಸು 45 ಆದ್ರೂ ಸಖತ್ ಗ್ಲಾಮರ್.. ಬ್ಲ್ಯಾಕ್ ಡ್ರೆಸ್‌ನಲ್ಲಿ ಶ್ವೇತಾ ನೋಡಿ ಬ್ಲ್ಯಾಕ್-ಹಾಟ್ ಕಾಫಿ ಎಂದ ನೆಟ್ಟಿಗರು!

ಶ್ವೇತಾ ತಿವಾರಿ ತಮ್ಮ ಲೇಟೆಸ್ಟ್ ಫೋಟೋಶೂಟ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರ ಸ್ಟೈಲ್ ಮತ್ತು ಪೋಸ್ ನೀಡುವ ರೀತಿ ತುಂಬಾ ಆಕರ್ಷಕವಾಗಿದೆ.

Read Full Story

06:22 PM (IST) Apr 14

ಪಾಕಿಸ್ತಾನದಲ್ಲಿ ಮತ್ತೆ ಸಂಧಾನ ಮಾತುಕತೆಗೆ ವೇದಿಕೆ, ಬಿಲ್ ಬಾಕಿಯಿಂದ ಹೊಟೆಲ್ ಬದಲಾವಣೆ ಸಾಧ್ಯತೆ

ಪಾಕಿಸ್ತಾನದಲ್ಲಿ ಮತ್ತೆ ಸಂಧಾನ ಮಾತುಕತೆಗೆ ವೇದಿಕೆ, ಬಿಲ್ ಬಾಕಿಯಿಂದ ಹೊಟೆಲ್ ಬದಲಾವಣೆ ಸಾಧ್ಯತೆ, ಈ ಬಾರಿಯ ಮಾತುಕತೆ ಪಾಕಿಸ್ತಾನ ಆಸಕ್ತಿ ತೋರಿದರೂ ಆತಿಥ್ಯ ನೀಡಲು ಹಣವೇ ಇಲ್ಲದಾಗಿದೆ.

Read Full Story

06:04 PM (IST) Apr 14

ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ನಟಿ ಜಾನ್ವಿ ಕಪೂರ್ ಫೋಟೋಶೂಟ್ ವೈರಲ್ - ಕಿವಿಯೋಲೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಜಾನ್ವಿ ಕಪೂರ್ ತಮ್ಮ ಲೇಟೆಸ್ಟ್ ಫೋಟೋಶೂಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಗಳಿಗೆ ಅವರು ಯಾವುದೇ ಕ್ಯಾಪ್ಶನ್ ಬರೆದಿಲ್ಲ. ಈ ಫೋಟೋಗಳಲ್ಲಿ ಗ್ಲಾಮರಸ್ ಲುಕ್ ನೋಡಬಹುದು.

Read Full Story

05:51 PM (IST) Apr 14

ಇರಾನ್-ಅಮೆರಿಕ ಸಂಘರ್ಷ; ಶಾಂತಿ ಸ್ಥಾಪನೆಗೆ 4 ಸೂತ್ರ ನೀಡಿ ಖಡಕ್ ಎಚ್ಚರಿಕೆ ಕೊಟ್ಟ ಚೀನಾ

ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಚೀನಾ, ಇರಾನ್ ಮತ್ತು ಅಮೆರಿಕಕ್ಕೆ 4 ಪ್ರಸ್ತಾಪಗಳನ್ನು ಮುಂದಿಟ್ಟಿದೆ. ಆದರೆ, ಅಮೆರಿಕದ ನಿರ್ಬಂಧಗಳನ್ನು ಒಪ್ಪಲು ಚೀನಾ ಸಿದ್ಧವಿಲ್ಲ. ಇನ್ನೊಂದೆಡೆ, ಇರಾನ್ 5 ಅರಬ್ ದೇಶಗಳಿಂದ ಪರಿಹಾರ ಕೇಳಿದೆ.
Read Full Story

04:57 PM (IST) Apr 14

ಮ್ಯೂಸಿಕ್ ಫೆಸ್ಟ್‌ನಲ್ಲಿ ಎಂಡಿಎಂಎ ಅಟ್ಟಹಾಸ - ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಸಾವು

ಮುಂಬೈನ ಗೋರೆಗಾಂವ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಡ್ರಗ್ ಪೂರೈಕೆದಾರ ಮತ್ತು ಕಾರ್ಯಕ್ರಮದ ಆಯೋಜಕರು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

04:51 PM (IST) Apr 14

4ನೇ ವಿವಾಹ ವಾರ್ಷಿಕೋತ್ಸವ - ಹಿಮದಲ್ಲಿ ಆಲಿಯಾ-ರಣಬೀರ್ ರೊಮ್ಯಾಂಟಿಕ್ ವೆಕೇಷನ್, ಫೋಟೋಸ್ ವೈರಲ್!

ಇತ್ತೀಚೆಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು  ಆಚರಿಸಿಕೊಂಡರು. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಈ ಜೋಡಿ ಅಭಿಮಾನಿಗಳ ಫೇವರಿಟ್.

Read Full Story

04:48 PM (IST) Apr 14

ಟಿಸಿಎಸ್ ಕಂಪನಿಯಲ್ಲಿ ಕಾರ್ಪೋರೇಟ್ ಜಿಹಾದ್, ಅರೆಸ್ಟ್ ಆಗಿರೋ ಹೆಚ್ಆರ್ ನಿದಾ ಖಾನ್ ಯಾರು?

ಟಿಸಿಎಸ್ ಕಂಪನಿಯಲ್ಲಿ ಕಾರ್ಪೋರೇಟ್ ಜಿಹಾದ್, ಅರೆಸ್ಟ್ ಆಗಿರೋ ಹೆಚ್ಆರ್ ನಿಧಾ ಖಾನ್ ಯಾರು?, ಮಹಿಳಾ ಉದ್ಯೋಗಿಗಳಿಗೆ ಲೈ0ಗಿಕ ಕಿರುಕುಳ, ಪ್ರೀತಿ ನಾಟಕ, ಮತಾಂತರದ ಮೂಲಕ ಕಾರ್ಪೋರೇಟ್ ಜಿಹಾದ್ ಅಡ್ಡೆಯಾಗಿರುವ ಟಿಸಿಎಸ್ ಕಂಪನಿ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿದೆ.

Read Full Story

04:28 PM (IST) Apr 14

ವರುಣ್ ಧವನ್ ಸಿನಿಮಾದ ಟೀಸರ್ ರಿಲೀಸ್ ಆಗ್ತಿದ್ದಂತೆ ಶುರುವಾಯ್ತು ಟ್ರೋಲ್ - ಯಾಕೆ ಹೀಗ್ ಹೇಳ್ತಿದ್ದಾರೆ ಜನ?

ವರುಣ್ ಧವನ್, ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಟನೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ಬಹಳ ದಿನಗಳಿಂದ ಸುದ್ದಿಯಲ್ಲಿತ್ತು. ಚಿತ್ರತಂಡದವರು ಇದರ ರಿಲೀಸ್ ಡೇಟ್ ಅನ್ನು ಪದೇ ಪದೇ ಬದಲಾಯಿಸುತ್ತಲೇ ಇದ್ದರು.

Read Full Story

04:20 PM (IST) Apr 14

ಬೇಸಿಗೆಯಲ್ಲಿ ಕುಟುಂಬದೊಂದಿಗೆ ತಿರುಮಲಕ್ಕೆ ಹೋಗ್ತಿದ್ದೀರಾ? ಮೇ 1 ರಿಂದ ಈ ದರ್ಶನಗಳು ರದ್ದು!

ತಿರುಮಲದಲ್ಲಿ ಬೇಸಿಗೆಯ ಜನದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಹತ್ವದ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ. ಮೇ 1 ರಿಂದ ಜಾರಿಗೆ ಬರುವ ಹೊಸ ದರ್ಶನ ನಿಯಮಗಳು ಭಕ್ತರಿಗೆ ಅನುಕೂಲ ಮಾಡಿಕೊಡುವ ಗುರಿ ಹೊಂದಿವೆ.

 

Read Full Story

04:13 PM (IST) Apr 14

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ, ನಾಳೆ ಪ್ರಮಾಣವಚನ

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ, ನಾಳೆ ಪ್ರಮಾಣವಚನ, ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿಗೆ ಸಿಎಂ ಪಟ್ಟ ಒಲಿದಿದೆ.

Read Full Story

03:47 PM (IST) Apr 14

ಕೊನೆಯ ಕ್ಯಾಬಿನೆಟ್ ಸಭೆ ನಡೆಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

ಕೊನೆಯ ಕ್ಯಾಬಿನೆಟ್ ಸಭೆ ನಡೆಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ, ಬಿಹಾರದಲ್ಲಿ ಆಗಿರುವ ರಾಜಕೀಯ ಬೆಳವಣಿಗೆಗಳ ಇದೀಗ ಮುಂದಿನ ಸಿಎಂ ರೇಸ್‌ನಲ್ಲಿ ಕೆಲವರು ಕಾಣಿಸಿಕೊಂಡಿದ್ದಾರೆ.

 

Read Full Story

03:21 PM (IST) Apr 14

ಮಕ್ಕಳು ಬಂಧು ಬಳಗ ಯಾರು ಇಲ್ಲದ ನೋವು - ಸಾಯುವ ಮೊದಲೇ 1900 ಜನರಿಗೆ ತಿಥಿ ಊಟ ಹಾಕಿಸಿದ ಒಂಟಿ ಜೀವ

ವ್ಯಕ್ತಿಯೊಬ್ಬರು ತಮಗೆ ಯಾರೂ ಇಲ್ಲ ಎಂಬ ಕಾರಣಕ್ಕೆ ಜೀವಂತವಾಗಿರುವಾಗಲೇ ತಮ್ಮದೇ ತಿಥಿ ಕಾರ್ಯವನ್ನು ನೆರವೇರಿಸಿದ್ದಾರೆ. ಸಾವಿನ ನಂತರ ಮೋಕ್ಷಕ್ಕಾಗಿ ಅಗತ್ಯವಿರುವ ಈ ಕಾರ್ಯವನ್ನು ಮಾಡಲು ಮುಂದಿನ ಪೀಳಿಗೆ ಇಲ್ಲದ ಕಾರಣ, ಊರಿನ 1900 ಜನರಿಗೆ ಭೋಜನ ಏರ್ಪಡಿಸಿ ಗಮನ ಸೆಳೆದಿದ್ದಾರೆ.

Read Full Story

03:18 PM (IST) Apr 14

ಯುವಕನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ ಬಿಜೆಪಿ ಶಾಸಕನ ಪುತ್ರಿ, ವಿಡಿಯೋ ವೈರಲ್‌

ಮಧ್ಯಪ್ರದೇಶದ ಸಾಗರ್‌ನಲ್ಲಿ, ಬಿಜೆಪಿ ಶಾಸಕ ಬೃಜಬಿಹಾರಿ ಪಟೇರಿಯಾ ಅವರ ಪುತ್ರಿ ಪ್ರಿಯಾಂಕಾ, ರಾಜೇಶ್ ಶರ್ಮಾ ಎಂಬ ಯುವಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ರಾಜಕೀಯ ದ್ವೇಷವೇ ಹಲ್ಲೆಗೆ ಕಾರಣ ಎಂದು ಸಂತ್ರಸ್ತ ಆರೋಪಿಸಿದ್ದಾನೆ.

Read Full Story

03:12 PM (IST) Apr 14

ದೆಹಲಿ ವ್ಯಾಪ್ತಿಯಲ್ಲಿ ಕೋವಿಡ್ ರೀತಿ ರೋಗಲಕ್ಷಣ ಪತ್ತೆ, ಶೇ.56ರಷ್ಟು ಕುಟುಂಬದಲ್ಲಿ ವೈರಸ್

ದೆಹಲಿ ವ್ಯಾಪ್ತಿಯಲ್ಲಿ ಕೋವಿಡ್ ರೀತಿ ರೋಗಲಕ್ಷಣ ಪತ್ತೆ, ಶೇ.56ರಷ್ಟು ಕುಟುಂಬದಲ್ಲಿ ವೈರಸ್ ಪತ್ತೆಯಾಗಿದೆ. ಜ್ವರ, ಗಂಟಲು ನೋವು, ಕೆಮ್ಮು ಸೇರಿದಂತೆ ಕೊರನಾ ವೈರಸ್ ರೋಗಲಕ್ಷಣಗಳು ಕಾಣಿಸಿಕೊಂಡಿದೆ.

Read Full Story

02:52 PM (IST) Apr 14

ಇರಾನ್‌ ಯುದ್ಧದಿಂದ ಭಾರತದಲ್ಲಿ 25 ಲಕ್ಷ ಜನ ಮತ್ತೆ ಬಡತನದ ಸುಳಿಗೆ, ವಿಶ್ವಸಂಸ್ಥೆ ಎಚ್ಚರಿಕೆ

ಪಶ್ಚಿಮ ಏಷ್ಯಾದಲ್ಲಿನ ಮಿಲಿಟರಿ ಸಂಘರ್ಷದಿಂದಾಗಿ ಭಾರತದ ಸುಮಾರು 25 ಲಕ್ಷ ಜನರು ಬಡತನಕ್ಕೆ ತಳ್ಳಲ್ಪಡುವ ಅಪಾಯವಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಎಚ್ಚರಿಸಿದೆ. 

Read Full Story

01:20 PM (IST) Apr 14

ಬಿಗ್ಬಾಸ್ ವಿನ್ನರ್ ನಟಿಗೆ ಗೋಮಾಂಸ ತಿನ್ನುವಂತೆ ಒತ್ತಾಯಿಸಿದ ಮುಸ್ಲಿಂ ನಟ - ವೀಡಿಯೋ ವೈರಲ್ ಆಗ್ತಿದ್ದಂತೆ ತೀವ್ರ ಆಕ್ರೋಶ

ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಮುಸ್ಲಿಂ ನಟ ಶಿಯಸ್ ಕರೀಮ್ ಅವರು ಹಿಂದೂ ನಟಿ ಅನುಮೊಲ್ ಅವರಿಗೆ ಗೋಮಾಂಸ ತಿನ್ನಲು ಒತ್ತಾಯಿಸಿದ್ದಾರೆ. ನಟಿ ನಿರಾಕರಿಸಿದಾಗ, ಆತ ಆಕೆಯನ್ನು 'ನೀನು ಬಿಜೆಪಿ ಬೆಂಬಲಿಗಳೇ?' ಎಂದು ಪ್ರಶ್ನಿಸಿದ್ದು, ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

01:10 PM (IST) Apr 14

Mamata Banerjee - ಬಿಜೆಪಿ ಎರಡು ತಲೆ ನಾಗರಹಾವು ಇದ್ದಂತೆ, ಇವರಿಂದ ಬಂಗಾಳವನ್ನು ನಾನು ರಕ್ಷಿಸುತ್ತೇನೆ, ಕೇಂದ್ರದ ವಿರುದ್ಧ ಮಮತಾ ಗುಡುಗು

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು 'ಬಾಂಗ್ಲಾ-ವಿರೋಧಿ ಜಮೀನ್ದಾರರು' ಎಂದು ಕರೆದು ತೀವ್ರ ವಾಗ್ದಾಳಿ. ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿಯುವ ಇವರಿಂದ ಬಂಗಾಳವನ್ನು ರಕ್ಷಿಸುವುದಾಗಿ ಶಪಥ ಮಾಡಿದ್ದಾರೆ. ನಾಲ್ಕನೇ ಬಾರಿಗೆ ಟಿಎಂಸಿ ಅಧಿಕಾರಕ್ಕೆ ತರಲು ಮತದಾರರಲ್ಲಿ ಮನವಿ

Read Full Story

12:51 PM (IST) Apr 14

Ambedkar Statues - ಬಿಜೆಪಿಯ 10 ವರ್ಷದ ಆಡಳಿತದಲ್ಲೇ ಅತಿ ಹೆಚ್ಚು ಅಂಬೇಡ್ಕರ್ ಪ್ರತಿಮೆ ಧ್ವಂಸ - ಅಖಿಲೇಶ್ ಯಾದವ್ ಗಂಭೀರ ಆರೋಪ

ಬಿಜೆಪಿಯ ಹತ್ತು ವರ್ಷದ ಆಡಳಿತಾವಧಿಯಲ್ಲೇ ಅತಿ ಹೆಚ್ಚು ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ದಲಿತರು ಹಿಂದುಳಿದ ವರ್ಗಗಳ ಮೇಲಿನ ತಾರತಮ್ಯ ಮುಂದುವರಿದಿದ್ದರೂ, ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಕಿಡಿಕಾರಿದ್ದಾರೆ.

Read Full Story

12:37 PM (IST) Apr 14

ವಯಸ್ಸು 41, ಅಮ್ಮನಾಗುವ ಆಸೆ ನನಗಿಲ್ಲ; ಅಂಥಾ ಹುಡುಗ್ರು ನನ್ನ ಜೀವನದಲ್ಲಿ ಬೇಡ ಎಂದ ಡ್ಯಾನ್ಸರ್

ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ವಿನ್ನರ್, 41ನೇ ವಯಸ್ಸಿನಲ್ಲೂ ಮದುವೆಯಾಗದಿರುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಸಂತೋಷವಾಗಿದ್ದು, ಸದ್ಯಕ್ಕೆ ಸಂಗಾತಿಯ ಅಗತ್ಯವಿಲ್ಲ. ಜೊತೆಗೆ ತಮ್ಮ ಲವ್ ಬ್ರೇಕಪ್ ಹಾಗೂ ತಾಯ್ತನದ ಬಗ್ಗೆಗಿನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Read Full Story

12:17 PM (IST) Apr 14

ಯುದ್ಧದ ಸಂಕಷ್ಟಕ್ಕೆ ನಲುಗಿದ ಅಂಬಾನಿ, ಭಾರೀ ಮೊತ್ತಕ್ಕೆ ಅಂಗಸಂಸ್ಥೆಯನ್ನು ಮಾರಿದ ರಿಲಯನ್ಸ್‌ ಇಂಡಸ್ಟ್ರೀಸ್‌

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ತನ್ನ ಅಂಗಸಂಸ್ಥೆಯಾದ 'ರಿಲಯನ್ಸ್ ಪ್ರಾಜೆಕ್ಟ್ಸ್ ಅಂಡ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್' ಅನ್ನು ₹274 ಕೋಟಿಗೆ ಮಾರಾಟ ಮಾಡಿದೆ. 

Read Full Story

11:12 AM (IST) Apr 14

ಬೀದಿ ಕಾಳಗದ ವೇಳೆ ಗನ್ ಹೊರತೆಗೆದು ಅಪ್ಪನ ರಕ್ಷಿಸಿದ ಪುಟ್ಟ ಮಗಳು - ವೀಡಿಯೋ ಭಾರಿ ವೈರಲ್

ಪಾಕಿಸ್ತಾನದಲ್ಲಿ, ತನ್ನ ತಂದೆಯೊಂದಿಗೆ ಬೀದಿಯಲ್ಲಿ ಜಗಳವಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ನೋಡಿದ ಮಗಳು, ಕಾರಿನಿಂದ ಗನ್ ತೆಗೆದು ಅವರನ್ನು ಹೆದರಿಸಿ ಓಡಿಸಿದ್ದಾಳೆ. ತಂದೆಯ ರಕ್ಷಣೆಗಾಗಿ ಆಕೆ ತೋರಿದ ಧೈರ್ಯದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
Read Full Story

11:10 AM (IST) Apr 14

ಗೋಲ್ಡನ್‌ ಡಕ್‌ಗೆ ಔಟಾದ ವೈಭವ್‌ ಸೂರ್ಯವಂಶಿ - 'Oh f**k' ಎಂದು ಸಂಭ್ರಮಿಸಿದ ಕಾವ್ಯಾ ಮಾರನ್‌, ವಿಡಿಯೋ ವೈರಲ್‌!

ಐಪಿಎಲ್ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್‌ನ ಯುವ ತಾರೆ ವೈಭವ್ ಸೂರ್ಯವಂಶಿ ಗೋಲ್ಡನ್ ಡಕ್‌ಗೆ ಔಟಾದರು. ಈ ವಿಕೆಟ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಮಾಲೀಕಿ ಕಾವ್ಯಾ ಮಾರನ್ ಅತೀವವಾಗಿ ಸಂಭ್ರಮಿಸಿದ್ದು, ಈ ಪಂದ್ಯದಲ್ಲಿ ಹೈದರಾಬಾದ್ 57 ರನ್‌ಗಳ ಜಯ ಸಾಧಿಸಿ ರಾಜಸ್ಥಾನದ ಗೆಲುವಿನ ಓಟಕ್ಕೆ ತಡೆಯೊಡ್ಡಿತು.

Read Full Story

10:14 AM (IST) Apr 14

ರಾಜಸ್ಥಾನ ರಾಯಲ್ಸ್‌ ಟೀಮ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ವೈಭವ್‌ ಸೂರ್ಯವಂಶಿ ಬೇಸರ

ಐಪಿಎಲ್ 2026ರ ಸ್ಟಾರ್ ಆಟಗಾರ, 15 ವರ್ಷದ ವೈಭವ್ ಸೂರ್ಯವಂಶಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಬಳಸಿದ್ದಕ್ಕೆ ಬೇಸರಗೊಂಡಿದ್ದರು. ಫೀಲ್ಡಿಂಗ್ ಮಾಡಲು ಅವಕಾಶ ಸಿಗದಿದ್ದಕ್ಕೆ ನಿರಾಸೆಗೊಂಡಿದ್ದ ಅವರ ಬಗ್ಗೆ ತಂಡದ ಸಹಾಯಕ ಕೋಚ್ ಸ್ಪಷ್ಟನೆ ನೀಡಿದ್ದಾರೆ.
Read Full Story

10:01 AM (IST) Apr 14

ಮಗಳ ಮೇಲೆ ಅತ್ಯಾ*ಚಾರವೆಸಗಿದ ವ್ಯಕ್ತಿ ಕೊಲೆ ಮಾಡಿದ ತಾಯಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ನಮ್ಮ ದೇಶದಲ್ಲಿ ಹಲವು ಅತ್ಯಾ*ಚಾರ ಆರೋಪಿಗಳು ದೋಷಮುಕ್ತರಾಗಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಇದು ಭಾರತದ ಕತೆ. ಇಲ್ಲಿನ ನ್ಯಾಯ ವ್ಯವಸ್ಥೆಯ ನಿಧಾನಗತಿಗೆ ಜನ ಬೇಸತ್ತಿದ್ದಾರೆ. ಆದರೆ ಬ್ರೆಜಿಲ್‌ನಲ್ಲಿ ನಡೆದ ರೇ*ಪ್ ಪ್ರಕರಣವೊಂದರ ತೀರ್ಪು ಈಗ ಸಾಕಷ್ಟು ಚರ್ಚೆಯಲ್ಲಿದೆ. ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story

09:48 AM (IST) Apr 14

ಭಾರತದ ಅಳಿಯ ಜೆಡಿ ವ್ಯಾನ್ಸ್ ಮುಟ್ಟಿದ್ದೆಲ್ಲಾ ವ್ಯಾನಿಷ್! ಅಮೆರಿಕ ಉಪಾಧ್ಯಕ್ಷನ ಮಟಾಷ್‌ ಲೆಗ್‌ ಮೀಮ್ಸ್ ವೈರಲ್!

ಪಾಕಿಸ್ತಾನದಲ್ಲಿ ನಡೆದ ಅಮೆರಿಕ-ಇರಾನ್‌ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ, ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಕಾಲಿಟ್ಟ ನೆಲದಲ್ಲಿ ಕೆಟ್ಟದ್ದು ನಡೆಯುತ್ತದೆ, ಕೈ ಹಾಕಿದ ಕೆಲಸವೆಲ್ಲಾ ಕೆಟ್ಟುಹೋಗುತ್ತದೆ ಎಂಬ ಮೀಮ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ. ಈ ವಾದಕ್ಕೆ ಕಾರಣ ಇಲ್ಲದಿಲ್ಲ.

Read Full Story

08:50 AM (IST) Apr 14

ಇಂದು ಬಿಹಾರಕ್ಕೆ ಮೊದಲ ಬಿಜೆಪಿ ಮುಖ್ಯಮಂತ್ರಿ, ಸಿಎಂ ರೇಸ್‌ನಲ್ಲಿ ಸಮರ್ಥ್‌ ಚೌಧರಿ?

ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳಲಿದ್ದು, ಹಾಲಿ ಸಿಎಂ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿ ನಾಯಕ ಸಮರ್ಥ್ ಚೌಧರಿ ಸಿಎಂ ರೇಸ್‌ನಲ್ಲಿದ್ದು, ನಿತೀಶ್ ಪುತ್ರ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
Read Full Story

08:24 AM (IST) Apr 14

ಮಹಾರಾಷ್ಟ್ರ ಕಾರ್ಪೊರೇಟ್‌ ಜಿಹಾದ್‌ - ಟಿಸಿಎಸ್‌ನ 7 ಜನ ಅಮಾನತು

ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರಕ್ಕೆ ಒತ್ತಾಯಿಸಿದ 'ಕಾರ್ಪೊರೆಟ್‌ ಜಿಹಾದ್‌' ಆರೋಪ ಕೇಳಿಬಂದಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಟಿಸಿಎಸ್, ಆರೋಪಿಗಳನ್ನು ಅಮಾನತುಗೊಳಿಸಿದೆ.

Read Full Story

08:03 AM (IST) Apr 14

ಮತಗಟ್ಟೆಗಳಲ್ಲಿ ಬೆರಳಚ್ಚು, ಕಣ್ಣಿನ ಬಯೋಮೆಟ್ರಿಕ್‌ - ಸುಪ್ರೀಂನಿಂದ ವಿಚಾರಣೆ

ನಕಲಿ ಮತದಾನ ತಡೆಯಲು ಮತಗಟ್ಟೆಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಪ್ಪಿಕೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

Read Full Story

07:42 AM (IST) Apr 14

'ಯುದ್ಧ ದೇವರು ಮೆಚ್ಚಲ್ಲ' ಎಂದ ಪೋಪ್ ವಿರುದ್ಧವೇ ತಿರುಗಿಬಿದ್ದ ಟ್ರಂಪ್! ಯೇಸುವಿನ ರೂಪದ ಎಐ ಫೋಟೋ ಹಂಚಿಕೊಂಡು ವಾಗ್ದಾಳಿ!

ಯುದ್ಧ ನಿಲ್ಲಿಸಲು ಕರೆ ನೀಡಿದ ಪೋಪ್ ಲಿಯೋ 14 ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮನ್ನು ಯೇಸುವಿಗೆ ಹೋಲಿಸುವ ಎಐ ನಿರ್ಮಿತ ಫೋಟೋವನ್ನು ಹಂಚಿಕೊಳ್ಳುವ ಮೂಲಕ, ಪೋಪ್‌ರ ಶಾಂತಿ ಸಂದೇಶವನ್ನು ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ.

 

Read Full Story

07:41 AM (IST) Apr 14

ಹೋರ್ಮುಜ್‌ ಜಲಸಂಧಿ ಪ್ರವೇಶಕ್ಕೆ ಇರಾನ್‌ಗೇ ನಿರ್ಬಂಧ! ಸಮೀಪ ಬಂದ್ರೆ ಉಡೀಸ್ ಮಾಡ್ತೀವಿ ಟ್ರಂಪ್ ಬೆದರಿಕೆ, ಭಾರತಕ್ಕೆ ಆತಂಕ ಇಲ್ಲ ಏಕೆ?

ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ಸಂಚಾರವನ್ನು ಅಮೆರಿಕ ನಿರ್ಬಂಧಿಸಿದೆ. ಇರಾನ್ ಹಡಗುಗಳು ಕಂಡರೆ ಧ್ವಂಸ ಮಾಡುವುದಾಗಿ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದು, ಇದಕ್ಕೆ ಪ್ರತಿಯಾಗಿ ಇಡೀ ಕೊಲ್ಲಿಯನ್ನು ಅಸ್ಥಿರಗೊಳಿಸುವುದಾಗಿ ಇರಾನ್ ತಿರುಗೇಟು ನೀಡಿದೆ, ಇದರಿಂದ ಮತ್ತೆ ಯುದ್ಧದ ಭೀತಿ ಆವರಿಸಿದೆ.

 

Read Full Story

More Trending News