- Home
- News
- World News
- ಭಾರತದ ಅಳಿಯ ಜೆಡಿ ವ್ಯಾನ್ಸ್ ಮುಟ್ಟಿದ್ದೆಲ್ಲಾ ವ್ಯಾನಿಷ್! ಅಮೆರಿಕ ಉಪಾಧ್ಯಕ್ಷನ ಮಟಾಷ್ ಲೆಗ್ ಮೀಮ್ಸ್ ವೈರಲ್!
ಭಾರತದ ಅಳಿಯ ಜೆಡಿ ವ್ಯಾನ್ಸ್ ಮುಟ್ಟಿದ್ದೆಲ್ಲಾ ವ್ಯಾನಿಷ್! ಅಮೆರಿಕ ಉಪಾಧ್ಯಕ್ಷನ ಮಟಾಷ್ ಲೆಗ್ ಮೀಮ್ಸ್ ವೈರಲ್!
ಪಾಕಿಸ್ತಾನದಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕಾಲಿಟ್ಟ ನೆಲದಲ್ಲಿ ಕೆಟ್ಟದ್ದು ನಡೆಯುತ್ತದೆ, ಕೈ ಹಾಕಿದ ಕೆಲಸವೆಲ್ಲಾ ಕೆಟ್ಟುಹೋಗುತ್ತದೆ ಎಂಬ ಮೀಮ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ. ಈ ವಾದಕ್ಕೆ ಕಾರಣ ಇಲ್ಲದಿಲ್ಲ.

ಮುಟ್ಟುತ್ತಿದ್ದಂತೆ ಮುರಿದ ಟ್ರೋಫಿ
ಏ.15ರಂದು ಓಹಿಯೋ ಫುಟ್ಬಾಲ್ ತಂಡ ವೈಟ್‌ಹೌಸ್‌ಗೆ ಭೇಟಿ ನೀಡಿದ್ದ ವೇಳೆ ಫೋಟೋಗೆ ಪೋಸ್ ಕೊಡಲು ಹೋದ ವ್ಯಾನ್ಸ್ ಕೈಯ್ಯಿಂದ ಟ್ರೋಫಿ ಜಾರಿ ಇಬ್ಭಾಗವಾಗಿತ್ತು.
ಭೇಟಿಯ ಮರುದಿನ ಪೋಪ್ ಸಾವು
2025ರ ಏ.20ರಂದು ವ್ಯಾನ್ಸ್ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದರು. ಅದರ ಮರುದಿನವೇ ಪೋಪ್ ಅಸುನೀಗಿದ್ದರು.
ಭಾರತದಲ್ಲಿದ್ದಾಗ ಪಹಲ್ಗಾಂ ದಾಳಿ
ಏ.21ರಂದು ವ್ಯಾನ್ಸ್ ಕುಟುಂಬ ಸಮೇತರಾಗಿ ಭಾರತಕ್ಕೆ ಬಂದಿದ್ದರು. ಏ.22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಭೀಕರ ಉಗ್ರದಾಳಿ ನಡೆದಿತ್ತು.
ನೇತೃತ್ವ ವಹಿಸಿಕೊಂಡ ಸಭೆ ಫೇಲ್
ಮಧ್ಯಪ್ರಾಚ್ಯ ಯುದ್ಧ ನಿಲ್ಲಿಸುವ ಸಲುವಾಗಿ ಪಾಕ್ ಮಧ್ಯಸ್ಥಿಕೆಯಲ್ಲಿ ಇರಾನ್ ಜತೆ ನಡೆದ ಮಾತುಕತೆಗೆ ಅಮೆರಿಕದ ಪರವಾಗಿ ವ್ಯಾನ್ಸ್ ಹೋಗಿದ್ದರು. ಯಶಸ್ಸು ಕಾಣದೆ ಮರಳಿದರು.
ಪ್ರಚಾರ ಮಾಡಿದ್ರೆ ಪಕ್ಷಕ್ಕೆ ಸೋಲು
ವ್ಯಾನ್ಸ್‌ರನ್ನು ತಮ್ಮ ಪರ ಪ್ರಚಾರಕ್ಕೆ ಕರೆದಿದ್ದ ಹಂಗೆರಿ ಪ್ರಧಾನಿ ವಿಕ್ಟರ್ ಓರ್ಬನ್ ಇದೀಗ ಹೀನಾಯ ಸೋಲು ಕಂಡಿದ್ದಾರೆ. ಕಳೆದ ವರ್ಷ ಫೆ.14ರಂದು ವ್ಯಾನ್ಸ್, ಜರ್ಮನಿಯ ಎಎಫ್‌ಡಿ ಪಕ್ಷದ ಪರ ಪ್ರಚಾರ ನಡೆಸಿದ್ದರು. ಆ ಪಕ್ಷ ಚುನಾವಣೆಯಲ್ಲಿ ಸೋತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

