ಇದು ವಿಶ್ವದ ಅತೀದೊಡ್ಡ ಬಿಯರ್ ಮ್ಯೂಸಿಯಂ, ಎಲ್ಲರಿಗೂ ಪ್ರವೇಶ ಉಚಿತ, ಇಲ್ಲಿಗೆ ಒಮ್ಮೆ ಭೇಟಿ ನೀಡಿದರೂ ಕಳೆದು ಹೋಗುವುದು ಖಚಿತ, ಬಿಯರ್ ಜೋಡಿಸಿದ ರೀತಿ ಅದ್ಭುತ. ಎಲ್ಲಾ ಬ್ರ್ಯಾಂಡ್ ಬಿಯರ್ ಇಲ್ಲಿ ಲಭ್ಯವಿದೆ.

ನಂಜಿಂಗ್ (ಏ.14) ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ ಬಿಯರ್‌ಗೆ ಬೇಡಿಕೆ ಹೆಚ್ಚಾಗುತ್ತದೆ. ಮದ್ಯ ಪ್ರಿಯರಲ್ಲಿ ಹಲವರು ಚಿಲ್ಡ್ ಬಿಯರ್ ಹೆಚ್ಚು ಇಷ್ಟಪಡುತ್ತಾರೆ. ಹೀಗೆ ಬಿಯರ್ ಪ್ರಿಯರನ್ನೇ ಚಕಿತಗೊಳಿಸುವ ಬಿಯರ್ ಮ್ಯೂಸಿಯಂ ಒಂದಿದೆ. ಇಲ್ಲಿ ವಿಶ್ವದ ಎಲ್ಲಾ ಪ್ರತಿಷ್ಠಿತ ಬ್ರ್ಯಾಂಡ್ ಬಿಯರ್ ಇದೆ. ಇಷ್ಟೇ ಅಲ್ಲ ಈ ಮ್ಯೂಸಿಯಂ ಇತರ ಮ್ಯೂಸಿಯಂ ರೀತಿ ಇಲ್ಲ. ಇದರ ವಿನ್ಯಾಸ, ಜೋಡಣೆ, ಲೈಟಿಂಗ್ಸ್ ಎಲ್ಲವೂ ಅದ್ಭುತ. ವಿಶೇಷ ಅಂದರೆ ಈ ಮ್ಯೂಸಿಯಂಗೆ ಎಲ್ಲರಿಗೂ ಉಚಿತ ಪ್ರವೇಶ.

ಈ ಬಿಯರ್ ಮ್ಯೂಸಿಯಂ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಈ ಅದ್ಭುತ ಮ್ಯೂಸಿಯಂ ವಿಡಿಯೋ ನೋಡಿ ಹಲವರು ಇಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಈ ವಿಶ್ವದ ಅತೀ ದೊಡ್ಡ ಬಿಯರ್ ಮ್ಯೂಸಿಯಂ ಇರುವುದು ಚೀನಾದ ನಂಜಿಂಗ್‌ನಲ್ಲಿ. ಈ ಬಿಯರ್ ಮ್ಯೂಸಿಯಂಗೆ ಒಮ್ಮೆ ಕಾಲಿಟ್ಟರೆ ಸಾಕು ಅದ್ಭುತ ಲೋಕದಲ್ಲಿ ವಿಹರಿಸುವ ಅನುಭವ ನಿಮ್ಮದಾಗಲಿದೆ.

ನಂಜಿಂಗ್ ವರ್ಲ್ಡ್ ಕ್ರಾಫ್ಟ್ ಬಿಯರ್ ಮ್ಯೂಸಿಯಂ

ನಂಜಿಂಗ್ ವರ್ಲ್ಡ್ ಕ್ರಾಫ್ಟ್ ಬಿಯರ್ ಮ್ಯೂಸಿಯಂ ಎಂದೇ ಗುರುತಿಸಿಕೊಂಡಿರುವ ಈ ಅದ್ಭುತ ತಾಣಕ್ಕೆ ಪ್ರತಿ ದಿನ ಸಾವಿರಾರು ಮಂದಿ ಬೇಟಿ ನೀಡುತ್ತಿದ್ದಾರೆ. ಈ ಮ್ಯೂಸಿಯಂಗೆ ಭೇಟಿ ನೀಡಲು ನೀವು ಬಿಯರ್ ಕುಡಿಯಬೇಕು ಎಂದಿಲ್ಲ. ಈ ಅದ್ಭುತ ನೋಡಿಕೊಂಡು ಬರಬಬಹುದು. ಹಂತ ಹಂತದಲ್ಲಿ ಬಿಯರ್ ಜೋಡಣೆ ಮಾಡಿ ಇಡಲಾಗಿದೆ. ಯಾವ ಬ್ರ್ಯಾಂಡ್ ಬಿಯರ್ ಬೇಕಾದರೂ ಇಲ್ಲಿ ನೋಡಲು ಲಭ್ಯವಿದೆ.

ಬಿಯರ್ ಟೆಂಪಲ್‌ಗೆ ಪ್ರವೇಶ ಮಾಡಿದ ಅನುಭವ ನಿಮ್ಮದಾಗಲಿದೆ. ಸಿಂಗಾಪುರ ಮೂಲದ ಕ್ರಿಯೇಟರ್ ಯಿಂಗ್ ಸಿನ್ ಈ ಬಿಯರ್ ಮ್ಯೂಸಿಯಂಗೆ ತೆರಳಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಿಯರ್ ಮ್ಯೂಸಿಯಂ ನೋಡಿದ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೊಸ ಲೋಕದಲ್ಲಿ ವಿಹರಿಸಿದ ಅನುಭವ ನೀಡುತ್ತಿದೆ ಎಂದಿದ್ದಾರೆ. ಇಂತಹ ಅದ್ಭುತವನ್ನು ಬಿಯರ್ ಪ್ರಿಯರು ನೋಡಲೇ ಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

View post on Instagram