ಪಾಕಿಸ್ತಾನದಲ್ಲಿ ಮತ್ತೆ ಸಂಧಾನ ಮಾತುಕತೆಗೆ ವೇದಿಕೆ, ಬಿಲ್ ಬಾಕಿಯಿಂದ ಹೊಟೆಲ್ ಬದಲಾವಣೆ ಸಾಧ್ಯತೆ, ಈ ಬಾರಿಯ ಮಾತುಕತೆ ಪಾಕಿಸ್ತಾನ ಆಸಕ್ತಿ ತೋರಿದರೂ ಆತಿಥ್ಯ ನೀಡಲು ಹಣವೇ ಇಲ್ಲದಾಗಿದೆ.
ಇಸ್ಲಾಮಾಬಾದ್ (ಏ.14) ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಸಂಘರ್ಷ ಮೋಡ ಕವಿದ ವಾತವರಣದಂತಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿ ಸಂಧಾನ ನಡೆಸಲು ಪಾಕಿಸ್ತಾನ ಅತೀವ ಉತ್ಸಾಹದಲ್ಲಿ ಕಳೆದ ಬಾರಿ ವೇದಿಕೆ ಒದಗಿಸಿತ್ತು. ಆದರೆ ಮಾತುಕತೆ ಫಲಪ್ರದವಾಗಲಿಲ್ಲ. ಸಂಧಾನ ನಡೆಯಲಿಲ್ಲ. ಇದೀಗ ಎರಡನೇ ಸುತ್ತಿನ ಮಾತುಕತಗೆ ಪಾಕಿಸ್ತಾನ ವೇದಿಕೆ ಸಿದ್ಧಪಡಿಸುತ್ತಿದೆ. ಇತ್ತ ಅಮೆರಿಕ ಹಾಗೂ ಇರಾನ್‌ಗೆ ಅನಿವಾರ್ಯವಾಗಿದೆ. ಜೊತೆಗೆ ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಂತಾಗಿದೆ. ಆದರೆ ಎರಡನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನದಲ್ಲಿ ಉತ್ಸಾಹ ಇದ್ದರೂ ಅದಕ್ಕೆ ತಕ್ಕಂತ ಹಣ ಪಾಕಿಸ್ತಾನದಲ್ಲಿಲ್ಲ. ಕಳೆದ ಬಾರಿ ಮಾತುಕತೆ ನಡೆದ ಖಾಸಗಿ ಹೊಟೆಲ್ ಬಿಲ್ ಇನ್ನೂ ಪಾವತಿಯಾಗಿಲ್ಲ. ಹೀಗಾಗಿ ಈ ಬಾರಿಯ ಮಾತುಕತೆಗೆ ವೇದಿಕೆ ಒದಗಿಸಲು ಖಾಸಗಿ ಹೊಟೆಲ್ ಬಾಕಿ ಬಿಲ್ ಪಾವತಿಸಲು ಸೂಚಿಸಿದೆ. ಹೀಗಾಗಿ 2ನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನದ ಪ್ರತಿಷ್ಠಿತ ಖಾಸಗಿ ಹೊಟೆಲ್ ಹಿಂದೇಟು ಹಾಕಿರುವುದು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ತಲೆನೋವಾಗಿದೆ.
ಇದೇ ವಾರದಲ್ಲಿ ಸಂಧಾನ ಮಾತುಕತೆ
ಅಮೆರಿಕ ಹಾಗೂ ಇರಾನ್ ಸರ್ಕಾರದ ಪ್ರತಿನಿಧಿಗಳು ಇದೇ ವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ. ಇರಾನ್ ಹಾಗೂ ಅಮೆರಿಕ 2ನೇ ಸುತ್ತಿನ ಮಾತುಕತೆಗೆ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಕಳೆದ ಬಾರಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಇರಾನ್ ಸರ್ಕಾರದ ಜನಪ್ರತಿನಿಧಿಗಳ ಜೊತೆಗೆ ಮಾತಕತೆ ನಡೆಸಿದ್ದರು. ಆದರೆ ಸಂಧಾನ ಮಾತುಕತೆ ವಿಫಲಗೊಂಡು ಹಿಂದಿರುಗಬೇಕಾಯಿತು.
ಸೆರೆನಾ ಹೊಟೆಲ್ ಬಿಲ್ ಬಾಕಿ
ಇಸ್ಲಾಮಾಬಾದ್‌ನಲ್ಲಿರುವ ಸೆರೆನಾ ಹೊಟೆಲ್‌ನಲ್ಲಿ ಸಂಧಾನ ಮಾತುಕತೆ ನಡೆದಿತ್ತು. ಅಘಾ ಖಾನ್ ನೆಟ್‌ವರ್ಕ್ ಮಾಲೀಕತ್ವದ 5 ಸ್ಟಾರ್ ಹೊಟೆಲ್‌ನಲ್ಲಿ ಸಂಧಾನ ಮಾತುಕತೆ, ಆತಿಥಿಗಳ ಆತಿಥ್ಯಕ್ಕೆ ಖರ್ಚಾಗಿರುವ ಹೊಟೆಲ್ ಬಿಲ್‌ನ್ನು ಪಾಕಿಸ್ತಾನ ಸರ್ಕಾರ ಇನ್ನೂ ಪಾವತಿಸಿಲ್ಲ. ಹೀಗಾಗಿ ಸೆರೆನಾ ಹೊಟೆಲ್ ಬಾಕಿ ಬಿಲ್ ಪಾವತಿಸಲು ಸೂಚಿಸಿದೆ. ಪಾಕಿಸ್ತಾನ ಸರ್ಕಾರದ ಬಳಿ ಬಾಕಿ ಬಿಲ್ ಪಾವತಿಸಲು ಸೂಚಿಸಿದೆ.ಇತ್ತ ಪಾಕಿಸ್ತಾನ ಸರ್ಕಾರದಲ್ಲಿ ಸರ್ಕಾರಿ ವಾಹನಗಳಿಗೆ ಡೀಸೆಲ್ ಹಾಕಲು ಹಣ ಇಲ್ಲದಾಗಿದೆ.
2ನೇ ಸುತ್ತಿನ ಮಾತುಕತೆಗೆ ಬೇರೆ ಹೊಟೆಲ್
ಅಮೆರಿಕ ಹಾಗೂ ಇರಾನ್ ನಡುವಿನ 2ನೇ ಸುತ್ತಿನ ಸಂಧಾನ ಮಾತುಕತೆಗೆ ಬೇರೆ ಹೊಟೆಲ್‌ನಲ್ಲಿ ಆಯೋಜನೆ ಮಾಡಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇರಾನ್ ಹಾಗೂ ಅಮೆರಿಕ ನಡುವಿನ ಸಂಧಾನ ಮಾತುಕತೆ ಯಶಸ್ವಿಯಾದರೆ ಕೆಲ ಪ್ರಯೋಜನಗಳನ್ನು ಪಾಕಿಸ್ತಾನ ಪಡೆದುಕೊಳ್ಳಲಿದೆ. ಇದೇ ಕಾರಣದಿಂದ ಇದೀಗ 2ನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನ ಉತ್ಸುಕವಾಗಿದೆ. ಆದರೆ ಪಾಕಿಸ್ತಾನದ ಪ್ರತಿಷ್ಠಿತ ಖಾಸಗಿ ಹೊಟೆಲ್‌ಗಳು ವೇದಿಕೆ ನೀಡಲು ಹಿಂದೇಟು ಹಾಕುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿದೆ.


