LIVE NOW
Published : Jun 20, 2026, 07:37 AM ISTUpdated : Jun 20, 2026, 10:56 PM IST

National News Live: Yash Toxic - ʻಟಾಕ್ಸಿಕ್‌ʼ ತಂಡದಿಂದ ನಾಳೆ 'ಬಿಗ್‌ ಅಪ್‌ಡೇಟ್‌'..? ಯಶ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ?

ಸಾರಾಂಶ

ನವದೆಹಲಿ (ಜೂ.20): ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಸಂಸದರ ಬಂಡಾಯ ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ-ಎಸ್‌ಪಿಯ ಹಲವಾರು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅಜಿತ್ ಪವಾರ್ ಅವರ ಎನ್‌ಸಿಪಿ ಹೇಳಿದೆ. ಈ ಮೂಲಕ ಈಗಾಗಲೇ ಒಮ್ಮೆ ಹೋಳಾಗಿರುವ ಪಕ್ಷ ಮತ್ತೊಮ್ಮೆ ಹೋಳಾಗುವ ಭೀತಿ ಎದುರಾಗಿದೆ. ಇತ್ತ ಟಿಎಂಸಿ, ಸೇನೆ (ಯುಬಿಟಿ) ಬಂಡಾಯದ ಹೊಡೆತಕ್ಕೆ ಸಿಲುಕಿರುವ ಇಂಡಿ ಮೈತ್ರಿಕೂಟಕ್ಕೆ ಮತ್ತೊಂದು ಏಟು ಬೀಳುವ ಸಾಧ್ಯತೆಯಿದೆ.ಆದರೆ ಎನ್‌ಸಿಪಿ-ಎಸ್‌ಪಿ ನಾಯಕರು ಇದನ್ನು ಅಲ್ಲಗಳೆದಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:56 PM (IST) Jun 20

Yash Toxic - ʻಟಾಕ್ಸಿಕ್‌ʼ ತಂಡದಿಂದ ನಾಳೆ 'ಬಿಗ್‌ ಅಪ್‌ಡೇಟ್‌'..? ಯಶ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ?

ಕಳೆದ ಕೆಲವು ತಿಂಗಳುಗಳಿಂದ ಸದ್ದಿಲ್ಲದೆ ಶೂಟಿಂಗ್ ಹಂತದಲ್ಲಿರುವ 'ಟಾಕ್ಸಿಕ್' ತಂಡ ನಾಳೆ (ಗುರುವಾರ) ಒಂದು ಮಹತ್ವದ ಘೋಷಣೆ ಮಾಡಲು ಸಜ್ಜಾಗಿದೆ. ಚಿತ್ರದ ಅಧಿಕೃತ ಟ್ವಿಟ್ಟರ್ (X) ಖಾತೆಯಲ್ಲಿ "ನಾಳೆ ಏನಾದರೂ ಪ್ಲ್ಯಾನ್ಸ್ ಇದೆಯೇ?" (Any plans for tomorrow?) ಎಂದು ಕೇಳುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

Read Full Story

10:24 PM (IST) Jun 20

ಕೊನೆಗೂ ಮುಖಾಮುಖಿಯಾಗ್ತಿವೆ ಅಮೆರಿಕ-ಇರಾನ್! ಸ್ವಿಟ್ಜರ್ಲೆಂಡ್‌ಗೆ ಜೆಡಿ ವ್ಯಾನ್ಸ್, ನಾಳೆಯೇ ಮಹತ್ವದ ಮಾತುಕತೆ

ಹರ್ಮೋಜ್ ಜಲಸಂಧಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ್ ಸ್ವಿಟ್ಜರ್ಲೆಂಡ್‌ನಲ್ಲಿ ಮಹತ್ವದ ಮಾತುಕತೆ ನಡೆಸಲಿವೆ. ಈ ಸಭೆಯಲ್ಲಿ ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆ ವಹಿಸಲಿದ್ದು, ಲೆಬನಾನ್ ಮೇಲಿನ ದಾಳಿಯ ಉದ್ವಿಗ್ನ ಪರಿಸ್ಥಿತಿಯಲ್ಲಿ ಈ ಮಾತುಕತೆ ನಿರ್ಣಾಯಕವಾಗಿದೆ.
Read Full Story

09:46 PM (IST) Jun 20

Ajaneesh Loknath - ಮಾಲಿವುಡ್‌ನಲ್ಲಿ ಅಜನೀಶ್‌-ಅಚ್ಯುತ್ ಹವಾ - ಎಲ್ಲರ ಕಣ್ಣು 'ಅನಂತನ್ ಕಾಡು' ಮೇಲೆ!

Ananthan Kaadu: ಮುರಳಿ ಗೋಪಿ ಕಥೆ ಬರೆದಿರುವ, ಜಿ.ಎನ್. ಕೃಷ್ಣಕುಮಾರ್ ನಿರ್ದೇಶನದ 'ಅನಂತನ್ ಕಾಡು' ಸಿನಿಮಾ ಜೂನ್ 25ಕ್ಕೆ ರಿಲೀಸ್ ಆಗಲಿದೆ. 'ಕಾಂತಾರ' ಖ್ಯಾತಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಮೊದಲ ಮಲಯಾಳಂ ಚಿತ್ರ.

Read Full Story

08:51 PM (IST) Jun 20

ಹರ್ಮುಜ್ ಜಲಸಂಧಿ ಮತ್ತೆ ಬಂದ್! ಇಸ್ರೇಲ್ ಮೇಲೆ ಕೆಂಡಾಮಂಡಲವಾದ ಇರಾನ್‌ನಿಂದ ದಿಢೀರ್ ಕ್ರಮ

ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ, ಇರಾನ್ ಹರ್ಮುಜ್ ಜಲಸಂಧಿಯನ್ನು ಮತ್ತೆ ಬಂದ್ ಮಾಡಿದೆ. ಇಸ್ರೇಲ್‌ನ ಈ ಕ್ರಮವು ಕದನ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಇರಾನ್ ಆರೋಪಿಸಿದ್ದು, ಈ ಬೆಳವಣಿಗೆಯು ವಲಯದಲ್ಲಿ ಮತ್ತೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ.
Read Full Story

06:48 PM (IST) Jun 20

Cocktail 2 Controversy - ಜಾನ್ವಿ ಕಪೂರ್ ಬಳಿಕ ಕೃತಿ ಸನೋನ್‌ರ ಈ ದೃಶ್ಯಗಳೇ ವಿವಾದಕ್ಕೆ ಕಾರಣವಾಯ್ತಾ?

Kriti Sanon: ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಕಾಕ್ಟೇಲ್ 2' ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

Read Full Story

06:17 PM (IST) Jun 20

Rashmika Mandanna - 3815 ಕೋಟಿ ಬಾಕ್ಸಾಫೀಸ್ ಸಾಮ್ರಾಜ್ಯ ಕಟ್ಟಿದ ನ್ಯಾಷನಲ್ ಕ್ರಶ್ - ಏನಿದು ಲೆಕ್ಕಾಚಾರ?

Rashmika Mandanna: 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಲೇ ಇದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ತಮ್ಮ ಪಾತ್ರಗಳ ಆಯ್ಕೆಯಲ್ಲಿ ಸದಾ ಹೊಸತನ ಮೆರೆಯುವ ನಟಿ.

Read Full Story

06:17 PM (IST) Jun 20

ಹನುಮಾನ ದೇವಸ್ಥಾನದ ಮೇಲ್ಛಾವಣಿ ಕುಸಿದು 6 ಭಕ್ತರ ದುರ್ಮರಣ; ಪ್ರಸಾದ ಸ್ವೀಕರಿಸುತ್ತಿದ್ದಾಗಲೇ ದುರಂತ

ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಹನುಮಾನ್ ದೇವಸ್ಥಾನದಲ್ಲಿ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದು 6 ಭಕ್ತರು ಸಾವನ್ನಪ್ಪಿದ್ದಾರೆ. ಪ್ರಸಾದ ಸ್ವೀಕರಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Read Full Story

05:57 PM (IST) Jun 20

ಇಂಗ್ಲೆಂಡ್ ಎದುರಿನ ಸರಣಿಯಿಂದಲೂ ಹೊರಬಿದ್ದ ಹಾರ್ದಿಕ್ ಪಾಂಡ್ಯ; ಕೊಹ್ಲಿ ಬಗ್ಗೆಯೂ ಸಿಕ್ತು ಮಹತ್ವದ ಅಪ್‌ಡೇಟ್

ಬೆಂಗಳೂರು: ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿ ಮುಕ್ತಾಯದ ಬಳಿಕ ಟೀಂ ಇಂಡಿಯಾ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೂ ಮುನ್ನ ಭಾರತಕ್ಕೆ ದೊಡ್ಡ ಹಿನ್ನಡೆ ಎದುರಾಗಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದ ಇಂಗ್ಲೆಂಡ್ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.

 

Read Full Story

05:31 PM (IST) Jun 20

1200 ಕೋಟಿ ರೂ ಒಡೆಯ, ನಟ Ram Charan teja, Upasana ಫಸ್ಟ್‌ ಮಗಳು ಕ್ಲಿನ್‌ ಕಾರಾ ಫಸ್ಟ್ ಫೋಟೋ‌ ರಿವೀಲ್

Actor Ram Charan Teja And Upasana Konidela Daughter Photo: ನಟ ರಾಮ್‌ ಚರಣ್‌ ತೇಜ ಹಾಗೂ ಉಪಾಸನಾ ಕೊನಿಡೆಲ ಇದುವರೆಗೂ ಎಲ್ಲಿಯೂ ಮಗಳ ಮುಖವನ್ನು ರಿವೀಲ್‌ ಮಾಡಿರಲಿಲ್ಲ. ಇತ್ತೀಚೆಗೆ ಉಪಾಸನಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದಾಗ ರಾಮ್‌ ಚರಣ್‌ ತೇಜ ಅವರು ಮಗಳ ಜೊತೆ ಆಸ್ಪತ್ರೆಗೆ ಬಂದಿದ್ದರು.

Read Full Story

04:09 PM (IST) Jun 20

ಮೋದಿ-ಮೆಲೋನಿ ಫೋಟೋ ನೋಡಿ ಹೊಟ್ಟೆ ಉರಿದುಕೊಂಡ ಟ್ರಂಪ್​? ಎಡವಟ್ಟು ಹೇಳಿಕೆ ನೀಡಿ ಮುಖಭಂಗ

ಜಿ7 ಶೃಂಗಸಭೆಯಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು ಎಂಬ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆ ಸಂಚಲನ ಸೃಷ್ಟಿಸಿದೆ. ಟ್ರಂಪ್ ಅವರ ಆರೋಪವನ್ನು ಸಂಪೂರ್ಣ ಕಟ್ಟುಕಥೆ ಎಂದು ತಳ್ಳಿಹಾಕಿದ ಮೆಲೋನಿ, ತಾವಾಗಲಿ ಅಥವಾ ಇಟಲಿಯಾಗಲಿ ಯಾರ ಮುಂದೆಯೂ ಬೇಡುವುದಿಲ್ಲ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ, ಇದರಿಂದ ಟ್ರಂಪ್ ಮುಖಭಂಗ ಅನುಭವಿಸಿದ್ದಾರೆ.
Read Full Story

03:31 PM (IST) Jun 20

ಹೌದು, ನಾನು ಬುರ್ಖಾ ಧರಿಸುತ್ತೇನೆ ಎಂದ ನಟಿ; ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ಚೆಲುವೆ

ಕಾಫಿ ವಿಥ್ ಕರಣ್ ಶೋನಲ್ಲಿ ನಟಿ  ತಮ್ಮ ಖಾಸಗಿತನ ಕಾಪಾಡಿಕೊಳ್ಳಲು ಬುರ್ಖಾ ಧರಿಸುವುದಾಗಿ ಹೇಳಿದ್ದಾರೆ. ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಈ ದಾರಿ ಕಂಡುಕೊಂಡಿರುವುದಾಗಿ ತಿಳಿಸಿದ್ದು, ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆಯೂ ಮಾತನಾಡಿದ್ದಾರೆ. ಕನ್ನಡ ಸಿನಿಮಾದಲ್ಲಿಯೂ ನಟಿ ಕಾಣಿಸಿಕೊಂಡಿದ್ದಾರೆ.

Read Full Story

03:27 PM (IST) Jun 20

Rain 2026 - ಈ ಬಾರಿಯ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ; 5 ಶತಮಾನಗಳ ಹಿಂದಿನ ಪುಸ್ತಕದಲ್ಲೇ ಇತ್ತು ದಾಖಲೆ!

Rain Fall Ratta Mata Shastra: ಪರಿಸರ ತಜ್ಞ, ಲೇಖಕ ಶಿವಾನಂದ ಕಳವೆ ಅವರು ಮಳೆ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಮಳೆ ಕಡಿಮೆಯಿದೆ ಎಂದು ತಜ್ಞ ವರದಿಗಳು ಈಗ ಹೇಳುತ್ತಿವೆ. ಆದರೆ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ ಎಂದು ಐದನೇ ಶತಮಾನದ ರಟ್ಟ ಮತ ಶಾಸ್ತ್ರ ದಾಖಲಿಸಿದೆ. 

 

Read Full Story

03:26 PM (IST) Jun 20

ತಾಕತ್ ಇದ್ರೆ ರಿಂಗ್‌ಗೆ ಬಾ ಎಂದು ಶ್ರೀಶಾಂತ್ ತೊಡೆ ತಟ್ಟಿದ ಬೆನ್ನಲ್ಲೇ ಬಹಿರಂಗವಾಗಿಯೇ ಖಡಕ್ ತಿರುಗೇಟು ಕೊಟ್ಟ ಭಜ್ಜಿ!

ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್‌ಗೆ ಬಾಕ್ಸಿಂಗ್ ರಿಂಗ್‌ಗೆ ಬರುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಈ ಸವಾಲಿಗೆ ಖಡಕ್ ತಿರುಗೇಟು ನೀಡಿರುವ ಭಜ್ಜಿ, ಖಾಲಿ ಪಾತ್ರೆಗಳೇ ಹೆಚ್ಚು ಸದ್ದು ಮಾಡುತ್ತವೆ ಎಂದು ಗೂಢಾರ್ಥವಾಗಿ ಉತ್ತರಿಸಿದ್ದಾರೆ. ಈ ಲೇಖನವು 2008ರ ಐಪಿಎಲ್ ಕಪಾಳಮೋಕ್ಷ ಪ್ರಕರಣದ ಹಿನ್ನೆಲೆಯನ್ನು ವಿವರಿಸುತ್ತದೆ.
Read Full Story

02:33 PM (IST) Jun 20

ಕೇವಲ ಸ್ಟೈಲ್ ಅಷ್ಟೇ ಅಲ್ಲ, ಸುರಕ್ಷತೆಯೂ ಮುಖ್ಯ! ಹೆಲ್ಮೆಟ್ ಖರೀದಿಸುವಾಗ ಈ ವಿಷಯಗಳು ನೆನಪಿರಲಿ

ಹೊಸ ಹೆಲ್ಮೆಟ್ ಖರೀದಿಸುವಾಗ ISI ಮಾರ್ಕ್, IS 4151 ಸ್ಟ್ಯಾಂಡರ್ಡ್ ಕೋಡ್ ಮತ್ತು ಸರಿಯಾದ ಸೈಜ್ ಅನ್ನು ಪರಿಶೀಲಿಸುವುದು ಅತ್ಯಗತ್ಯ. ಸೆಕೆಂಡ್ ಹ್ಯಾಂಡ್ ಹೆಲ್ಮೆಟ್ ಖರೀದಿಸುವುದು, ರಾಸಾಯನಿಕಗಳಿಂದ ಸ್ವಚ್ಛಗೊಳಿಸುವುದು ಮತ್ತು 5 ವರ್ಷಗಳ ನಂತರವೂ ಬಳಸುವುದು ನಿಮ್ಮ ಸುರಕ್ಷತೆಗೆ ಅಪಾಯಕಾರಿಯಾಗಬಹುದು.
Read Full Story

02:29 PM (IST) Jun 20

ಜಾನ್ವಿ ಕಪೂರ್ ದಿಟ್ಟ ಹೋರಾಟಕ್ಕೆ ಶಹಬ್ಬಾಸ್ ಎಂದ 'ಮೈನ್ ವಾಪಸ್ ಆವುಂಗಾ' ನಟಿ ಅಂಜನಾ ಸುಖಾನಿ!

ಒಂದೆಡೆ ಸಾಮಾಜಿಕ ಕಳಕಳಿಯ ಬಗ್ಗೆ ಮಾತನಾಡುತ್ತಿರುವ ಅಂಜನಾ ಸುಖಾನಿ, ಇನ್ನೊಂದೆಡೆ ವೃತ್ತಿಜೀವನದಲ್ಲೂ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಅವರ ಇತ್ತೀಚಿನ ಚಿತ್ರ 'ಮೈನ್ ವಾಪಸ್ ಆವುಂಗಾ' (Main Vaapas Aaunga) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Read Full Story

02:20 PM (IST) Jun 20

NEET UG 2026 re-exam - ನೀಟ್ ಮರು ಪರೀಕ್ಷೆಗೂ ಮುನ್ನವೇ NTA ಮತ್ತೆ ಎಡವಟ್ಟು! ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಎಕ್ಸಾಂ ಸೆಂಟರ್!

ನಾಳೆ ನೀಟ್ ಮರು ಪರೀಕ್ಷೆಗೆ ನಡೆಯಲಿದ್ದು,NTA ಮತ್ತೊಂದು ಎಡವಟ್ಟು ಮಾಡಿದೆ. ನಾಗ್ಪುರದ ವಿದ್ಯಾರ್ಥಿಯೊಬ್ಬರಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ದೂರು ನೀಡಿದ ನಂತರ, ಎನ್‌ಟಿಎ ಸಂಜೆಯೊಳಗೆ ಬದಲಾಯಿಸುವುದಾಗಿ ಭರವಸೆ ನೀಡಿದೆ.

Read Full Story

02:00 PM (IST) Jun 20

ಬಂಗಾರದ ಬೆಟ್ಟ, 148 ಟನ್ ಗೋಲ್ಡನ್ ಸೀಕ್ರೆಟ್! ಮಣ್ಣಿನಡಿ ನೂರಾರು ಟನ್ ಚಿನ್ನ ಹೂತಿಟ್ಟಿದ್ಯಾರು..? ಎಲ್ಲಿದೆ ಆ ಬೆಟ್ಟ?

ಸ್ವಿಟ್ಜರ್‌ಲೆಂಡ್‌ನ ಪರಮಾಣು ನಿರೋಧಕ ಬಂಕರ್‌ನಲ್ಲಿ ಟೆಥರ್ ಎಂಬ ಕ್ರಿಪ್ಟೋ ಕಂಪನಿಯು 148 ಟನ್ ಚಿನ್ನವನ್ನು ರಹಸ್ಯವಾಗಿ ಸಂಗ್ರಹಿಸಿದೆ. ಜಾಗತಿಕ ಯುದ್ಧದ ಭೀತಿ ಮತ್ತು ಡಾಲರ್ ಮೌಲ್ಯ ಕುಸಿತದಂತಹ ಆರ್ಥಿಕ ಅಸ್ಥಿರತೆಯಿಂದ ತನ್ನ ಸಂಪತ್ತನ್ನು ರಕ್ಷಿಸಿಕೊಳ್ಳಲು, ಈ ಕಂಪನಿಯು ಚಿನ್ನವನ್ನು ರಕ್ಷಾಕವಚವಾಗಿ ಬಳಸಿಕೊಳ್ಳುತ್ತಿದೆ.
Read Full Story

01:46 PM (IST) Jun 20

Actor Anil Kapoor ಮಗಳು ರಿಯಾ ಕಪೂರ್‌ರ 1 ಕೋಟಿ 35 ಲಕ್ಷ ರೂಪಾಯಿ ಮೌಲ್ಯದ ಕಿವಿಓಲೆ ಕಳ್ಳತನ! ಹೇಗೆ?

Bollywood Actor Anil Kapoor Daughter: ಬಾಲಿವುಡ್‌ ನಟ ಅನಿಲ್‌ ಕಪೂರ್ ಅವರ ಎರಡನೇ ಪುತ್ರಿ, ಸೋನಂ ಕಪೂರ್‌ ಸಹೋದರಿ ರಿಯಾ ಕಪೂರ್‌ ಅವರ ಕಿವಿಓಲೆ ಕಳ್ಳತನ ಆಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ. 

Read Full Story

01:29 PM (IST) Jun 20

ಬೆಂಗಳೂರು ಮಾಡೆಲ್‌ ಪಾಲಿಸಿದ ರಾಷ್ಟ್ರ ರಾಜಧಾನಿ, Delhi-NCR ಮೂರು ಜೋನ್‌ ಆಗಿ ವಿಭಜನೆ, 4 ಹೊಸ ನಮೋ ನಗರ

ಬೆಂಗಳೂರು ಮಾದರಿಯಲ್ಲಿ ದೆಹಲಿ ಅಭಿವೃದ್ಧಿಗೆ ಬ್ಲೂಪ್ರಿಂಟ್ ರೆಡಿಯಾಗಿದೆ. ಎನ್‌ಸಿಆರ್ ಪ್ರಾದೇಶಿಕ ಯೋಜನೆ-2041ರ ಅಡಿಯಲ್ಲಿ ನಾಲ್ಕು ಹೊಸ ನಮೋ ನಗರಗಳು, ಮೂರು ವಿಶೇಷ ಆರ್ಥಿಕ ವಲಯಗಳ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡಲಾಗಿದೆ.

 

Read Full Story

01:23 PM (IST) Jun 20

ರಾಮ ಮಂದಿರಕ್ಕೆ ನೀಡಿದ ಕಾಣಿಕೆ ಹಣ ಬ್ಯಾಂಕ್ ಖಾತೆ ಸೇರೋದು ಹೇಗೆ? ಇಲ್ಲಿದೆ ಹುಂಡಿ ಎಣಿಕೆಯ ಸಂಪೂರ್ಣ ಸಿಸ್ಟಮ್!

ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ಅರ್ಪಿಸುವ ಕಾಣಿಕೆಯನ್ನು ಅತ್ಯಂತ ಪಾರದರ್ಶಕವಾಗಿ ಸಂಗ್ರಹಿಸಲಾಗುತ್ತದೆ. ಬಹುಹಂತದ ಪರಿಶೀಲನೆ, ಸಿಸಿಟಿವಿ ಕಣ್ಗಾವಲು ಮತ್ತು ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಹಣವನ್ನು ಎಣಿಕೆ ಮಾಡಿ, ಸುರಕ್ಷಿತವಾಗಿ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 

Read Full Story

01:01 PM (IST) Jun 20

CNG vs Flex Fuel - ನಿಮಗೆ ಉತ್ತಮ ಮೈಲೇಜ್‌ ನೀಡುವ, Running Cost ಕಡಿಮೆ ಇರುವ ಕಾರು ಯಾವುದು?

ಏರುತ್ತಿರುವ ಇಂಧನ ಬೆಲೆಗಳಿಂದಾಗಿ ಸಿಎನ್‌ಜಿ ಕಾರುಗಳು ಜನಪ್ರಿಯವಾಗಿವೆ, ಆದರೆ ಈಗ ಎಥನಾಲ್‌ನಿಂದ ಚಲಿಸುವ ಫ್ಲೆಕ್ಸ್‌-ಫ್ಯುಯೆಲ್ ಕಾರುಗಳು ಮಾರುಕಟ್ಟೆಗೆ ಬಂದಿವೆ. ಈ ಲೇಖನವು ಮೈಲೇಜ್, ಬೆಲೆ ಮತ್ತು ಪ್ರಯಾಣದ ವೆಚ್ಚದ ಆಧಾರದ ಮೇಲೆ ಈ ಎರಡೂ ಕಾರುಗಳನ್ನು ಹೋಲಿಸಲಾಗಿದೆ.

Read Full Story

12:57 PM (IST) Jun 20

Samantha Secret - ಸೀರೆ ಸೀಕ್ರೆಟ್ ಹಿಂದಿದೆಯೇ ಅಸಲಿ ಗುಡ್ ನ್ಯೂಸ್? ಸಮಂತಾ ತಾಯಿಯಾಗ್ತಿರೋದು ನಿಜವೇ?

ಮದುವೆಯ ನಂತರ ಸಮಂತಾ ನಟಿಸಿದ ಮೊದಲ ಸಿನಿಮಾ 'ಮಾ ಇಂಟಿ ಬಂಗಾರಂ' ಬಾಕ್ಸ್ ಆಫೀಸ್‌ನಲ್ಲಿ ಹವಾ ಸೃಷ್ಟಿಸುತ್ತಿದೆ. ಬಿಡುಗಡೆಯಾದ ಮೊದಲ ದಿನವೇ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸಮಂತಾ ಸ್ಟಾರ್ ಪವರ್ ಇಂದಿಗೂ ಕುಗ್ಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

Read Full Story

12:18 PM (IST) Jun 20

ಭಾರತದ ನಕ್ಷೆಯಲ್ಲಿ ಶ್ರೀಲಂಕಾ ಯಾಕೆ ಕಾಣಿಸುತ್ತೆ? ಇಲ್ಲಿದೆ ನೋಡಿ ನಿಜವಾದ ಸೀಕ್ರೆಟ್

ಭಾರತದ ನಕ್ಷೆಯನ್ನು ನೋಡಿದಾಗಲೆಲ್ಲಾ ಜೊತೆಗೆ ಶ್ರೀಲಂಕಾ ಕೂಡ ಕಾಣಿಸುತ್ತದೆ. ಶ್ರೀಲಂಕಾ ಒಂದು ಪ್ರತ್ಯೇಕ ದೇಶವಾದರೂ, ಭಾರತದ ನಕ್ಷೆಯಲ್ಲಿ ಅದನ್ನು ಯಾಕೆ ತೋರಿಸುತ್ತಾರೆ? ಇದರ ಹಿಂದಿರುವ ಅಂತರಾಷ್ಟ್ರೀಯ ಸಮುದ್ರ ಕಾನೂನು ಮತ್ತು ಭೌಗೋಳಿಕ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

 

Read Full Story

11:54 AM (IST) Jun 20

Shocking - ಮದುವೆಗೂ ಮುನ್ನವೇ ಮುರಿದು ಬಿತ್ತು ಲವ್; ಧನುಷ್-ಮೃಣಾಲ್ ಬ್ರೇಕಪ್‌ನಲ್ಲೂ ಒಂದು ಸೀಕ್ರೆಟ್ ಇದೆ!

ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿಯಲ್ಲಿ ಮಂಗಲವಾದ್ಯ ಕೇಳಿಬರಬೇಕಿತ್ತು. ಆದರೆ ಮದುವೆ ಮಂಟಪ ಏರುವ ಮುನ್ನವೇ ಇವರ ಸಂಬಂಧದ ಹಡಗು ಮುಳುಗಿದೆಯೇ? ಹೌದು ಎನ್ನುತ್ತಿವೆ ಸಿನಿಮಾ ಮೂಲಗಳು. ಧನುಷ್ ಮತ್ತು ಮೃಣಾಲ್ ಠಾಕೂರ್ ಇತ್ತೀಚೆಗೆ ಬೇರೆಬೇರೆ ಆಗಿದ್ದಾರೆ ಎನ್ನುತ್ತಿವೆ ಸುದ್ದಿಮೂಲಗಳು!

Read Full Story

11:54 AM (IST) Jun 20

ಟೀಮ್‌ ಇಂಡಿಯಾ ಮ್ಯಾಚ್‌ವಿನ್ನಿಂಗ್‌ ಪ್ಲೇಯರ್‌ಗೆ ಕೋಚ್‌ ಡೈರೆಕ್ಟ್‌ ವಾರ್ನಿಂಗ್‌, ಟೀಮ್‌ನಿಂದ ಗೇಟ್‌ಪಾಸ್‌ ಪಕ್ಕಾ

ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಕೋಚ್ ರಾಯನ್ ಟೆನ್ ಡೊಶ್ಚೇಟ್, 2027ರ ವಿಶ್ವಕಪ್ ದೃಷ್ಟಿಯಿಂದ ಪ್ರದರ್ಶನದ ಆಧಾರದ ಮೇಲೆ ಮಾತ್ರ ಆಟಗಾರರ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳಪೆ ಫಾರ್ಮ್‌ನಲ್ಲಿರುವ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.

Read Full Story

11:07 AM (IST) Jun 20

Reliance Jio IPO - 27 ಕೋಟಿ ಹೊಸ ಷೇರು ನೀಡಿ 37 ಸಾವಿರ ಕೋಟಿ ಗಳಿಸಲು ಸಜ್ಜಾದ ಅಂಬಾನಿ!

ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒಗೆ ಮಂಡಳಿಯ ಅನುಮೋದನೆ ಪಡೆದಿದೆ. ಇದು ಸಂಪೂರ್ಣ 'ಫ್ರೆಶ್ ಇಶ್ಯೂ' ಆಗಿದ್ದು, ಸುಮಾರು ₹37,000 ಕೋಟಿ ಮೌಲ್ಯದೊಂದಿಗೆ ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಆಗುವ ನಿರೀಕ್ಷೆಯಿದೆ.
Read Full Story

10:19 AM (IST) Jun 20

‘ಭಾರತದಲ್ಲಿ ಪ್ರಧಾನಿಗಳು ಬದಲಾಗುತ್ತಲೇ ಇದ್ದರು, ಮೋದಿ ಬಂದ ಮೇಲೆ ಸ್ಥಿರತೆ ಸಿಕ್ಕಿದೆ’ - ಪ್ರಧಾನಿ ನಾಯಕತ್ವಕ್ಕೆ ಟ್ರಂಪ್ ಫಿದಾ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಮಹಾನ್ ನಾಯಕ' ಮತ್ತು 'ಅತ್ಯಂತ ಕಠಿಣ ವ್ಯಕ್ತಿ' ಎಂದು ಶ್ಲಾಘಿಸಿದ್ದಾರೆ. ಭಾರತಕ್ಕೆ ರಾಜಕೀಯ ಸ್ಥಿರತೆ ತಂದ ಮೋದಿ, ವಿಶ್ವದ ಇಬ್ಬರು ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಟ್ರಂಪ್ ಬಣ್ಣಿಸಿದ್ದಾರೆ.

Read Full Story

09:08 AM (IST) Jun 20

Home Investment - 1 ಕೋಟಿ ರೂಪಾಯಿ ಕೊಟ್ಟು ಸಿಟಿಯಲ್ಲಿ ಮನೆ ಕಟ್ಟೋ ಬದಲು ಹೀಗೆ ಮಾಡಿ, ಜೀವನಪೂರ್ತಿ ಆದಾಯ ಪಕ್ಕಾ!

Home investment strategy in india: ದೇಶದಲ್ಲಿ ಸ್ವಂತ ಮನೆ ಅನ್ನೋದು ಬಹುತೇಕರ ಜೀವನದ ಕನಸು. ಅದರಲ್ಲೂ ಒಂದು ಕೋಟಿ ರೂಪಾಯಿ ಬಜೆಟ್ ಇದ್ದರೆ, ಸ್ವಂತ ಮನೆ ಕಟ್ಟಬೇಕಾ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಬೇಕಾ ಅನ್ನೋ ಗೊಂದಲ ಅನೇಕರಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Read Full Story

08:39 AM (IST) Jun 20

ಇಂದಿನಿಂದ ಮಹಾರಾಜ ಟಿ20 ಟ್ರೋಫಿ ಆರಂಭ - ಈ ಬಾರಿ ಆಟದ ನಿಯಮಗಳೇ ಬದಲು! ಫ್ರೀ-ಹಿಟ್‌ನಲ್ಲಿ ರನ್ ಇಲ್ಲ

5ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯು 6 ತಂಡಗಳೊಂದಿಗೆ ಆರಂಭವಾಗಲಿದೆ. ಈ ಬಾರಿ ಟೂರ್ನಿಯಲ್ಲಿ ಡಿಆರ್‌ಎಸ್‌, ಫ್ರೀ-ಹಿಟ್ ಮತ್ತು ಪ್ಲೇಯಿಂಗ್ XIಗೆ ಸಂಬಂಧಿಸಿದಂತೆ ಮೂರು ಮಹತ್ವದ ಹೊಸ ನಿಯಮಗಳನ್ನು ಪರಿಚಯಿಸಲಾಗಿದ್ದು, ಇದು ಆಟದ ಮೇಲೆ ಪರಿಣಾಮ ಬೀರಲಿದೆ.
Read Full Story

08:21 AM (IST) Jun 20

'ನನ್ನ ಜತೆ ಫೋಟೊಗಾಗಿ ಮೆಲೋನಿ ಬೇಡಿಕೊಂಡಳು..' ಟ್ರಂಪ್‌ ಮಾತಿಗೆ ಕಿಡಿಕಿಡಿಯಾದ ಇಟಲಿ ಪ್ರಧಾನಿ

ಜಿ7 ಶೃಂಗದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು 'ಕಟ್ಟುಕತೆ' ಎಂದು ತಳ್ಳಿಹಾಕಿದ ಮೆಲೋನಿ, ಇಟಲಿ ಯಾರನ್ನೂ ಬೇಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Read Full Story

07:55 AM (IST) Jun 20

ಇರಾನ್‌ಗೆ ನಯಾಪೈಸೆ ಕೂಡಾ ಕೊಡಲ್ಲ - ಡೊನಾಲ್ಡ್‌ ಟ್ರಂಪ್‌

ಶಾಂತಿ ಒಪ್ಪಂದದ ಅಡಿಯಲ್ಲಿ ಇರಾನ್‌ಗೆ 28 ಲಕ್ಷ ಕೋಟಿ ರು. ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ, 10 ಸೆಂಟ್ಸ್ ಕೂಡ ಸಿಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದೇ ವೇಳೆ, ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಅಮೆರಿಕ-ಇರಾನ್ ನಡುವಿನ ಸ್ವಿಸ್ ಸಂಧಾನ ಸಭೆ ಮುಂದೂಡಲ್ಪಟ್ಟಿದೆ.

Read Full Story

07:45 AM (IST) Jun 20

ಠಾಕ್ರೆ ಸೇನೆ ಬಳಿಕ ಶರದ್‌ ಪವಾರ್‌ ಎನ್‌ಸಿಪಿಯಲ್ಲಿ ಬಂಡಾಯ?

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ, ಶರದ್ ಪವಾರ್ ಬಣದ ಹಲವು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದೆ. ಇದು ಪಕ್ಷದಲ್ಲಿ ಮತ್ತೊಂದು ವಿಭಜನೆಯ ಆತಂಕ ಸೃಷ್ಟಿಸಿದೆ.

Read Full Story

More Trending News