Published : Jun 19, 2026, 07:39 AM ISTUpdated : Jun 19, 2026, 10:47 PM IST

National News Live: ಪತ್ನಿಯೆಂದು ಬಂದು ಹುತಾತ್ಮ ಪೈಲಟ್​ನ 21 ಲಕ್ಷ ಪರಿಹಾರ ಪಡೆದು ನಾಪತ್ತೆಯಾದಳು? ಕುಟುಂಬಸ್ಥರು ಕಂಗಾಲು

ಸಾರಾಂಶ

ನವದೆಹಲಿ (ಜೂ.19): ಅಮೆರಿಕ ಹಾಗೂ ಇರಾನ್‌ ನಡುವೆ ಶಾಂತಿ ಒಪ್ಪಂದ ಆಗುವುದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿದ್ದ ಯುದ್ಧ ಅಂತ್ಯ ಕಂಡಿದೆ. ಶಾಂತಿ ಒಪ್ಪಂದಕ್ಕೆ ಫ್ರಾನ್ಸ್‌ನಲ್ಲಿ ಡೊನಾಲ್ಡ್‌ ಟ್ರಂಪ್‌ ಹಾಗೂ ಇರಾನ್‌ನಲ್ಲಿ ಪೆಜೆಶ್ಕಿ ಸಹಿ ಹಾಕಿದ್ದಾರೆ. ಇದು ಇಸ್ಲಾಮಾಬಾದ್‌ ಎಂದು ಪಾಕ್‌ ಹೇಳಿಕೊಂಡಿದೆ. ತತ್ತರಿಸಿದ ಇಡೀ ಜಗತ್ತು ಕೊನೆಗೂ ಇದರೊಂದಿಗೆ ನಿಟ್ಟುಸಿರು ಬಿಟ್ಟಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:47 PM (IST) Jun 19

ಪತ್ನಿಯೆಂದು ಬಂದು ಹುತಾತ್ಮ ಪೈಲಟ್​ನ 21 ಲಕ್ಷ ಪರಿಹಾರ ಪಡೆದು ನಾಪತ್ತೆಯಾದಳು? ಕುಟುಂಬಸ್ಥರು ಕಂಗಾಲು

ಅಸ್ಸಾಂ ವಿಮಾನ ದುರಂತದಲ್ಲಿ ಹುತಾತ್ಮರಾದ ಪೈಲಟ್ ಶುಭಂ ಕುಮಾರ್ ಅವರ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದೆ. ಅವರಿಗೆ ಸಿಗಬೇಕಿದ್ದ 21 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು, ತಮ್ಮನ್ನು ಪತ್ನಿ ಎಂದು ಹೇಳಿಕೊಂಡ ಅವರ ಸ್ನೇಹಿತೆ ಪಡೆದು ಪರಾರಿಯಾಗಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
Read Full Story

09:28 PM (IST) Jun 19

Nagabandham - ಪದ್ಮನಾಭಸ್ವಾಮಿ ದೇಗುಲದ ರಹಸ್ಯ ಬಿಚ್ಚಿಟ್ಟ 'ನಾಗಬಂಧಂ' ಟ್ರೇಲರ್ - ನಭಾ ನಟೇಶ್ ಕಮ್‌ಬ್ಯಾಕ್!

Nagabandham: ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ರಹಸ್ಯಗಳನ್ನೇ ಆಧರಿಸಿದ ಸಿನಿಮಾ 'ನಾಗಬಂಧಂ'. ಇದೊಂದು ಮಿಸ್ಟರಿ ಅಡ್ವೆಂಚರ್ ಸಿನಿಮಾ ಆಗಿದ್ದು, ಇತ್ತೀಚೆಗೆ ಇದರ ಟ್ರೇಲರ್ ರಿಲೀಸ್ ಆಗಿದೆ. ಹಾಗಿದ್ರೆ ಈ ಟ್ರೇಲರ್ ಹೇಗಿದೆ?

Read Full Story

09:02 PM (IST) Jun 19

ಟೀ-ಶರ್ಟ್ ಮೇಲಿದ್ದ ಅದೊಂದೇ ವಾಕ್ಯಕ್ಕೆ 'JOB Chance ಚಾನ್ಸ್' ಕಳೆದುಕೊಂಡ ಯುವತಿ!

"ನಾನು ಆಕೆಯನ್ನು ರಿಜೆಕ್ಟ್ ಮಾಡಿದ್ದು ಆಕೆ ಫಾರ್ಮಲ್ ಬಟ್ಟೆ ಹಾಕಿಲ್ಲ ಎಂದಲ್ಲ ಅಥವಾ ಆಕೆ ಮೈ ಪ್ರದರ್ಶನ ಮಾಡಿದ್ದಾಳೆ ಎಂದೂ ಅಲ್ಲ'.. ಟೀ ಶರ್ಟ್ ಮೇಲಿದ್ದ ಆ ಒಂದು ವಾಕ್ಯಕ್ಕೆ ಕೆಲಸ ಕಳೆದುಕೊಂಡ ಯುವತಿ: ಅಮೆಜಾನ್ ಎಕ್ಸಿಕ್ಯೂಟಿವ್ ಹಂಚಿಕೊಂಡ ರೋಚಕ ಕಥೆ ಇಲ್ಲಿದೆ ನೋಡಿ..

Read Full Story

08:44 PM (IST) Jun 19

Maa Inti Bangaram Review - ಮಾಸ್ ಅವತಾರದಲ್ಲಿ ಸಮಂತಾ - ಇಲ್ಲಿದೆ 'ಮಾ ಇಂಟಿ ಬಂಗಾರಂ' ಮೊದಲ ವಿಮರ್ಶೆ!

Maa Inti Bangaram Review: ಸಮಂತಾ ರುತ್ ಪ್ರಭು 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಮರಳಿದ್ದಾರೆ. ಈ ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಅವರು ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ.

Read Full Story

07:20 PM (IST) Jun 19

Venkatesh - ಮೊದಲ ಬಾರಿಗೆ ಒಂದಾದ ವೆಂಕಟೇಶ್-ಕಲ್ಯಾಣ್ ರಾಮ್ - ಟಾಲಿವುಡ್‌ನಲ್ಲಿ ಹೊಸ ಸ್ಟಾರ್ ಕಾಂಬಿನೇಷನ್!

ಸೂಪರ್ ಹಿಟ್ ನಿರ್ದೇಶಕ Anil Ravipudi ನಿರ್ದೇಶನದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ನಂದಮೂರಿ ಕಲ್ಯಾಣ್ ರಾಮ್ ಒಟ್ಟಿಗೆ ನಟಿಸುತ್ತಿರುವ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದೊಂದು ಪಕ್ಕಾ ಹಬ್ಬದ ಮನರಂಜನೆಯ ಸಿನಿಮಾವಾಗಲಿದೆ.

Read Full Story

06:42 PM (IST) Jun 19

Akshay Kumar - ಸ್ಕ್ರಿಪ್ಟ್‌ನಲ್ಲೇ ಇರಲಿಲ್ಲ ಅಕ್ಷಯ್‌ರ ಈ 3 ಹಿಟ್ ಡೈಲಾಗ್‌ಗಳು - ಹುಟ್ಟಿದ್ದೇ ಒಂದು ಅಚ್ಚರಿ!

Bollywood: ಅಕ್ಷಯ್ ಕುಮಾರ್ ಅವರ ಹಲವು ಫೇಮಸ್ ಕಾಮಿಡಿ ಡೈಲಾಗ್‌ಗಳು ಸ್ಕ್ರಿಪ್ಟ್‌ನ ಭಾಗವಾಗಿರಲಿಲ್ಲವಂತೆ. ಶೂಟಿಂಗ್ ವೇಳೆ ತಾವೇ ಸ್ವತಃ ಹೇಳಿದ ಈ ಸಂಭಾಷಣೆಗಳು ಯಾವುವು? ಅವು ಹುಟ್ಟಿಕೊಂಡಿದ್ದು ಹೇಗೆ? ಇಲ್ಲಿದೆ ಸ್ವಾರಸ್ಯಕರ ಮಾಹಿತಿ.

Read Full Story

06:27 PM (IST) Jun 19

ವಿರಾಟ್ ಕೊಹ್ಲಿ ಇನ್ನೆಷ್ಟು ಐಪಿಎಲ್ ಟೂರ್ನಿ ಆಡ್ತಾರೆ? ಕೊನೆಗೂ ಬೆಂಗಳೂರು ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ RCB CEO

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಇನ್ನೆಷ್ಟು ವರ್ಷ ಐಪಿಎಲ್ ಆಡುತ್ತಾರೆ ಎನ್ನುವ ಕುತೂಹಲಕ್ಕೆ ಆರ್‌ಸಿಬಿ ತಂಡದ ಸಿಇಒ ತೆರೆ ಎಳೆದಿದ್ದಾರೆ.

 

Read Full Story

06:26 PM (IST) Jun 19

Chimpanzee - ಅಳುತ್ತಿದ್ದ ವ್ಯಕ್ತಿಯನ್ನು ನೋಡಿ ಚಿಂಪಾಂಜಿ ಮಾಡಿದ್ದೇನು? ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ!

Chimpanzee Viral Video: ಪ್ರಾಣಿಗಳಿಗೂ ಮನುಷ್ಯರ ಹಾಗೆ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋ ಶಕ್ತಿ ಇದೆಯಾ? ದುಃಖದಲ್ಲಿರೋ ವ್ಯಕ್ತಿಗೆ ಒಂದು ಚಿಂಪಾಂಜಿ ಸಮಾಧಾನ ಮಾಡೋಕೆ ಸಾಧ್ಯನಾ? ಲಿಂಬಾನಿ ಅನ್ನೋ ಚಿಂಪಾಂಜಿ ಮಾಡಿದ್ದನ್ನು ನೋಡಿ ಲಕ್ಷಾಂತರ ಜನ ಯಾಕೆ ಭಾವುಕರಾದ್ರು? 

Read Full Story

06:12 PM (IST) Jun 19

Shocking- Arvind Swamy - ಸಿನಿಮಾಗೆ ಗುಡ್‌ಬೈ; 3,300 ಕೋಟಿ ಉದ್ಯಮ ಸಾಮ್ರಾಜ್ಯ ಕಟ್ಟಿದ 'ರೋಜಾ' ಸೂಪರ್ ಸ್ಟಾರ್ ಸೀಕ್ರೆಟ್ ಏನ್ ಗೊತ್ತಾ?

2013 ರಲ್ಲಿ ಮಣಿರತ್ನಂ ಅವರ 'ಕಡಲ್' ಸಿನಿಮಾ ಮೂಲಕ ಅರವಿಂದ್ ಸ್ವಾಮಿ ಮತ್ತೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡರು. ಆದರೆ ಈ ಬಾರಿ ಅವರು ಕೇವಲ ಹಳೇ ಚಾಕೊಲೇಟ್ ಬಾಯ್ ಆಗಿರಲಿಲ್ಲ, ಬದಲಾಗಿ ಒಬ್ಬ ಪಕ್ವ ನಟನಾಗಿ ಮರಳಿದ್ದರು. ಅದರಲ್ಲೂ 'ತನಿ ಒರುವನ್' ಚಿತ್ರದ ಸಿದ್ಧಾರ್ಥ್ ಅಭಿಮನ್ಯು ಎಂಬ ಸ್ಟೈಲಿಶ್ ವಿಲನ್ ಪಾತ್ರ ಅವರಿಗೆ ಅಭೂತಪೂರ್ವ ಯಶಸ್ಸು ತಂದುಕೊಟ್ಟಿತು.

Read Full Story

06:00 PM (IST) Jun 19

Viral Note - 'ನನ್ನ ಚಿಕ್ಕಮ್ಮನಿಗೆ ಬೇಗ ಸಾವು ಕೊಡು ದೇವ್ರೇ..! - ಹುಂಡಿಯಲ್ಲಿ ಸಿಕ್ಕ 20 ರೂ. ನೋಟಿನ ಬರಹ ವೈರಲ್

Viral 20 Rupee Note: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕ 20 ರೂಪಾಯಿ ನೋಟಿನ ಮೇಲಿನ ವಿಚಿತ್ರ ಬರಹ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

Read Full Story

05:37 PM (IST) Jun 19

Cocktail 2 - ಪ್ರೀತಿ, ಸ್ನೇಹ, ಮೋಸ - 'ಕಾಕ್‌ಟೇಲ್ 2' ಸಿನಿಮಾದ ರಹಸ್ಯ ಬಿಚ್ಚಿಟ್ರು ನಟಿ ಕೃತಿ ಸನೋನ್!

Cocktail 2 ಸಿನಿಮಾವು ಇಂದಿನ ಕಾಲದ ಸಂಬಂಧಗಳು ಮತ್ತು ಕಮಿಟ್‌ಮೆಂಟ್‌ಗಳ ಬಗ್ಗೆ ಒಂದು ಮುಖ್ಯವಾದ ಸಂದೇಶವನ್ನು ಹೊಂದಿದೆ ಎಂದು ನಟಿ ಕೃತಿ ಸನೋನ್ ಹೇಳಿದ್ದಾರೆ. ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸಿರುವ ಈ ಚಿತ್ರ, 2012ರಲ್ಲಿ ಬಂದ ಹಿಟ್ ಸಿನಿಮಾದ ಸ್ಪಿರಿಚುವಲ್ ಸೀಕ್ವೆಲ್ ಆಗಿದೆ.

Read Full Story

05:17 PM (IST) Jun 19

Samantha - ನಟಿ ಸಮಂತಾ ಯಾಕೆ ಸ್ಟ್ರಾ ಇಲ್ಲದೆ ಕೋಲ್ಡ್ ಡ್ರಿಂಕ್ಸ್ ಕುಡಿಯಲ್ಲ? ಇಲ್ಲಿದೆ ಸೀಕ್ರೆಟ್!

Samantha ಕೋಲ್ಡ್ ಡ್ರಿಂಕ್ಸ್ ಕುಡಿಯುವಾಗ ಸ್ಟ್ರಾ ಬಳಸುತ್ತಾರೆ. ಈ ಅಭ್ಯಾಸದಿಂದ ಹಲ್ಲುಗಳ ಆರೋಗ್ಯ ಚೆನ್ನಾಗಿರುತ್ತೆ, ಹಲ್ಲುಗಳ ಜುಮ್ಮೆನ್ನುವಿಕೆ ಕಡಿಮೆಯಾಗುತ್ತೆ ಮತ್ತು ಹಲ್ಲಿನ ಎನಾಮೆಲ್ ಕೂಡಾ ಸುರಕ್ಷಿತವಾಗಿರುತ್ತೆ. ಅವರ ಈ ಆರೋಗ್ಯಕರ ಅಭ್ಯಾಸ ಈಗ ವೈರಲ್ ಆಗಿದೆ.

Read Full Story

05:16 PM (IST) Jun 19

ಕಿಂಡರ್ ಜಾಯ್, ಸಫೋಲಾ ಸೇರಿ ಹಲವು ಉತ್ಪನ್ನಕ್ಕೆ ಆಹಾರ ಸುರಕ್ಷತೆ ಪ್ರಾಧಿಕಾರ ನೋಟಿಸ್, ಕಾರಣವೇನು?

ಮಕ್ಕಳಿಗೆ ನೀವು ಕಿಂಡರ್ ಜಾಯ್ ಕೊಡುತ್ತಿದ್ದೀರಾ? ಇದೀಗ FSSAI ಕಿಂಡರ್ ಜಾಯ್ ಸೇರಿದಂತೆ ಹಲವು ಉತ್ಪನ್ನಗಳಿಗೆ ನೋಟಿಸ್ ನೀಡಿದೆ. ಅಷ್ಟಕ್ಕೂ ಅಹಾರ ಗುಣಮಟ್ಟ ಹಾಗೂ ಸುರಕ್ಷತಾ ಪ್ರಾಧಿಕಾರ ನೋಟಿಸ್ ನೀಡಿದ್ದು ಯಾಕೆ?

 

Read Full Story

04:46 PM (IST) Jun 19

ಸ್ಲೋವಾಕಿಯಾ ಸ್ಪೀಕರ್‌ಗೆ ಪ್ರಧಾನಿ ಮೋದಿ ನೀಡಿದ ತೆಕುವಾ ಗಿಫ್ಟ್ ವಿಶೇಷತೆ ಏನು? ಈ ಸ್ವೀಟ್ ಮೂಲ ಎಲ್ಲಿ?

ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಹಲವು ನಾಯಕರನ್ನು ಭೇಟಿಯಾಗಿದ್ದಾರೆ. ಸ್ಲೋವಾಕ್ ಪಾರ್ಲಿಮೆಂಟ್ ಸ್ವೀಕರ್‌ಗೆ ತೆಕುವಾ ಸಿಹಿ ತಿಂಡಿ ಗಿಫ್ಟ್ ನೀಡಿದ್ದಾರೆ. ಈ ಸ್ವೀಟ್ ವಿಶೇಷತೆ ಏನು?

Read Full Story

04:45 PM (IST) Jun 19

Cocktail 2- Rashmika Mandanna - ರಶ್ಮಿಕಾ ಮಂದಣ್ಣರ 'ಕಾಕ್‌ಟೇಲ್ 2' ಮ್ಯಾಜಿಕ್.. ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್!

ಮೇಕಿಂಗ್ ಮತ್ತು ಸಂಗೀತದ ವಿಚಾರದಲ್ಲಿಯೂ ಶ್ರೀಮಂತವಾಗಿದೆ 'ಕಾಕ್‌ಟೇಲ್ 2' ಚಿತ್ರ. ಈ ಚಿತ್ರವು ಸೀಕ್ವೆಲ್ ಆಗಿ ಮಾತ್ರವಲ್ಲದೆ, ಸ್ವತಂತ್ರವಾಗಿ ಒಂದು ಅದ್ಭುತ ಮನರಂಜನಾತ್ಮಕ ಚಿತ್ರವಾಗಿ ಹೊರಹೊಮ್ಮಿದೆ. ಆಕ್ಷನ್ ಸಿನಿಮಾಗಳ ನಡುವೆ ಒಂದು ರಿಫ್ರೆಶಿಂಗ್ ಪ್ರೇಮಕಥೆ ನೋಡಬಯಸುವವರಿಗೆ 'ಕಾಕ್‌ಟೇಲ್ 2' ಪರ್ಫೆಕ್ಟ್ ಚಾಯ್ಸ್!'

Read Full Story

04:34 PM (IST) Jun 19

Upendra - ಒಂದೇ ವರ್ಷದಲ್ಲಿ ಎರಡನೇ ತಮಿಳು ಸಿನಿಮಾ - ‘ಕೂಲಿ’ ಬಳಿಕ ಉಪೇಂದ್ರಗೆ ಮತ್ತೊಂದು ಬಿಗ್ ಆಫರ್!

Coolie ಚಿತ್ರದ ಬಳಿಕ ನಟ ಉಪೇಂದ್ರ ಮತ್ತೊಂದು ತಮಿಳು ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಹಾಗೂ ಗುನೀತ್ ಮೋಂಗಾ ನಿರ್ಮಾಣದ ಈ ಚಿತ್ರದ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆ ಇದೆ.

Read Full Story

03:40 PM (IST) Jun 19

Farogh Siddique - ಅಜಯ್ ದೇವಗನ್‌ರನ್ನು 'ಆಕ್ಷನ್ ಸ್ಟಾರ್' ಮಾಡಿದ್ದ ಖ್ಯಾತ ನಿರ್ದೇಶಕ ಫರೋಗ್ ಸಿದ್ದಿಕಿ ಇನ್ನಿಲ್ಲ!

90ರ ದಶಕದ ಬಾಲಿವುಡ್ ಸುವರ್ಣ ಯುಗದಲ್ಲಿ ಫರೋಗ್ ಸಿದ್ದಿಕಿ ಅವರ ಹೆಸರು ಅಜರಾಮರ. ದೊಡ್ಡ ತಾರಾಗಣವನ್ನು ಇಟ್ಟುಕೊಂಡು ಪ್ರೇಕ್ಷಕರಿಗೆ ಬೇಕಾದ ಸಿನೆಮಾ ನೀಡುವಲ್ಲಿ ಅವರು ಯಶಸ್ವಿಯಾಗಿದ್ದರು. ಹಿರಿಯ ನಿರ್ದೇಶಕನ ಅಗಲಿಕೆಗೆ ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

Read Full Story

01:10 PM (IST) Jun 19

Prabhas-Samantha - ನಟ ಡಾರ್ಲಿಂಗ್ ಪ್ರಭಾಸ್ ಗುಟ್ಟು ಬಿಚ್ಚಿಟ್ಟು ಶಾಕಿಂಗ್ ಹೇಳಿಕೆ ನೀಡಿದ ನಟಿ ಸಮಂತಾ!

‘ಸಾಮಾನ್ಯವಾಗಿ ಮಹಿಳಾ ಪ್ರಧಾನ ಸಿನಿಮಾ ಅಂದರೆ ಅದರಲ್ಲಿ ನಟಿ ದೇವತೆಯಂತೆ ಇರಬೇಕು, ಸದಾ ತ್ಯಾಗ ಮಾಡಬೇಕು, ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು ಎಂಬ ಸಿದ್ಧಸೂತ್ರಗಳಿವೆ. ನಾವು ಹೆಣ್ಣುಮಕ್ಕಳನ್ನು ಒಂದು ಚೌಕಟ್ಟಿನಲ್ಲಿ ಕೂರಿಸಿದ್ದೇವೆ. ಆದರೆ ನನಗೆ ಈ ಇಮೇಜ್ ಮುರಿಯಬೇಕು ಎಂಬ ಆಸೆ ಇದೆ’…

Read Full Story

01:04 PM (IST) Jun 19

ಮಹಿಳಾ ಟಿ20 ವಿಶ್ವಕಪ್ - ದಕ್ಷಿಣ ಆಫ್ರಿಕಾ ಎದುರಿನ ಪಂದ್ಯಕ್ಕೂ ಮುನ್ನ ಶ್ರೇಯಾಂಕ ಪಾಟೀಲ್ ಟೂರ್ನಿಯಿಂದಲೇ ಔಟ್! RCB ಆಟಗಾರ್ತಿ ಸೇರ್ಪಡೆ

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಗಾಯಗೊಂಡಿರುವ ಭಾರತದ ಸ್ಟಾರ್ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ನೆದರ್‌ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಅವರ ಸ್ಥಾನಕ್ಕೆ ಮತ್ತೋರ್ವ ಆರ್‌ಸಿಬಿ ಆಟಗಾರ್ತಿ, ಲೆಗ್‌ ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Read Full Story

12:21 PM (IST) Jun 19

Telegram Ban - NEET ಪರೀಕ್ಷೆಗೆ ಟೆಲಿಗ್ರಾಂ ಬ್ಯಾನ್ - ರಾಹುಲ್ ಗಾಂಧಿ ಬಳಿಕ ಈಗ ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ!

NEET-UG ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್‌ ಅನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಇದು NTA ವೈಫಲ್ಯವನ್ನು ಮರೆಮಾಚಲು ಈ ಕ್ರಮ ಎಂದು ಅರೋಪಿಸಿದ್ದಾರೆ.

Read Full Story

12:19 PM (IST) Jun 19

Samantha Shocking Story - ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ - "ನನಗೆ ತಿನ್ನಲು ಇಷ್ಟವಿಲ್ಲ ಅಂತಲ್ಲ, ತಿನ್ನಲು ಆಗುತ್ತಿಲ್ಲ'...!

"ಆ ಸಮಯದಲ್ಲಿ ನಾನು ಸೇವಿಸುವ ಆಹಾರವೇ ನನ್ನ ಕಾಯಿಲೆಗೆ ಪ್ರಚೋದನೆ (Trigger) ನೀಡುತ್ತಿತ್ತು. ನನ್ನ ಜೀರ್ಣಾಂಗವ್ಯೂಹಕ್ಕೆ (Gut) ಸಣ್ಣ ತೊಂದರೆಯಾದರೂ ನನ್ನ ಮಯೋಸಿಟಿಸ್ ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು. ಹಾಗಾಗಿ, ನಾನು ಅತ್ಯಂತ ಕಟ್ಟುನಿಟ್ಟಾದ ಪಥ್ಯವನ್ನು ಪಾಲಿಸಬೇಕಾಯಿತು.

Read Full Story

12:16 PM (IST) Jun 19

ಇದ್ದಕ್ಕಿದ್ದಂತೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ, ಗೋಲ್ಡ್ ಖರೀದಿಗೆ ಇದು ಬೆಸ್ಟ್‌ ಟೈಮಾ?

ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಕುಸಿತದಿಂದಾಗಿ, ಭಾರತೀಯ ಷೇರುಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಇಟಿಎಫ್‌ಗಳು ತೀವ್ರ ನಷ್ಟ ಅನುಭವಿಸಿವೆ. ಯುಎಸ್ ಫೆಡರಲ್ ರಿಸರ್ವ್‌ನ ಕಠಿಣ ನೀತಿಯಿಂದಾಗಿ ಚಿನ್ನದ ಇಟಿಎಫ್‌ಗಳು ಶೇ. 2.5 ರಷ್ಟು ಮತ್ತು ಬೆಳ್ಳಿ ಇಟಿಎಫ್‌ಗಳು ಶೇ. 5 ಕ್ಕೂ ಹೆಚ್ಚು ಕುಸಿದಿವೆ.

Read Full Story

11:10 AM (IST) Jun 19

ಚಿನ್ನ ಖರೀದಿಸುವವರಿಗೆ ಶುಭ ಶುಕ್ರವಾರ; ಅಮೆರಿಕ-ಇರಾನ್ ಡೀಲ್ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ಬರೋಬ್ಬರಿ 3650 ರುಪಾಯಿ ಕುಸಿತ!

ಕಳೆದ ಕೆಲವು ದಿನಗಳಿಂದ ಆಕಾಶದತ್ತ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ ಕಂಡಿದೆ. ಅಮೆರಿಕ-ಇರಾನ್ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮಹಾಪತನ ಕಂಡಿದೆ. ಜೂನ್ 19ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಎಷ್ಟು ಕುಸಿತ ಕಂಡಿದೆ ನೋಡೋಣ.

 

Read Full Story

09:46 AM (IST) Jun 19

ಠಾಕ್ರೆ ಪಕ್ಷ ಮತ್ತೊಮ್ಮೆ ಚಿಂದಿ ಚಿತ್ರಾನ್ನ, ದೀದಿ ಬಳಿಕ ಉದ್ಧವ್‌ಗೆ ಶಾಕ್‌

ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಆರು ಸಂಸದರು ಪಕ್ಷದ ಸಭೆಗೆ ಗೈರಾಗುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಸಂಸದರು ಏಕನಾಥ್ ಶಿಂಧೆ ಬಣವನ್ನು ಸೇರುವ ಸಾಧ್ಯತೆಯಿದ್ದು, ಇದು ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ ಮತ್ತು ಸೇನೆಯಲ್ಲಿ ಮತ್ತೊಂದು ಹೋಳಾಗುವಿಕೆಯ ಸ್ಪಷ್ಟ ಸೂಚನೆ ನೀಡಿದೆ.
Read Full Story

09:36 AM (IST) Jun 19

ಹೋರ್ಮುಜ್‌ನಲ್ಲಿ ಕೊನೆಗೂ ಹಡಗು ಓಡಾಟ ಶುರು, ಕರ್ನಾಟಕದ ರಸ್ತೆಗಳಿಗೆ ಡಾಂಬರು ಕೊರತೆ ನಿವಾರಣೆ ನಿರೀಕ್ಷೆ

ಅಮೆರಿಕ-ಇರಾನ್ ಶಾಂತಿ ಒಪ್ಪಂದದ ನಂತರ ಹೋರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಪುನರಾರಂಭವಾಗಿದೆ. ಇದು ಕರ್ನಾಟಕದಲ್ಲಿ ಡಾಂಬರು, ರಸಗೊಬ್ಬರ ಲಭ್ಯತೆಗೆ ಆಶಾಕಿರಣ ಮೂಡಿಸಿದ್ದು, ಷೇರುಪೇಟೆ ಮತ್ತು ರುಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡಿದೆ.

Read Full Story

09:23 AM (IST) Jun 19

FIFA World Cup 2026 - ಕ್ರೊವೇಷಿಯಾ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಇಂಗ್ಲೆಂಡ್‌

ಇಂಗ್ಲೆಂಡ್ ತಂಡವು ಕ್ರೊವೇಷಿಯಾ ವಿರುದ್ಧ 4-2 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಹ್ಯಾರಿ ಕೇನ್ ಅವರ ಎರಡು ಗೋಲುಗಳು ಹಾಗೂ ಬೆಲ್ಲಿಂಗ್‌ಹ್ಯಾಮ್ ಮತ್ತು ರ್‍ಯಾಶ್‌ಫೋರ್ಡ್‌ ಅವರ ತಲಾ ಒಂದು ಗೋಲಿನ ನೆರವಿನಿಂದ, 2018ರ ವಿಶ್ವಕಪ್ ಸೋಲಿಗೆ ಇಂಗ್ಲೆಂಡ್ ಸೇಡು ತೀರಿಸಿಕೊಂಡಿತು.
Read Full Story

08:44 AM (IST) Jun 19

FIFA World Cup 2026 - ಗೋಲು ಹೊಡೆಯದ ರೊನಾಲ್ಡೋ, ಡ್ರಾಗೆ ತೃಪ್ತಿಪಟ್ಟ ಪೋರ್ಚುಗಲ್‌!

ತಮ್ಮ 6ನೇ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಗೋಲು ಗಳಿಸಲು ವಿಫಲರಾದರು, ಇದರಿಂದಾಗಿ ಪೋರ್ಚುಗಲ್‌ ತಂಡ ಕಾಂಗೋ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿತು. ದ್ವಿತೀಯಾರ್ಧದಲ್ಲಿ ಗೋಲು ಗಳಿಸುವ ಅವಕಾಶಗಳನ್ನು ರೊನಾಲ್ಡೋ ಕಳೆದುಕೊಂಡರು.
Read Full Story

08:23 AM (IST) Jun 19

‘ವಾಡಿಕೆ ಮಳೆಯ ಆಸೆನೇ ಬಿಟ್ಟುಬಿಡಿ!’ - ದೇಶಾದ್ಯಂತ ಶೇ. 42 ರಷ್ಟು ಮುಂಗಾರು ಕೊರತೆ, ಹವಾಮಾನ ಇಲಾಖೆಯಿಂದ ಶಾಕಿಂಗ್ ನ್ಯೂಸ್!

ದೇಶಕ್ಕೆ ಮುಂಗಾರು ಪ್ರವೇಶಿಸಿ ಎರಡು ವಾರ ಕಳೆದರೂ, ಶೇ.42ರಷ್ಟು ಮಳೆ ಕೊರತೆ ಉಂಟಾಗಿದೆ. ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಒತ್ತಡ ಸೃಷ್ಟಿಯಾಗದಿರುವುದು ಹಾಗೂ ಎಲ್ ನಿನೋ ಪ್ರಭಾವದಿಂದಾಗಿ ಮಳೆ ಚೇತರಿಕೆ ಕಷ್ಟ ಎಂದು ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ.
Read Full Story

07:50 AM (IST) Jun 19

ಶಾಂತಿ ಒಪ್ಪಂದಕ್ಕೆ ಅಮೆರಿಕ-ಇರಾನ್‌ ಸಹಿ, ಮೂರುವರೆ ತಿಂಗಳ ಕದನ ಅಧಿಕೃತ ಅಂತ್ಯ

ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ಸಮರಕ್ಕೆ ಅಧಿಕೃತವಾಗಿ ಅಂತ್ಯ ಹಾಡಲಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ರಾಷ್ಟ್ರಗಳ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಯುದ್ಧ ನಿಲುಗಡೆ, ಅಣ್ವಸ್ತ್ರ ಮಾತುಕತೆ ಪುನರಾರಂಭ ಮತ್ತು ನಿರ್ಬಂಧಗಳ ಸಡಿಲಿಕೆ ಇದರ ಪ್ರಮುಖ ಅಂಶಗಳಾಗಿವೆ.

Read Full Story

More Trending News