ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಬುಧವಾರ ಲೋಕಸಭೆಯೊಳಗೆ ದೈಹಿಕವಾಗಿ ಹಲ್ಲೆ ನಡೆಸಲು ಕಾಂಗ್ರೆಸ್ ಸದಸ್ಯರು ಯೋಜಿಸಿದ್ದರು. ಜೊತೆಗೆ ಈ ಕೃತ್ಯ ಮುಚ್ಚಿಡುವ ಸಲುವಾಗಿಯೇ ಮಹಿಳಾ ಸಂಸದೆಯರನ್ನು ಮೋದಿ ಕೂರುವ ಸ್ಥಳದ ಸುತ್ತಲೂ ಸುತ್ತುವರೆದು ನಿಲ್ಲಿಸುವ ಯೋಜನೆ ರೂಪಿಸಲಾಗಿತ್ತು ಎಂದು ಗಂಭೀರ ಆರೋಪವೊಂದು ಕೇಳಿಬಂದಿದೆ. ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ಇಂಥದ್ದೊಂದು ಸುದ್ದಿ ಪ್ರಕಟಿಸಿದೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಬುಧವಾರ ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾ ಬೇಕಿತ್ತು. ಆದರೆ ಇದಕ್ಕೂ ಮುನ್ನ ವಿಪಕ್ಷದ ಮಹಿಳಾ ಸದಸ್ಯರು ಪ್ರಧಾನಿ ಕೂರುವ ಸ್ಥಳದತ್ತ ಧಾವಿಸಿ ಇಡೀ ಪ್ರದೇಶವನ್ನು ಸುತ್ತುವರೆದು, ಬಿಜೆಪಿಯ ಪುರುಷ ಸದಸ್ಯರ ಜೊತೆ ವಾಕ್ಸಮರಕ್ಕೆ ಇಳಿದಿದ್ದರು.
ಈ ಘಟನೆಯನ್ನು ಪುಷ್ಟಿಕರಿಸುವಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬುಧವಾರ ಲೋಕಸಭೆಯಲ್ಲಿ ವಿಪಕ್ಷದ ಮಹಿಳಾ ಸದಸ್ಯರು ಪ್ರಧಾನಿ ಕೂರುವ ಸ್ಥಳವನ್ನು ಸುತ್ತುವರೆದರು ಆ ಬಳಿಕ ಅನಿವಾರ್ಯವಾಗಿ ಮೋದಿ ಭಾಷಣ ರದ್ದುಪಡಿಸಿ ಕಲಾಪವನ್ನೇ ಮುಂದೂಡಿದ ಘಟನೆ ಬಗ್ಗೆ ಸ್ಪೀಕರ್ ಈ ಬಿರ್ಲಾ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.
06:12 AM (IST) Feb 07
11:57 PM (IST) Feb 06
ಪಕ್ಷಿಗೂ ಗೊತ್ತಾಗಿದೆ ಚಿನ್ನ ದುಬಾರಿ, ಜ್ಯೂವೆಲ್ಲರಿ ಶಾಪ್‌ನಿಂದ ₹1 ಲಕ್ಷ ಮೌಲ್ಯದ ಸರ ಎಗರಿಸಿದ ಪಾರಿವಾಳ, ಪಾರಿವಾಳದ ದೃಶ್ಯಗಳು ಸೆರೆಯಾಗಿದೆ. ಇದು ಅಚ್ಚರಿಯಾದರೂ ಸತ್ಯ, ಕೊನೆಗೆ ಏನಾಯ್ತು
11:11 PM (IST) Feb 06
ಸಿಜೆ ರಾಯ್ ಬೆನಲ್ಲೇ ಮತ್ತೊಬ್ಬ ಉದ್ಯಮಿ ದುರಂತ ಸಾವು, ಜನಪ್ರಿಯ ಮುಲ್ತಾನಿ ಬೇಕರಿ ಮಾಲೀಕ, ಶ್ರೀಮಂತ ಉದ್ಯಮಿ ಸುನಿಲ್ ಮೋತಿಲಾಲ್ ಬದುಕು ಅಂತ್ಯಗೊಳಿಸಿದ್ದಾರೆ. ಕೆಲವೇ ದಿನಗಳ ಅಂತರದಲ್ಲಿ ಉದ್ಯಮ ಜಗತ್ತು ಬೆಚ್ಚಿ ಬಿದ್ದಿದೆ.
09:18 PM (IST) Feb 06
ಭಾರತಕ್ಕೆ 6ನೇ ಅ19 ವಿಶ್ವಕಪ್ ಟ್ರೋಫಿ, 1988ರಿಂದ 2026ರ ವರೆಗೆ ಕಪ್ ಗೆದ್ದ ತಂಡಗಳ ಫುಲ್ ಲಿಸ್ಟ್ ಇಲ್ಲಿದೆ. ಗರಿಷ್ಠ ಟ್ರೋಫಿ ಗೆದ್ದ ತಂಡ ಯಾವುದು? ಯಾರೆಲ್ಲಾ ಟ್ರೋಫಿ ಗೆದ್ದಿದ್ದಾರೆ?
08:46 PM (IST) Feb 06
ತಿರುಪತಿ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಬಾತ್‌ರೂಮ್ ಕ್ಲೀನಿಂಗ್ ರಾಸಾಯನಿಕ ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಹಿಂದಿನ ಜಗನ್ ಸರ್ಕಾರದ ಅವಧಿಯಲ್ಲಿ ಈ ಕಲಬೆರಕೆ ನಡೆದಿದ್ದು, ಇದು ದೇವರ ವಿರುದ್ಧದ ಮಹಾಪಾಪ ಎಂದು ಹೇಳಿದ್ದಾರೆ.
08:36 PM (IST) Feb 06
ಒಂದೇ ಪಂದ್ಯದಲ್ಲಿ 5 ವಿಶ್ವದಾಖಲೆ, ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ ಯುವ ಆಟಗಾರ ವೈಭವ್ ಸೂರ್ಯವಂಶಿ, ಅಂಡರ್ 19 ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 175 ರನ್ ಹಲವು ದಾಖಲೆಗಳನ್ನು ಪುಡಿ ಮಾಡಿದೆ. ದಾಖಲೆ ಆಟದಿಂದ ಭಾರತ ಟ್ರೋಫಿ ಗೆದ್ದುಕೊಂಡಿದೆ.
08:29 PM (IST) Feb 06
ತಮ್ಮ 'ಮೆಲ್ಲಿಸೈ' ಚಿತ್ರದ ಪ್ರಚಾರದ ವೇಳೆ ಮಾತನಾಡಿದ ನಟ ಕಿಶೋರ್, ಜೀವನದಲ್ಲಿ ರಿವರ್ಸ್ ಹೋಗುವ ಅವಕಾಶ ಸಿಕ್ಕರೆ 2014ಕ್ಕೆ ಹೋಗುತ್ತಿದ್ದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏನು ಹೇಳಿದ್ರು ಕೇಳಿ.
08:27 PM (IST) Feb 06
15ರ ಪೋರನ ವೈಭವದ ಆಟಕ್ಕ ಒಲಿದ ಕಿರೀಟ, ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂತಿ ದಾಖಲೆಯ ಆಟಕ್ಕೆ ಹಲವು ದಾಖಲೆ ಜೊತೆಗೆ ವಿಶ್ವಕಪ್ ಟ್ರೋಫಿ ಒಲಿದು ಬಂದಿದೆ. ಭಾರತ 6ನೇ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿದೆ.
07:39 PM (IST) Feb 06
ಹಳೇ ಸಿಮ್ ಕಾರ್ಡ್ ಬಿಸಾಡಿದ್ದೀರಾ? ನಿಷ್ಕ್ರೀಯಗೊಂಡ ಸಿಮ್ ಕಾರ್ಡ್‌ಗಳಿಂದ ಗುಜುರಿ ವ್ಯಾಪಾರಿ ಬರೋಬ್ಬರಿ 27 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹೊರತೆಗಿದಿದ್ದಾರೆ. ಇದೀಗ ಎಲ್ಲರೂ ಸಿಮ್ ಕಾರ್ಡ್ ಬ್ಯೂಸಿನೆಸ್‌ಗೆ ಇಳಿದಿದ್ದಾರೆ.
07:18 PM (IST) Feb 06
ಭಾರತದ ರಾಷ್ಟ್ರಪತಿಗಳಿಗೆ ರಕ್ಷಣೆ ನೀಡುವ ರಾಷ್ಟ್ರಪತಿಗಳ ಅಂಗರಕ್ಷಕರ (President's Bodyguard)ಪಡೆಗೆ ಆಯ್ಕೆಯಾಗುವುದಕ್ಕೆ ಕೇವಲ 3 ಜಾತಿಗಳಿಗೆ ಮಾತ್ರ ಅವಕಾಶವಿದೆ ಎಂಬ ವಿಚಾರ ನಿಮಗೆ ಗೊತ್ತಾ ಹಾಗೂ ಅದು ಯಾಕೆ? ಈ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ…
06:46 PM (IST) Feb 06
ಪಾನಿಪೂರಿಗೆ 6000 ರೂ, ಲಂಡನ್‌ನಲ್ಲಿ ಭಾರತದ ಪಾನಿಪೂರಿ ಬೆಲೆ ಇದು. ಭಾರತೀಯ ದಂಪತಿ ಲಂಡನ್‌ನಲ್ಲಿ ಇದೀಗ ಪಾನಿಪೂರಿ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ. ಇದೀಗ ಈ ಟೆಕ್ಕಿ ದಂಪತಿಗಳ ರೆಸ್ಟೋರೆಂಟ್ ಭಾರಿ ಜನಪ್ರಿಯವಾಗಿದೆ.
05:57 PM (IST) Feb 06
05:54 PM (IST) Feb 06
10 ನಿಮಿಷದಲ್ಲಿ ಮನೆಗೆ ಬರುತ್ತೇನೆ, ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಲಿಯಾದ ಅವಳಿ ಸಹೋದರನ ಕೊನೆಯ ಕರೆ, ಅಷ್ಟಕ್ಕೂ ಈ ದುರಂತ ನಡೆದಿದ್ದು ಹೇಗೆ, ಇತ್ತೀಚೆಗೆ ಟೆಕ್ಕಿ ದುರಂತ ಸಾವಿನ ಬಳಿಕ ಮತ್ತೊಂದು ಘಟನೆ ನಡೆದಿದೆ.
05:48 PM (IST) Feb 06
19 ವರ್ಷದೊಳಗಿನವರ ವಿಶ್ವಕಪ್ ಫೈನಲ್‌ನಲ್ಲಿ ಒಂದೇ ಒಂದು ಇನ್ನಿಂಗ್ಸ್‌ನಿಂದ ವೈಭವ್ ಸೂರ್ಯವಂಶಿ, ಟೂರ್ನಿಯ ಟಾಪ್ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಇಂಗ್ಲೆಂಡ್ ವಿರುದ್ಧ 175 ರನ್ ಗಳಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.
05:33 PM (IST) Feb 06
04:26 PM (IST) Feb 06
ರಷ್ಯಾದಿಂದ ಭಾರತದ ಕಚ್ಚಾ ತೈಲ ಆಮದು ಪ್ರಮಾಣವು 38 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಡಿಸೆಂಬರ್ 2025ರ ವರದಿಗಳ ಪ್ರಕಾರ, ರಷ್ಯಾದ ತೈಲದ ಪಾಲು ಗಣನೀಯವಾಗಿ ಕಡಿಮೆಯಾಗಿದ್ದು, ಅಮೆರಿಕದಿಂದ ಆಮದು ಹೆಚ್ಚಾಗಿದೆ. ಇದು ಭಾರತ ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುತ್ತಿರುವ ಸ್ಪಷ್ಟ ಸೂಚನೆಯಾಗಿದೆ.
04:22 PM (IST) Feb 06
ಪಾಕಿಸ್ತಾನದ ಇಸ್ಲಾಮಾಬಾದ್‌ನ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಇದೊಂದು ಭಯೋತ್ಪಾದಕ ದಾಳಿ ಎಂದು ಪೊಲೀಸರು ಶಂಕಿಸಿದ್ದಾರೆ.
04:15 PM (IST) Feb 06
ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಆದರೆ, ಇದು ಬಾಂಗ್ಲಾದೇಶದ ಚುನಾವಣೆಗೆ ಸಂಬಂಧಿಸಿದ ರಾಜಕೀಯ ತಂತ್ರವಾಗಿದ್ದು, ಪಾಕಿಸ್ತಾನ ಶೀಘ್ರದಲ್ಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿದೆ ಎಂದು ಚೇತನ್ ಶರ್ಮಾ ಭವಿಷ್ಯ ನುಡಿದಿದ್ದಾರೆ.
03:29 PM (IST) Feb 06
ನೆರೆ ರಾಜ್ಯದಲ್ಲಿ ಕಾಗೆಗಳ ಸರಣಿ ಸಾವಿನ ಆಘಾತಕಾರಿ ಸತ್ಯ ಪರೀಕ್ಷೆಯಲ್ಲಿ ಬಯಲು, ನಗರದ ಹಲೆವೆಡೆ ಕಾಗೆಗಳು ಸತ್ತು ಬಿದ್ದಿದೆ. ಇದು ಆಪತ್ತಿನ ಸೂಚನೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದರೆ, ಪರೀಕ್ಷೆಯಲ್ಲಿ ಆಘಾತಕಾರಿ ಆಂಶ ಬಯಲಾಗಿದೆ.
02:50 PM (IST) Feb 06
ಕಾರಿನಲ್ಲಿ ಕುಳಿತಿದ್ದ ಒಬೆರಾಯ್ ಮೇಲೆ ಗುಂಡಿನ ದಾಳಿ, ಮುಸುಕುದಾರಿ ಅಪರಿಚಿತ ವ್ಯಕ್ತಿಯಿಂದ ದಾಳಿ ನಡೆದಿದೆ. ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.
02:49 PM (IST) Feb 06
ಹರಾರೆ: 2026ರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಭಾರತ ಭರ್ಜರಿ ಆರಂಭ ಪಡೆದಿದೆ. ಇದರ ಜತೆಗೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಚೊಚ್ಚಲ ಅಂಡರ್-19 ವಿಶ್ವಕಪ್ ಶತಕ ಸಿಡಿಸುವ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ.
02:26 PM (IST) Feb 06
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಹನುಮಾನ್ ದೇಗುಲದ ಪ್ರತಿಮೆಗೆ ನಿರಂತರ ಪ್ರದಕ್ಷಿಣೆ ಹಾಕುತ್ತಿದ್ದ ಶ್ವಾನ ನಿರ್ಜಲೀಕರಣದಿಂದ ಅಸ್ವಸ್ಥಗೊಂಡಿದ್ದು, ಆ ಶ್ವಾನವನ್ನು ಪ್ರಾಣಿಪ್ರಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ವಾನವು ಈಗ ಚೇತರಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
01:45 PM (IST) Feb 06
ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ, ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಚಾಂಪಿಯನ್ ಆಗಿದೆ. ಈ ಗೆಲುವಿನಲ್ಲಿ 87 ರನ್ ಸಿಡಿಸಿ ಪ್ರಮುಖ ಪಾತ್ರವಹಿಸಿದ ಮಂಧನಾ, ತೀವ್ರ ಜ್ವರದ ನಡುವೆಯೂ ಫೈನಲ್ ಪಂದ್ಯವನ್ನಾಡಿದ್ದರು ಎಂಬ ಸತ್ಯ ಬಹಿರಂಗವಾಗಿದೆ.
01:43 PM (IST) Feb 06
ಬ್ರಿಟನ್‌ನಲ್ಲಿ 13 ವರ್ಷದ ಆಲ್ಫಿ ಪ್ಯಾಟನ್ ತಂದೆಯಾಗಿದ್ದಾನೆ ಎಂಬ ಸುದ್ದಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಆದರೆ, ಡಿಎನ್‌ಎ ಪರೀಕ್ಷೆಯ ನಂತರ ಜೈವಿಕ ತಂದೆಯಲ್ಲ ಎಂಬ ಸತ್ಯ ಬಹಿರಂಗವಾಯಿತು. ಈ ಪ್ರಕರಣವು ಬ್ರಿಟನ್‌ನಲ್ಲಿ ಲೈಂಗಿಕ ಶಿಕ್ಷಣದ ಅಗತ್ಯತೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿತು.
01:24 PM (IST) Feb 06
ದಕ್ಷಿಣ ಆಫ್ರಿಕಾದಲ್ಲಿ, ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ಘೋಷಿಸಲಾದ ವ್ಯಕ್ತಿಯೊಬ್ಬ, ಶವಾಗಾರದ ಫ್ರೀಜರ್‌ನಲ್ಲಿ 48 ಗಂಟೆಗಳ ನಂತರ ಎಚ್ಚರಗೊಂಡಿದ್ದಾನೆ. ಈ ಘಟನೆಯ ನಂತರ ಆತ ಚೇತರಿಸಿಕೊಂಡರೂ, ಆತನಿಗೆ ಮತ್ತೊಂದು ಆಘಾತ ಕಾದಿತ್ತು. ಏನದು?
12:45 PM (IST) Feb 06
12:34 PM (IST) Feb 06
ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರೊಬ್ಬರ 2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಂಕ್ ಲಾಕರ್ ನಿಗೂಢವಾಗಿ ಕಣ್ಮರೆಯಾಗಿದೆ. ಲಾಕರ್‌ಗೆ ಬಾಡಿಗೆ ಕಡಿತವಾಗುತ್ತಿದ್ದರೂ, ಬ್ಯಾಂಕ್ ಅದನ್ನು ಬೇರೆಯವರಿಗೆ ಹಂಚಿಕೆ ಮಾಡಿರುವುದಾಗಿ ಹೇಳಿದ್ದು, ಇದು ಬ್ಯಾಂಕ್ ಸಿಬ್ಬಂದಿಯ ಕೈವಾಡದ ಶಂಕೆಗೆ ಕಾರಣವಾಗಿದೆ.
12:06 PM (IST) Feb 06
ಮಕ್ಕಳಿಲ್ಲದೆ ಕೊರಗುತ್ತಿರುವ ದಂಪತಿ ದೇವರ ಮೊರೆ ಹೋಗುವುದು ಸಾಮಾನ್ಯ. ನಟ ಶೈನ್ ಶೆಟ್ಟಿ ಅವರು ಸಂತಾನ ಭಾಗ್ಯ ಕರುಣಿಸುವ ನಾಗ ದೇವಸ್ಥಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
11:52 AM (IST) Feb 06
Dhruv Jaishankar on US-India relations: ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದಲ್ಲಿನ ಹಠಾತ್ ಪ್ರಗತಿಗೆ ಕಾರಣಗಳನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಪುತ್ರ ಧ್ರುವ್ ಜೈಶಂಕರ್ ವಿವರಿಸಿದ್ದು ಡಿಟೇಲ್ ಸ್ಟೋರಿ ಇಲ್ಲಿದೆ.
10:16 AM (IST) Feb 06
ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವವರ ಪಾಲಿಗೆ ಇಂದು ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ ಸಿಕ್ಕಿದೆ. ಕೊಂಚ ಏರಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗುರುವಾರದಿಂದ ಇಳಿಕೆ ಕಾಣಲಾರಂಭಿಸಿದ್ದು, ಇಂದು ಕೂಡಾ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಈ ಅಪ್‌ಡೇಟ್ಸ್ ಇಲ್ಲಿದೆ.
10:06 AM (IST) Feb 06
09:41 AM (IST) Feb 06
09:20 AM (IST) Feb 06
ಬೆಂಗಳೂರು: ಡಿಸೆಂಬರ್ 30ರಿಂದ ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕಳೆದೆರಡು ದಿನ ಮತ್ತೆ ಏರುಗತಿ ಕಂಡಿತ್ತು. ಇದೀಗ ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಫೆಬ್ರವರಿ 05ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿತ್ತು?
08:54 AM (IST) Feb 06
ವಿವಾಹಿತ ಮಹಿಳೆಯೊಬ್ಬಳು ಇನ್ನೊಬ್ಬ ಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ಆತ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ್ದರೂ ಅತ್ಯಾ*ಚಾರ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
08:23 AM (IST) Feb 06
ವಡೋದರಾ: 2026ನೇ ಸಾಲಿನ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಸ್ಮೃತಿ ಮಂಧನಾ ಆರ್‌ಸಿಬಿ ಅಭಿಮಾನಿಗಳು ಹೃದಯ ಗೆಲ್ಲುವಂತ ಮಾತುಗಳನ್ನಾಡಿದ್ದಾರೆ.