ಕಾರಿನಲ್ಲಿ ಕುಳಿತಿದ್ದ ಒಬೆರಾಯ್ ಮೇಲೆ ಗುಂಡಿನ ದಾಳಿ, ಮುಸುಕುದಾರಿ ಅಪರಿಚಿತ ವ್ಯಕ್ತಿಯಿಂದ ದಾಳಿ ನಡೆದಿದೆ. ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. 

ಲುಧಿಯಾನ (ಫೆ.06) ಅಪರಿಚಿತ ಮುಸುಕುಧಾರಿ ವ್ಯಕ್ತಿ ದಾಳಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಗುರುದ್ವಾರದ ಹೊರಭಾಗದಲ್ಲಿ ಮಹೀಂದ್ರ ಥಾರ್‌ನಲ್ಲಿ ಕುಳಿತಿದ್ದ ಆಪ್ ನಾಯಕ ಲಕ್ಕಿ ಒಬೆರಾಯ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆದಿದೆ. ಹಲವು ಸುತ್ತಿನ ಗುಂಡು ಹಾರಿಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾದರೆ, ಇತ್ತ ಗಂಭೀರವಾಗಿ ಗಾಯಗೊಂಡ ಲಕ್ಕ ಒಬೆರಾಯ್ ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಬದುಕುಳಿಯಲಿಲ್ಲ. ಈ ಘಟನೆ ಪಂಜಾಬ್‌ನ ಜಲಂಧರ್ ಸಿಟಿ ಮಾಡೆಲ್ ಟೌನ್ ಏರಿಯಾದಲ್ಲಿ ನಡೆದಿದೆ.

ಒಬೆರಾಯ್ ಮೇಲೆ ಗುಂಡಿನ ಸುರಿಮಳೆ

ಗುರುದ್ವಾರಕ್ಕೆ ತೆರಳಿದ್ದ ಆಪ್ ನಾಯಕ ಲಕ್ಕಿ ಒಬೆರಾಯ್ ಪೂಜೆ ಸಲ್ಲಿಸಿ ಮರಳಿದ್ದರು. ಬಳಿಕ ತಮ್ಮ ಮಹೀಂದ್ರ ಥಾರ್ ಕಾರು ಹತ್ತಿ ಕುಳಿತಿದ್ದರು. ಇತ್ತ ಲಕ್ಕಿ ಒಬೆರಾಯ್ ಮುಗಿಸಲು ಕಾದು ಕುಳಿತಿದ್ದ ಇಬ್ಬರು ಸ್ಕೂಟರ್ ಮೂಲಕ ಆಗಮಿಸಿ ಪ್ಲಾನ್ ಕಾರ್ಯಗತಗೊಳಿಸಿದ್ದಾರೆ. ಕೆಲ ದೂರದಲ್ಲಿ ಸ್ಕೂಟರ್ ನಿಲ್ಲಿಸಲಾಗಿದೆ. ಬಳಿಕ ಒರ್ವ ಮುಸುಕುದಾರಿ ಸ್ಕೂಟರ್‌ನಿಂದ ಇಳಿದು ಜನಸಾಮಾನ್ಯರಂತೆ ನಡೆದುಕೊಂಡು ತೆರಳಿದ್ದಾನೆ. ಲಕ್ಕಿ ಒಬೆರಾಯ್ ಕುಳಿತಿದ್ದ ಮಹೀಂದ್ರ ಥಾರ್ ಕಾರಿನ ಹತ್ತಿರ ಬರುತ್ತಿದ್ದಂತೆ ಏಕಾಏಕಿ ಗುಂಡಿನ ಸುರಿಮಳೆ ಗೈದಿದ್ದಾನೆ.

ಗುರುದ್ವಾರದ ಭಕ್ತರಲ್ಲಿ ಆತಂಕ

ಬೆಳಗ್ಗೆ 7.55ಕ್ಕೆ ಈ ದಾಳಿ ನಡೆದಿದೆ. ಹಲವು ಸುತ್ತು ಹಾರಿಸಿದ ಗುಂಡಿನಲ್ಲಿ ಬಹುತೇಕ ಗುಂಡುಗಳು ಲಕ್ಕಿ ಒಬೆರಾಯ್ ದೇಹ ಹೊಕ್ಕಿದೆ. ಗುಂಡಿನ ಶಬ್ದ ಕೇಳಿ ಹಲವರು ಗುರುದ್ವಾರದಿಂದ ಹೊರೆ ಓಡಿ ಬಂದಿದ್ದಾರೆ. ತೀವ್ರವಾಗಿ ಗಾಯಗೊಂಡು ಬಿದ್ದಿದ್ದ ಲಕ್ಕಿ ಒಬೆರಾಯ್‌ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಹಲವು ಗುಂಡುಗಳ ದೇಹ ಹೊಕ್ಕಿದ್ದ ಕಾರಣ ಲಕ್ಕಿ ಒಬೆರಾಯ್ ಮೃತಪಟ್ಟಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ 5 ರಿಂದ 8 ಬುಲೆಟ್ ಲಕ್ಕಿ ಒಬೆರಾಯ್ ದೇಹ ಹೊಕ್ಕಿದೆ. ಇತ್ತ ಗುರುದ್ವಾರಕ್ಕೆ ಆಗಮಿಸಿದ ಭಕ್ತರು ಆತಂಕಗೊಂಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಂಜಾಬ್ ಪೊಲೀಸರ ದೌಡಾಯಿಸಿದ್ದಾರೆ. ಫೊರೆನ್ಸಿಕ್ ತಂಡ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪ್ರಕರಣದ ತನಿಖೆ ಆರಂಭಗೊಂಡಿದೆ. ಮಾಡೆಲ್ ಟೌನ್ ಏರಿಯಾ ವಲಯನ್ನು ಪೊಲೀಸರು ಸುತ್ತುವರಿದಿದ್ದಾರೆ. ತಪಾಸಣೆಗಳು ನಡೆಯುತ್ತಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಯುತ್ತಿದೆ. ರಾಜಕೀಯ, ವೈಯುಕ್ತಿ ಅಥವಾ ಉದ್ಯಮ ಸಂಬಂಧಿತ ಆಯಾಮಗಳಲ್ಲೂ ತನಿಖೆ ಆರಂಭಗೊಂಡಿದೆ. ಯಾವುದೇ ಗುಂಪು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಪಂಜಾಬ್‌ನ ಪ್ರಮುಖ ಆಪ್ ನಾಯಕ

ಜಲಂಧರ್ ಸಿಟಿ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ರಾಜ್ವಿಂದರ್ ಥಿಯಾರ ಆಪ್ತನಾಗಿ ಲಕ್ಕಿ ಒಬೆರಾಯ್‌ ಗುರುತಿಸಿಕೊಂಡಿದ್ದರು. ಪಂಜಾಬ್‌ನ ಪ್ರಮುಖ ಆಪ್ ನಾಯಕನಾಗಿದ್ದ ಲಕ್ಕಿ ಒಬೆರಾಯ್ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು. ಲಕ್ಕಿ ಒಬೆರಾಯ್ ಪತ್ನಿ ಸಿಮ್ರೌತ್ ಕೌರಿ, 2025ರ ಕಾರ್ಪೋರೇಶನ್ ಚುನಾವಣೆಗೆ ಸ್ಪರ್ಧಿಸಿದ್ದರು.

ಪಂಜಾಬ್‌ನಲ್ಲಿ ಮತ್ತೆ ಕಾನೂನು ಸುವ್ಯವಸ್ಥೆ ಸವಾಲು

ಪಂಜಾಬ್‌ನಲ್ಲಿ ನಾಯಕರು, ಉದ್ಯಮಿಗಳು, ಸೆಲೆಬ್ರೆಟಿಗಳ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಇದೇ ರೀತಿಯ ದಾಳಿಯಲ್ಲಿ ಪ್ರಮುಖರು ಮೃತಪಟ್ಟಿದ್ದಾರೆ. 2022ರಲ್ಲಿ ಕಾಂಗ್ರೆಸ್ ನಾಯಕ, ರ್ಯಾಪ್ ಸಿಂಗ್ ಸಿಧು ಮೂಸೆ ವಾಲಾ ಮೇಲೆ ಗುಂಡಿನ ದಾಳಿ ನಡೆದಿತ್ತು. ಕಾರು ಅಡ್ಡಗಟ್ಟಿ ಈ ದಾಳಿ ನಡೆದಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಪ್ರಮುಖ ಆರೋಪಿಯಾಗಿದ್ದಾರೆ.

Scroll to load tweet…