Published : Mar 07, 2026, 06:47 AM ISTUpdated : Mar 07, 2026, 11:36 PM IST

India Latest News Live: ರಾಮ್ ಚರಣ್‌ಗಾಗಿ ಬರೆದ ಕಥೆಯಲ್ಲಿ ಅಲ್ಲು ಅರ್ಜುನ್ ಸೂಪರ್‌ಹಿಟ್ ಕೊಟ್ಟ ಸಿನಿಮಾ ಯಾವುದು ಗೊತ್ತಾ?

ಸಾರಾಂಶ

ನವದೆಹಲಿ: ನಟ ಅಮಿತಾಬ್‌ ಬಚ್ಚನ್‌, ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಬರೋಬ್ಬರಿ 35 ಕೋಟಿ ರು. ಹಣ ನೀಡಿ 2.67 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಖಾಸಗಿ ರಿಯಾಲ್ಟಿ ಸಂಸ್ಥೆ ಹೌಸ್‌ ಆಫ್‌ ಅಭಿನಂದನ್‌ ಲೋಧಾ (ಎಚ್‌ಒಎಬಿಎಲ್‌) ಕಂಪನಿಯಿಂದ ಅಮಿತಾಬ್‌ ಬಚ್ಚನ್‌ ಜಾಗ ಖರೀದಿ ಮಾಡಿದ್ದಾರೆ. ಇದಕ್ಕೂ ಮುನ್ನ 2024ರ ಜನವರಿಯಲ್ಲಿ ಬಚ್ಚನ್‌ ಇದೇ ಕಂಪನಿಯ ದಿ ಸರಯೂ ಪ್ರಾಜೆಕ್ಟ್‌ನಲ್ಲಿ ಅಯೋಧ್ಯೆಯಲ್ಲಿ 14.5 ಕೋಟಿ ರು. ಮೌಲ್ಯದಲ್ಲಿ 10,000 ಚ.ಅಡಿ ಜಾಗ ಖರೀದಿ ಮಾಡಿದ್ದರು.

Ram Charan

11:36 PM (IST) Mar 07

ರಾಮ್ ಚರಣ್‌ಗಾಗಿ ಬರೆದ ಕಥೆಯಲ್ಲಿ ಅಲ್ಲು ಅರ್ಜುನ್ ಸೂಪರ್‌ಹಿಟ್ ಕೊಟ್ಟ ಸಿನಿಮಾ ಯಾವುದು ಗೊತ್ತಾ?

ಫಿಲ್ಮ್ ಇಂಡಸ್ಟ್ರಿಯಲ್ಲಿ ಒಬ್ಬರಿಗಾಗಿ ಬರೆದ ಕಥೆಯಲ್ಲಿ ಇನ್ನೊಬ್ಬ ಹೀರೋ ಸಿನಿಮಾ ಮಾಡೋದು ಕಾಮನ್. ಮೆಗಾ ಹೀರೋಗಳ ವಿಚಾರದಲ್ಲೂ ಹೀಗೆಯೇ ಆಗಿದೆ. ನಿರ್ದೇಶಕರೊಬ್ಬರು ಮೆಗಾ ಪವರ್ ಸ್ಟಾರ್ ರಾಮ್ ಚರಣ್‌ಗಾಗಿ ಒಂದು ಕಥೆ ಬರೆದಿದ್ದರು.

Read Full Story

10:39 PM (IST) Mar 07

ಡ್ರೋನ್ ದಾಳಿಗೆ ದುಬೈ ವಿಮಾನ ನಿಲ್ದಾಣ ಭಾಗಶಃ ಬಂದ್, ಯುಎಇನಲ್ಲಿ ಮತ್ತೆ ಹೈ ಅಲರ್ಟ್ ಘೋಷಣೆ

ಡ್ರೋನ್ ದಾಳಿಗೆ ದುಬೈ ವಿಮಾನ ನಿಲ್ದಾಣ ಭಾಗಶಃ ಬಂದ್, ಯುಎಇನಲ್ಲಿ ಮತ್ತೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಧ್ಯಾಹ್ನದ ವೇಳೆ ಡ್ರೋನ್ ದಾಳಿಯಾಗಿದೆ. ಇದೇ ವೇಳೆ ನಾಗರೀಕರು ಮುನ್ನಚ್ಚೆರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

 

Read Full Story

09:22 PM (IST) Mar 07

ಪತ್ನಿ ಡಿವೋರ್ಸ್ ಅರ್ಜಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ವಿಜಯ್, ಮತ್ತೆ ಕೋಲಾಹಲ

ಪತ್ನಿ ಡಿವೋರ್ಸ್ ಅರ್ಜಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ವಿಜಯ್, ಮತ್ತೆ ಕೋಲಾಹಲ ಶುರುವಾಗಿದೆ. ಪತ್ನಿ ಸಂಗೀತಾ ಡಿವೋರ್ಸ್ ಅರ್ಜಿ ಬಳಿಕ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ವಿಜಯ್ ಇದೀಗ ಈ ಕುರಿತು ಮಾತನಾಡಿದ್ದಾರೆ.

 

Read Full Story

08:39 PM (IST) Mar 07

Chiranjeevi - ನನ್ನ ಮಗನೇ ಚಿರಂಜೀವಿ ಫ್ಯಾನ್, ನಮ್ಮಿಬ್ಬರ ಮಧ್ಯೆ ಬೆಂಕಿ ಹಚ್ಚೋಕೆ ನೋಡಿದ್ರು - ಮೋಹನ್ ಬಾಬು

ಚಿರಂಜೀವಿ ಮತ್ತು ಮೋಹನ್ ಬಾಬು ಒಮ್ಮೆ ಸಂದರ್ಶನವೊಂದರಲ್ಲಿ ಪರಸ್ಪರರ ಬಗ್ಗೆ ಮಾತನಾಡಿದ್ದರು. ಆಗ ಮೋಹನ್ ಬಾಬು ಅವರಲ್ಲಿ ತನಗಿಷ್ಟವಿಲ್ಲದ ಒಂದು ಗುಣದ ಬಗ್ಗೆ ಚಿರಂಜೀವಿ ಓಪನ್ ಆಗಿ ಹೇಳಿಕೊಂಡಿದ್ದರು.

Read Full Story

08:38 PM (IST) Mar 07

ಅಮೆರಿಕ ಗೂಗಲ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ ಯುವಕ

ಅಮೆರಿಕ ಗೂಗಲ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ ಯುವಕ, ಅಮೆರಿಕ ಭಾರತ ಹೀಗೆ ಒದ್ದಾಡುತ್ತಿದ್ದ ಯುವಕ ಇದೀಗ 402ನೇ ರ್ಯಾಂಕ್ ಪಡೆದು ಕನಸು ನನಸು ಮಾಡಿದ್ದಾರೆ.

 

Read Full Story

08:13 PM (IST) Mar 07

Ranveer Singh - ಧುರಂಧರ್ 2 ಅಡ್ವಾನ್ಸ್ ಬುಕ್ಕಿಂಗ್ ಶುರು.. ರಣವೀರ್ ಸಿಂಗ್ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೆ!

ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ 'ಧುರಂಧರ್: ದಿ ರಿವೆಂಜ್' ಮಾರ್ಚ್ 19, 2026 ರಂದು ತೆರೆಗೆ ಬರಲಿದೆ. ದೇಶದಾದ್ಯಂತ ಮಾರ್ಚ್ 18 ರಂದು ಪೇಯ್ಡ್ ಪ್ರಿವ್ಯೂಗಳು ನಡೆಯಲಿವೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.

Read Full Story

08:01 PM (IST) Mar 07

ಟಿ20 ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಕಾಡುತ್ತಿದೆ ಸಂಡೇ ಅಪಶಕುನ, ಫ್ಯಾನ್ಸ್ ಆತಂಕ

ಟಿ20 ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಕಾಡುತ್ತಿದೆ ಸಂಡೇ ಅಪಶಕುನ, ಫ್ಯಾನ್ಸ್ ಆತಂಕ, ಭಾರತ ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನವೇ ಅಭಿಮಾನಿಗಳಿಗೆ ಆತಂಕ ಶುರುವಾಗಿದ್ದು ಯಾಕೆ?

 

Read Full Story

06:54 PM (IST) Mar 07

ಖಮೇನಿ ಸೇರಿ 9 ನಾಯಕರಿಗೆ ಮುಹೂರ್ತ ಇಟ್ಟ ಇಸ್ಮಾಯಿಲ್​! ಪಕ್ಕದಲ್ಲಿದ್ದು ಸಿಕ್ಕಬಿದ್ದವನ ರೋಚಕ ಸ್ಟೋರಿ

ಇರಾನ್​ನ ಸರ್ವೋಚ್ಛ ನಾಯಕ ಅಲಿ ಖಮೇನಿ ಹತ್ಯೆಯ ಬಳಿಕ ಇಸ್ಮಾಯಿಲ್​ ಖಾನಿ ಹೆಸರು ಮುನ್ನೆಲೆಗೆ ಬಂದಿದೆ. 9 ನಾಯಕರ ಹತ್ಯೆಯಾದಾಗಲೂ ಅವರ ಸಮೀಪವೇ ಇದ್ದು ಬದುಕುಳಿದಿದ್ದ ಇವರು, ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದು, ಗಲ್ಲುಶಿಕ್ಷೆ ವಿಧಿಸಲಾಗಿದೆ ಎನ್ನಲಾಗುತ್ತಿದೆ.
Read Full Story

06:49 PM (IST) Mar 07

Vijay Trisha - 15 ವರ್ಷಗಳ ನಂತರ 'ಲಿಯೋ'ದಲ್ಲಿ ಒಂದಾದ ಜೋಡಿ - ವಿಜಯ್ ರಾಜಕೀಯ, ವೈಯಕ್ತಿಕ ಭವಿಷ್ಯ ಏನಾಗಲಿದೆ?

ಒಂದು ಕಾಲದಲ್ಲಿ ಅಭಿಮಾನಿಗಳಿಂದ 'ಮುಂದಿನ ಮುಖ್ಯಮಂತ್ರಿ' ಎಂದು ಕರೆಸಿಕೊಂಡಿದ್ದ ನಟ ವಿಜಯ್ ಅವರ ಇಮೇಜ್‌ಗೆ ಕರೂರ್ ದುರಂತ, 'ಜನ ನಾಯಗನ್' ಸಿನಿಮಾ ವಿವಾದ ಮತ್ತು ಇದೀಗ ಪತ್ನಿ ಸಲ್ಲಿಸಿರುವ ವಿಚ್ಛೇದನ ಅರ್ಜಿಯಿಂದಾಗಿ ದೊಡ್ಡ ಪೆಟ್ಟು ಬಿದ್ದಿದೆ.

Read Full Story

06:20 PM (IST) Mar 07

Ramayana Viral Photo - ರಣಬೀರ್-ಸಾಯಿ ಪಲ್ಲವಿ ವೈರಲ್ ಫೋಟೋ ನಿಜಾನಾ? ಸುಳ್ಳಾ? 'ರಾಮಾಯಣ' ಫಸ್ಟ್ ಲುಕ್ ಯಾವಾಗ?

ರಾಮಾಯಣ ಸಿನಿಮಾದ ಸೆಟ್‌ನಿಂದ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರ ಫೋಟೋ ವೈರಲ್ ಆಗಿದೆ ಎಂದು ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ ಈ ಫೋಟೋ ನಿಜವೇ? ಸತ್ಯ ಏನು, 'ರಾಮಾಯಣ 2026' ಸಿನಿಮಾದ ಸಂಪೂರ್ಣ ಅಪ್‌ಡೇಟ್, ಫಸ್ಟ್ ಲುಕ್ ಯಾವಾಗ, ಭಾಗ 1 ಮತ್ತು 2ರ ರಿಲೀಸ್ ಡೇಟ್ ಇಲ್ಲಿದೆ.

Read Full Story

06:13 PM (IST) Mar 07

ಇನ್ಮುಂದೆ ನಿನ್​ ಜೊತೆ ಸಿನಿಮಾ ಮಾಡಲ್ಲ - ವಿಜಯ್ ದೇವರಕೊಂಡ​ಗೆ ರಶ್ಮಿಕಾ ಪ್ರತಿಜ್ಞೆ! ಆಗಿದ್ದೇನು?

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಹಳೆಯ ಸಂದರ್ಶನವೊಂದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ, ವಿಜಯ್ ಕಾಲೆಳೆದಿದ್ದಕ್ಕೆ ಗರಂ ಆದ ರಶ್ಮಿಕಾ, 'ಇನ್ನು ಮುಂದೆ ನಿನ್ನ ಜೊತೆ ಯಾವುದೇ ಸಿನಿಮಾ ಮಾಡುವುದಿಲ್ಲ' ಎಂದು ಹುಸಿ ಮುನಿಸು ತೋರಿಸಿದ್ದರು.
Read Full Story

05:40 PM (IST) Mar 07

Rashmika-ವಿಜಯ್ ದೇವರಕೊಂಡ ಬಳಿಕ ಮತ್ತೊಬ್ಬ ಹೀರೋ ಮದುವೆಗೆ ರೆಡಿ - ಯಾರು ಈ ಬೆಲ್ಲಂಕೊಂಡ?

ಈ ವರ್ಷ ಟಾಲಿವುಡ್‌ನ ಇಬ್ಬರು ಯುವ ನಾಯಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೌಡಿ ಹೀರೋ ವಿಜಯ್ ದೇವರಕೊಂಡ ಜೊತೆಗೆ ಅಲ್ಲು ಶಿರಿಷ್ ಕೂಡ ತಮ್ಮ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಿದ್ದಾರೆ. ಈ ಸಾಲಿಗೆ ಇದೀಗ ಮತ್ತೊಬ್ಬ ಟಾಲಿವುಡ್ ಯುವ ನಟ ಸೇರಲು ಸಿದ್ಧರಾಗುತ್ತಿದ್ದಾರೆ. ಹಾಗಾದರೆ, ಯಾರು ಆ ನಟ?

Read Full Story

05:39 PM (IST) Mar 07

ICC T20 World Cup Final - ಯಾರಿಗೆ ಒಲಿಯಲಿದೆ ಲಕ್? ಎಬಿ ಡಿವಿಲಿಯರ್ಸ್ ಪ್ರಕಾರ ಇವರೇ ಈ ಬಾರಿಯ ಚಾಂಪಿಯನ್!

2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಣಸಾಡಲಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಭಾರತವನ್ನೇ ಫೇವರಿಟ್ ಎಂದು ಕರೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳ ಬಲದಿಂದ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Read Full Story

05:30 PM (IST) Mar 07

ಪ್ರಿಯಾಂಕ ಚೋಪ್ರಾ ಜೊತೆ ಮೊದಲ ಡೇಟ್‌ನಲ್ಲೇ ಫ್ರೆಂಚ್ ಕಿಸ್, ಚುಂಬನ ರಹಸ್ಯ ಬಹಿರಂಗಪಡಿಸಿದ ನಿಕ್

ಪ್ರಿಯಾಂಕ ಚೋಪ್ರಾ ಜೊತೆ ಮೊದಲ ಡೇಟ್‌ನಲ್ಲೇ ಫ್ರೆಂಚ್ ಕಿಸ್, ಚುಂಬನ ರಹಸ್ಯ ಬಹಿರಂಗಪಡಿಸಿದ ನಿಕ್, ಗೆಳೆಯರೊಂದಿಗೆ ಪ್ರಿಯಾಂಕ ಚೋಪ್ರಾ ಭೇಟಿಯಾಗಿದ್ದ ನಿಕ್ , ಸೈಲೆಂಟ್ ಆಗಿ ಫ್ರೆಂಚ್ ಕಿಸ್ ಮಾಡಿ ನಟಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದರು.

 

Read Full Story

04:59 PM (IST) Mar 07

ICC T20 World Cup Final - ಬ್ಯಾಟ್ಸ್‌ಮನ್‌ಗಳೋ? ಬೌಲರ್‌ಗಳೋ? ಅಹಮದಾಬಾದ್ ಪಿಚ್ ಯಾರಿಗೆ ಸಾಥ್ ನೀಡಲಿದೆ?

2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದ ಗೆಲುವಿನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಮತ್ತು ಟಾಸ್ ಪ್ರಮುಖ ಪಾತ್ರ ವಹಿಸಲಿದ್ದು, ಮಿಶ್ರ ಮಣ್ಣಿನ ಪಿಚ್ ಬಳಸುವ ಸಾಧ್ಯತೆಯಿದೆ.

Read Full Story

04:55 PM (IST) Mar 07

ವೈಯಕ್ತಿಕ ಜೀವನದ ಅನುಭವಗಳೇ ಕಥೆ? ರವಿ ಮೋಹನ್ ಮೊದಲ ನಿರ್ದೇಶನದ ಸಿನಿಮಾಗೆ ಚಾಲನೆ

ರವಿ ಮೋಹನ್ ಸ್ಟುಡಿಯೋಸ್ ನಿರ್ಮಾಣದಲ್ಲಿ, ನಟ ರವಿ ಮೋಹನ್ ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರ ಚೊಚ್ಚಲ ನಿರ್ದೇಶನದ 'ಆನ್ ಆರ್ಡಿನರಿ ಮ್ಯಾನ್' ಸಿನಿಮಾದ ಶೂಟಿಂಗ್ ಪೂಜೆಯೊಂದಿಗೆ ಆರಂಭವಾಗಿದೆ.

Read Full Story

04:35 PM (IST) Mar 07

ಒಂದೇ ಪಂದ್ಯದಲ್ಲಿ ಅಳಿಯಲಿವೆ ಟೀಮ್ ಇಂಡಿಯಾದ 5 ದೊಡ್ಡ ಅಪಶಕುನಗಳು! ಇತಿಹಾಸ ಸೃಷ್ಟಿಸುತ್ತಾ ಭಾರತ?

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ, ಹಾಲಿ ಚಾಂಪಿಯನ್, ಆತಿಥೇಯ ರಾಷ್ಟ್ರ, ಅಹಮದಾಬಾದ್ ಮೈದಾನ, ಮತ್ತು ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಟೂರ್ನಿಗಳ ಸೋಲಿನಂತಹ ಐದು ಪ್ರಮುಖ ಅಪಶಕುನಗಳನ್ನು ಮುರಿಯುವ ಅವಕಾಶವಿದೆ.
Read Full Story

04:33 PM (IST) Mar 07

ಪೋಯಸ್ ಗಾರ್ಡನ್‌ನಲ್ಲಿ ನಯನತಾರಾ-ವಿಘ್ನೇಶ್ ಕನಸಿನ ಮನೆ ರೆಡಿ - ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ

ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ 31 ಕೋಟಿ ರೂಪಾಯಿ ಮೌಲ್ಯದ 4BHK ಮನೆಯನ್ನು ಖರೀದಿಸಿದ್ದಾರೆ. ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್‌ನಲ್ಲಿರುವ ಈ ಮನೆ, ರಜನಿಕಾಂತ್ ಮತ್ತು ಧನುಷ್ ಅವರ ಮನೆಯ ಪಕ್ಕದಲ್ಲೇ ಇದೆ ಎಂದು ವರದಿಯಾಗಿದೆ.

Read Full Story

03:54 PM (IST) Mar 07

ಗೂಗಲ್‌ನಲ್ಲಿ ಸುಂದರ್ ಪಿಚೈಗೆ ಬರೋಬ್ಬರಿ ₹5,700 ಕೋಟಿ ಸಂಭಾವನೆ, ತಿಂಗಳಿಗೆ 159 ಕೋಟಿ ಸಂಬಳ!

ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್, ಸಿಇಒ ಸುಂದರ್ ಪಿಚೈ ಅವರಿಗೆ ಮುಂದಿನ 3 ವರ್ಷಗಳ ಅವಧಿಗೆ ₹5,750 ಕೋಟಿವರೆಗಿನ ಸಂಭಾವನೆ ಪ್ಯಾಕೇಜ್ ಘೋಷಿಸಿದೆ. ಈ ಮೊತ್ತದ ಬಹುಪಾಲು ವೇಯ್ಮೋ ಮತ್ತು ವಿಂಗ್ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಅವಲಂಬಿಸಿದ್ದು, ಇದು ಅವರ ವೈಯಕ್ತಿಕ ಸಂಪತ್ತಿಗೆ ಮಹತ್ವದ ಸೇರ್ಪಡೆಯಾಗಲಿದೆ.

Read Full Story

03:51 PM (IST) Mar 07

ಇರಾನ್ ಪರ ನಿಂತು ಅಮೆರಿಕಾಗೆ ರಹಸ್ಯ ಬೆಂಬಲ ಕೊಟ್ಟ ಪಾಕ್ ಕಂಗಾಲು, ಪೆಟ್ರೋಲ್ ಬೆಲೆ 55 ರೂ ಏರಿಕೆ

ಇರಾನ್ ಪರ ನಿಂತು ಅಮೆರಿಕಾಗೆ ರಹಸ್ಯ ಬೆಂಬಲ ಕೊಟ್ಟ ಪಾಕ್ ಕಂಗಾಲು, ಪೆಟ್ರೋಲ್ ಬೆಲೆ 55 ರೂ ಏರಿಕೆ, ಖಮೇನಿ ಹತ್ಯೆಯಾದಾಗ ಇಸ್ರೇಲ್ ವಿರುದ್ಧ ಗರಂ ಆಗಿದ್ದ ಪಾಕಿಸ್ತಾನ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

 

Read Full Story

02:01 PM (IST) Mar 07

ದಳಪತಿ ವಿಜಯ್‌ಗೆ ಶಾಕ್ - ಮನೆಯಲ್ಲಿರಲು ಬಿಡ್ತಿಲ್ಲ, ಗಂಡನಿಂದ ಸಂಗೀತಾ ಗಂಭೀರ ಆರೋಪ

ನಟ ದಳಪತಿ ವಿಜಯ್ ಅವರಿಂದ ವಿಚ್ಛೇದನ ಕೋರಿರುವ ಪತ್ನಿ ಸಂಗೀತಾ, ಇದೀಗ ವಾಸಕ್ಕೆ ಮನೆ ನೀಡುವಂತೆ ನ್ಯಾಯಾಲಯಕ್ಕೆ ಹೊಸ ಅರ್ಜಿ ಸಲ್ಲಿಸಿದ್ದಾರೆ. ಚೆನ್ನೈನ ನೀಲಾಂಕರೈ ಮನೆಯಲ್ಲಿರಲು ವಿಜಯ್ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

Read Full Story

01:43 PM (IST) Mar 07

ಅಣ್ಣಾಮಲೈ 'ಕಿಂಗ್‌ ಮೇಕರ್' ಗೇಮ್‌ಪ್ಲ್ಯಾನ್; AIDMK ಪಾಳಯದಲ್ಲಿ ನಡುಕ! BJP ಹೇಳಿದ್ದೇನು?

ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅವರ 'ಕಿಂಗ್ ಮೇಕರ್' ಅವತಾರ ತಮಿಳುನಾಡು ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಲಿದೆ? ಎಐಎಡಿಎಂಕೆ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವುದೇ ಅಥವಾ ಬಿಜೆಪಿ ತನ್ನ ನೆಲೆಯನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳುವುದೇ ಎಂಬ ಕುತೂಹಲ ಹೆಚ್ಚಾಗಿದೆ.

Read Full Story

01:27 PM (IST) Mar 07

ಭಾರತದ ಪೋಸ್ಟ್‌ ಆಫೀಸ್‌ನ 38 ಕೋಟಿ ಖಾತೆಯಲ್ಲಿದೆ ಕರ್ನಾಟಕ ಬಜೆಟ್‌ನ ಐದು ಪಟ್ಟು ಹಣ!

ಭಾರತೀಯ ಅಂಚೆ ಇಲಾಖೆಯು 38 ಕೋಟಿ ಉಳಿತಾಯ ಖಾತೆಗಳಲ್ಲಿ ₹22 ಲಕ್ಷ ಕೋಟಿ ಸಂಗ್ರಹಿಸಿ ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದೆ. ಸುಕನ್ಯಾ ಸಮೃದ್ಧಿ ಯೋಜನೆಯು 3.8 ಕೋಟಿ ಖಾತೆಗಳೊಂದಿಗೆ ಯಶಸ್ವಿಯಾಗಿದ್ದು, ಇಲಾಖೆಯು ಡ್ರೋನ್‌ ಮತ್ತು RFID ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.

Read Full Story

01:26 PM (IST) Mar 07

ಹೊಸ ಲುಕ್​ನಲ್ಲಿ ಪತ್ನಿ ಜೊತೆ ಮುಂಬೈ ಸುತ್ತಿದ ಯಶ್​ - ಕಾರು ಇಳಿಯುತ್ತಿದ್ದಂತೆಯೇ ಫ್ಯಾನ್ಸ್​ ಗದ್ದಲ ನೋಡಿ!

'ಟಾಕ್ಸಿಕ್' ಚಿತ್ರಕ್ಕಾಗಿ 'ಕೆಜಿಎಫ್' ಖ್ಯಾತಿಯ ಯಶ್ ತಮ್ಮ ಉದ್ದನೆಯ ಕೂದಲು ಮತ್ತು ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ತಮ್ಮ ಹೊಸ ಲುಕ್​ನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.  

Read Full Story

12:55 PM (IST) Mar 07

ಮಹಿಳಾ ದಿನಕ್ಕೆ ಬಂಪರ್​ - ಅತ್ಯಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕಲ್​ ಸ್ಕೂಟರ್​ ಬಿಡುಗಡೆ! ಎಷ್ಟೊಂದು ವೈಶಿಷ್ಟ್ಯಗಳು

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ, ಝೀಲೋ ಎಲೆಕ್ಟ್ರಿಕ್ಸ್​ ವಿಶೇಷವಾಗಿ ಮಹಿಳೆಯರಿಗಾಗಿ 'ನೈಟ್+ ರಾಣಿ' ಆವೃತ್ತಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.  ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಂಕೇತವಾಗಿ 'ರಾಣಿ' ಎಂಬ ಹೆಸರನ್ನು ಹೊಂದಿದೆ. ಇಲ್ಲಿವೆ ವಿಶೇಷತೆ ಡಿಟೇಲ್ಸ್​

Read Full Story

12:55 PM (IST) Mar 07

ಮೊದಲು ಹಿಂದೇಟು, ನಂತ್ರ ಒಪ್ಪಿಗೆ - ಕಾಂಗ್ರೆಸ್‌ಗೆ ಗುಡ್‌ನ್ಯೂಸ್ ನೀಡಿದ ಮಮತಾ ಬ್ಯಾನರ್ಜಿ

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ವಿರುದ್ಧ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಕಾಂಗ್ರೆಸ್‌ ತನ್ನ ಸಂಸದರಿಗೆ ವಿಪ್ ಜಾರಿಗೊಳಿಸಿದೆ. ಆರಂಭದಲ್ಲಿ ಹಿಂದೇಟು ಹಾಕಿದ್ದ ಟಿಎಂಸಿ ಕೂಡಾ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದೆ.

Read Full Story

12:55 PM (IST) Mar 07

22ನೇ ಕಂತಿನ ಕಿಸಾನ್‌ ಸಮ್ಮಾನ್‌ ನಿಧಿ ಬರೋದು ಯಾವಾಗ? ಇಲ್ಲಿದೆ ಡೀಟೇಲ್ಸ್‌

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣವು ಮಾರ್ಚ್ 13ರಂದು ಜಮೆಯಾಗುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ, ಇ-ಕೆವೈಸಿ, ಭೂ ಪರಿಶೀಲನೆ ಪೂರ್ಣಗೊಳಿಸದ ಹಾಗೂ ಕೆಲವು ರಾಜ್ಯಗಳಲ್ಲಿ 'ಫಾರ್ಮರ್ ಐಡಿ' ಹೊಂದಿರದ ರೈತರು ವಂಚಿತರಾಗುವ ಸಾಧ್ಯತೆಯಿದೆ.

Read Full Story

12:53 PM (IST) Mar 07

T20 World Cup 2026 - ಟಿ20 ವಿಶ್ವಕಪ್ ಫೈನಲ್ ಮಳೆಯಿಂದ ರದ್ದಾದ್ರೆ, ಟ್ರೋಫಿ ಯಾರಿಗೆ? ಇಲ್ಲಿದೆ ICC ರೂಲ್ಸ್

ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಟ್ರೋಫಿ ಯಾರ ಪಾಲಾಗಲಿದೆ? ಇಂತಹ ಸಂದರ್ಭಗಳಿಗಾಗಿ ಐಸಿಸಿ ರೂಪಿಸಿರುವ ನಿಯಮಗಳೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Read Full Story

12:37 PM (IST) Mar 07

T20 World Cup Final - ಒಂದೇ ಮ್ಯಾಚ್, 3 ವಿಶ್ವ ದಾಖಲೆ! ಭಾರತ ಗೆದ್ದರೆ ಕ್ರಿಕೆಟ್ ಲೋಕದಲ್ಲಿ ಇತಿಹಾಸ

ಟಿ20 ವಿಶ್ವಕಪ್ 2026ರ ಫೈನಲ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದರೆ, ಭಾರತ ತಂಡವು ಮೂರು ಅಪರೂಪದ ವಿಶ್ವ ದಾಖಲೆಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳಲಿದೆ. ಆ ದಾಖಲೆಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

Read Full Story

12:21 PM (IST) Mar 07

ಬೆಂಗಳೂರಲ್ಲಿ ಓದಿದ ಹುಡುಗ, ಮಾಜಿ ಮೇಯರ್‌ ಬಾಲೆನ್‌ ಷಾ ನೇಪಾಳದ ಮುಂದಿನ ಪ್ರಧಾನಿ

ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದ ಬಾಲೇಂದ್ರ ಶಾ, ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಪೂರ್ಣ ಬಹುಮತ ಪಡೆದಿದೆ.

Read Full Story

11:40 AM (IST) Mar 07

Breaking - ಡೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ ಬಿಗ್ ರಿಲೀಫ್; ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್!

2002ರ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ನನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖಲಾಸೆಗೊಳಿಸಿದೆ. ಈ ಮೂಲಕ ಸಿಬಿಐ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಲಾಗಿದೆ.

Read Full Story

11:37 AM (IST) Mar 07

ಕಡಿಮೆ ಬೆಲೆಗೆ ಬೊಂಬಾಟ್ ಫೀಚರ್ಸ್‌ನ ಸ್ಮಾರ್ಟ್‌ಫೋನ್; 7000mAh ಬ್ಯಾಟರಿ, 15W ಫಾಸ್ಟ್ ಚಾರ್ಜಿಂ

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ರಿಯಲ್‌ಮಿ ಕಂಪನಿ ತನ್ನ ಹೊಸ ಮಾಡೆಲ್ ಅನ್ನು ಪರಿಚಯಿಸಿದೆ. ಈ ಹೊಸ ಸ್ಮಾರ್ಟ್‌ಫೋನ್, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಉತ್ತಮ ದೈನಂದಿನ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ.

Read Full Story

11:21 AM (IST) Mar 07

ಬಡವರ ಬೆನ್ನಿಗೆ ಇಂಧನ ಬಾಂಬ್‌ ಕಟ್ಟಿದ ಪಾಕಿಸ್ತಾನ, ಪೆಟ್ರೋಲ್‌ ಪ್ರತಿ ಲೀಟರ್‌ಗೆ 55 ರೂಪಾಯಿ ಏರಿಕೆ!

ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 55 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಜಾಗತಿಕ ತೈಲ ದರ ಏರಿಕೆ ಮತ್ತು ಐಎಂಎಫ್‌ನ ಕಠಿಣ ಷರತ್ತುಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಈ ನಿರ್ಧಾರದಿಂದಾಗಿ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಜನ ದಟ್ಟಣೆ ಹೆಚ್ಚಾಗಿದೆ.
Read Full Story

10:58 AM (IST) Mar 07

T20 World Cup Final - ಇಂಡಿಯಾ-ಕಿವೀಸ್ ಫೈನಲ್ ಪಂದ್ಯಕ್ಕೆ ಅಂಪೈರ್‌ಗಳು ಯಾರು? ಐಸಿಸಿ ಲಿಸ್ಟ್ ಇಲ್ಲಿದೆ!

ಭಾನುವಾರ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಐಸಿಸಿ ಅಂಪೈರ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಫೈನಲ್ ಪಂದ್ಯದ ಮುನ್ನ ರಿಕ್ಕಿ ಮಾರ್ಟಿನ್ ಅವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

Read Full Story

10:43 AM (IST) Mar 07

ಇಸ್ರೇಲ್ ಕ್ಷಿಪಣಿ ಬಿದ್ದಿದ್ದು ಅಸಲಿ ಹೆಲಿಕಾಪ್ಟರ್‌ಗಾ ಅಥವಾ ಚಿತ್ರಕ್ಕಾ? ಇರಾನ್ 'ಡಿಕಾಯ್' ಬಲೆಗೆ ಬಿದ್ದಿತೇ ಐಡಿಎಫ್?

ಇಸ್ರೇಲ್ ರಕ್ಷಣಾ ಪಡೆ (IDF) ಇರಾನ್‌ನ ಹೆಲಿಕಾಪ್ಟರ್ ಅನ್ನು ಧ್ವಂಸಗೊಳಿಸಿದೆ ಎಂದು ಹೇಳಲಾದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಆದರೆ, ಇದು ನಿಜವಾದ ಹೆಲಿಕಾಪ್ಟರ್ ಅಲ್ಲ, ಬದಲಿಗೆ ನೆಲದ ಮೇಲೆ ಬಿಡಿಸಿದ ನಕಲಿ ಚಿತ್ರ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. 

Read Full Story

08:45 AM (IST) Mar 07

ಬೆಳ್ಳಂ ಬೆಳಗ್ಗೆ ಬೆಲೆ ಏರಿಕೆ ಶಾಕ್' ಇಂದಿನಿಂದ ಗೃಹ ಬಳಕೆಯ LPG ಸಿಲಿಂಡರ್ ದರದಲ್ಲಿ 60 ರೂಪಾಯಿ ಹೆಚ್ಚಳ

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹60 ರಷ್ಟು ಹೆಚ್ಚಿಸಲಾಗಿದ್ದು, ರಾಜ್ಯದಲ್ಲಿ ಹೊಸ ದರ ₹915 ಆಗಿದೆ. ವಾಣಿಜ್ಯ ಸಿಲಿಂಡರ್ ದರವೂ ₹115 ಏರಿಕೆಯಾಗಿದ್ದು, ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯೇ ಈ ಬೆಲೆ ಏರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.
Read Full Story

08:33 AM (IST) Mar 07

ಅಯತೊಲ್ಲಾ ಖಮೇನಿ ಹತ್ಯೆಗೆ ಬಳಸಲಾದ ಇಸ್ರೇಲ್‌ನ 'ಬ್ಲೂ ಸ್ಪ್ಯಾರೋ' ಕ್ಷಿಪಣಿಯ ಭಯಾನಕ ರಹಸ್ಯ

ಇರಾನ್ ವಿರುದ್ಧ ಇಸ್ರೇಲ್‌ 'ಬ್ಲೂ ಸ್ಪ್ಯಾರೋ' ಎಂಬ ಅತ್ಯಾಧುನಿಕ ಕ್ಷಿಪಣಿ ಬಳಸಿದೆ ಎನ್ನಲಾಗಿದೆ. ವಿಮಾನದಿಂದ ಉಡಾಯಿಸಬಹುದಾದ ಈ ಬ್ಯಾಲಿಸ್ಟಿಕ್ ಕ್ಷಿಪಣಿಯು, ಅಂತರಿಕ್ಷದಿಂದ ಲಂಬವಾಗಿ ಗುರಿಯತ್ತ ನುಗ್ಗುವುದರಿಂದ ಇದನ್ನು ಪತ್ತೆಹಚ್ಚಿ ತಡೆಯುವುದು ಅತ್ಯಂತ ಕಷ್ಟಕರವಾಗಿದೆ.
Read Full Story

08:23 AM (IST) Mar 07

ಭಾರತದ ಜೊತೆಗಿನ ಒಪ್ಪಂದ ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿರಲಿದೆ - ಕ್ರಿಸ್ಟೋಫರ್ ಲ್ಯಾಂಡೌ

ಭಾರತದೊಂದಿಗಿನ ವ್ಯಾಪಾರ ಒಪ್ಪಂದವು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿರಲಿದೆ ಎಂದು ಅಮೆರಿಕದ ವಿದೇಶಾಂಗ ಉಪ ಸಚಿವ ಕ್ರಿಸ್ಟೋಫರ್ ಲ್ಯಾಂಡೌ ಸ್ಪಷ್ಟಪಡಿಸಿದ್ದಾರೆ. ಭಾರತವು ಚೀನಾದಂತೆ ತಮ್ಮ ಪ್ರತಿಸ್ಪರ್ಧಿಯಾಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

Read Full Story

08:12 AM (IST) Mar 07

ಇರಾನ್‌ ಮೇಲೆ ಮತ್ತೊಂದು ಬೃಹತ್‌ ದಾಳಿಗೆ ಟ್ರಂಪ್ ಸಿದ್ಧತೆ? ಅಮೆರಿಕ ವಿರುದ್ಧ ದಾಳಿಗೆ ರಷ್ಯಾ ಗುಪ್ತಚರ ನೆರವು

ಇರಾನ್‌ ಮೇಲೆ ಮತ್ತೊಂದು ಬೃಹತ್‌ ದಾಳಿಗೆ ಅಮೆರಿಕ ಸಜ್ಜಾಗುತ್ತಿದ್ದು, ತನ್ನ ಶಕ್ತಿಶಾಲಿ ಸ್ಟೆಲ್ತ್‌ ಬಾಂಬರ್‌ಗಳನ್ನು ಬ್ರಿಟಿಷ್‌ ನೆಲೆಗಳಿಗೆ ರವಾನಿಸಿದೆ. ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ಇರಾನ್‌ಗೆ ರಷ್ಯಾ ಗುಪ್ತಚರ ಮಾಹಿತಿ ನೀಡುತ್ತಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

Read Full Story

07:54 AM (IST) Mar 07

ಬಿಹಾರದ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯಿಂದ ನಾಲ್ವರ ಹೆಸರು? ಯಾರಿಗೆ ಪಟ್ಟ?

ನಿತೀಶ್ ಕುಮಾರ್ ರಾಜ್ಯಸಭೆಗೆ ಹೋಗುವ ಸಾಧ್ಯತೆಯಿದ್ದು, ಬಿಹಾರದ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ನಾಲ್ವರ ಹೆಸರನ್ನು ಪರಿಗಣಿಸುತ್ತಿದೆ. ಮತ್ತೊಂದೆಡೆ, ಜಮ್ಮು ಕಾಶ್ಮೀರ ಕ್ರಿಕೆಟ್ ಮಂಡಳಿಯ ಹಗರಣದಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲು ಕೋರ್ಟ್ ಆದೇಶಿಸಿದೆ.

Read Full Story

More Trending News