- Home
- News
- World News
- ಇರಾನ್ ಮೇಲೆ ಮತ್ತೊಂದು ಬೃಹತ್ ದಾಳಿಗೆ ಟ್ರಂಪ್ ಸಿದ್ಧತೆ? ಅಮೆರಿಕ ವಿರುದ್ಧ ದಾಳಿಗೆ ರಷ್ಯಾ ಗುಪ್ತಚರ ನೆರವು
ಇರಾನ್ ಮೇಲೆ ಮತ್ತೊಂದು ಬೃಹತ್ ದಾಳಿಗೆ ಟ್ರಂಪ್ ಸಿದ್ಧತೆ? ಅಮೆರಿಕ ವಿರುದ್ಧ ದಾಳಿಗೆ ರಷ್ಯಾ ಗುಪ್ತಚರ ನೆರವು
ಇರಾನ್ ಮೇಲೆ ಮತ್ತೊಂದು ಬೃಹತ್ ದಾಳಿಗೆ ಅಮೆರಿಕ ಸಜ್ಜಾಗುತ್ತಿದ್ದು, ತನ್ನ ಶಕ್ತಿಶಾಲಿ ಸ್ಟೆಲ್ತ್ ಬಾಂಬರ್‌ಗಳನ್ನು ಬ್ರಿಟಿಷ್ ನೆಲೆಗಳಿಗೆ ರವಾನಿಸಿದೆ. ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ಇರಾನ್‌ಗೆ ರಷ್ಯಾ ಗುಪ್ತಚರ ಮಾಹಿತಿ ನೀಡುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಇರಾನ್ ಮೇಲೆ ಮತ್ತೊಂದು ಬೃಹತ್ ದಾಳಿಗೆ ಅಮೆರಿಕ ಸಜ್ಜು
ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಕಾಡ್ಗಿಚ್ಚಿನಂತೆ ಇಡೀ ಮಧ್ಯಪ್ರಾಚ್ಯದಾದ್ಯಂತ ಹಬ್ಬಿರುವ ನಡುವೆಯೇ, ಇರಾನ್ ಮೇಲೆ ಮತ್ತೊಂದು ಬೃಹತ್ ದಾಳಿಗೆ ಅಮೆರಿಕ ಸಜ್ಜಾದ ಸುಳಿವು ಸಿಕ್ಕಿದೆ. ಬಿ-1, ಬಿ-2, ಬಿ-52 ಸೇರಿದಂತೆ ಅಮೆರಿಕದ ಶಕ್ತಿಶಾಲಿ ಸ್ಟೆಲ್ತ್ ಬಾಂಬರ್‌ಗಳು ಬ್ರಿಟಿಷ್ ನೆಲೆ ಡಿಯೆಗೋ ಗಾರ್ಸಿಯಾ ಮತ್ತು ಆರ್‌ಎಎಫ್ ಫೇರ್‌ಫೋರ್ಡ್‌ನತ್ತ ದೌಡಾಯಿಸಿವೆ ಎಂದು ವರದಿಯಾಗಿದೆ.
ದೊಡ್ಡ ದಾಳಿ ಸನ್ನಿಹಿತ
‘ನಾವು ಇನ್ನೂ ಬಲವಾಗಿ ಹೊಡೆಯಲು ಆರಂಭಿಸಿಲ್ಲ. ದೊಡ್ಡ ದಾಳಿ ಸನ್ನಿಹಿತವಾಗಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದು ಖಮೇನಿಯನ್ನು ಬಲಿಪಡೆದ ‘ಆಪರೇಶನ್ ಎಪಿಕ್ ಫ್ಯೂರಿ’ ನಂತರ ಅಮೆರಿಕದ ಮತ್ತೊಂದು ಅನಾಹುತಕಾರಿ ದಾಳಿಯ ಸುಳಿವು ನೀಡಿದೆ.
ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್
ಈ ನಡುವೆ ಮಾತನಾಡಿರುವ ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್, ‘ಅಮೆರಿಕ ಈಗ ಬ್ರಿಟಿಷ್ ಆರ್‌ಎಎಫ್ ನೆಲೆಗಳನ್ನು ಬಳಸಿಕೊಂಡು ಇರಾನ್ ಮೇಲಿನ ದಾಳಿಗಳನ್ನು ಗಣನೀಯವಾಗಿ ಹೆಚ್ಚಿಸಲಿದೆ. ಹೆಚ್ಚು ಫೈಟರ್ ಸ್ಕ್ವಾಡ್ರನ್‌ಗಳು, ಹೆಚ್ಚು ರಕ್ಷಣಾತ್ಮಕ ಸಾಮರ್ಥ್ಯಗಳು ಮತ್ತು ಹೆಚ್ಚು ಬಾಂಬರ್ ಪಲ್ಸ್‌ಗಳೊಂದಿಗೆ ಬರಲಿದ್ದೇವೆ’ ಎಂದು ಎಚ್ಚರಿಸಿದ್ದಾರೆ.
ಅಮೆರಿಕ ವಿರುದ್ಧ ದಾಳಿಗೆ ರಷ್ಯಾ ಗುಪ್ತಚರ ನೆರವು: ವಾಷಿಂಗ್ಟನ್ ಪೋಸ್ಟ್
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವ ನಡುವೆ ಅಮೆರಿಕ ಮತ್ತು ಅದರ ಮಿತ್ರ ದೇಶಗಳ ಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡಲು ಇರಾನ್‌ಗೆ ರಷ್ಯಾ ಗುಪ್ತಚರ ಮಾಹಿತಿ ನೀಡುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮೆರಿಕ; 30 ದಿನ ಮಾತ್ರ!
ವಾಷಿಂಗ್ಟನ್ ಪೋಸ್ಟ್
ಈ ಬಗ್ಗೆ ವರದಿ ಮಾಡಿರುವ ವಾಷಿಂಗ್ಟನ್ ಪೋಸ್ಟ್, ಅಮೆರಿಕದ ಯುದ್ಧನೌಕೆಗಳು ಮತ್ತು ವಿಮಾನಗಳ ಹಾರಾಟ ಸ್ಥಳಗಳು ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ರಷ್ಯಾ ಇರಾನ್‌ಗೆ ಗುಪ್ತಚರ ಮಾಹಿತಿ ಒದಗಿಸುತ್ತಿದೆ ಎಂದಿದೆ. ಮತ್ತೊಂದೆಡೆ ಅಮೆರಿಕದ ಮತ್ತೊಂದು ಪ್ರಮುಖ ಎದುರಾಳಿ ದೇಶ ಕೂಡಾ ಪರೋಕ್ಷವಾಗಿ ಇದರಲ್ಲಿ ಭಾಗವಹಿಸುತ್ತಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್: 1.1 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಿ ಶಸ್ತ್ರಾಸ್ತ್ರ ಖರೀದಿಗೆ ಭಾರತದ ವೈರಿ ದೇಶ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

