MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • T20 World Cup Final: ಇಂಡಿಯಾ-ಕಿವೀಸ್ ಫೈನಲ್ ಪಂದ್ಯಕ್ಕೆ ಅಂಪೈರ್‌ಗಳು ಯಾರು? ಐಸಿಸಿ ಲಿಸ್ಟ್ ಇಲ್ಲಿದೆ!

T20 World Cup Final: ಇಂಡಿಯಾ-ಕಿವೀಸ್ ಫೈನಲ್ ಪಂದ್ಯಕ್ಕೆ ಅಂಪೈರ್‌ಗಳು ಯಾರು? ಐಸಿಸಿ ಲಿಸ್ಟ್ ಇಲ್ಲಿದೆ!

ಭಾನುವಾರ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಐಸಿಸಿ ಅಂಪೈರ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಫೈನಲ್ ಪಂದ್ಯದ ಮುನ್ನ ರಿಕ್ಕಿ ಮಾರ್ಟಿನ್ ಅವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

2 Min read
Author : Mahmad Rafik
Published : Mar 07 2026, 10:58 AM IST
Share this Photo Gallery
  • FB
  • TW
  • Linkdin
  • Whatsapp
15
IND vs NZ Final
Image Credit : Getty

IND vs NZ Final

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ (IND vs NZ T20 World Cup Final) ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಮಹತ್ವದ ಪಂದ್ಯವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ತೆರೆ ಎಳೆದಿದೆ.

25
ಫೈನಲ್ ಪಂದ್ಯದ ಅಂಪೈರ್ ಯಾರು?
Image Credit : Getty

ಫೈನಲ್ ಪಂದ್ಯದ ಅಂಪೈರ್ ಯಾರು?

ಐಸಿಸಿ ಪ್ರಕಟಿಸಿರುವ ಪಟ್ಟಿ ಪ್ರಕಾರ, ಇಂಗ್ಲೆಂಡ್‌ನ ರಿಚರ್ಡ್ ಇಲಿಂಗ್‌ವರ್ತ್ (Richard Illingworth) ಮತ್ತು ಅಲೆಕ್ಸ್ ವಾರ್ಫ್ (Alex Wharf) ಫೀಲ್ಡ್ ಅಂಪೈರ್‌ಗಳಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

Related Articles

Related image1
'ಹಾರ್ಟ್‌ಬೀಟ್ 175ಕ್ಕೆ ಹೋಗಿತ್ತು!' ಇಂಗ್ಲೆಂಡ್ ಎದುರಿನ ಹೈವೋಲ್ಟೇಜ್ ಪಂದ್ಯದ ಆ ಕ್ಷಣ ನೆನಪಿಸಿಕೊಂಡ ಸೂರ್ಯಕುಮಾರ್ ಯಾದವ್!
Related image2
ಮ್ಯಾನ್ ಆಫ್‌ ದಿ ಮ್ಯಾಚ್ ನನಗಲ್ಲ, ಈ ಕ್ರಿಕೆಟಿಗನಿಗೆ ಸಿಗಬೇಕಿತ್ತು! ಮತ್ತೆ ಫ್ಯಾನ್ಸ್ ಹೃದಯ ಗೆದ್ದ ಸಂಜು ಸ್ಯಾಮ್ಸನ್!
35
ಇಲಿಂಗ್‌ವರ್ತ್
Image Credit : Getty

ಇಲಿಂಗ್‌ವರ್ತ್

ಇಲಿಂಗ್‌ವರ್ತ್ ಅವರಿಗೆ ಇದು ಸತತ ಎರಡನೇ ಟಿ20 ವಿಶ್ವಕಪ್ ಫೈನಲ್ ಆಗಿದೆ. ಕಳೆದ ಬಾರಿ ಬಾರ್ಬಡೋಸ್‌ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯದಲ್ಲೂ ಅವರೇ ಅಂಪೈರ್ ಆಗಿದ್ದರು.

ಅಷ್ಟೇ ಅಲ್ಲ, 2023ರ ಏಕದಿನ ವಿಶ್ವಕಪ್ ಫೈನಲ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲೂ ಇಲಿಂಗ್‌ವರ್ತ್ ಅಂಪೈರಿಂಗ್ ಮಾಡಿದ್ದರು. ಮತ್ತೊಬ್ಬ ಅಂಪೈರ್ ಅಲೆಕ್ಸ್ ವಾರ್ಫ್ ಅವರಿಗೆ ಇದು ಮೊದಲ ವಿಶ್ವಕಪ್ ಫೈನಲ್ ಅನುಭವ. ವಾರ್ಫ್ ಈ ಹಿಂದೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಪರ ಆಟಗಾರನಾಗಿಯೂ ಆಡಿದ್ದರು.

45
ಐಸಿಸಿಯಿಂದ ಮ್ಯಾಚ್ ಆಫೀಶಿಯಲ್ಸ್ ಪಟ್ಟಿ ಪ್ರಕಟ
Image Credit : ANI

ಐಸಿಸಿಯಿಂದ ಮ್ಯಾಚ್ ಆಫೀಶಿಯಲ್ಸ್ ಪಟ್ಟಿ ಪ್ರಕಟ

ಅಲೆಕ್ಸ್ ವಾರ್ಫ್ ಅವರು 2022ರ ಮಹಿಳಾ ಏಕದಿನ ವಿಶ್ವಕಪ್ ಮತ್ತು 2023ರ ಪುರುಷರ ಏಕದಿನ ವಿಶ್ವಕಪ್‌ನಲ್ಲೂ ಪಂದ್ಯಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಿಶೇಷ ಅಂದ್ರೆ, ಈಡನ್ ಗಾರ್ಡನ್ಸ್‌ನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯವನ್ನು ಇವರಿಬ್ಬರೇ ನಿರ್ವಹಿಸಿದ್ದರು.

ಇನ್ನು, ದಕ್ಷಿಣ ಆಫ್ರಿಕಾದ ಅಲ್ಲಾವುದ್ದೀನ್ ಪಾಲೆಕರ್ ಮೂರನೇ ಅಂಪೈರ್ ಆಗಿ ಮತ್ತು ಆಡ್ರಿಯನ್ ಹೋಲ್ಡ್‌ಸ್ಟಾಕ್ ನಾಲ್ಕನೇ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆಂಡಿ ಪೈಕ್ರಾಫ್ಟ್ ಅವರು ಮ್ಯಾಚ್ ರೆಫರಿಯಾಗಿ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: 2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?

55
ಮನರಂಜನಾ ಕಾರ್ಯಕ್ರಮ
Image Credit : BCCI\Twitter

ಮನರಂಜನಾ ಕಾರ್ಯಕ್ರಮ

ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್ ಸ್ಟೇಡಿಯಂನಲ್ಲಿ ಭರ್ಜರಿ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಗಾಯಕ ರಿಕ್ಕಿ ಮಾರ್ಟಿನ್ ತಮ್ಮ ಹಾಡುಗಳ ಮೂಲಕ ವೇದಿಕೆ ಏರಲಿದ್ದಾರೆ. ಸುಮಾರು ಒಂದು ಲಕ್ಷ ಪ್ರೇಕ್ಷಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಇವರ ಜೊತೆಗೆ 'ದಾಂಡಿಯಾ ಕ್ವೀನ್' ಫಲ್ಗುಣಿ ಪಾಠಕ್ ಮತ್ತು ಬಾಲಿವುಡ್ ಗಾಯಕ ಸುಖ್ವಿಂದರ್ ಸಿಂಗ್ ಕೂಡ ಪ್ರದರ್ಶನ ನೀಡಲಿದ್ದಾರೆ.

ಭಾನುವಾರ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, 6:30ಕ್ಕೆ ಟಾಸ್ ನಡೆಯಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ಎರಡು ಸೆಂಚುರಿ ಮಿಸ್ ಆಯ್ತಾ? ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಸಂಜು ಸ್ಯಾಮ್ಸನ್!

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕ್ರಿಕೆಟ್
ಐಸಿಸಿ ಟಿ20 ವಿಶ್ವಕಪ್
ಕ್ರೀಡೆಗಳು

Latest Videos
Recommended Stories
Recommended image1
2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?
Recommended image2
ಕ್ರಿಕೆಟ್ ವರ್ಲ್ಡ್ ಕಪ್ ದಿಕ್ಕನ್ನೇ ಬದಲಿಸಿದ ಮ್ಯಾಜಿಕಲ್ 3 ಕ್ಯಾಚ್‌ಗಳನ್ನು ನೆನಪಿಸಿದ ಅಕ್ಷರ್ ಪಟೇಲ್!
Recommended image3
ಇಶಾನ್ ಕಿಶನ್, ವರುಣ್ ಚಕ್ರವರ್ತಿ ಔಟ್, ಟಿ20 ವಿಶ್ವಕಪ್ ಹೀರೋ ಆಗ್ತಾರಾ ಸಂಜು ಸ್ಯಾಮ್ಸನ್? ಐಸಿಸಿ ಪಟ್ಟಿ ರಿಲೀಸ್!
Related Stories
Recommended image1
'ಹಾರ್ಟ್‌ಬೀಟ್ 175ಕ್ಕೆ ಹೋಗಿತ್ತು!' ಇಂಗ್ಲೆಂಡ್ ಎದುರಿನ ಹೈವೋಲ್ಟೇಜ್ ಪಂದ್ಯದ ಆ ಕ್ಷಣ ನೆನಪಿಸಿಕೊಂಡ ಸೂರ್ಯಕುಮಾರ್ ಯಾದವ್!
Recommended image2
ಮ್ಯಾನ್ ಆಫ್‌ ದಿ ಮ್ಯಾಚ್ ನನಗಲ್ಲ, ಈ ಕ್ರಿಕೆಟಿಗನಿಗೆ ಸಿಗಬೇಕಿತ್ತು! ಮತ್ತೆ ಫ್ಯಾನ್ಸ್ ಹೃದಯ ಗೆದ್ದ ಸಂಜು ಸ್ಯಾಮ್ಸನ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved