ಚಂಡೀಗಢ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್‌ಗೆ ಹೊರಡಲು ನಿಂತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರನ್ನು ಅಲ್ಲಿಂದ ತೆರವುಗೊಳಿಸಲಾಯಿತು.
ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಓವರ್‌ಹೆಡ್‌ಬಿನ್‌ಗಳಲ್ಲಿ ಹೊಗೆ ಕಾಣಿಸಿಕೊಂಡಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ.
ಈ ಬಗ್ಗೆ ಇಂಡಿಗೋ ಪ್ರಕಟಣೆ ಹೊರಡಿಸಿದ್ದು, ‘ಹೈದರಾಬಾದ್‌ನಿಂದ ಚಂಡೀಗಢಕ್ಕೆ ಪ್ರಯಾಣಿಸಿದ್ದ ಇಂಡಿಗೋ ವಿಮಾನ ಲ್ಯಾಂಡಿಂಗ್ ಬಳಿಕ ಪ್ರಯಾಣಿಕರ ವೈಯಕ್ತಿಕ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೆಂಕಿ ಹತ್ತಿಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು’ ಎಂದಿದೆ.
09:55 PM (IST) May 06
ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ 'ಸ್ಪಿರಿಟ್' ಸಿನಿಮಾ ಬಿಡುಗಡೆ ಬಗ್ಗೆ ಹಬ್ಬಿದ್ದ ಎಲ್ಲಾ ಗಾಸಿಪ್‌ಗಳಿಗೆ ಚಿತ್ರತಂಡ ಫುಲ್ ಸ್ಟಾಪ್ ಇಟ್ಟಿದೆ. ಸಿನಿಮಾ ರಿಲೀಸ್ ತಡವಾಗಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
09:27 PM (IST) May 06
ಪ್ರಧಾನಿ ನರೇಂದ್ರ ಮೋದಿಯವರು, ‘ದಿ ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ 45ನೇ ವಾರ್ಷಿಕೋತ್ಸವ ಮತ್ತು ಅದರ ಸಂಸ್ಥಾಪಕರಾದ ರವಿಶಂಕರ್ ಗುರೂಜಿಯವರ 70 ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾದ…
09:19 PM (IST) May 06
ತಮಿಳುನಾಡಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ಬೆಳವಣಿಗೆಯನ್ನು ತಡೆಯಲು, ದಶಕಗಳ ಬದ್ಧವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಒಂದಾಗುವ ಸಾಧ್ಯತೆಗಳಿವೆ. ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಎರಡೂ ಪಕ್ಷಗಳು ಗುಪ್ತ ಮಾತುಕತೆ ನಡೆಸುತ್ತಿದೆ.
09:16 PM (IST) May 06
ದಳಪತಿ ವಿಜಯ್ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ, ಎಲ್ಲರ ಚಿತ್ತ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ. ಅದ್ರಲ್ಲೂ ದಶಕಗಳ ಹಿಂದೆ ತ್ರಿಷಾ ಸಂದರ್ಶನವೊಂದರಲ್ಲಿ ನಾನು ತಮಿಳುನಾಡು ಸಿಎಂ ಆಗ್ತಿನಿ ಅಂದಿದ್ರು. ಅದೀಗ ನಿಜವಾಗುತ್ತಾ?
08:52 PM (IST) May 06
ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಸುಮತಿ ಅವರು ಮಹಿಳಾ ಸುರಕ್ಷತೆಯ ವಾಸ್ತವ ಸ್ಥಿತಿಯನ್ನು ತಿಳಿಯಲು ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ವೇಷ ಮರೆಸಿ ಕಾರ್ಯಾಚರಣೆ ನಡೆಸಿದರು. ಈ ವೇಳೆ 40 ಪುರುಷರಿಂದ ಅಸಭ್ಯ ವರ್ತನೆ ಎದುರಿಸಿದ ಅವರು, ಆರೋಪಿಗಳಿಗೆ ಶಿಕ್ಷೆ ಬದಲು ಕೌನ್ಸೆಲಿಂಗ್ ನೀಡಿದ್ದಾರೆ.
08:21 PM (IST) May 06
ಭಾರತದಲ್ಲಿ ಜಾತಿ, ಧರ್ಮ ಅನ್ನೋದು ಮೈಗಂಟಿಕೊಂಡ ಚರ್ಮದಂತೆ. ನಾವು ಬಿಟ್ಟೇನೆಂದರೂ ಜನ ಇದನ್ನ ಬಿಡೋದಿಲ್ಲ. ಸದ್ಯ ವಿಜಯ್ವಿಚಾರದಲ್ಲೂ ಅದೇ ನಡೀತಾ ಇದೆ. ಆದ್ರೆ ನಿಜವಾಗ್ಲೂ ವಿಜಯ್‌ಗೆ ಮತ ಹಾಕಿ ಗೆಲ್ಲಿಸಿದ್ದು ಯಾರು? ಈ ಸ್ಟೋರಿ ನೋಡಿ..
08:05 PM (IST) May 06
07:31 PM (IST) May 06
ಸಲ್ಮಾನ್ ಖಾನ್ ಅವರ ಮುಂದಿನ ಸೂಪರ್‌ಹೀರೋ ಸಿನಿಮಾ, ಹಿಂದಿ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗಳಲ್ಲಿ ಒಂದಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ..
07:04 PM (IST) May 06
ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ನಂತರ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿ ಐತಿಹಾಸಿಕ ಬಹುಮತ ಗಳಿಸಿದೆ. ಈ ಸೋಲನ್ನು "ಬಲವಂತದ ಸೋಲು" ಎಂದು ಕರೆದಿರುವ ಮಮತಾ ಬ್ಯಾನರ್ಜಿ, ರಾಜೀನಾಮೆ ನೀಡಲು ನಿರಾಕರಿಸಿ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.
06:47 PM (IST) May 06
ಕಾಲಿವುಡ್‌ನ ಅಚ್ಚುಮೆಚ್ಚಿನ ಜೋಡಿ ವಿಜಯ್ ಮತ್ತು ತ್ರಿಶಾ ಅವರ ಸ್ನೇಹ, ಹಲವು ಯಶಸ್ವಿ ಚಿತ್ರಗಳ ನಂತರವೂ ಮುಂದುವರೆದಿದೆ. ವಿಜಯ್ ರಾಜಕೀಯ ಪ್ರವೇಶದ ನಂತರ, ಅವರ ಸಂಬಂಧದ ಕುರಿತ ವದಂತಿಗಳು ಮತ್ತು ಸಾರ್ವಜನಿಕರ ಕುತೂಹಲ ಮತ್ತೆ ಹೆಚ್ಚಾಗಿದೆ.
06:34 PM (IST) May 06
06:16 PM (IST) May 06
ಅಲ್ಲು ಅರ್ಜುನ್ ಅವರ ಮುಂಬರುವ ಸಿನಿಮಾ 'ರಾಕಾ' ಬಗ್ಗೆ ಭಾರೀ ಕುತೂಹಲ ಮೂಡಿದೆ. ಇದಕ್ಕೆ 'ಪುಷ್ಪ: ದಿ ರೈಸ್' ಜೊತೆಗಿನ ನಂಟು ಕಾರಣ ಎನ್ನಲಾಗುತ್ತಿದೆ. ಆದರೆ ಇದು ನಿಜವಾದ ಕಥೆಯ ಲಿಂಕ್ ಅಥವಾ ಕೇವಲ ಒಂದು ಸ್ಮಾರ್ಟ್ ಸ್ಟ್ರಾಟೆಜಿನಾ? ವಿವರ ಇಲ್ಲಿದೆ.
06:12 PM (IST) May 06
ಐಪಿಎಲ್ 2026ರ ಸೀಸನ್‌ನಲ್ಲಿ ಆರಂಭದಲ್ಲಿ ಮಂಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಪ್ಲೇಆಫ್ ರೇಸ್‌ಗೆ ಮರಳಿದೆ. ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಮತ್ತು ರಾಜಸ್ಥಾನ್ ರಾಯಲ್ಸ್ ಜೊತೆ 3 ಮತ್ತು 4ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.
05:56 PM (IST) May 06
05:42 PM (IST) May 06
ಬಹುನಿರೀಕ್ಷಿತ 'ಈವಿಲ್ ಡೆಡ್ ಬರ್ನ್' ಸಿನಿಮಾದ ಟ್ರೇಲರ್ ಕೊನೆಗೂ ರಿಲೀಸ್ ಆಗಿದ್ದು, ಪ್ರೇಕ್ಷಕರನ್ನು ಮತ್ತೆ ಭಯಾನಕ ಜಗತ್ತಿಗೆ ಕರೆದೊಯ್ದಿದೆ. ಖ್ಯಾತ ಹಾರರ್ ಸರಣಿಯ ಆರನೇ ಸಿನಿಮಾ ಇದಾಗಿದ್ದು, ಸೆಬಾಸ್ಟಿಯನ್ ವಾನಿಸೆಕ್ ಇದರ ನಿರ್ದೇಶನ ಮಾಡಿದ್ದಾರೆ.
05:22 PM (IST) May 06
ಮುಂಬೈನಲ್ಲಿ ಫ್ಯಾಮಿಲಿ ಜೊತೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಯನ್ನು ಪಾಪರಾಜಿಗಳು ಸುತ್ತುವರಿದರು. ಇದರಿಂದ ತಾಳ್ಮೆ ಕಳೆದುಕೊಂಡ ರಣಬೀರ್, ಫೋಟೋಗ್ರಾಫರ್‌ಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
05:13 PM (IST) May 06
05:06 PM (IST) May 06
ಮಲಯಾಳಂ ಸಿನಿಮಾರಂಗದ ಸಾರ್ವಕಾಲಿಕ ಹಿಟ್ ಫ್ರಾಂಚೈಸಿಗಳಲ್ಲಿ 'ದೃಶ್ಯಂ' ಕೂಡ ಒಂದು. ಈಗ 'ದೃಶ್ಯಂ 3' ಸಿನಿಮಾ ಮೇ 21ಕ್ಕೆ ಥಿಯೇಟರ್‌ಗೆ ಬರ್ತಿದೆ. ಆದ್ರೆ, ಒಂದು ಹೊಸ ವರದಿ ಪ್ರಕಾರ, ಸಿನಿಮಾದ ಮೊದಲ ಶೋ ಕೇರಳದಲ್ಲಿ ನಡೆಯಲ್ಲ.
04:52 PM (IST) May 06
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ 108 ಸೀಟುಗಳನ್ನು ಗೆದ್ದು ಅಧಿಕಾರದತ್ತ ಹೆಜ್ಜೆ ಇಟ್ಟಿದೆ. ಈ ರಾಜಕೀಯ ಸಂಭ್ರಮದ ನಡುವೆಯೇ, ಸೆನ್ಸಾರ್ ವಿವಾದದಿಂದಾಗಿ ನಿಂತುಹೋಗಿದ್ದ ಅವರ 'ಜನ ನಾಯಗನ್' ಸಿನಿಮಾವನ್ನು ಬಿಡುಗಡೆ ಮಾಡಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.
04:47 PM (IST) May 06
ಇಂದು ಗೂಗಲ್‌ನಲ್ಲಿ ವಿಜಯ್ ಹೆಸರಿಗಿಂತ ಹೆಚ್ಚಾಗಿ ಜಾನ್ ಆರೋಕಿಯಾಸಾಮಿ ಬಗ್ಗೆ ಜನ ಹುಡುಕಾಡುತ್ತಿದ್ದಾರೆ. ಸಿನಿಮಾ ಪರದೆಯ ಮೇಲೆ ನೂರಾರು ವಿಲನ್‌ಗಳನ್ನು ಒದ್ದೋಡಿಸುತ್ತಿದ್ದ ದಳಪತಿಯನ್ನು, ರಾಜಕೀಯದಲ್ಲಿ ಒಬ್ಬ ರಿಯಲ್ ಹೀರೊ ಆಗಿ ರೂಪಿಸಿದ ಶ್ರೇಯ ಈ 'ಪೊಲಿಟಿಕಲ್ ಮಾಸ್ಟರ್‌ಮೈಂಡ್'ಗೆ ಸಲ್ಲುತ್ತದೆ!
04:36 PM (IST) May 06
ನಟ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ರಾಜಕೀಯದಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅವರ 'GOAT' ಸಿನಿಮಾದ ಕಾರಿನ ನಂಬರ್ ಪ್ಲೇಟ್ ಮತ್ತು ಸಹ-ನಟರು, ಜ್ಯೋತಿಷಿಗಳ ಭವಿಷ್ಯವಾಣಿಗಳು ಈ ಗೆಲುವನ್ನು ಮೊದಲೇ ಊಹಿಸಿದ್ದವು ಎಂಬ ಚರ್ಚೆ ಈಗ ವ್ಯಾಪಕವಾಗಿದೆ.
04:30 PM (IST) May 06
ಮೆಟ್ ಗಾಲಾ ಕಾರ್ಯಕ್ರಮದಲ್ಲಿ, ಇಶಾ ಅಂಬಾನಿ ಗೌರವ್ ಗುಪ್ತಾ ವಿನ್ಯಾಸದ ಸೀರೆಯೊಂದಿಗೆ ಕಂಗೊಳಿಸಿದರು. ಆಭರಣಗಳು ಕೇವಲ ಫ್ಯಾಷನ್ ಆಗಿರದೆ, ಹೈದರಾಬಾದ್ ನಿಜಾಮ ಮತ್ತು ಮೊಘಲ್ ಚಕ್ರವರ್ತಿಗಳಿಗೆ ಸೇರಿದ ಐತಿಹಾಸಿಕ ಮಹತ್ವ ಹೊಂದಿದ್ದವು, ಈ ಮೂಲಕ ಭಾರತದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿದರು.
03:55 PM (IST) May 06
03:50 PM (IST) May 06
03:37 PM (IST) May 06
ಸಲ್ಮಾನ್ ಖಾನ್ ಪ್ರತಿ ಸಿನಿಮಾಗೆ ಅಂದಾಜು 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇದರ ಜೊತೆಗೆ ಅವರು 'ಸಲ್ಮಾನ್ ಖಾನ್ ಫಿಲ್ಮ್ಸ್' ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರೆ. 'ಚಿಲ್ಲರ್ ಪಾರ್ಟಿ', 'ಡಾ. ಕ್ಯಾಬಿ' ಮತ್ತು 'ರಾಧೆ' ಅಂತಹ ಸಿನಿಮಾಗಳು ಇವರಿಗೆ ದೊಡ್ಡ ಲಾಭ ತಂದುಕೊಟ್ಟಿವೆ.
01:11 PM (IST) May 06
12:31 PM (IST) May 06
11:40 AM (IST) May 06
2004ರಲ್ಲಿ ಬಂದ 'ಗಿಲ್ಲಿ' ಸಿನಿಮಾ ನೆನಪಿದೆಯೇ? ಆ ಚಿತ್ರದ 'ಅಪ್ಪಾಡಿ ಪೋಡು' ಹಾಡಿಗೆ ಇಡೀ ಸೌತ್ ಇಂಡಿಯಾ ಸ್ಟೆಪ್ ಹಾಕಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಕ್ರೇಜ್ 'ತಿರುಪಾಚಿ', 'ಆದಿ' ಮತ್ತು 'ಕುರುವಿ' ಸಿನಿಮಾಗಳ ಮೂಲಕ ಮುಂದುವರಿಯಿತು. ಇತ್ತೀಚೆಗೆ 'ಲಿಯೋ' ಸಿನಿಮಾದಲ್ಲಿ ಮತ್ತೆ ಒಂದಾದ ಈ ಜೋಡಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದರು.
11:09 AM (IST) May 06
08:17 AM (IST) May 06
ಪರ್ಷಿಯನ್ ಕೊಲ್ಲಿಯ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಸೇನಾ ಇಂಧನ ಪೂರೈಕೆ ವಿಮಾನ ಬೋಯಿಂಗ್ ಕೆಸಿ- 135 ಸ್ಟ್ರಾಟೋಟ್ಯಾಂಕರ್ ನಾಪತ್ತೆಯಾಗಿದೆ. ಇರಾನ್ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡುತ್ತಿದ್ದ ಈ ವಿಮಾನ, ಕಣ್ಮರೆಯಾಗುವ ಮುನ್ನ ತುರ್ತು ಸಂದೇಶ ರವಾನಿಸಿತ್ತು
07:41 AM (IST) May 06
07:27 AM (IST) May 06
ಹೈದರಾಬಾದ್ ಮೂಲದ ಉದ್ಯಮಿ ಮತ್ತು ಕೋಟ್ಯಧಿಪತಿ ಸುಧಾ ರೆಡ್ಡಿ ಸುಮಾರು 142 ಕೋಟಿ ರು. ಮೌಲ್ಯದ ನೆಕ್ಲೇಸ್ ಧರಿಸಿ, ದಕ್ಷಿಣ ಭಾರತೀಯ ಪಾರಂಪರಿಕ ವಸ್ತ್ರಭೂಷಣದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.
06:38 AM (IST) May 06
05:03 AM (IST) May 06