Published : Mar 05, 2026, 06:48 AM ISTUpdated : Mar 06, 2026, 12:07 AM IST

India Latest News Live: ಚಿರಂಜೀವಿ ಇಂಡಸ್ಟ್ರಿ ಹಿಟ್ ಸಿನಿಮಾದ ಹಿಂದೆ ದೊಡ್ಡ ವಿವಾದ - ಪತ್ನಿ ಸುರೇಖಾ ಹೆಸರು ಯಾಕೆ ಬಂತು?

ಸಾರಾಂಶ

ಭಾರತದತ್ತ ಹೊರಟ ಶೇ.40ರಷ್ಟು ತೈಲ ಮತ್ತು ಶೇ.50ರಷ್ಟು ಎಲ್‌ಎನ್‌ಜಿ ಸಾಗಿ ಬರುತ್ತಿದ್ದ ಹೋರ್ಮುಜ್‌ ಜಲಸಂಧಿಯನ್ನು ಸಂಪೂರ್ಣ ಬಂದ್‌ ಮಾಡಿರುವ ಇರಾನ್‌, ಅಲ್ಲಿಂದ ಸಾಗುವ ಎಲ್ಲಾ ಹಡಗುಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಘೋಷಿಸಿದೆ. ಇದು ಭಾರತೀಯ ಹಡುಗಗಳ ಮಾಲೀಕರನ್ನು ಚಿಂತಾಕ್ರಾಂತರನ್ನಾಗಿಸಿದೆ.

ರಾಷ್ಟ್ರೀಯ ಹಡಗು ಮಾಲೀಕರ ಸಂಘವು ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಭಾರತೀಯ ಹಡಗುಗಳು ಸುರಕ್ಷಿತವಾಗಿ ಸಾಗುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ‘ಭಾರತೀಯ ಧ್ವಜ ಇರುವ 27 ಹಡಗುಗಳು ಪ್ರಸ್ತುತ ಹೋರ್ಮುಜ್‌ ಪ್ರದೇಶದಲ್ಲಿ ಸಿಲುಕಿಕೊಂಡಿವೆ. ಪರಿಣಾಮ 10,000 ಕೋಟಿ ರು.ಗೂ ಅಧಿಕ ಮೌಲ್ಯದ ನಮ್ಮ ಆಸ್ತಿಗಳು ಅಪಾಯದಲ್ಲಿವೆ. ಆದ್ದರಿಂದ ದಯವಿಟ್ಟು ಇರಾನ್‌ ಮತ್ತು ಇಸ್ರೇಲ್‌ ಜತೆ ರಾಜತಾಂತ್ರಿಕ ಮಾತುಕತೆ ನಡೆಸಿ ಅವುಗಳು ಸುರಕ್ಷಿತವಾಗಿ ಸಾಗಲು ಅನುವು ಮಾಡಿಕೊಡಿ’ ಎಂದು ಅದರಲ್ಲಿ ತಿಳಿಸಲಾಗಿದೆ.

ಸದ್ಯ ಹೋರ್ಮುಜ್‌ ಸಮೀಪದ ಪರ್ಷಿಯನ್ ಕೊಲ್ಲಿ, ಒಮಾನ್ ಕೊಲ್ಲಿಯಲ್ಲಿ ಭಾರತದ ಸುಮಾರು 37 ಹಡಗುಗಳು ಸಿಲುಕಿದ್ದು, ಅದರಲ್ಲಿ ಅಂದಾಜು 1,109 ನಾವಿಕರು ಇದ್ದಾರೆಂದು ತಿಳಿದುಬಂದಿದೆ.

12:08 AM (IST) Mar 06

ಚಿರಂಜೀವಿ ಇಂಡಸ್ಟ್ರಿ ಹಿಟ್ ಸಿನಿಮಾದ ಹಿಂದೆ ದೊಡ್ಡ ವಿವಾದ - ಪತ್ನಿ ಸುರೇಖಾ ಹೆಸರು ಯಾಕೆ ಬಂತು?

ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದ ಒಂದು ಇಂಡಸ್ಟ್ರಿ ಹಿಟ್ ಸಿನಿಮಾ ಅಂದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದದಲ್ಲಿ ಚಿರಂಜೀವಿ ಅವರ ಪತ್ನಿ ಸುರೇಖಾ ಕೊನಿದೆಲಾ ಅವರ ಹೆಸರು ಕೂಡ ಕೇಳಿಬಂದಿತ್ತು. ಆ ವಿವಾದ ಏನಿತ್ತು ಮತ್ತು ಅದರ ಹಿಂದಿನ ಸತ್ಯಾಸತ್ಯತೆ ಏನು?

Read Full Story

11:28 PM (IST) Mar 05

ಭಾರತ ಇಂಗ್ಲೆಂಡ್ ಸೆಮೀಸ್‌ನಲ್ಲಿ 34 ಸಿಕ್ಸರ್, ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ

ಭಾರತ ಇಂಗ್ಲೆಂಡ್ ಸೆಮೀಸ್‌ನಲ್ಲಿ 34 ಸಿಕ್ಸರ್, ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ನಿರ್ಮಾಣವಾಗಿದೆ. ಎರಡೂ ತಂಡಗಳು ಸಿಕ್ಸರ್ ಮೂಲಕ ಅಬ್ಬರಿಸಿದೆ. ಇದರ ಜೊತೆ ಕೆಲ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ.

Read Full Story

11:22 PM (IST) Mar 05

'ಬೇಡ' ಎಂದ ರಜನಿಕಾಂತ್‌ಗೆ ಇಳಯರಾಜಾ ಹೇಳಿದ ಆ ಭವಿಷ್ಯ! ಸೂಪರ್‌ಸ್ಟಾರ್‌ಗೆ ಮಹಿಳಾ ಫ್ಯಾನ್ಸ್ ಹೆಚ್ಚಿಸಿದ ಹಾಡಿದು!

'ಮನ್ನನ್' ಚಿತ್ರಕ್ಕಾಗಿ ಇಳಯರಾಜಾ ಕಂಪೋಸ್ ಮಾಡಿದ 'ಅಮ್ಮಾ ಎಂಡ್ರು ಅಳೈಕ್ಕಾದ' ಹಾಡು ರಜನಿಕಾಂತ್‌ಗೆ ಸಮಾಧಾನ ತರಲಿಲ್ಲ. ಆದರೆ, ಇಳಯರಾಜಾ ಮಾತಿನಂತೆ ಆ ಹಾಡು ಸೂಪರ್ ಹಿಟ್ ಆಗಿದ್ದು ಹೇಗೆ ಗೊತ್ತಾ?

Read Full Story

10:54 PM (IST) Mar 05

18ನೇ ಓವರ್‌ನಲ್ಲಿ ಸುಳಿವು, ಕೊನೆಯಲ್ಲಿ ತಿರುವು, ಇಂಗ್ಲೆಂಡ್ ಮಣಿಸಿ ಫೈನಲ್‌ ಪ್ರವೇಶಿಸಿದ ಭಾರತ

18ನೇ ಓವರ್‌ನಲ್ಲಿ ಸುಳಿವು, ಕೊನೆಯಲ್ಲಿ ತಿರುವು, ಇಂಗ್ಲೆಂಡ್ ಮಣಿಸಿ ಫೈನಲ್‌ ಪ್ರವೇಶಿಸಿದ ಭಾರತ, ಬೆತೆಲ್ ಅಬ್ಬರದ ನಡುವೆ ಕೊನೆಯ ಓವರ್‌ನಲ್ಲಿ ಶಿವಂ ದುಬೆ ಮ್ಯಾಜಿಕ್ ವರ್ಕ್ ಆಗಿದೆ. ಭಾರತ ರೋಚಕವಾಗಿ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ.

 

Read Full Story

10:07 PM (IST) Mar 05

ಕಷ್ಟದಲ್ಲಿದ್ದ ಹಿರಿಯ ನಟಿಗೆ ನೆರವಾದ ಅಲ್ಲು ಅರ್ಜುನ್ - ತಿಂಗಳಿಗೆ ಎಷ್ಟು ಹಣ ಸಹಾಯ ಮಾಡ್ತಾರೆ ಗೊತ್ತಾ?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ದೊಡ್ಡ ಮನಸ್ಸನ್ನು ತೋರಿಸಿದ್ದಾರೆ. 50 ವರ್ಷಗಳಿಂದ ಚಿತ್ರರಂಗದಲ್ಲಿರುವ ಹಿರಿಯ ನಟಿಯೊಬ್ಬರ ಕಷ್ಟಕ್ಕೆ ಸ್ಪಂದಿಸಿ, ಆರ್ಥಿಕ ಸಂಕಷ್ಟದಲ್ಲಿದ್ದ ಅವರಿಗೆ ಸಹಾಯ ಮಾಡಿದ್ದಾರೆ.

Read Full Story

09:33 PM (IST) Mar 05

ಅಬ್ಬಬ್ಬಾ! ಹಿಮ ತಿಂದು ಟೇಸ್ಟ್ ಹೇಗಿದೆ ಅಂದ್ರು ಗಜ ಸಿನಿಮಾದ ನಟಿ! ವಿಡಿಯೋ ನೋಡಿ ಫ್ಯಾನ್ಸ್ ಶಾಕ್

ಗಜ ಸಿನಿಮಾದ ನಟಿ ನವ್ಯಾ ನಾಯರ್, ಸ್ನೇಹಿತರ ಜೊತೆ ರಜೆಯ ಮಜಾ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಮಕ್ಕಳಂತೆ ಹಿಮದಲ್ಲಿ ಆಟವಾಡುತ್ತಾ, ಅದನ್ನು ತಿಂದು ರುಚಿ ನೋಡಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

Read Full Story

09:20 PM (IST) Mar 05

ಡಿವೋರ್ಸ್ ವಿವಾದ ನಡುವೆ ಮ್ಯಾಚಿಂಗ್ ಡ್ರೆಸ್ ಹಾಕಿ ಮದುವೆ ವೇದಿಕೆಯಲ್ಲಿ ವಿಜಯ್-ತ್ರಿಶಾ, ವಿಡಿಯೋ

ಡಿವೋರ್ಸ್ ವಿವಾದ ನಡುವೆ ಮ್ಯಾಚಿಂಗ್ ಡ್ರೆಸ್ ಹಾಕಿ ಮದುವೆ ವೇದಿಕೆಯಲ್ಲಿ ವಿಜಯ್-ತ್ರಿಶಾ,ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಒಂದೇ ಕಾರಿನಲ್ಲಿ ಜೊತೆಯಾಗಿ ಬಂದ ಈ ಜೋಡಿ ವಿರುದ್ದ ಫ್ಯಾನ್ಸ್ ಗರಂ ಆಗಿದ್ದಾರೆ.

 

Read Full Story

08:55 PM (IST) Mar 05

Video Viral - ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ - ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ

ನಟ ನಾಗ ಚೈತನ್ಯ ಅವರ ಹೊಸ ಸಿನಿಮಾ 'ವೃಷಕರ್ಮ' ಫಸ್ಟ್ ಗ್ಲಿಂಪ್ಸ್ ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿಂದ ಬಿದ್ದಿದ್ದಾರೆ. ಈ ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮದ ಆಯೋಜಕರ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

08:54 PM (IST) Mar 05

ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ

ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ. ವಾಂಖೆಡೆಯಲ್ಲಿನ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ ಟಿ20 ವಿಶ್ವಕಪ್‌ನಲ್ಲಿ ದಾಖಲೆಯ 253 ರನ್ ಸಿಡಿಸಿದೆ.

 

Read Full Story

08:19 PM (IST) Mar 05

ಬಿಹಾರ ಬಳಿಕ ಬಂಗಾಳದಲ್ಲಿ ಕೋಲಾಹಲ, ರಾಜ್ಯಪಾಲ ಆನಂದ್ ಬೋಸ್ ದಿಢೀರ್ ರಾಜೀನಾಮೆ

ಬಿಹಾರ ಬಳಿಕ ಬಂಗಾಳದಲ್ಲಿ ಕೋಲಾಹಲ, ರಾಜ್ಯಪಾಲ ಆನಂದ್ ಬೋಸ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಪಾಲರ ಈ ನಡೆ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

 

Read Full Story

08:15 PM (IST) Mar 05

Shakeela - ಆ ನಟನ ರೂಮ್‌ನಲ್ಲಿ ಶಕೀಲಾ.. ರಾತ್ರಿ ನಡೆದ ಆ ಘಟನೆ ನೆನೆದು ನಕ್ಕಿದ್ಯಾಕೆ ನಟಿ!

ನಟಿ ಶಕೀಲಾ ಮತ್ತು ದಿವಂಗತ ಹಾಸ್ಯನಟ ವೇಣು ಮಾಧವ್ ನಡುವೆ ನಡೆದ ಒಂದು ತಮಾಷೆಯ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶೂಟಿಂಗ್ ವೇಳೆ ಹೋಟೆಲ್ ರೂಮ್ ಸಮಸ್ಯೆಯಿಂದಾಗಿ ವೇಣು ಮಾಧವ್ ಅವರ ಕೋಣೆಯಲ್ಲಿ ಮಲಗಿದ್ದ ಶಕೀಲಾಗೆ ಒಂದು ವಿಚಿತ್ರ ಅನುಭವವಾಗಿತ್ತು.

Read Full Story

08:14 PM (IST) Mar 05

20 ಕೋಟಿಯ ಬಂಪರ್‌ ಲಾಟರಿ ಹಣಕ್ಕಾಗಿ ಕೋರ್ಟ್‌ಗೆ ಕಥೆ ಕಟ್ಟಿದ ನಿವೃತ್ತ ಪೊಲೀಸ್‌, ಸೀಲ್ಡ್ ಕವರ್ ಓಪನ್ ಮಾಡಿದಾಗ ಬಯಲಾಯ್ತು ಸತ್ಯ!

ಶಬರಿಮಲೆ ತುಪ್ಪದ ಪಾರ್ಸೆಲ್‌ನಲ್ಲಿ ತನ್ನ 20 ಕೋಟಿ ರೂಪಾಯಿ ಬಂಪರ್ ಲಾಟರಿ ಟಿಕೆಟ್ ಕಳುವಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯವು ಮೂಲ ಟಿಕೆಟ್ ಅನ್ನು ಪರಿಶೀಲಿಸಿ, ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎಂದು ತೀರ್ಪು ನೀಡಿದೆ.

Read Full Story

07:45 PM (IST) Mar 05

Iconic Villains - ಹೀರೋಗಳನ್ನೇ ಮೀರಿಸಿದ ಖಳನಾಯಕರು - ಇವರ ನಟನೆ ಮುಂದೆ ಸ್ಟಾರ್‌ಗಳೂ ಸೈಡ್‌ಗೆ!

ಒಂದು ಸಿನಿಮಾದಲ್ಲಿ ಹೀರೋ ಎಷ್ಟು ಪವರ್‌ಫುಲ್ ಆಗಿರುತ್ತಾನೋ, ಆತನನ್ನು ಎದುರಿಸುವ ವಿಲನ್ ಕೂಡ ಅಷ್ಟೇ ಸ್ಟ್ರಾಂಗ್ ಆಗಿರಬೇಕು. ಕೆಲವು ಚಿತ್ರಗಳಲ್ಲಿ ಖಳನಾಯಕರೇ ತಮ್ಮ ನಟನೆಯಿಂದ ಹೀರೋಗಳನ್ನು ಮೀರಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.

Read Full Story

07:30 PM (IST) Mar 05

ಅರ್ಜುನ್ ಮದುವೆಯಲ್ಲಿ ಮಿಂಚಿದ್ದು ಅಕ್ಕ ಸಾರಾ ತೆಂಡೂಲ್ಕರ್, ಪಿಂಕ್ ಸೀರೆಯಲ್ಲಿ ಮೋಡಿ

ಅರ್ಜುನ್ ಮದುವೆಯಲ್ಲಿ ಮಿಂಚಿದ್ದು ಅಕ್ಕ ಸಾರಾ ತೆಂಡೂಲ್ಕರ್, ಪಿಂಕ್ ಸೀರೆಯಲ್ಲಿ ಮೋಡಿ, ಮದುವೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಅದು ಸಾರಾ. ಇದಕ್ಕೆ ಮುಖ್ಯ ಕಾರಣ ಮನೀಶ್ ಮಲ್ಹೋತ್ರ ಡಿಸೈನ್ ಮಾಡಿದ ಪಿಂಕ್ ಸೀರೆ.

 

Read Full Story

07:29 PM (IST) Mar 05

T20 WC 2026 - ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ - ಟೀಂ ಇಂಡಿಯಾಗೆ ಕಪಿಲ್ ದೇವ್ 'ಗುಡ್ ಲಕ್'!

T20 World Cup 2026: 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ 2026ರ ಸೆಮಿಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾಗೆ ಶುಭ ಹಾರೈಸಿದ್ದಾರೆ. ಭಾರತ ಫೈನಲ್ ತಲುಪಿ, ಪ್ರಶಸ್ತಿ ಉಳಿಸಿಕೊಳ್ಳಲಿ ಎಂದು ಆಶಿಸಿದ್ದಾರೆ.

Read Full Story

07:23 PM (IST) Mar 05

ಶುರುವಾಯ್ತಲ್ಲ ಬೇಸಿಗೆ, 30 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ 5 ಅತ್ಯುತ್ತಮ ಎಸಿಗಳು!

30,000 ರೂ. ಬಜೆಟ್‌ನಲ್ಲಿ 1.5 ಟನ್ ಸಾಮರ್ಥ್ಯದ 3 ಸ್ಟಾರ್ ಎಸಿ ಖರೀದಿಸಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕ್ರೂಸ್, ಗೋದ್ರೇಜ್, ವೋಲ್ಟಾಸ್ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ಎಸಿಗಳ ಮೇಲೆ ಲಭ್ಯವಿರುವ ಭರ್ಜರಿ ರಿಯಾಯಿತಿ, ಬೆಲೆ ಮತ್ತು ವಾರಂಟಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

Read Full Story

07:12 PM (IST) Mar 05

China-Iran Relations - ಇರಾನ್‌ಗೆ ಚೀನಾ ಸಪೋರ್ಟ್ ಬರೀ ಮಾತಿನಲ್ಲೇ? ಅಮೆರಿಕದ ಮಾಜಿ ಅಧಿಕಾರಿ ಬಿಚ್ಚಿಟ್ಟ ಸತ್ಯ

ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಚೀನಾ ಇರಾನ್‌ಗೆ ನೇರ ಸೇನಾ ಸಹಾಯ ನೀಡಿಲ್ಲ. ಐತಿಹಾಸಿಕವಾಗಿ ಬೆಂಬಲ ನೀಡಿದ್ದರೂ, ಸದ್ಯಕ್ಕೆ ಬರೀ ಬಾಯಿ ಮಾತಿನ ಬೆಂಬಲವನ್ನಷ್ಟೇ ನೀಡುತ್ತಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಅಧಿಕಾರಿ ಜಾನ್ ಫೈನರ್ ಹೇಳಿದ್ದಾರೆ.

Read Full Story

06:59 PM (IST) Mar 05

ಇರಾನ್​ ಪತನಕ್ಕೆ ಕಾರಣವಾದಳಾ ಈ ಯುವತಿ? ಖಮೇನಿ ಬದುಕಿಗೆ ಕೊನೆ ಮೊಳೆ ಹೊಡೆದಳಾ ಈಕೆ? ಏನಿದು ಸ್ಟೋರಿ?

ಇರಾನ್ ಸರ್ವಾಧಿಕಾರಿ ಅಲಿ ಖಮೇನಿಯ ಸಾವಿನ ನಂತರ, 2004ರಲ್ಲಿ ಹಿಜಾಬ್ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ಅಹೌ ದರಾಯೈ ಎಂಬ ವಿದ್ಯಾರ್ಥಿನಿಯ ಹೆಸರು ಮುನ್ನೆಲೆಗೆ ಬಂದಿದೆ. ಆಕೆಯ ದಿಟ್ಟ ಪ್ರತಿಭಟನೆಯು ಇರಾನ್‌ನ ಮಹಿಳೆಯರಲ್ಲಿ ಪ್ರತಿರೋಧದ ಕಿಡಿಯನ್ನು ಹೊತ್ತಿಸಿತು.

Read Full Story

06:52 PM (IST) Mar 05

ಚಿರಂಜೀವಿ ಅವರ 40 ವರ್ಷದ ಕೆರಿಯರ್‌ನ ಕಪ್ಪುಚುಕ್ಕೆ ಈ ಸಿನಿಮಾ - 100 ಕೋಟಿ ಹಾಕಿ ವಾರದಲ್ಲೇ ಎತ್ತಂಗಡಿ!

ಮೆಗಾಸ್ಟಾರ್ ಚಿರಂಜೀವಿ ಅವರ 40 ವರ್ಷಗಳ ಸಿನಿಮಾ ಜರ್ನಿಯಲ್ಲಿ ಸಾಕಷ್ಟು ಹಿಟ್‌ಗಳಿವೆ. ಆದರೆ, 'ಆಚಾರ್ಯ' ಸಿನಿಮಾ ಅವರ ವೃತ್ತಿಜೀವನಕ್ಕೆ ಒಂದು ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ರಾಮ್ ಚರಣ್ ಜೊತೆ ನಟಿಸಿದ ಈ ಸಿನಿಮಾ ಯಾಕೆ ಅಷ್ಟು ಹೀನಾಯವಾಗಿ ಸೋತಿತು?

Read Full Story

06:20 PM (IST) Mar 05

ಸೆಮಿಫೈನಲ್ ಹೋರಾಟಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11? ಸಂಭಾವ್ಯ ತಂಡದಲ್ಲಿದೆ ಅಚ್ಚರಿ

ಸೆಮಿಫೈನಲ್ ಹೋರಾಟಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11? ಸಂಭಾವ್ಯ ತಂಡದಲ್ಲಿದೆ ಅಚ್ಚರಿ, ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೆ ಬದಲಾವಣೆ ಮಾಡಿದರೆ ಉತ್ತಮವೇ? ಯಾರಿಗೆ ಚಾನ್ಸ್, ಯಾರಿಗೆ ಕೊಕ್?

 

Read Full Story

06:10 PM (IST) Mar 05

Pawan Kalyan - ಪವರ್ ಸ್ಟಾರ್‌ಗೆ ಚಿತ್ರರಂಗದಲ್ಲಿರುವ ಆ ಮೂವರು ಆಪ್ತ ಸ್ನೇಹಿತರು ಇವರೇನಾ?

ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಚಿತ್ರರಂಗದಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ. ಅವರ ಅಭಿಮಾನಿಗಳ ಪಟ್ಟಿಯಲ್ಲಿ ಅನೇಕ ಸೆಲೆಬ್ರಿಟಿಗಳೂ ಇದ್ದಾರೆ. ಆದರೆ, ಟಾಲಿವುಡ್‌ನಲ್ಲಿ ಪವನ್ ಕಲ್ಯಾಣ್‌ಗೆ ಅತ್ಯಂತ ಆಪ್ತರಾಗಿರುವ ಆ ಮೂವರು ಸ್ನೇಹಿತರು ಯಾರು ಗೊತ್ತಾ?

Read Full Story

06:01 PM (IST) Mar 05

Ayatollah Khamenei death - ಖಮೇನಿ ಮರಣದ ಐದು ದಿನಗಳ ಬಳಿಕ ಭಾರತ ಸಂತಾಪ

India Condoles Khamenei s Death ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅಧಿಕೃತವಾಗಿ ಸಂತಾಪ. ವಿದೇಶಾಂಗ ಕಾರ್ಯದರ್ಶಿ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.

Read Full Story

05:44 PM (IST) Mar 05

Viral Video - ಮಗಳನ್ನು ಚುಡಾಯಿಸುತ್ತಿದ್ದ ಪುಂಡನಿಗೆ ಕಾಲೇಜು ಕ್ಯಾಂಪಸ್‌ನಲ್ಲೇ ಅಪ್ಪನಿಂದ ಧರ್ಮದೇಟು!

ಪುಣೆಯ ಕಾಲೇಜೊಂದರಲ್ಲಿ ತನ್ನ ಮಗಳಿಗೆ ಆನ್‌ಲೈನ್ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಯುವಕನಿಗೆ, ವಿದ್ಯಾರ್ಥಿನಿಯ ತಂದೆ ಕ್ಯಾಂಪಸ್‌ನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

Read Full Story

05:42 PM (IST) Mar 05

ಯುದ್ಧದಿಂದ ಕುವೈತ್‌ನಲ್ಲಿ ಸಿಲುಕಿದ ಪತ್ನಿ, ಕಳೆದ 5 ದಿನದಿಂದ ಶವಾಗಾರದಲ್ಲಿದೆ ಗಂಡನ ಮೃತದೇಹ

ಯುದ್ಧದಿಂದ ಕುವೈತ್‌ನಲ್ಲಿ ಸಿಲುಕಿದ ಪತ್ನಿ, ಕಳೆದ 5 ದಿನದಿಂದ ಶವಾಗಾರದಲ್ಲಿದೆ ಗಂಡನ ಮೃತದೇಹ, ಹೃದಯಾಘಾತದಿಂದ ಗಂಡ ಮೃತಪಟ್ಟ ವಾರ ಕಳೆಯುತ್ತಿದೆ. ಆದರೆ ಅಂತ್ಯಸಂಸ್ಕಾರ ಮಾಡಲು ಪತ್ನಿಗೆ ಕುವೈತ್‌ನಿಂದ ಮರಳಲು ಸಾಧ್ಯವಾದ ಪರಿಸ್ಥಿತಿ ಎದುರಾಗಿದೆ.

Read Full Story

05:28 PM (IST) Mar 05

ಯುಎಸ್ ಸೇನಾ ನೆಲೆಗೆ ಕೇವಲ 2 ನಿಮಿಷ ಬಾಕಿ, ಇರಾನ್ ಬಾಂಬರ್‌ಗಳನ್ನು ಹೊಡೆದುರುಳಿಸಿದ ಕತಾರ್!

ಕತಾರ್‌ನಲ್ಲಿರುವ ಅಲ್-ಉದೈದ್ ಸೇನಾ ನೆಲೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಅತಿದೊಡ್ಡ ಸೇನಾ ನೆಲೆಯಾಗಿದೆ. ಇಲ್ಲಿ ಸುಮಾರು 10,000 ಯುಎಸ್ ಸೈನಿಕರಿದ್ದು, ಇರಾನ್ ಇದನ್ನೇ ಗುರಿಯಾಗಿಸಿಕೊಂಡಿತ್ತು ಎಂದು ವರದಿಯಾಗಿದೆ.
Read Full Story

05:19 PM (IST) Mar 05

Chiranjeevi - ಅಲ್ಲು ಅರ್ಜುನ್ ತಂದೆ ಹೇಳಿದ ಆ ಒಂದು ಸುಳ್ಳು! ಆಮೇಲೆ ನಡೆದಿದ್ದೇ ಇತಿಹಾಸ

ಫಿಲ್ಮ್ ಇಂಡಸ್ಟ್ರಿಯಲ್ಲಿ ಚಿರಂಜೀವಿ ಮತ್ತು ಅಲ್ಲು ಅರವಿಂದ್ ನಡುವಿನ ಬಾಂಧವ್ಯ ಎಲ್ಲರಿಗೂ ಗೊತ್ತಿದೆ. ಚಿರಂಜೀವಿ ಜೊತೆ ಅನೇಕ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಿರುವ ಅಲ್ಲು ಅರವಿಂದ್, ಒಂದು ಸಿನಿಮಾಕ್ಕಾಗಿ ಮೆಗಾಸ್ಟಾರ್‌ಗೆ ಪಕ್ಕಾ ಸುಳ್ಳು ಹೇಳಿದ್ರಂತೆ. ಏನದು ಸುಳ್ಳು? ಇಲ್ಲಿದೆ ನೋಡಿ.

Read Full Story

05:01 PM (IST) Mar 05

ನಿಮ್ಮ ಅಂಗೈಯಲ್ಲಿ 'Y' ಚಿಹ್ನೆ ಇದೆಯಾ? ಹಾಗಿದ್ರೆ ನಿಮ್ಮ ಜೀವನ ಹೇಗಿರುತ್ತೆ ಗೊತ್ತಾ?

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ ರೇಖೆಗಳು ಕೇವಲ ಗೀಚುಗಳಲ್ಲ, ಅವು ಭವಿಷ್ಯದ ಸಂಕೇತಗಳು. ಕೆಲವು ಚಿಹ್ನೆಗಳು ವ್ಯಕ್ತಿಯು ಶ್ರೀಮಂತನಾಗುತ್ತಾನೋ ಅಥವಾ ಬಡವನಾಗುತ್ತಾನೋ ಎಂಬುದನ್ನು ನಿರ್ಧರಿಸುತ್ತವೆ. ಅಂತಹ ಒಂದು ವಿಶೇಷ ಚಿಹ್ನೆಯೇ ಅಂಗೈಯಲ್ಲಿರುವ 'Y' ಗುರುತು.
Read Full Story

04:35 PM (IST) Mar 05

Mahesh Babu ಮಾಡಬೇಕಿದ್ದ ಸಿನಿಮಾ ನಾಗಾರ್ಜುನ ಪಾಲು - ಅಪ್ಪ ಕೃಷ್ಣ ಅಡ್ಡಬರದಿದ್ರೆ ಏನಾಗ್ತಿತ್ತು!

ಮಹೇಶ್ ಬಾಬು ನಟಿಸಬೇಕಿದ್ದ ಒಂದು ಸಿನಿಮಾವನ್ನು ಸೂಪರ್ ಸ್ಟಾರ್ ಕೃಷ್ಣ ಅವರು ರಿಜೆಕ್ಟ್ ಮಾಡಿದ್ದರು. ಕೃಷ್ಣ ತೆಗೆದುಕೊಂಡ ಈ ನಿರ್ಧಾರದಿಂದಾಗಿ, ಆ ಸಿನಿಮಾ ಇನ್ನೊಬ್ಬ ಸ್ಟಾರ್ ನಟನ ಪಾಲಾಯಿತು ಮತ್ತು ದೊಡ್ಡ ಡಿಸಾಸ್ಟರ್ ಎಂದು ಸಾಬೀತಾಯಿತು. ಅಷ್ಟಕ್ಕೂ ಆ ಸಿನಿಮಾ ಯಾವುದು?

Read Full Story

04:23 PM (IST) Mar 05

ವೈವಾಹಿಕ ಜೀವನಕ್ಕೆ ಅರ್ಜುನ್ ತೆಂಡೂಲ್ಕರ್ ಸಾನಿಯಾ, ಸೆಲೆಬ್ರೆಟಿಗಳಿಂದ ತುಂಬಿ ತುಳುಕಿದ ಕಾರ್ಯಕ್ರಮ

ವೈವಾಹಿಕ ಜೀವನಕ್ಕೆ ಅರ್ಜುನ್ ತೆಂಡೂಲ್ಕರ್ ಸಾನಿಯಾ, ಸೆಲೆಬ್ರೆಟಿಗಳಿಂದ ತುಂಬಿ ತುಳುಕಿದ ಕಾರ್ಯಕ್ರಮ, ಬಾಲಿವುಡ್, ಕ್ರಿಕೆಟ್, ಉದ್ಯಮಿಗಳು ಸೇರಿದಂತೆ ಸೆಲೆಬ್ರೆಟಿಗಳ ದಂಡೇ ಮದುವೆಯಲ್ಲಿ ಪಾಲ್ಗೊಂಡಿದೆ.

Read Full Story

04:09 PM (IST) Mar 05

ಇಂಗ್ಲೆಂಡ್ ಎದುರಿನ ಸೆಮೀಸ್‌ಗೂ ಮುನ್ನ ಸಂಜು ಸ್ಯಾಮ್ಸನ್‌ಗೆ ಎಚ್ಚರಿಕೆ ಕೊಟ್ಟ ಫಾಫ್ ಡು ಪ್ಲೆಸಿಸ್!

ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರಿಸಿದ ಸಂಜು ಸ್ಯಾಮ್ಸನ್‌ಗೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಕಠಿಣ ಸವಾಲು ಎದುರಾಗಲಿದೆ. ಫಾಫ್ ಡು ಪ್ಲೆಸಿಸ್ ಪ್ರಕಾರ, ವೇಗದ ಶಾರ್ಟ್ ಬಾಲ್‌ಗಳು ಸಂಜು ಅವರ ದೌರ್ಬಲ್ಯವಾಗಿದ್ದು, ಆರ್ಚರ್ ಈ ಅಸ್ತ್ರವನ್ನು ಬಳಸಿ ಅವರನ್ನು ಕಟ್ಟಿಹಾಕಲು ಇಂಗ್ಲೆಂಡ್ ಸಜ್ಜಾಗಿದೆ.

Read Full Story

04:02 PM (IST) Mar 05

87 ಜನರ ಬಲಿ ಪಡೆದ ಐರೀಸ್ ದೇನಾ ಮೇಲಿನ ದಾಳಿಗಾಗಿ ಅಮೆರಿಕಾ ತೀವ್ರವಾಗಿ ವಿಷಾದಿಸಲಿದೆ - ಇರಾನ್

ಶ್ರೀಲಂಕಾ ಕರಾವಳಿ ಬಳಿ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯು ಇರಾನಿನ ಯುದ್ಧನೌಕೆ ಐರಿಸ್ ದೇನಾವನ್ನು ಟಾರ್ಪಿಡೊ ಬಳಸಿ ಮುಳುಗಿಸಿದ ನಂತರ ಇರಾನ್  ಈ ದಾಳಿಯನ್ನು  ಕ್ರೂರ ದೌರ್ಜನ್ಯ ಎಂದು ಕರೆದಿದ್ದು ಪ್ರತೀಕಾರದ ಎಚ್ಚರಿಕೆ ನೀಡಿದೆ..

Read Full Story

03:47 PM (IST) Mar 05

ಕೆನಡಾ ಯುರೇನಿಯಂ ನೀಡೋದನ್ನ ಯಾರೂ ತಡೆಯುತ್ತಿಲ್ಲ ಯಾಕೆ? ಭಾರತದ ಡೀಲ್‌ಗೆ ಪಾಕಿಸ್ತಾನ ಕ್ಯಾತೆ!

ಭಾರತ ಮತ್ತು ಕೆನಡಾ ನಡುವಿನ ಯುರೇನಿಯಂ ಪೂರೈಕೆ ಮತ್ತು ಪರಮಾಣು ತಂತ್ರಜ್ಞಾನ ಸಹಕಾರ ಒಪ್ಪಂದಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಒಪ್ಪಂದವು ಭಾರತಕ್ಕೆ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.

Read Full Story

03:45 PM (IST) Mar 05

ಮನೆಗೆ ಹೋಗಬೇಕು ಎಂದು ಅಂಗಲಾಚಿದ ಕೋಚ್ ಸ್ಯಾಮಿ, ಕೋಲ್ಕಾತದಲ್ಲಿ ಸಿಲುಕಿದ ವಿಂಡೀಸ್ ತಂಡ

ಮನೆಗೆ ಹೋಗಬೇಕು ಎಂದು ಅಂಗಲಾಚಿದ ಕೋಚ್ ಸ್ಯಾಮಿ, ಭಾರತ ವಿರುದ್ದ ಸೋಲುಕಂಡ ಟೂರ್ನಿಯಿಂದ ಹೊರಬಿದ್ದರೂ ವಿಂಡೀಸ್ ತಂಡ ಕೋಲ್ಕತಾದಲಿ ಸಿಲುಕಿಕೊಂಡಿದೆ. ಇತ್ತ ಸಮಿ ಮನೆಗೆ ಹೋಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

 

Read Full Story

03:15 PM (IST) Mar 05

ಎಲ್ಲಿವೆ ಇರಾನ್‌ ಮಿತ್ರ ರಾಷ್ಟ್ರಗಳು? ರಷ್ಯಾ, ಚೀನಾ ಯುದ್ಧದಿಂದ ಅಂತರ ಕಾಯ್ದುಕೊಂಡಿದ್ದೇಕೆ?

ಅಮೆರಿಕ ಮತ್ತು ಇಸ್ರೇಲ್ ದಾಳಿಯಿಂದ ಸಂಕಷ್ಟದಲ್ಲಿರುವ ಇರಾನ್‌ಗೆ, ಅದರ ಮಿತ್ರರಾಷ್ಟ್ರಗಳಾದ ರಷ್ಯಾ ಮತ್ತು ಚೀನಾ ಸೇನಾ ಬೆಂಬಲ ನೀಡುತ್ತಿಲ್ಲ. ರಷ್ಯಾಕ್ಕೆ ಇರಾನ್ ಒಪ್ಪಂದದಲ್ಲಿ ಮಿಲಿಟರಿ ನೆರವಿನ ಕಡ್ಡಾಯ ಷರತ್ತುಗಳಿಲ್ಲ, ಚೀನಾ ತನ್ನ ಆರ್ಥಿಕ ಹಿತಾಸಕ್ತಿ ಮುಂದಿಟ್ಟುಕೊಂಡು ಯುದ್ಧದಿಂದ ದೂರ ಉಳಿದಿದೆ.

Read Full Story

02:52 PM (IST) Mar 05

ಉಗ್ರರ ವಿರುದ್ಧ ಧ್ವನಿ ಎತ್ತಿದ ಭಾರತದ ಖ್ಯಾತ ಗಾಯಕಿ ಹತ್ಯೆ, ಬೆಚ್ಚಿ ಬಿದ್ದ ಜಗತ್ತು

ಉಗ್ರರ ವಿರುದ್ಧ ಧ್ವನಿ ಎತ್ತಿದ ಭಾರತದ ಖ್ಯಾತ ಗಾಯಕಿ ಹತ್ಯೆ, ಬೆಚ್ಚಿ ಬಿದ್ದ ಜಗತ್ತು, ಪಂಜಾಬಿ ಮೂಲದ ಗಾಯಕಿ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮೇಲೆ ಭೀಕರ ದಾಳಿ ಮಾಡಲಾಗಿದೆ. ತೀವ್ರಗಾಯಗೊಂಡ ಗಾಯಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

Read Full Story

01:40 PM (IST) Mar 05

ಹಿರೋಷಿಮಾ ಬಾಂಬ್‌ಗಿಂತ 20 ಪಟ್ಟು ಬಲಶಾಲಿ Doomsday ಕ್ಷಿಪಣಿ ಪರೀಕ್ಷೆ ಮಾಡಿದ ಯುಎಸ್‌ ಏರ್‌ಫೋರ್ಸ್‌!

ಅಮೆರಿಕವು 'ಮಿನಿಟ್‌ಮ್ಯಾನ್ III' ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಜಾಗತಿಕ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. 'ಡೂಮ್ಸ್‌ಡೇ' ಕ್ಷಿಪಣಿ ಎಂದೇ ಕರೆಯಲ್ಪಡುವ ಇದು, ಭೂಮಿಯ ಯಾವುದೇ ಭಾಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

Read Full Story

01:17 PM (IST) Mar 05

ಟಿ20 ವಿಶ್ವಕಪ್‌ ವೇಳೆ ಹೋಟೆಲ್‌ ಮಹಿಳಾ ಸಿಬ್ಬಂದಿ ಜೊತೆ ರೂಮ್‌ನಲ್ಲಿ ಅಶ್ಲೀಲ ವರ್ತನೆ, ಪಾಕ್‌ ಆಟಗಾರನಿಗೆ ದಂಡ!

ಶ್ರೀಲಂಕಾದ ಕ್ಯಾಂಡಿಯಲ್ಲಿ ಪಾಕಿಸ್ತಾನದ ಕ್ರಿಕೆಟಿಗನೊಬ್ಬ ಹೋಟೆಲ್ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿ ವಿವಾದ ಸೃಷ್ಟಿಸಿದ್ದಾನೆ. ತಂಡದ ಮ್ಯಾನೇಜರ್ ದಂಡ ವಿಧಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದರೂ, ಆಟಗಾರ ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿಯನ್ನು ಎದುರಿಸಬೇಕಾಗಿದೆ.
Read Full Story

01:15 PM (IST) Mar 05

Wanted - ಒಂದು ಕೋಟಿಯ ಜಾತಿ ಹುಡುಗ- ಬ್ರಾಹ್ಮಣ ಕನ್ಯೆಯನ್ನು ಬ್ಯಾನ್​ ಮಾಡಿದ ಮ್ಯಾಚ್​ ಮೇಕರ್​!

ಮ್ಯಾಚ್‌ಮೇಕರ್ ಒಬ್ಬರು ತಮಗಾದ ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ. ವರ್ಷಕ್ಕೆ 11 ಲಕ್ಷ ದುಡಿಯುವ ಯುವತಿಯೊಬ್ಬಳು, ತನಗಿಂತ ಹಲವು ಪಟ್ಟು ಹೆಚ್ಚು ಆದಾಯವಿರುವ ವರ ಬೇಕೆಂದು ಪಟ್ಟು ಹಿಡಿದಿದ್ದಳು. ಈ ಅತಿಯಾಸೆಯ ಬೇಡಿಕೆಯಿಂದಾಗಿ ಮ್ಯಾಚ್‌ಮೇಕಿಂಗ್ ಸಂಸ್ಥೆಯು ಆಕೆಯನ್ನು  ಬ್ಯಾನ್ ಮಾಡಿದೆ.

Read Full Story

12:48 PM (IST) Mar 05

ಚಿರಂಜೀವಿ ತಂದೆಯೂ ನಟ ಅನ್ನೋದು ಗೊತ್ತಾ? ಮೆಗಾಸ್ಟಾರ್‌ಗಿಂತ ಮುಂಚೆಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ರು!

ಚಿರಂಜೀವಿ ಅವರ ತಂದೆ ವೆಂಕಟರಾವ್ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅವರಲ್ಲೂ ಒಬ್ಬ ನಟನಿದ್ದ. ಚಿರಂಜೀವಿಗಿಂತ ಮುಂಚೆಯೇ ಅವರು ಚಿತ್ರರಂಗಕ್ಕೆ ಬಂದಿದ್ದರು. ಹಾಗಾದ್ರೆ ವೆಂಕಟರಾವ್ ನಟಿಸಿದ ಸಿನಿಮಾಗಳು ಯಾವುವು ಅಂತ ನೋಡೋಣ.
Read Full Story

11:58 AM (IST) Mar 05

ಅಂತರ್ಜಾತಿ ಮದುವೆ; ಮನೆಯಲ್ಲಿ ಕಿರುಕುಳ; ಅನ್ನ- ನೀರಿನ ಜೊತೆಗೆ ಯುಟ್ಯೂಬ್‌ ಬಿಟ್ಟ Bigg Boss ಸ್ಪರ್ಧಿ!

UK07 ರೈಡರ್ ಅಂತಾನೇ ಫೇಮಸ್ ಆಗಿರುವ ಅನುರಾಗ್ ಡೋಭಾಲ್, ತಮ್ಮ ಕೊನೆಯ ವಿಡಿಯೋದಲ್ಲಿ ಅಂತರಜಾತಿ ಮದುವೆ ವಿಚಾರವಾಗಿ ತಂದೆ-ತಾಯಿ ಮತ್ತು ಸಹೋದರನ ಮೇಲೆ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ. ಖಿನ್ನತೆ ಹಾಗೂ ಆತ್ಮಹತ್ಯೆ ಯತ್ನದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಏನಿದು ಪೂರ್ತಿ ಪ್ರಕರಣ? ಇಲ್ಲಿದೆ ವಿವರ.

 

Read Full Story

More Trending News