MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Shakeela: ಆ ನಟನ ರೂಮ್‌ನಲ್ಲಿ ಶಕೀಲಾ.. ರಾತ್ರಿ ನಡೆದ ಆ ಘಟನೆ ನೆನೆದು ನಕ್ಕಿದ್ಯಾಕೆ ನಟಿ!

Shakeela: ಆ ನಟನ ರೂಮ್‌ನಲ್ಲಿ ಶಕೀಲಾ.. ರಾತ್ರಿ ನಡೆದ ಆ ಘಟನೆ ನೆನೆದು ನಕ್ಕಿದ್ಯಾಕೆ ನಟಿ!

ನಟಿ ಶಕೀಲಾ ಮತ್ತು ದಿವಂಗತ ಹಾಸ್ಯನಟ ವೇಣು ಮಾಧವ್ ನಡುವೆ ನಡೆದ ಒಂದು ತಮಾಷೆಯ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶೂಟಿಂಗ್ ವೇಳೆ ಹೋಟೆಲ್ ರೂಮ್ ಸಮಸ್ಯೆಯಿಂದಾಗಿ ವೇಣು ಮಾಧವ್ ಅವರ ಕೋಣೆಯಲ್ಲಿ ಮಲಗಿದ್ದ ಶಕೀಲಾಗೆ ಒಂದು ವಿಚಿತ್ರ ಅನುಭವವಾಗಿತ್ತು.

1 Min read
Author : Govindaraj S
Published : Mar 05 2026, 08:14 PM IST
Share this Photo Gallery
  • FB
  • TW
  • Linkdin
  • Whatsapp
15
ತಮಾಷೆಯ ಘಟನೆ
Image Credit : Asianet News

ತಮಾಷೆಯ ಘಟನೆ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೋಲ್ಡ್ ಪಾತ್ರಗಳಿಂದ ಹೆಸರುವಾಸಿಯಾದ ನಟಿ ಶಕೀಲಾ, ತಮ್ಮ ವೃತ್ತಿಜೀವನದಲ್ಲಿ ನಡೆದ ಅನೇಕ ಸ್ವಾರಸ್ಯಕರ ಘಟನೆಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು ದಿವಂಗತ ಹಾಸ್ಯ ನಟ ವೇಣು ಮಾಧವ್ ಅವರೊಂದಿಗಿನ ತಮ್ಮ ಒಡನಾಟ ಮತ್ತು ಶೂಟಿಂಗ್ ವೇಳೆ ನಡೆದ ಒಂದು ತಮಾಷೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

25
ಮಲಗಲು ಜಾಗವಿಲ್ಲ
Image Credit : Instagram

ಮಲಗಲು ಜಾಗವಿಲ್ಲ

ಒಂದು ಸಿನಿಮಾ ಶೂಟಿಂಗ್‌ಗಾಗಿ ಶಕೀಲಾ, ವೇಣು ಮಾಧವ್, ಬ್ರಹ್ಮಾನಂದಂ ಮತ್ತು ರಘುಬಾಬು ಒಂದೇ ಹೋಟೆಲ್‌ನಲ್ಲಿದ್ದರು. ಆದರೆ, ಉಳಿದ ನಟರೆಲ್ಲ ಶಕೀಲಾ ಅವರ ರೂಮ್‌ನಲ್ಲೇ ಊಟ ಮಾಡಿದ್ದರಿಂದ ಕೋಣೆ ಗಲೀಜಾಗಿತ್ತು. ಮಲಗಲು ಜಾಗವಿಲ್ಲದ ಕಾರಣ, ಶಕೀಲಾ ತನ್ನ ಸ್ನೇಹಿತ ವೇಣು ಮಾಧವ್ ಬಳಿ ಕೇಳಿ ಅವರ ಕೋಣೆಗೆ ಹೋದರು. ವೇಣು ಮಾಧವ್ ಕೂಡ ಯಾವುದೇ ಹಿಂಜರಿಕೆಯಿಲ್ಲದೆ ಅವರನ್ನು ಬರಮಾಡಿಕೊಂಡರು.

Related Articles

Related image1
'ಬದುಕಿನ ಸತ್ಯ ಇದೊಂದೆ..' ಜೀವನದ ಬಹುದೊಡ್ಡ ನಿರ್ಧಾರ ತೆಗೆದುಕೊಂಡ ನಟಿ ಶಕೀಲಾ!
Related image2
ಸಿನಿಮಾದಲ್ಲಿ ಶಕೀಲಾ ಬೆತ್ತಲಾಗಿ ನಟಿಸಲು ಕಾರಣವೇನು ಗೊತ್ತಾ? ಹೊರಬಿತ್ತು ಅಸಲಿ ಸತ್ಯ!
35
ನೀನು ಇಲ್ಲ ಅನ್ನಬಾರದು
Image Credit : Instagram

ನೀನು ಇಲ್ಲ ಅನ್ನಬಾರದು

ಕೋಣೆಯಲ್ಲಿ ಲೈಟ್ ಆಫ್ ಆಗಿದ್ದಾಗ, ವೇಣು ಮಾಧವ್ ಶಕೀಲಾ ಬಳಿ, 'ನಾನು ನಿನ್ನನ್ನೊಂದು ಮಾತು ಕೇಳ್ತೀನಿ, ನೀನು ಇಲ್ಲ ಅನ್ನಬಾರದು' ಎಂದರಂತೆ. ಈ ಮಾತು ಕೇಳಿ ಶಕೀಲಾಗೆ ಒಮ್ಮೆಲೇ ಅನುಮಾನ ಶುರುವಾಯಿತು. 'ಒಳ್ಳೆಯ ಸ್ನೇಹಿತ ಅಂದುಕೊಂಡರೆ ವೇಣು ಹೀಗೆ ಯಾಕೆ ಮಾತಾಡ್ತಿದ್ದಾನೆ? ಕೆಟ್ಟದಾಗಿ ವರ್ತಿಸುತ್ತಾನಾ?' ಎಂದು ಅವರು ಹೆದರಿದರು. ಒಂದು ವೇಳೆ ಏನಾದರೂ ತಪ್ಪಾಗಿ ಕೇಳಿದರೆ ಸ್ನೇಹವನ್ನೇ ಮುರಿದುಕೊಳ್ಳಲು ನಿರ್ಧರಿಸಿದ್ದರು.

45
ನಾನು ಸತ್ತೇ ಹೋಗುತ್ತೇನೆ
Image Credit : Instagram

ನಾನು ಸತ್ತೇ ಹೋಗುತ್ತೇನೆ

ಶಕೀಲಾ 'ಏನು ಕೇಳು' ಎಂದಾಗ, ವೇಣು ಮಾಧವ್ ಗಂಭೀರವಾಗಿ, 'ನನಗೆ ಹೆಂಡತಿ, ಮಕ್ಕಳಿದ್ದಾರೆ. ಅವರು ಚೆನ್ನಾಗಿರಬೇಕೆಂದರೆ ನಾನು ಬದುಕಿರಬೇಕು' ಎಂದರಂತೆ. 'ಅಸಲಿ ವಿಷಯವೇನು?' ಎಂದು ಶಕೀಲಾ ಕೇಳಿದಾಗ, 'ನಿದ್ದೆಯಲ್ಲಿ ನೀನು ನನ್ನ ಮೇಲೆ ಕಾಲು ಹಾಕಿದರೆ ನಾನು ಸತ್ತೇ ಹೋಗುತ್ತೇನೆ. ಅದಕ್ಕೆ ನಮ್ಮಿಬ್ಬರ ನಡುವೆ ಈ ದಿಂಬುಗಳನ್ನು ಇಡುತ್ತಿದ್ದೇನೆ, ಇದರ ಮೇಲೆ ಕಾಲು ಹಾಕಿಕೊ' ಎಂದು ಹೇಳಿ ಪಕ್ಕದಲ್ಲಿ ದಿಂಬುಗಳನ್ನು ಅಡ್ಡಲಾಗಿ ಇಟ್ಟರಂತೆ.

55
ಮರುದಿನ ಬೆಳಿಗ್ಗೆ...
Image Credit : Google

ಮರುದಿನ ಬೆಳಿಗ್ಗೆ...

ಈ ಮಾತು ಕೇಳಿದ ಶಕೀಲಾಗೆ ರಾತ್ರಿಯಿಡೀ ನಗು ತಡೆಯಲು ಆಗಲಿಲ್ಲವಂತೆ. ಮರುದಿನ ಬೆಳಿಗ್ಗೆ ಈ ವಿಷಯವನ್ನು ಬ್ರಹ್ಮಾನಂದಂ ಮತ್ತು ರಘುಬಾಬುಗೆ ಹೇಳಿದಾಗ ಸೆಟ್‌ನಲ್ಲಿದ್ದ ಎಲ್ಲರೂ ನಕ್ಕರಂತೆ. ವೇಣು ಮಾಧವ್ ಅವರ ಆ ಮುಗ್ಧತೆ ಮತ್ತು ಕಾಮಿಡಿ ಟೈಮಿಂಗ್ ಅನ್ನು ಶಕೀಲಾ ಇಂದಿಗೂ ಬಹಳ ಇಷ್ಟಪಟ್ಟು ನೆನಪಿಸಿಕೊಳ್ಳುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಟಾಲಿವುಡ್
ಮನರಂಜನಾ ಸುದ್ದಿ
ದಕ್ಷಿಣ ಭಾರತದ ನಟರು
ದಕ್ಷಿಣ ಭಾರತದ ನಟಿ

Latest Videos
Recommended Stories
Recommended image1
Iconic Villains: ಹೀರೋಗಳನ್ನೇ ಮೀರಿಸಿದ ಖಳನಾಯಕರು: ಇವರ ನಟನೆ ಮುಂದೆ ಸ್ಟಾರ್‌ಗಳೂ ಸೈಡ್‌ಗೆ!
Recommended image2
'ಸುಂದರಿಯರ ಬಗ್ಗೆ ಕಾಮೆಂಟ್ ಮಾಡೋದನ್ನ ನಾನು ನಿಲ್ಲಿಸಲ್ಲ ಎಂದ ಆರ್‌ಜಿವಿ ಕಿಯಾರಾ ಬಗೆಗಿನ ಟ್ವೀಟ್ ಡಿಲೀಟ್ ಮಾಡಿದ್ದೇಕೆ ..?
Recommended image3
ಚಿರಂಜೀವಿ ಅವರ 40 ವರ್ಷದ ಕೆರಿಯರ್‌ನ ಕಪ್ಪುಚುಕ್ಕೆ ಈ ಸಿನಿಮಾ: 100 ಕೋಟಿ ಹಾಕಿ ವಾರದಲ್ಲೇ ಎತ್ತಂಗಡಿ!
Related Stories
Recommended image1
'ಬದುಕಿನ ಸತ್ಯ ಇದೊಂದೆ..' ಜೀವನದ ಬಹುದೊಡ್ಡ ನಿರ್ಧಾರ ತೆಗೆದುಕೊಂಡ ನಟಿ ಶಕೀಲಾ!
Recommended image2
ಸಿನಿಮಾದಲ್ಲಿ ಶಕೀಲಾ ಬೆತ್ತಲಾಗಿ ನಟಿಸಲು ಕಾರಣವೇನು ಗೊತ್ತಾ? ಹೊರಬಿತ್ತು ಅಸಲಿ ಸತ್ಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved