ನವದೆಹಲಿ: ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸುದ್ದು ಮಾಡಿದ್ದ ಕಾಕ್ರೋಚ್ ಜನತಾ ಪಾರ್ಟಿ 3 ವಕ್ತಾರರನ್ನು ನೇಮಕ ಮಾಡಿದೆ. ತನಿಖಾ ಪತ್ರಕರ್ತ ಸೌರವ್ ದಾಸ್ ಮುಖ್ಯ ವಕ್ತಾರರಾಗಿ ಕಾರ್ಯನಿರ್ವಹಿಸಲಿದ್ದಾರೆ, ರಾಜಕೀಯ ಸಂಶೋಧಕಿ ಮತ್ತು ಚಲನಚಿತ್ರ ನಿರ್ಮಾಪಕಿ ವಿಜೇತಾ ದಹಿಯಾ ಮತ್ತು ಮಾಜಿ ನಿರ್ವಹಣಾ ಸಲಹೆಗಾರ ಅಶುತೋಷ್ ರಾಂಕಾ ಅವರೂ ವಕ್ತಾರರಾಗಿ ಕೆಲಸ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸಂಜೆ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ನೀಟ್, ಸಿಬಿಎಸ್ಇ ಪರೀಕ್ಷೆ ವೈಫಲ್ಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
11:06 PM (IST) Jun 04
ಶೂಟಿಂಗ್ ಜೋರಾಗಿ ನಡೆಯುತ್ತಿದ್ದಾಗ ನಿರ್ದೇಶಕ ಪಿ. ವಾಸು ಅವರಿಗೆ ಒಂದು ಆಘಾತಕಾರಿ ವಿಷಯ ತಿಳಿಯಿತು. ಅದೇನೆಂದರೆ, ಮನೋರಮಾ ಅವರ ಪತಿ ಅದೇ ದಿನ ಮಧ್ಯಾಹ್ನ ನಿಧನರಾಗಿದ್ದರು! ಈ ಸುದ್ದಿ ತಿಳಿದ ಪಿ. ವಾಸು ಅವರು ದಂಗಾಗಿ ಹೋದರು.
08:54 PM (IST) Jun 04
ಜಾನ್ಸನ್ & ಜಾನ್ಸನ್ ಸಂಸ್ಥೆಯು 'ಏಟ್ರಿಯಲ್ ಫಿಬ್ರಿಲೇಷನ್' ಎಂಬ ಹೃದಯ ಸಂಬಂಧಿ ಕಾಯಿಲೆಗೆ 'ವೇರಿಪಲ್ಸ್ ಪ್ಲಾಟ್‌ಫಾರ್ಮ್' ಎಂಬ ಅತ್ಯಾಧುನಿಕ ಚಿಕಿತ್ಸಾ ತಂತ್ರಜ್ಞಾನವನ್ನು ಭಾರತದಲ್ಲಿ ಪರಿಚಯಿಸಿದೆ. PFA ಮತ್ತು 3D ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸುವ ಈ ವ್ಯವಸ್ಥೆಯು, ಹೃದಯ ರೋಗಿಗಳಿಗೆ ಹೆಚ್ಚು ಸುರಕ್ಷಿತ ಮತ್ತು ನಿಖರವಾದ ಚಿಕಿತ್ಸೆ ನೀಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದೆ.
08:35 PM (IST) Jun 04
ಹೀರೋ ಮೊಟೊಕಾರ್ಪ್, 'ಸ್ಪ್ಲೆಂಡರ್ ಪ್ಲಸ್' ಮತ್ತು 'ಹೆಚ್‌ಎಫ್ ಡೀಲಕ್ಸ್' ಬೈಕ್‌ಗಳ ಫ್ಲೆಕ್ಸ್ ಫ್ಯುಯೆಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಚಲಿಸುವ ಈ ಬೈಕ್‌ಗಳು ಇಂಧನ ವೆಚ್ಚವನ್ನು ಕಡಿಮೆ ಮಾಡಲಿದೆ.
08:34 PM (IST) Jun 04
08:16 PM (IST) Jun 04
ನಟಿ ಜಾನ್ವಿ ಕಪೂರ್ ತಮ್ಮ 'ಪೆದ್ದಿ' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಚಾಕೊಲೇಟ್ ಕಂದು ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, ಈ ಸೀರೆಯ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
08:02 PM (IST) Jun 04
ದಳಪತಿ ವಿಜಯ್ ನಟನೆಯಲ್ಲಿ ಸಾಮ್ರಾಜ್ಯ ಕಟ್ಟಿದರೆ, ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಜುಲೈ 31ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಜಯ್ ಅವರ ಚೊಚ್ಚಲ ಪ್ರಯತ್ನಕ್ಕೆ ಕ್ಷಣಗಣನೆ ಶುರುವಾಗಿದೆ!
07:57 PM (IST) Jun 04
07:52 PM (IST) Jun 04
ಗಗನಕ್ಕೇರುತ್ತಿರುವ ಕೋಳಿ ಆಹಾರದ ವೆಚ್ಚ ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ ಬೇಡಿಕೆ ಕುಸಿತದ ನಿರೀಕ್ಷೆಯಿಂದ, ಭಾರತೀಯ ಕೋಳಿ ಉದ್ಯಮವು ಉತ್ಪಾದನೆಯನ್ನು ಶೇ. 25 ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ. ಸೋಯಾಬೀನ್ ಬೆಲೆ ಏರಿಕೆಗೆ ಕೃತಕ ಅಭಾವವೇ ಕಾರಣ ಎಂದು ಉದ್ಯಮ ಆರೋಪಿಸಿದೆ.
07:30 PM (IST) Jun 04
ರಾಮ್ ಚರಣ್, ಶಿವಣ್ಣ ಮತ್ತು ಜಾನ್ವಿ ಕಪೂರ್ ಜೋಡಿಯಾಗಿ ನಟಿಸಿರುವ 'ಪೆದ್ದಿ' ಚಿತ್ರವನ್ನು ಬುಚ್ಚಿಬಾಬು ಸಾನಾ ನಿರ್ದೇಶಿಸಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಹೇಗಿದೆ? ಸಂಪೂರ್ಣ ವಿಮರ್ಶೆ ಇಲ್ಲಿದೆ.
07:12 PM (IST) Jun 04
ಚಿನ್ನ ಸಂಸ್ಕರಣಾ ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್ ವಿರುದ್ಧ ಸೆಬಿ ಕಠಿಣ ಕ್ರಮ ಕೈಗೊಂಡಿದ್ದು, ಕಂಪನಿಯು ನಕಲಿ ಆದಾಯ ಸೃಷ್ಟಿಸಿದ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಇದರಿಂದ ಪ್ರಮುಖ ಹೂಡಿಕೆದಾರ ಸಂಸ್ಥೆಯಾದ ಎಲ್‌ಐಸಿಗೆ ₹290 ಕೋಟಿ ನಷ್ಟವಾಗಿದೆ.
06:50 PM (IST) Jun 04
ಬೆಂಗಳೂರು ಮೂಲದ ಚಿನ್ನದ ದೈತ್ಯ 'ರಾಜೇಶ್ ಎಕ್ಸ್‌ಪೋರ್ಟ್ಸ್' ₹15.15 ಲಕ್ಷ ಕೋಟಿ ಮೊತ್ತದ ನಕಲಿ ಆದಾಯ ಸೃಷ್ಟಿಸಿದ ಆರೋಪದ ಮೇಲೆ 'ಸೆಬಿ' ತನಿಖೆಗೆ ಒಳಗಾಗಿದೆ. ಬೃಹತ್ ಹಣಕಾಸು ಅಕ್ರಮದ ಹಿನ್ನೆಲೆಯಲ್ಲಿ, ಸೆಬಿಯು ಕಂಪನಿ ಮತ್ತು ಅದರ ಪ್ರವರ್ತಕ ರಾಜೇಶ್ ಮೆಹ್ತಾ ಅವರನ್ನು ಷೇರು ಮಾರುಕಟ್ಟೆಯಿಂದ ನಿಷೇಧಿಸಿದೆ.
06:36 PM (IST) Jun 04
ಐಆರ್‌ಸಿಟಿಸಿ, ಟಿಕೆಟ್ ದುರುಪಯೋಗ ಮತ್ತು ಸೈಬರ್ ವಂಚನೆ ತಡೆಯಲು 3.03 ಕೋಟಿ ಅನುಮಾನಾಸ್ಪದ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿದೆ. ಇದಲ್ಲದೆ, ಅಡುಗೆಮನೆಗಳಲ್ಲಿ ನೈರ್ಮಲ್ಯಕ್ಕಾಗಿ ಎಐ ಕ್ಯಾಮೆರಾಗಳನ್ನು ಅಳವಡಿಸಿದೆ.
06:35 PM (IST) Jun 04
ಲಲಿತ್ ಮೋದಿ ತಮ್ಮ ಜೀವನದ ಕುರಿತ ಬಯೋಪಿಕ್ ಒಂದನ್ನು ಸಿದ್ಧಪಡಿಸುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.
05:18 PM (IST) Jun 04
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಸಂಚರಿಸುತ್ತದೆ. ಈ ರೈಲು, ಇದೀಗ 'ಪ್ರೈಡ್ ಆಫ್ ಕರ್ನಾಟಕ' ಮತ್ತು 'ಜುವೆಲ್ಸ್ ಆಫ್ ಸೌತ್' ಪ್ಯಾಕೇಜ್‌ಗಳ ಮೇಲೆ ಶೇಕಡಾ 20ರಷ್ಟು ದರ ಇಳಿಕೆ ಮಾಡಿದೆ.
05:14 PM (IST) Jun 04
ನಟಿ ಜಾನ್ವಿ ಕಪೂರ್ ತಮ್ಮ ಹೊಸ ಸಿನಿಮಾ 'ಪೆದ್ದಿ' ಬಿಡುಗಡೆಯ ಪ್ರಯುಕ್ತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಆಧ್ಯಾತ್ಮಿಕವಾಗಿ ಪೂಜೆ ಸಲ್ಲಿಸಿದ್ದಾರೆ. ಪ್ರಸಿದ್ಧ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಮುನ್ನ..
05:13 PM (IST) Jun 04
ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿದ್ದರೂ, ಐದು ಪ್ರಮುಖ ದಾಖಲೆಗಳು ಇಂದಿಗೂ ಅಬಾಧಿತವಾಗಿವೆ. ಕ್ರಿಸ್ ಗೇಲ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಮತ್ತು ಅತಿ ವೇಗದ ಶತಕ, ವಿರಾಟ್ ಕೊಹ್ಲಿಯ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ದಾಖಲೆಗಳು ಇದರಲ್ಲಿ ಸೇರಿವೆ.
04:55 PM (IST) Jun 04
ನಾನು ಈ ಮೊದಲು ಅತ್ಯಂತ ಫಿಟ್ ಆಗಿದ್ದೆ. ಆದರೂ ಕೆಳಹೊಟ್ಟೆ ಬೊಜ್ಜು ಹೆಚ್ಚಾಗಿತ್ತು. ನಾನು ಎಷ್ಟೇ ಫಿಟ್ ಆಗಿದ್ದರೂ ಹೊಟ್ಟೆಬೊಜ್ಜು ಕರಗುತ್ತಿಲ್ಲ ಎನ್ನುವ ಚಿಂತೆ ಶುರುವಾಯಿತು ಎಂದು ನಟಿ ತಾಪ್ಸಿ ಪನ್ನು ಹೇಳಿದರು.
04:54 PM (IST) Jun 04
04:48 PM (IST) Jun 04
ಖ್ಯಾತ ನಟಿ ಸಂಭಾವನಾ ಸೇಠ್ ಮತ್ತು ಅವರ ಪತಿ ಅವಿನಾಶ್ ದ್ವಿವೇದಿ, 10 ವರ್ಷಗಳ ಕಾಯುವಿಕೆ ಮತ್ತು ಹಲವು ಐವಿಎಫ್ ವೈಫಲ್ಯಗಳ ನಂತರ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಈ ದಂಪತಿಗಳು ತಮ್ಮ ಮನೆಗೆ 'ಲಕ್ಷ್ಮಿ-ಗಣೇಶ' ಬಂದಿದ್ದಾರೆಂದು ಹೇಳಿದ್ದಾರೆ.
04:42 PM (IST) Jun 04
ಬ್ಯಾನ್ ಅನುಭವ ನನಗೂ ಆಗಿದೆ. ಸಾಕಷ್ಟು ಮಂದಿ ನನ್ನನ್ನು ಬ್ಯಾನ್ ಮಾಡಿದ್ದಾರೆ. ನಿಮ್ಮ ಯೋಗ್ಯತೆ ಹೆಚ್ಚಾದಾಗ ನಿಮಗೆ ಶತ್ರುಗಳೂ ಹೆಚ್ಚಾಗುತ್ತಾರೆ ಎಂದು ನಟಿಬ ಕಂಗನಾ ರಾಣಾವತ್ ಹೇಳಿದ್ದಾರೆ.
04:13 PM (IST) Jun 04
ವಿಪ್ರೋ ಕಂಪನಿಯ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಸಹೋದ್ಯೋಗಿಯಿಂದ ಧಾರ್ಮಿಕ ಕಿರುಕುಳ ಮತ್ತು ಬಲವಂತದ ಮತಾಂತರ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ದೂರು ನೀಡಿದರೂ ಕ್ರಮ ಕೈಗೊಳ್ಳದೆ, ತನ್ನಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಅವರು ದೂರಿದ್ದಾರೆ.
04:04 PM (IST) Jun 04
03:11 PM (IST) Jun 04
ಬೆಂಗಳೂರು: ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಕುಪ್ಪುಸ್ವಾಮಿ ಅಣ್ಣಾಮಲೈ, ತಮಿಳುನಾಡಿನ ಬಿಜೆಪಿ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಇದೀಗ ಕೆ ಅಣ್ಣಾಮಲೈ ಅವರ ಸಂಪತ್ತು ಎಷ್ಟು ಎನ್ನುವುದರ ಬಗ್ಗೆ ಚರ್ಚೆಯಾಗುತ್ತಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
02:21 PM (IST) Jun 04
01:30 PM (IST) Jun 04
ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮುಂದೆ ಇಡಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ನೀಡಿದ ಸೂಚನೆ ಏನು?
01:20 PM (IST) Jun 04
12:12 PM (IST) Jun 04
11:49 AM (IST) Jun 04
ಬೆಂಗಳೂರು: ಇತ್ತೀಚೆಗಷ್ಟೇ ನಡೆದ 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ, ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿಗೆ ಸಜ್ಜಾಗಿದ್ದರು. ಹೀಗಿರುವಾಗಲೇ ಕಿಂಗ್ ಕೊಹ್ಲಿ ಫ್ಯಾನ್ಸ್ ಪಾಲಿಗೆ ಒಂದು ಬ್ಯಾಡ್ ನ್ಯೂಸ್ ಹೊರಬಿದ್ದಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
10:29 AM (IST) Jun 04
ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್, ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಯುವುದು ಬಹುತೇಕ ಖಚಿತ ಎನಿಸಿದೆ. ಇದರ ಬೆನ್ನಲ್ಲೇ ಭಾರತದ ಮುಂದಿನ ಕ್ಯಾಪ್ಟನ್ ಯಾರು ಎನ್ನುವ ಚರ್ಚೆ ಜೋರಾಗಿದೆ.
10:19 AM (IST) Jun 04
09:33 AM (IST) Jun 04
ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ವಂಚಿಸಿ, ಆಕೆಯ ಖಾಸಗಿ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಪ್ರಿಯಕರ ಮತ್ತು ಆತನ ಮೂವರು ಸ್ನೇಹಿತರು ಸೇರಿ 10 ತಿಂಗಳ ಕಾಲ ಯುವತಿಯ ಮೇಲೆ ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. ಅಂತಿಮವಾಗಿ ಯುವತಿ ಪೊಲೀಸರಿಗೆ ದೂರು ನೀಡಿದ ನಂತರ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
09:07 AM (IST) Jun 04
ಮುಲ್ಲಾನ್‌ಪುರ: 2026ರ ಐಪಿಎಲ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಹರಿದಿದೆ. ಹೀಗಿರುವಾಗಲೇ ಭಾರತ ಟಿ20 ನಾಯಕತ್ವದ ವಿಚಾರದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಕುರಿತಾದ ಹೊಸ ಅಪ್ಡೇಟ್ಸ್ ಇಲ್ಲಿದೆ ನೋಡಿ.
07:55 AM (IST) Jun 04
ಈ ಬಾರಿಯ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಭಾರತ ತಂಡವಿಲ್ಲದಿದ್ದರೂ, ಭಾರತೀಯ ಮೂಲದ ನಾಲ್ವರು ಆಟಗಾರರು ಬೇರೆ ಬೇರೆ ದೇಶಗಳನ್ನು ಪ್ರತಿನಿಧಿಸಲಿದ್ದಾರೆ. ಸರ್ಪ್ರೀತ್ ಸಿಂಗ್, ತಹ್ಸಿನ್ ಮೊಹಮ್ಮದ್, ನಿಶಾನ್ ವೇಲುಪಿಳ್ಳೈ ಮತ್ತು ಸ್ಯಾಮುಯೆಲ್ ಮುತ್ತುಸ್ವಾಮಿ ತಮ್ಮ ಆಟದ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಹೆಗ್ಗುರುತು ಮೂಡಿಸಲಿದ್ದಾರೆ.
07:33 AM (IST) Jun 04