Published : Jan 03, 2026, 07:05 AM ISTUpdated : Jan 03, 2026, 09:33 PM IST

India Latest News Live: ನಗರದ ರಸ್ತೆಯಲ್ಲಿ ಕಾರಿನ ಪುಂಡರ ಶೋ ಆಫ್, 67000 ರೂಪಾಯಿ ದಂಡ ವಿಧಿಸಿದ ಪೊಲೀಸ್

ಸಾರಾಂಶ

ನವದೆಹಲಿ: 2020ರ ದೆಹಲಿ ಗಲಭೆಯ ಆರೋಪಿ ಉಮರ್‌ ಖಾಲಿದ್‌ನನ್ನು ನ್ಯಾಯಪರವಾಗಿ ವಿಚಾರಣೆ ನಡೆಸುವಂತೆ ಭಾರತ ಸರ್ಕಾರಕ್ಕೆ ಅಮೆರಿಕದ 8 ಸಂಸದರು ಪತ್ರ ಬರೆದು ಆಗ್ರಹಿಸಿದ್ದಾರೆ. ಇವರಲ್ಲಿ ಒಬ್ಬರಾದ ಜನಿಸ್ ಶಾಕೋವ್ಸ್ಕಿಎಂಬ ಸಂಸದೆಯ ಜತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 2024ರಲ್ಲಿ ಸಭೆ ನಡೆಸಿದ ಫೋಟೊವನ್ನು ಬಿಜೆಪಿ ಹಂಚಿಕೊಂಡಿದ್ದು, ಇದು ರಾಹುಲ್ ಅವರ ಭಾರತ ವಿರೋಧಿ ನಡೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ, 2024ರಲ್ಲಿ ರಾಹುಲ್‌ ಹಾಗೂ ಅಮೆರಿಕದ ಇಬ್ಬರು ಸಂಸದರಾದ ಶಾಕೋವ್ಸ್ಕಿ ಮತ್ತು ಇಲ್ಹಾನ್ ಒಮರ್‌ ಸಭೆ ನಡೆಸುತ್ತಿರುವ ಫೋಟೊ ಪೋಸ್ಟ್‌ ಮಾಡಿ, ‘ಪ್ರತಿ ಬಾರಿ ಭಾರತ ವಿರೋಧಿ ವಿಚಾರ ವಿದೇಶಗಳಲ್ಲಿ ಹರಡಿದಾಗಲೂ ಒಂದು ಹೆಸರು (ರಾಹುಲ್ ಗಾಂಧಿ) ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ಭಾರತವನ್ನು ದುರ್ಬಲಗೊಳಿಸಲು, ಅದರ ಸರ್ಕಾರದ ಹೆಸರು ಕೆಡಿಸಲು ಮತ್ತು ಅದರ ಉಗ್ರವಿರೋಧಿ ಕಾನೂನುಗಳನ್ನು ದುರ್ಬಲಗೊಳಿಸಲು ಬಯಸುವವರು ಆತನ ಸುತ್ತ ಸೇರಿಕೊಳ್ಳುತ್ತಾರೆ’ ಎಂದು ಕಿಡಿ ಕಾರಿದ್ದಾರೆ.

09:33 PM (IST) Jan 03

ನಗರದ ರಸ್ತೆಯಲ್ಲಿ ಕಾರಿನ ಪುಂಡರ ಶೋ ಆಫ್, 67000 ರೂಪಾಯಿ ದಂಡ ವಿಧಿಸಿದ ಪೊಲೀಸ್

ನಗರದ ರಸ್ತೆಯಲ್ಲಿ ಕಾರಿನ ಪುಂಡರ ಶೋ ಆಫ್, 67000 ರೂಪಾಯಿ ದಂಡ ವಿಧಿಸಿದ ಪೊಲೀಸ್, ಆಲ್ಟರ್ ಮಾಡಿದ ಕಾರಿನ ಮೇಲೆ ನಿಂತು ಕುಣಿದಾಡಿದ್ದಾರೆ. ಬ್ಯೂಸಿ ರಸ್ತೆಯಲ್ಲಿ ಪುಂಡಾಟ ಮಾಡಿ ಟ್ರಾಫಿಕ್ ಜಾಮ್ ಮಾಡಿದ್ದಾರೆ.

 

Read Full Story

08:30 PM (IST) Jan 03

ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್‌ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್‌ಗೆ ಮರಳಿ ಸಿಗುತ್ತಾ?

ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್‌ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್‌ಗೆ ಮರಳಿ ಸಿಗುತ್ತಾ?, ಐಪಿಎಲ್ ಟೂರ್ನಿಯ ನಿಮಯವೇನು? ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್ ಟೂರ್ನಿಯಿಂದ ಹೊರಗಿಡುವಾಗ ಪಾಲಿಸಬೇಕಾದ ನಿಯವೇನು?

 

Read Full Story

07:46 PM (IST) Jan 03

ನಡೆದುಕೊಂಡು ಹೋಗುತ್ತಿರುವಾಗ ಡಿಕ್ಕಿಯಾದ ವಾಹನ, ನಟ ಅಶೀಷ್ ವಿದ್ಯಾರ್ಥಿ, ಪತ್ನಿಗೆ ಗಾಯ

ನಡೆದುಕೊಂಡು ಹೋಗುತ್ತಿರುವಾಗ ಡಿಕ್ಕಿಯಾದ ವಾಹನ, ನಟ ಅಶೀಷ್ ವಿದ್ಯಾರ್ಥಿ, ಪತ್ನಿಗೆ ಗಾಯ, ಘಟನೆ ಕುರಿತು ಸ್ವತಃ ಆಶಿಷ್ ವಿದ್ಯಾರ್ಥಿ ಅಪ್‌ಡೇಟ್ ನೀಡಿದ್ದಾರೆ. ನಡೆದುಕೊಂಡು ಹೋಗುತ್ತಿರುವಾಗ ವಾಹನ ಡ್ಕಿಕಿಯಾಗಿದೆ.

 

Read Full Story

06:24 PM (IST) Jan 03

ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿಗೆ ನಿರಾಸೆ; ಆದರೂ ಬೃಹತ್ ಮೊತ್ತ ಗಳಿಸಿದ ಭಾರತ ಯುವ ಪಡೆ

ದಕ್ಷಿಣ ಆಫ್ರಿಕಾ ಎ ವಿರುದ್ಧದ ಯೂತ್ ಏಕದಿನ ಪಂದ್ಯದಲ್ಲಿ, ಭಾರತ ಎ ತಂಡವು ಕಳಪೆ ಆರಂಭದ ಹೊರತಾಗಿಯೂ 300 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಹರ್ವಾನ್ಶ್‌ ಪಂಗಾಲಿಯಾ (93) ಮತ್ತು ಆರ್‌ ಎಸ್ ಅಂಬ್ರಿಶ್ (65) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡ ಚೇತರಿಸಿಕೊಂಡಿತು.

Read Full Story

06:01 PM (IST) Jan 03

ಕುಡಿದ ಮತ್ತಲ್ಲಿ 53 ವರ್ಷದ ವ್ಯಕ್ತಿಗೆ ಕಾರ್‌ ಗುದ್ದಿ ಸಾಯಿಸಿದ ಸೀರಿಯಲ್‌ ನಟ ಸಿದ್ದಾರ್ಥ್‌!

ಮಲಯಾಳಂ ನಟ ಸಿದ್ಧಾರ್ಥ್ ಪ್ರಭು ಅವರ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ತಮಿಳುನಾಡಿನ ಥಂಕರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.  ನಟನ ಮೇಲೆ ಇದೀಗ ಹೆಚ್ಚುವರಿ ಆರೋಪಗಳನ್ನು ಹೊರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Read Full Story

05:50 PM (IST) Jan 03

IPL 2026 - ಆರ್‌ಸಿಬಿ ತಂಡದಲ್ಲಿರುವ 4 ಸ್ಟಾರ್ ವಿದೇಶಿ ಆಟಗಾರರಿವರು! ರೊಮ್ಯಾರಿಯೋ ಶಫರ್ಡ್‌ಗಿಲ್ಲ ಸ್ಥಾನ

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ ಮಿನಿ ಹರಾಜು ಕೂಡಾ ಮುಕ್ತಾಯವಾಗಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿರುವ 4 ಬಲಿಷ್ಠ ವಿದೇಶಿ ಆಟಗಾರರು ಎನ್ನುವುದುನ್ನು ನೋಡೋಣ ಬನ್ನಿ.

 

Read Full Story

05:42 PM (IST) Jan 03

ರ‍್ಯಾಗಿಂಗ್‌ಗೆ ವಿದ್ಯಾರ್ಥಿನಿ ಬಲಿ - ಮೂವರು ವಿದ್ಯಾರ್ಥಿನಿಯರು ಪ್ರೊಫೆಸರ್ ವಿರುದ್ಧ ಕೇಸ್

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ, ಹಿರಿಯ ವಿದ್ಯಾರ್ಥಿನಿಯರು ಮತ್ತು ಪ್ರೊಫೆಸರ್‌ನಿಂದ ನಡೆದಿದೆ ಎನ್ನಲಾದ ರಾಗಿಂಗ್ ಹಾಗೂ ಲೈಂಗಿಕ ಕಿರುಕುಳದಿಂದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ತೀವ್ರ ಆಘಾತದಿಂದ ಬಳಲುತ್ತಿದ್ದ ಆಕೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Read Full Story

05:38 PM (IST) Jan 03

ನೀನು ಮಹಾಪಾಪ ಮಾಡಿದ್ದೀಯ... ಹೀರೋಯಿನ್‌ ವಿರುದ್ಧ ಮುಗಿಬಿದ್ದ ಮುಸ್ಲಿಂ ಧರ್ಮಗುರು!

Controversy Erupts Over Nushratt Bharuccha Visit to Mahakal Temple ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಈ ನಾಯಕಿ ಆಗಾಗ್ಗೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಈಗ ಈ ಸುಂದರ ಹುಡುಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

Read Full Story

05:16 PM (IST) Jan 03

ಕಿವೀಸ್ ಎದುರಿನ ಸರಣಿಗೆ ಭಾರತ ತಂಡ ಪ್ರಕಟ; ವರ್ಷದ ಬಳಿಕ ಪಂತ್ ಎಂಟ್ರಿ, ಮತ್ತೆ ಶಮಿಗೆ ಶಾಕ್!

ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕನಾಗಿ ಶುಭ್‌ಮನ್ ಗಿಲ್, ಉಪನಾಯಕನಾಗಿ ಶ್ರೇಯಸ್ ಅಯ್ಯರ್ ಮತ್ತು ವರ್ಷಗಳ ಬಳಿಕ ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ.  

Read Full Story

04:17 PM (IST) Jan 03

ತಿರುಪತಿಯಲ್ಲಿ ಭಾರಿ ಭದ್ರತಾ ಲೋಪ - ದೇಗುಲದ ಗೋಪುರ ಏರಿ ಕುಡುಕನ ಹೈಡ್ರಾಮಾ - ಕಳಸಕ್ಕೆ ಹಾನಿ ಮಾಡಲು ಯತ್ನ

ದೇಶದ ಅತ್ಯಂತ ಶ್ರೀಮಂತ ತಿರುಪತಿ ತಿಮ್ಮಪನ ದೇಗುಲ ಇರುವ ತಿರುಪತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತಿರುಪತಿಯ ಹೃದಯ ಭಾಗದಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯದ ಗೋಪುರವನ್ನು ಏರಿದ ಕುಡುಕನೋರ್ವ ಅಲ್ಲಿ ಹೈಡ್ರಾಮಾ ಸೃಷ್ಟಿಸಿದ್ದು, ಕಳಸಕ್ಕೆ ಹಾನಿ ಮಾಡುವುದಕ್ಕೆ ಯತ್ನಿಸಿದ್ದಾನೆ.

Read Full Story

04:12 PM (IST) Jan 03

ಆರು ವರ್ಷದ ಬಾಲಕಿ ಮೇಲೆರಗಿದ ಇಬ್ಬರ ಎನ್‌ಕೌಂಟರ್, ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ

ಆರು ವರ್ಷದ ಬಾಲಕಿ ಮೇಲೆರಗಿದ ಇಬ್ಬರ ಎನ್‌ಕೌಂಟರ್, ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಆಟವಾಡುತ್ತಿದ್ದ ಬಾಲಕಿ ಮೇಲರಗಿ, ಆಕೆಯನ್ನು ಮಹಡಿಗಳ ಮೇಲಿಂದ ಕೆಳಕ್ಕೆ ಎಸೆದ ದುರುಳರಿಗೆ ತಕ್ಕ ಶಾಸ್ತಿ ಮಾಡಲಾಗಿದೆ.

 

Read Full Story

03:46 PM (IST) Jan 03

ಮದ್ವೆಗೆ ಬಿಹಾರ ಹುಡ್ಗೀರು 20 ಸಾವಿರ ರೂಗೆ ಸಿಕ್ತಾರೆ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಪತಿ ವಿವಾದ

ಮದ್ವೆಗೆ ಬಿಹಾರ ಹುಡ್ಗೀರು 20 ಸಾವಿರ ರೂಗೆ ಸಿಕ್ತಾರೆ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಪತಿ ವಿವಾದ ಸೃಷ್ಟಿಸಿದ್ದಾರೆ. ಸಚಿವೆ ಪತಿಯ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ. ವಿವಾದವಾಗುತ್ತಿದ್ದಂತೆ ನಾಯಕ ಹೇಳಿದ್ದೇನು?

 

Read Full Story

03:35 PM (IST) Jan 03

ನಮ್ಗೂ ಪ್ರೈವೆಸಿ ಬೇಕು ಗುರು - ಪ್ರಾಣಿಗಳ ಚಲನವಲನದ ವೀಕ್ಷಣೆಗೆ ಇರಿಸಿದ ಕ್ಯಾಮರಾ ಎತ್ತಿ ಎಸೆದ ಆನೆ

ಬುದ್ಧಿವಂತ ಪ್ರಾಣಿ ಎನಿಸಿರುವ ಆನೆಗೆ ಸುತ್ತಲಿನ ಪರಿಸರದ ಬಗ್ಗೆ ಅಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಜಾಗೃತಿ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಆನೆಯೊಂದು ಕಾಡಿನಲ್ಲಿ ಆಳವಡಿಸಲಾಗಿದ್ದ ಕ್ಯಾಮರಾವನ್ನು ಕಿತ್ತೆಸೆದ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

Read Full Story

03:30 PM (IST) Jan 03

ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್; ಬೌಲರ್‌ಗಳನ್ನು ಚೆಂಡಾಡಿ ಮೊದಲ ಸಿಡಿಸಿದ ಹಾರ್ದಿಕ್ ಪಾಂಡ್ಯ!

ವಿಜಯ್ ಹಜಾರೆ ಟ್ರೋಫಿಯಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಚೊಚ್ಚಲ ಲಿಸ್ಟ್ 'ಎ' ಶತಕವನ್ನು (133) ಸಿಡಿಸಿ ಮಿಂಚಿದ್ದಾರೆ. ಸಂಕಷ್ಟದಲ್ಲಿದ್ದ ಬರೋಡ ತಂಡಕ್ಕೆ ಆಸರೆಯಾದ ಅವರು, ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿ ತಂಡದ ಮೊತ್ತವನ್ನು 293ಕ್ಕೆ ಏರಿಸಲು ನೆರವಾದರು.
Read Full Story

03:20 PM (IST) Jan 03

Breaking - ಏರ್‌ ಸ್ಟ್ರೈಕ್‌ ಬೆನ್ನಲ್ಲೇ ವೆನುಜುವೇಲ ಅಧ್ಯಕ್ಷ, ಪತ್ನಿ ಬಂಧನ - ಡೊನಾಲ್ಡ್‌ ಟ್ರಂಪ್‌ ಘೋಷಣೆ

ವೆನುಜುವೇಲ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಕ್ಯಾರಕಾಸ್ ಮೇಲಿನ ವೈಮಾನಿಕ ದಾಳಿಯ ನಂತರ ಅಮೆರಿಕದ ಪಡೆಗಳು ಸೆರೆಹಿಡಿದಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವೆನೆಜುವೆಲಾದ ರಾಜಧಾನಿಯಲ್ಲಿ ದೊಡ್ಡ ಸ್ಫೋಟಗಳು ಮತ್ತು ವಿಮಾನಗಳ ಹಾರಾಟದ ವರದಿಗಳ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
Read Full Story

03:09 PM (IST) Jan 03

ಇಂಡಿಗೋ ಪ್ರಯಾಣಿಕರಿಗೆ 10 ಸಾವಿರ ರೂ ವೋಚರ್ ಆಫರ್, ಕ್ಲೈಮ್ ಮಾಡುವುದು ಹೇಗೆ?

ಇಂಡಿಗೋ ಪ್ರಯಾಣಿಕರಿಗೆ 10 ಸಾವಿರ ರೂ ವೋಚರ್ ಆಫರ್, ಕ್ಲೈಮ್ ಮಾಡುವುದು ಹೇಗೆ?, ಇಂಡಿಗೋ ವಿಮಾನಾನ ಸಂಸ್ಥೆ ಮಹತ್ವದ ಘೋಷಣೆ. ಯಾರಿಗೆಲ್ಲಾ 10,000 ರೂಪಾಯಿ ಪರಿಹಾರ ವೋಚರ್ ಯಾರಿಗೆಲ್ಲಾ ಸಿಗಲಿದೆ?

 

Read Full Story

03:08 PM (IST) Jan 03

ನಮ್ಮ ಮೇಲಿನ ದಾಳಿಗೆ ಉತ್ತರ ನೀಡ್ತೇವೆ, ಅಮೆರಿಕಕ್ಕೆ ಎಚ್ಚರಿಕೆ ನೀಡಿದ ವೆನುಜುವೇಲ ಅಧ್ಯಕ್ಷ

ಅಮೆರಿಕವು ವೆನುಜುವೇಲದ ರಾಜಧಾನಿ ಕ್ಯಾರಕಾಸ್ ಸೇರಿದಂತೆ ನಾಲ್ಕು ನಗರಗಳ ಮೇಲೆ ಭಾರೀ ಮಿಲಿಟರಿ ದಾಳಿ ನಡೆಸಿದೆ. ಈ ದಾಳಿಯನ್ನು ಖಂಡಿಸಿರುವ ಅಧ್ಯಕ್ಷ ನಿಕೋಲಸ್ ಮಡುರೊ, ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದ್ದು, ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. 

Read Full Story

01:48 PM (IST) Jan 03

ಶಾರುಖ್​ ಖಾನ್​ ನಾಲಿಗೆ ಕತ್ತರಿಸಿದವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆ! ಫೋಟೋಗೆ ಚಪ್ಪಲಿ ಹಾರ

ಐಪಿಎಲ್‌ನಲ್ಲಿ ಬಾಂಗ್ಲಾದೇಶಿ ಆಟಗಾರರನ್ನು ಸೇರಿಸಿಕೊಂಡಿದ್ದಕ್ಕಾಗಿ ನಟ ಶಾರುಖ್ ಖಾನ್ ತೀವ್ರ ವಿರೋಧ ಎದುರಿಸುತ್ತಿದ್ದಾರೆ.  ಅಖಿಲ ಭಾರತ ಹಿಂದೂ ಮಹಾಸಭಾದ ಮೀನಾ ರಾಥೋಡ್ ಅವರು ಶಾರುಖ್ ನಾಲಿಗೆ ಕತ್ತರಿಸಿ ತಂದವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Read Full Story

01:13 PM (IST) Jan 03

ವಿಜಯ್ ಹಜಾರೆ ಟ್ರೋಫಿ - ನಾಲ್ಕನೇ ಶತಕ ಚಚ್ಚಿದ ಆರ್‌ಸಿಬಿ ಸ್ಟಾರ್ ಕ್ರಿಕೆಟಿಗ!

2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ತ್ರಿಪುರ ವಿರುದ್ಧ ಕರ್ನಾಟಕ ತಂಡವು ಬೃಹತ್ ಮೊತ್ತ ಕಲೆಹಾಕಿದೆ. ದೇವದತ್ ಪಡಿಕ್ಕಲ್ ಈ ಟೂರ್ನಿಯಲ್ಲಿ ತಮ್ಮ ನಾಲ್ಕನೇ ಶತಕ (108) ಸಿಡಿಸಿದರೆ, ಕೆಳಕ್ರಮಾಂಕದಲ್ಲಿ ಅಭಿನವ್ ಮನೋಹರ್ ಸ್ಪೋಟಕ ಅರ್ಧಶತಕ (79*) ಬಾರಿಸಿ ತಂಡದ ಮೊತ್ತವನ್ನು 332ಕ್ಕೆ ಏರಿಸಿದರು.
Read Full Story

01:12 PM (IST) Jan 03

RBI ನಿಜವಾಗಿಯೂ 500 ರೂ. ನೋಟುಗಳನ್ನು ರದ್ದು ಮಾಡುತ್ತಿದೆಯೇ? ಕೇಂದ್ರದ ಸ್ಪಷ್ಟನೆ

PIB ಫ್ಯಾಕ್ಟ್ ಚೆಕ್: ಕೇಂದ್ರ ಸರ್ಕಾರ ಮತ್ತೊಮ್ಮೆ ನೋಟು ಅಮಾನ್ಯೀಕರಣಕ್ಕೆ ಸಿದ್ಧವಾಗಿದೆಯೇ? ಭಾರತೀಯ ರಿಸರ್ವ್ ಬ್ಯಾಂಕ್ 500 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Read Full Story

01:12 PM (IST) Jan 03

ವಿಷಾಹಾರ - ನರ್ಮದಾ ನದಿ ತೀರದಲ್ಲಿ 200ಕ್ಕೂ ಹೆಚ್ಚು ಗಿಳಿಗಳ ಮಾರಣಹೋಮ

ವಿಷಾಹಾರ ಸೇವನೆಯಿಂದಾಗಿ ನರ್ಮದಾ ನದಿ ತೀರದಲ್ಲಿ 200ಕ್ಕೂ ಹೆಚ್ಚು ಗಿಳಿಗಳು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶ ಖರ್ಗೊನೆ ಜಿಲ್ಲೆಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಬದ್ವಾ ಪ್ರದೇಶದ ನದಿ ದಂಡೆಯಲ್ಲಿ ಗಿಳಿಗಳು ಶವವಾಗಿ ಪತ್ತೆಯಾಗಿವೆ.

Read Full Story

12:56 PM (IST) Jan 03

ಜನನ ಪ್ರಮಾಣ ಹೆಚ್ಚಿಸಲು ಕಾಂಡೋಮ್‌ಗಳ ಮೇಲೆ ಶೇ. 13ರಷ್ಟು ತೆರಿಗೆ ವಿಧಿಸಿದ ಚೀನಾ!

ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಚೀನಾ ಸರ್ಕಾರವು ಕಾಂಡೋಮ್‌ಗಳು ಮತ್ತು ಗರ್ಭನಿರೋಧಕಗಳ ಮೇಲಿನ ಮೂರು ದಶಕಗಳ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿ, ಶೇ.13ರಷ್ಟು ತೆರಿಗೆ ವಿಧಿಸಿದೆ. 

Read Full Story

12:31 PM (IST) Jan 03

Breaking - ಅಮೆರಿಕದ ವಾರ್ನಿಂಗ್‌ ಬೆನ್ನಲ್ಲೇ ವೆನುಜುವೇಲ ರಾಜಧಾನಿ Caracas ಬಳಿ ಸಾಲು ಸಾಲು ಸ್ಫೋಟ

ಅಮೆರಿಕದ ಡ್ರಗ್ ರಾಕೆಟ್ ಎಚ್ಚರಿಕೆಯ ನಂತರ, ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಶನಿವಾರ ಬೆಳಿಗ್ಗೆ ಕನಿಷ್ಠ ಏಳು ಸ್ಫೋಟಗಳು ಸಂಭವಿಸಿವೆ. ಈ ಘಟನೆಯಿಂದ ಜನರು ಭಯಭೀತರಾಗಿದ್ದು, ಯುದ್ಧವಿಮಾನಗಳ ಹಾರಾಟವೂ ಕೇಳಿಬಂದಿದೆ, ಆದರೆ ಸರ್ಕಾರ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
Read Full Story

12:21 PM (IST) Jan 03

ಶಾಲೆಬಿಟ್ಟು ಕಳ್ಳತನಕ್ಕಿಳಿದ ಬಾಲಕ - ಆತನಿಗೆ ಬುದ್ಧಿ ಕಲಿಸಲು ಮುಂದಾದ ಪೋಷಕರ ವಿರುದ್ಧವೇ ಈಗ ಕೇಸ್

ಲ್ಲೊಂದು ಕಡೆ ಶಾಲೆ ಬಿಟ್ಟು ಅಕ್ಕಪಕ್ಕದ ಮನೆಯವರ ಮೊಬೈಲ್ ಕಳ್ಳತನ ಮಾಡುತ್ತಾ ಕೆಟ್ಟ ದಾರಿ ಹಿಡಿದಿದ್ದ ಮಗನಿಗೆ ಬುದ್ಧಿ ಕಲಿಸಲು ಪೋಷಕರು ನೀಡಿದ ಶಿಕ್ಷೆ ಈಗ ಪೋಷಕರನ್ನೇ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಹಾಗಿದ್ರೆ ಪೋಷಕರು ಮಾಡಿದ್ದೇನು?

Read Full Story

12:00 PM (IST) Jan 03

ಕಿವೀಸ್‌ ವಿರುದ್ಧ ಏಕದಿನಕ್ಕೆ ಇಂದು ಭಾರತ ತಂಡ ಆಯ್ಕೆ; ಶಮಿ ಸೇರಿ ಯಾರಿಗೆಲ್ಲಾ ಸಿಗುತ್ತೆ ಚಾನ್ಸ್?

ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದು ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಲಿದೆ. ಇದು ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲಗಳನ್ನು ಹುಟ್ಟುಹಾಕಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

 

Read Full Story

11:27 AM (IST) Jan 03

Breaking - ಬಾಂಗ್ಲಾ ಪ್ಲೇಯರ್‌ ಮುಸ್ತಾಫಿಜುರ್‌ ರೆಹಮಾನ್‌ ಕೈಬಿಡುವಂತೆ ಶಾರುಖ್‌ ಟೀಮ್‌ಗೆ ಸೂಚಿಸಿದ ಬಿಸಿಸಿಐ

BCCI Directs KKR to Release Mustafizur Rahman Over Bangladesh Row IPL 2026: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ರಿಲೀಸ್‌ ಮಾಡುವಂತೆ ಬಿಸಿಸಿಐ ಫ್ರಾಂಚೈಸಿಗೆ ಸೂಚನೆ ನೀಡಿದೆ. ಇತ್ತೀಚಿನ ಬೆಳವಣಿಗೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

 

Read Full Story

10:55 AM (IST) Jan 03

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ನಡೆಸಲು ಕೆಎಸ್‌ಸಿಎ ಸಕಲ ಪ್ರಯತ್ನ - ಅನಿಲ್ ಕುಂಬ್ಳೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ನಂತರ, ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಪಾಲಿಸಲು ಕೆಎಸ್‌ಸಿಎ ಬದ್ಧವಾಗಿದೆ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ. 

Read Full Story

10:24 AM (IST) Jan 03

ಭಾರತಕ್ಕೆ ಸಂಪೂರ್ಣ ಬೆಂಬಲ - ಪಾಕ್ ನೆಲದಿಂದ ಬಂತು ಜೈಶಂಕರ್‌ಗೆ ಬಹಿರಂಗ ಪತ್ರ

ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ನೆರೆಯ ಚೀನಾವೂ ಭಾರತದ ವಿರುದ್ಧ ಆ ಎರಡು ದೇಶಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ಗೊತ್ತಿದೆ. ಈ ನಡುವೆ ಪಾಕಿಸ್ತಾನದ ನೆಲದಿಂದ ಭಾರತವನ್ನು ಬೆಂಬಲಿಸಿ ಬಹಿರಂಗ ಪತ್ರವೊಂದು ಬಂದಿದೆ.

Read Full Story

09:45 AM (IST) Jan 03

2026 - ವಿಶ್ವ ಕಿರೀಟ ಉಳಿಸಿಕೊಳ್ಳೋರು ಯಾರು? ಟೀಂ ಇಂಡಿಯಾ ಮುಂದಿದೆ ಬೆಟ್ಟದಂತ ಸವಾಲು

2026ರ ಕ್ರೀಡಾ ಜಗತ್ತು ಹಲವು ರೋಚಕ ಸವಾಲುಗಳಿಗೆ ಸಾಕ್ಷಿಯಾಗಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ, ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಮ್ಮ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಿದರೆ, ಚೆಸ್‌ನಲ್ಲಿ ಗುಕೇಶ್ ಮತ್ತು ಟೆನಿಸ್‌ನಲ್ಲಿ ಜೊಕೊವಿಚ್ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.
Read Full Story

More Trending News