- Home
- Sports
- Cricket
- IPL 2026: ಆರ್‌ಸಿಬಿ ತಂಡದಲ್ಲಿರುವ 4 ಸ್ಟಾರ್ ವಿದೇಶಿ ಆಟಗಾರರಿವರು! ರೊಮ್ಯಾರಿಯೋ ಶಫರ್ಡ್‌ಗಿಲ್ಲ ಸ್ಥಾನ
IPL 2026: ಆರ್‌ಸಿಬಿ ತಂಡದಲ್ಲಿರುವ 4 ಸ್ಟಾರ್ ವಿದೇಶಿ ಆಟಗಾರರಿವರು! ರೊಮ್ಯಾರಿಯೋ ಶಫರ್ಡ್‌ಗಿಲ್ಲ ಸ್ಥಾನ
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ ಮಿನಿ ಹರಾಜು ಕೂಡಾ ಮುಕ್ತಾಯವಾಗಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿರುವ 4 ಬಲಿಷ್ಠ ವಿದೇಶಿ ಆಟಗಾರರು ಎನ್ನುವುದುನ್ನು ನೋಡೋಣ ಬನ್ನಿ.

ಸತತ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟ ಆರ್‌ಸಿಬಿ
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಸತತ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಟೂರ್ನಿಗೆ ಕಣಕ್ಕಿಳಿಯುವ ಮುನ್ನ ರಣತಂತ್ರ ಹೆಣೆಯುತ್ತಿದೆ.
ಆರ್‌ಸಿಬಿ ತಂಡದಲ್ಲಿ ವಿದೇಶಿ ತಾರೆಯರ ದಂಡು
ಆರ್‌ಸಿಬಿ ತಂಡದಲ್ಲಿ ಟಿಮ್ ಡೇವಿಡ್, ನುವಾನ್ ತುಷಾರ, ರೊಮ್ಯಾರಿಯೋ ಶೆಫರ್ಡ್, ಜೋಶ್ ಹೇಜಲ್‌ವುಡ್, ಜೆಕೊಬ್ ಡಫಿ, ಫಿಲ್ ಸಾಲ್ಟ್, ಜೆಕೊಬ್ ಬೆಥೆಲ್ ಅವರಂತಹ ತಾರಾ ವಿದೇಶಿ ಆಟಗಾರರ ದಂಡೇ ಇದೆ.
ಐಪಿಎಲ್ 2026 ಟೂರ್ನಿಯಲ್ಲಿ ಆರ್‌ಸಿಬಿಯ ನಾಲ್ವರು ಸಂಭಾವ್ಯ ವಿದೇಶಿ ಆಟಗಾರರು
ಈ ಪೈಕಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲಿರುವ ನಾಲ್ಕು ವಿದೇಶಿ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
4. ಜೆಕೊಬ್ ಡಫಿ:
ವಿಶ್ವ ಟಿ20 ಎರಡನೇ ಶ್ರೇಯಾಂಕಿತ ಬೌಲರ್ ಜೆಕೊಬ್ ಡಫಿ ಸೇರ್ಪಡೆ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತಂದು ಕೊಡಲಿದೆ. ಯಶ್ ದಯಾಳ್ ಲಭ್ಯತೆಯ ಬಗ್ಗೆ ಗೊಂದಲ ಗಳಿರುವುದರಿಂದ ಡಫಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆರ್‌ಸಿಬಿ ತಂಡವು ಎದುರು ನೋಡುತ್ತಿದೆ.
3. ಜೋಶ್ ಹೇಜಲ್‌ವುಡ್:
ಆಸೀಸ್ ಮೂಲದ ಅನುಭವಿ ವೇಗಿ ಜೋಶ್ ಹೇಜಲ್‌ವುಡ್, ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೊಸ ಚೆಂಡಿನಲ್ಲಿ ಕರಾರುವಕ್ಕಾದ ದಾಳಿಯ ಜತೆಗೆ ಡೆತ್ ಓವರ್‌ನಲ್ಲೂ ಪರಿಣಾಮಕಾರಿ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಹೇಜಲ್‌ವುಡ್ ಆರ್‌ಸಿಬಿ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಎನಿಸಿಕೊಂಡಿದ್ದಾರೆ.
2. ಟಿಮ್ ಡೇವಿಡ್:
ಆಸೀಸ್ ಮೂಲದ ಬಿಗ್ ಹಿಟ್ಟರ್ ಟಿಮ್ ಡೇವಿಡ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಡೆತ್ ಓವರ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯ ಟಿಮ್ ಡೇವಿಡ್‌ಗಿದೆ.
1. ಫಿಲ್ ಸಾಲ್ಟ್:
ಆರ್‌ಸಿಬಿ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಪವರ್ ಪ್ಲೇನಲ್ಲಿಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಉತ್ತಮ ಆರಂಭ ಒದಗಿಸುತ್ತಾ ಬಂದಿದ್ದಾರೆ. ಆರಂಭದಲ್ಲೇ ಚುರುಕಾಗಿ ರನ್ ಗಳಿಸುವ ಮೂಲಕ ಸಾಲ್ಟ್ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಶಫರ್ಡ್‌ಗಿಲ್ಲ ಸ್ಥಾನ!
ರೊಮ್ಯಾರಿಯೋ ಶೆಫರ್ಡ್ ಕೂಡಾ ಆರ್‌ಸಿಬಿ ವಿದೇಶಿ ಆಟಗಾರರ ಪೈಕಿ ಒಳ್ಳೆಯ ಆಯ್ಕೆಯಾಗಿದ್ದರೂ, ಬಲಿಷ್ಠ ಬೌಲಿಂಗ್ ಹೊಂದುವ ಅಗತ್ಯವಿದ್ದರೇ ಜೆಕಬ್ ಡಫಿ ಒಳ್ಳೆಯ ಆಯ್ಕೆಯಾಗುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

