Published : Feb 03, 2026, 07:01 AM ISTUpdated : Feb 03, 2026, 11:10 PM IST

India Latest News Live: ಹಳೇ ಸಿಮ್‌ ಕಾರ್ಡ್‌ನಲ್ಲಿದ್ಯಾ ಚಿನ್ನ? ಇ-ವೇಸ್ಟ್‌ನಿಂದ 26 ಲಕ್ಷ ಮೌಲ್ಯದ ಚಿನ್ನ ಹೊರತೆಗೆದ ಯುವಕ!

ಸಾರಾಂಶ

ನವದೆಹಲಿ: ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆಗೆ ಈ ಬಾರಿ ತಮಿಳುನಾಡಿನ ಕಾಂಜೀವರಂ ಸೀರೆ ಉಟ್ಟು ಬರುತ್ತಾರೆ ಎಂದು ಶಿವಸೇನೆ (ಉದ್ಧವ್‌) ಬಣದ ಸಂಸದೆ ಪ್ರಿಯಾಂಕಾ ಚರ್ತುರ್ವೇದಿ ನುಡಿದ ಭವಿಷ್ಯ ನಿಜವಾಗಿದೆ. ಈ ಕುರಿತು ಅವರು ‘ನಾನು ಊಹಿಸಿದಂತೆಯೇ ಆಗಿದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬಜೆಟ್‌ ಹಿಂದಿನ ದಿನ ಮಾಧ್ಯಮವೊಂದರೆ ಜತೆ ಮಾತನಾಡಿದ್ದ ಪ್ರಿಯಾಂಕಾ, ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಲಾ ಅವರು ಬಜೆಟ್‌ ಮಂಡನೆ ವೇಳೆ ತಮಿಳುನಾಡಿನ ಸೀರೆಯುಟ್ಟು, ಬಂಗಾಳದ ಪದಗಳನ್ನು ಬಳಸಲಿದ್ದಾರೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಅದರಂತೆ ಬಜೆಟ್ ಮಂಡನೆಗೆ ನಿರ್ಮಲಾ ಅವರು ಕಾಂಜೀವರಂ ಸೀರೆಯುಟ್ಟು ಬಂದಿದ್ದರು.

11:10 PM (IST) Feb 03

ಹಳೇ ಸಿಮ್‌ ಕಾರ್ಡ್‌ನಲ್ಲಿದ್ಯಾ ಚಿನ್ನ? ಇ-ವೇಸ್ಟ್‌ನಿಂದ 26 ಲಕ್ಷ ಮೌಲ್ಯದ ಚಿನ್ನ ಹೊರತೆಗೆದ ಯುವಕ!

Gold from SIM Cards: Man Extracts ₹26 Lakh Gold from E-Waste 'ದಿ ಆಲ್ಕೆಮಿಸ್ಟ್' ಎಂದು ಕರೆಯಲ್ಪಡುವ ಚೀನಾದ ವ್ಯಕ್ತಿಯೊಬ್ಬ ಸಿಮ್ ಕಾರ್ಡ್‌ಗಳು ಸೇರಿದಂತೆ ಎರಡು ಟನ್ ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಸುಮಾರು 200,000 ಯುವಾನ್ ಮೌಲ್ಯದ ಚಿನ್ನವನ್ನು ಹೊರತೆಗೆದಿದ್ದಾರೆ.

 

Read Full Story

10:52 PM (IST) Feb 03

ಸಿನಿಮಾ ಶೂಟಿಂಗ್‌ ಮುಗಿದ ಬಳಿಕ, ನಿರ್ದೇಶಕ ಮಾಡಿದ ಕೃತ್ಯಕ್ಕೆ ರಾತ್ರಿಯಿಡೀ ಅತ್ತಿದ್ದ ಸ್ಟಾರ್‌ ನಟಿ!

ಹಿರಿಯ ನಿರ್ದೇಶಕ ಎಸ್.ವಿ. ಕೃಷ್ಣ ರೆಡ್ಡಿ ಅವರು 'ಆಹ್ವಾನಂ' ಚಿತ್ರದ ನಂತರ ನೀಡಿದ ಉಡುಗೊರೆಗೆ ರಮ್ಯಾ ಕೃಷ್ಣ ರಾತ್ರಿಯಿಡೀ ಕಣ್ಣೀರಿಟ್ಟ ಘಟನೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ನಟಿ ಸೌಂದರ್ಯ ಅವರ ವೃತ್ತಿಪರತೆ ಮತ್ತು ಅವರ ಅಕಾಲಿಕ ಮರಣದ ನೋವಿನ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.
Read Full Story

10:40 PM (IST) Feb 03

ಗಂಡನನ್ನು ಹಾಸಿಗೆಗೆ ತಳ್ಳಿ ಆತನ ಮೇಲೇರಿ ಕುಳಿತು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಮೇಲೆ ದೈಹಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪತಿಯೇ ರಹಸ್ಯವಾಗಿ ಚಿತ್ರೀಕರಿಸಿದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುರುಷರ ಮೇಲಿನ ಕೌಟುಂಬಿಕ ದೌರ್ಜನ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.
Read Full Story

10:19 PM (IST) Feb 03

ಒಂದು ಕಾಲದಲ್ಲಿ ಇಡೀ ಮುಂಬೈ ಆಳಿದ್ದ ಗ್ಯಾಂಗ್‌ಸ್ಟರ್‌ ಅಬು ಸಲೇಂಗೆ ಈಗ ಪರೋಲ್‌ಗೆ ಠೇವಣಿ ನೀಡೋವಷ್ಟು ಹಣ ಇಲ್ಲ!

ಅಬು ಸಲೇಂ ಪ್ರಸ್ತುತ ನಾಸಿಕ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ನವೆಂಬರ್‌ನಲ್ಲಿ ಅವರ ಅಣ್ಣನ ಮರಣದ ನಂತರ, ಉತ್ತರ ಪ್ರದೇಶದ ಅಜಂಗಢದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಉಳಿದ ಆಚರಣೆಗಳನ್ನು ನಿರ್ವಹಿಸಲು ಸಲೇಂ ಪೆರೋಲ್ ಕೋರಿದ್ದರು.

 

Read Full Story

09:32 PM (IST) Feb 03

ಯಮಹಾ ಮ್ಯಾಜಿಕ್ - ಭಾರತದ ರಸ್ತೆಗೆ ಇಳಿಯಿತು ಮೊದಲ ಎಲೆಕ್ಟ್ರಿಕ್ ಸ್ಕೂಟರ್; ಒಂದೇ ಚಾರ್ಜ್‌ಗೆ 169 ಕಿ.ಮೀ ಮೈಲೇಜ್!

Yamaha EC-06 Electric Scooter Launched in India: 169km Range ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸಂಚಲನ ಮೂಡಿಸಲು ಯಮಹಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ EC-06 ಅನ್ನು ಸಹ ಬಿಡುಗಡೆ ಮಾಡಿದೆ.

 

Read Full Story

09:12 PM (IST) Feb 03

14 ವರ್ಷದ ವೈಭವ್ ಸೂರ್ಯವಂಶಿ ಓದಿದ್ದು ಎಷ್ಟು? ಈಗ ಯಾವ ಕ್ಲಾಸ್? ಯಾವ ಸ್ಕೂಲ್? ಫೀ ಎಷ್ಟು?

Vaibhav Suryavanshi Education Qualification: ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಶಿಕ್ಷಣದ ಬಗ್ಗೆ ನಿಮಗೆ ಗೊತ್ತಾ? ತಾಜ್‌ಪುರದ ಪುಟ್ಟ ಹಳ್ಳಿಯಿಂದ ಬಂದ 14 ವರ್ಷದ ವೈಭವ್, ಯಾವ ಕ್ಲಾಸ್‌ನಲ್ಲಿ ಓದುತ್ತಿದ್ದಾರೆ, ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

 

Read Full Story

07:59 PM (IST) Feb 03

ಈ ಆ್ಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ

ಈ ಆ್ಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ, ನೆಚ್ಚಿನ ಫೋಟೋ, ಬ್ಯಾಂಕ್ ಖಾತೆ ಸೇರಿದಂತೆ ಹಲವು ರಹಸ್ಯ ಮಾಹಿತಿಗಳು ಸೋರಿಕೆಯಾಗವು ಸಾಧ್ಯತೆಗಳಿವೆ. ಹೀಗಾಗಿ ಕೆಲ ಆ್ಯಪ್ ಬಗ್ಗೆ ಎಚ್ಚರ ಅಗತ್ಯ.

Read Full Story

07:48 PM (IST) Feb 03

ಬ್ಯಾಂಕ್ ಆಫ್ ಬರೋಡಾದಿಂದ ಮಹಾ ನೇಮಕಾತಿ - 418 ಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ (BOB) 418 ಮ್ಯಾನೇಜರ್ ಮತ್ತು ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. BE/B.Tech ಪದವೀಧರರು ಸೇರಿದಂತೆ ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Read Full Story

07:33 PM (IST) Feb 03

ಯುವತಿಯರ ಬಳಸಿಕೊಂಡ ಕೇಸ್, ಕಾಂಗ್ರೆಸ್ ನಾಯಕನ ಚಾಟ್ ಬಹಿರಂಗಪಡಿಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

ಯುವತಿಯರ ಬಳಸಿಕೊಂಡ ಕೇಸ್, ಕಾಂಗ್ರೆಸ್ ನಾಯಕನ ಚಾಟ್ ಬಹಿರಂಗಪಡಿಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಈತ ಸಾಮಾನ್ಯ ಕೋಳಿ ಅಲ್ಲ, ಕೆಟ್ಟ ಚಾಳಿ ಇರುವ ಕೋಳಿ ಎಂದು ಮಾಡೆಲ್ ಹೇಳಿದ್ದಾರೆ. ಈ ಕಾಂಗ್ರೆಸ್ ನಾಯಕ ಮಾಡಿದ್ದ ಮೆಸೇಜ್‌ಗಳನ್ನು ಬಹಿರಂಗಪಡಿಸಿದ್ದಾರೆ.

 

Read Full Story

07:26 PM (IST) Feb 03

ಎಸ್‌ಬಿಐನಲ್ಲಿ ಬರೋಬ್ಬರಿ 2273 ಅಧಿಕಾರಿ ಹುದ್ದೆ ನೇಮಕಾತಿ, ಬ್ಯಾಂಕಿಂಗ್ ಉದ್ಯೋಗದ ನಿಮ್ಮ ಕನಸು ನನಸಾಗುವ ಸಮಯ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2,273 ವೃತ್ತ ಆಧಾರಿತ ಅಧಿಕಾರಿ (CBO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಅಖಿಲ ಭಾರತ ಮಟ್ಟದಲ್ಲಿ ನಡೆಯಲಿದೆ.

Read Full Story

07:25 PM (IST) Feb 03

ಬೆಡ್‌ರೂಮ್‌ನ ಗ್ಲಾಮರಸ್‌ ಫೋಟೋ ಹಂಚಿಕೊಂಡ 45 ವರ್ಷದ ಸೀರಿಯಲ್‌ ನಟಿ, ಅಭಿಮಾನಿಗಳು ಶಾಕ್‌!

ಸೀರಿಯಲ್‌ ನಟಿ ಶ್ವೇತಾ ತಿವಾರಿ ತಮ್ಮ ಬೆಡ್‌ರೂಮ್‌ ಫೋಟೋಶೂಟ್‌ನ ಚಿತ್ರಗಳನ್ನು ಹಂಚಿಕೊಂಡಿದ್ದು, ಅವು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಸಂತೋಷದಿಂದ ಕಾಣಿಸಿಕೊಂಡಿರುವ ಅವರು, ತಮ್ಮ ರಾತ್ರಿಯ ದಿನಚರಿಯ ಬಗ್ಗೆಯೂ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
Read Full Story

07:05 PM (IST) Feb 03

ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ! ಇಂದಿರಾ, ರಾಜೀವ್​, ಸಂಜಯ್ ಸತ್ತಿದ್ದು ಇದೇ ದಿನ- ಜ್ಯೋತಿಷಿ ಹೇಳಿದ್ದೇನು?

ಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ, 1966ರಲ್ಲಿ ಗೋಹತ್ಯೆ ನಿಷೇಧ ಪ್ರತಿಭಟನೆ ವೇಳೆ ಕರಪಾತ್ರಿ ಮಹಾರಾಜ್ ನೀಡಿದ 'ಗೋಪಾಷ್ಟಮಿ ಶಾಪ' ಗಾಂಧಿ ಕುಟುಂಬವನ್ನು ಕಾಡುತ್ತಿದೆ. ಇದೇ ಶಾಪದಿಂದಾಗಿ ಇಂದಿರಾ, ರಾಜೀವ್ ಮತ್ತು ಸಂಜಯ್ ಗಾಂಧಿ ದುರಂತ ಅಂತ್ಯ ಕಂಡರು ಎಂದಿರುವ ಅವರು ಇದರ ಬಗ್ಗೆ ವಿವರಿಸಿದ್ದಾರೆ. 

Read Full Story

07:00 PM (IST) Feb 03

ಟ್ರಂಪ್‌ ಟ್ರೇಡ್‌ ಡೀಲ್‌ನಿಂದ ಒಂದೇ ದಿನ ಕೋಟಿ ಕೋಟಿ ಬಾಚಿದ ಅಂಬಾನಿ, ಟಾಟಾ, ಮಿತ್ತಲ್‌!

ಟ್ರಂಪ್ ಅವರ ಮೃದು ಸುಂಕ ನೀತಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಮತ್ತು ಟಿಸಿಎಸ್‌ನಂತಹ ಪ್ರಮುಖ ಕಂಪನಿಗಳ ಷೇರುಗಳು ಶೇಕಡಾ 5 ರಿಂದ 7 ರಷ್ಟು ಹೆಚ್ಚಳ ಕಂಡಿವೆ. 

Read Full Story

06:41 PM (IST) Feb 03

ಸುಳ್ಳು ರೇಪ್ ಕೇಸಲ್ಲಿ 20 ವರ್ಷ ಜೈಲಲ್ಲಿ ಕಳೆದ ವ್ಯಕ್ತಿ ಅಳುತ್ತಿರುವ ವೀಡಿಯೋ ಮತ್ತೆ ವೈರಲ್

ಸುಳ್ಳು ಅತ್ಯಾ*ಚಾರ ಪ್ರಕರಣದಲ್ಲಿ 20 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ವಿಷ್ಣು ತಿವಾರಿ ಅವರನ್ನು 2021ರಲ್ಲಿ ಅಲಹಾಬಾದ್ ಹೈಕೋರ್ಟ್‌ ನಿರಪರಾಧಿ ಎಂದು ಘೋಷಿಸಿತ್ತು. ಜೈಲಿನಿಂದ ಬಿಡುಗಡೆಯಾಗುವಾಗ ಅವರು ಕಣ್ಣೀರಿಟ್ಟ ವೀಡಿಯೋ ಇದೀಗ ವೈರಲ್ ಆಗಿದೆ.

Read Full Story

06:36 PM (IST) Feb 03

ಆಫೀಸ್‌ಗೆ ಬಂದು ಮೀಟಿಂಗ್ ಹಾಜರಾಗಲು ವಾರ್ನಿಂಗ್, ಜೆನ್‌ಝಿ ಉದ್ಯೋಗಿ ಉತ್ತರಕ್ಕೆ ಬಾಸ್ ಕಂಗಾಲು

ಆಫೀಸ್‌ಗೆ ಬಂದು ಮೀಟಿಂಗ್ ಹಾಜರಾಗಲು ವಾರ್ನಿಂಗ್, ಮನೆಯಲ್ಲಿ ಕುಳಿತು ಆನ್‌ಲೈನ್ ಮೀಟಿಂಗ್ ಆಗಲ್ಲ ಎಂದು ಬಾಸ್ ಹೇಳಿದ್ದಾರೆ ಇದಕ್ಕೆ ಜೆನ್‌ಝಿ ಉದ್ಯೋಗಿ ನೀಡಿದ ಉತ್ತರಕ್ಕೆ ಬಾಸ್ ಕಂಗಾಲಾಗಿದ್ದಾರೆ.

 

Read Full Story

06:31 PM (IST) Feb 03

Epstein Files - 'ಮಕ್ಕಳ ಮಾಂಸ ತಿನ್ನುತ್ತಿದ್ದಾರೆ..' ಎಲೈಟ್‌ ಪಾರ್ಟಿಯಿಂದ ಓಡಿ ಬಂದು ಹೇಳಿದ್ದ ಮಾಡೆಲ್‌ ನಾಪತ್ತೆಯಾಗಿದ್ದು ಹೇಗೆ?

ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ದಾಖಲೆಗಳು ಬಿಡುಗಡೆಯಾಗಿದ್ದು, ಜಾಗತಿಕ ಗಣ್ಯರ ಮೇಲೆ ನರಭಕ್ಷಕತೆಯ ಆರೋಪ ಮಾಡಿದ್ದ ಮಾಡೆಲ್ ಗೇಬ್ರಿಯೆಲಾ ರಿಕೊ ಜಿಮೆನೆಜ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 2009ರಲ್ಲಿ ಗಣ್ಯರ ಪಾರ್ಟಿಯಲ್ಲಿನ ಕರಾಳ ಸತ್ಯದ ಆಕೆ ಹೇಳಿದ್ದ ಮಾತು ನಿಜವಾಗಿದೆ.

Read Full Story

05:46 PM (IST) Feb 03

2026ರ ಹೊಸ ಬ್ಯಾಗೇಜ್‌ ರೂಲ್ಸ್ ಪ್ರಕಾರ ಡ್ಯೂಟಿ-ಫ್ರೀ ಆಗಿ ಎಷ್ಟು ಚಿನ್ನ ತರಬಹುದು? ಇಲ್ಲಿದೆ ಡೀಟೈಲ್ಸ್

ಕೇಂದ್ರ ಸರ್ಕಾರವು ಹೊಸ ಬ್ಯಾಗೇಜ್ ರೂಲ್ಸ್ 2026 ಅನ್ನು ಜಾರಿಗೆ ತಂದಿದ್ದು, ವಿದೇಶದಿಂದ ಬರುವ ಭಾರತೀಯ ಪ್ರಯಾಣಿಕರಿಗೆ ಸುಂಕ ರಹಿತ ಮಿತಿಯನ್ನು ₹75,000ಕ್ಕೆ ಹೆಚ್ಚಿಸಿದೆ. ಮಹಿಳೆಯರು 40 ಗ್ರಾಂ ಮತ್ತು ಪುರುಷರು 20 ಗ್ರಾಂ ಚಿನ್ನಾಭರಣವನ್ನು ಸುಂಕವಿಲ್ಲದೆ ತರಲು ಅವಕಾಶ ಕಲ್ಪಿಸಲಾಗಿದೆ.

Read Full Story

05:08 PM (IST) Feb 03

ಚುನಾವಣಾ ಉಸ್ತುವಾರಿಗೆ ರಾಜೀನಾಮೆ ನೀಡಿದ ಬಿಜೆಪಿ ನಾಯಕ ಅಣ್ಣಾಮಲೈ, ಕಾರಣವೇನು?

ಬಿಜೆಪಿ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ, ಬಿಜೆಪಿ ತಮಿಳುನಾಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ಪ್ರಮುಖ ಜವಾಬ್ದಾರಿಗಳು ನೀಡಿರಲಿಲ್ಲ. ಇತ್ತೀಚೆಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Read Full Story

04:31 PM (IST) Feb 03

ಪಾಕಿಸ್ತಾನ ಕ್ರಿಕೆಟ್ ಬಂಡವಾಳ ಬಯಲು ಮಾಡಿದ ಪಾಕ್ ಮಾಜಿ ಕ್ರಿಕೆಟಿಗ! ಭಾರತ ಕೈಬಿಟ್ರೆ ಬಿಕಾರಿಯಾಗ್ತೇವೆ ಎಂದ ರಾಜಾ!

2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಮುಂದಾಗಿದೆ. ಆದರೆ, ಐಸಿಸಿಯ 90% ಆದಾಯ ಭಾರತದಿಂದಲೇ ಬರುವುದರಿಂದ ಮತ್ತು ಪಾಕ್ ಕ್ರಿಕೆಟ್ ಬೋರ್ಡ್ ಐಸಿಸಿ ಅನುದಾನವನ್ನೇ ಅವಲಂಬಿಸಿರುವುದರಿಂದ, ಈ ನಿರ್ಧಾರವು ಪಾಕ್ ಕ್ರಿಕೆಟ್‌ನ ಸರ್ವನಾಶಕ್ಕೆ ಕಾರಣವಾಗಬಹುದು.

Read Full Story

04:24 PM (IST) Feb 03

Four Stars of Destiny - ಭಾರತ ಸರ್ಕಾರ ಮಾಜಿ ಸೇನಾ ಮುಖ್ಯಸ್ಥ ನರವಾಣೆ ಪುಸ್ತಕ ನಿಷೇಧಿಸಲು ಕಾರಣವೇನು?

ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕವು ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಗಾಲ್ವಾನ್ ಸಂಘರ್ಷ ಮತ್ತು ಉನ್ನತ ಮಟ್ಟದ ರಹಸ್ಯ ಸಭೆಗಳ ವಿವರಗಳನ್ನು ಒಳಗೊಂಡಿರುವ ಈ ಪುಸ್ತಕದ ಬಿಡುಗಡೆಯನ್ನು ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ತಡೆಹಿಡಿಯಲಾಗಿದೆ. 

Read Full Story

04:18 PM (IST) Feb 03

ಮಗನ ಸಾವಿನ ನೋವಿನಲ್ಲೇ ಮೋದಿ ಭೇಟಿ, 15,000 ಕೋಟಿ ರೂ ದಾನ ಘೋಷಿಸಿದ ವೇದಾಂತ ಮುಖ್ಯಸ್ಥ

ಮಗನ ಸಾವಿನ ನೋವಿನಲ್ಲೇ ಮೋದಿ ಭೇಟಿ, ಮಹತ್ವದ ಮಾತುಕತೆ ನಡೆಸಿದ ವೇದಾಂತ ಮುಖ್ಯಸ್ಥ ಮೊದಲೇ ನಿರ್ಧರಿಸಿದಂತೆ 15,000 ಕೋಟಿ ರೂ ದಾನ ಮಾಡುವುದಾಗಿ ಪ್ರಧಾನಿ ಮೋದಿಗೆ ತಿಳಿಸಿದ್ದಾರೆ. ಯಾರಿಗೆಲ್ಲಾ ಆಸ್ತಿ ದಾನ?

Read Full Story

03:43 PM (IST) Feb 03

ನಡುರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಜೋಡಿಯ ಫೋಟೋಶೂಟ್‌ - ಎಚ್ಚರಿಸಿದ ಕಾರು ಚಾಲಕನ ಜೊತೆಗೂ ಗಲಾಟೆ

ವಾಹನ ಸಂಚಾರವಿದ್ದ ನಡುರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಸೆಲ್ಫಿ ತೆಗೆದುಕೊಂಡ ಜೋಡಿಯ ವೀಡಿಯೋ ವೈರಲ್ ಆಗಿದೆ. ತಮ್ಮ ಕೃತ್ಯವನ್ನು ಪ್ರಶ್ನಿಸಿದ ಕಾರು ಚಾಲಕನೊಂದಿಗೆ ಜೋಡಿ ಉದ್ಧಟತನದಿಂದ ವಾದಕ್ಕಿಳಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

03:29 PM (IST) Feb 03

ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್‌ಗೆ ಈ ಮೆಸೇಜ್ ಬಂದಿದೆಯಾ ಚೆಕ್ ಮಾಡಿ?

ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್‌ಗೆ ಈ ಮೆಸೇಜ್ ಬಂದಿದೆಯಾ? ಹಾಗಿದ್ದರೆ ನೀವು ಅತೀವ ಎಚ್ಚರಿಕೆ ವಹಿಸಬೇಕು. ಕಾರಣ ಒಂದು ಸಣ್ಣ ಎಡವಟ್ಟಾದರೂ ಗ್ರಾಹಕರಿಗೆ ಸಮಸ್ಯೆ ತೀವ್ರಗೊಳ್ಳಲಿದೆ. ಏನಿದು ಮೆಸೇಜ್?

Read Full Story

02:50 PM (IST) Feb 03

ಔಟಾಗಿ ಹೋಗುತ್ತಿದ್ದ ಪಾಕ್ ಆಟಗಾರನ ಮೇಲೆ ಮುಗಿಬಿದ್ದ ವೈಭವ್ ಸೂರ್ಯವಂಶಿ! ಅಗ್ರೆಸ್ಸಿವ್‌ನಲ್ಲಿ ಕೊಹ್ಲಿ ನೆನಪಿಸಿದ 14 ವರ್ಷದ ಆಟಗಾರ

ಬೆಂಗಳೂರು: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದು ಗುರುತಿಸಿಕೊಂಡಿರುವ ಭಾರತ-ಪಾಕಿಸ್ತಾನ ನಡುವೆ ರಾಜತಾಂತ್ರಿಕ ಬಿಕ್ಕಟು ಮತ್ತಷ್ಟು ಹೆಚ್ಚಾಗಿದೆ. ಹೀಗಿರುವಾಗಲೇ ಅಂಡರ್-19 ವಿಶ್ವಕಪ್‌ನಲ್ಲಿ ನಡೆದ ಒಂದು ಘಟನೆ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ನಡೆ ಕೊಹ್ಲಿಯನ್ನು ನೆನಪಿಸುವಂತಿದೆ.

 

Read Full Story

02:01 PM (IST) Feb 03

5.35 ಲಕ್ಷ ಮಾರುತಿ ಇಗ್ನಿಸ್ ಕಾರಿನ ಫ್ಯಾನ್ಸಿ ನಂಬರ್‌ಗೆ 2 ಕೋಟಿ ಕೊಟ್ಟ ಉದ್ಯಮಿ, ದುಬಾರಿ ದಾಖಲೆ

5.35 ಲಕ್ಷ ಮಾರುತಿ ಇಗ್ನಿಸ್ ಕಾರಿನ ಫ್ಯಾನ್ಸಿ ನಂಬರ್‌ಗೆ 2 ಕೋಟಿ ಕೊಟ್ಟ ಉದ್ಯಮಿ, ಇದು ಭಾರತದ ಅತೀ ದುಬಾರಿ ರಿಜಿಸ್ಟ್ರೇಶನ್ ನಂಬರ್. ಸಾಮಾನ್ಯವಾಗಿ ಲಕ್ಷುರಿ ಕಾರಿಗೆ ಈ ರೀತಿ ನಂಬರ್ ಖರೀದಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಗ್ಗದ ಕಾರಿಗೆ 2.08 ಕೋಟಿ ನಂಬರ್ ಖರೀದಿಸಲಾಗಿದೆ.

Read Full Story

01:35 PM (IST) Feb 03

IAS ಅಧಿಕಾರಿಯ ದಿಟ್ಟ ನಿರ್ಧಾರ - ಮಗಳನ್ನು ಫ್ರೀ ಸ್ಕೂಲ್ ಬದಲು ಸರ್ಕಾರಿ ಅಂಗನವಾಡಿಗೆ ಸೇರಿಸಿದ ಪುಲ್ಕಿತ್ ಗಾರ್ಗ್

ಬಹುತೇಕ ಪೋಷಕರು ಸಾಲ ಸೋಲ ಮಾಡಿಯಾದರೂ ಸರಿ ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಸಿಗುವ ಶಿಕ್ಷಣ ಚೆನ್ನಾಗಿರಬೇಕು ಎಂಬ ಆಸೆಯಿಂದ ಮಕ್ಕಳನ್ನು ಲಕ್ಷ ಲಕ್ಷ ರೂಪಾಯಿ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ಮಗಳನ್ನು ಅಂಗನವಾಡಿಗೆ ಸೇರಿಸಿ ಗಮನ ಸೆಳೆದಿದ್ದಾರೆ.

Read Full Story

01:24 PM (IST) Feb 03

ಭಾರತ ಮೇಲಿನ ಸುಂಕ ಇಳಿಕೆ ಅಮೆರಿಕ ನಿರ್ಧಾರಕ್ಕೆ ಪಾಕಿಸ್ತಾನ ಕಂಗಾಲು, ಮುನೀರ್-ಷರೀಫ್ ಫುಲ್ ಟ್ರೋಲ್

ಭಾರತ ಅಮೆರಿಕ ಟ್ರೇಡ್ ಡೀಲ್ ಸುಂಕ ಇಳಿಕೆಗೆ ಪಾಕಿಸ್ತಾನ ಕಂಗಾಲು, ಈ ಡೀಲ್ ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿಸಿದೆ. ಭಾರತದ ಮೇಲಿನ ಸುಂಕ ಇಳಿಕೆಯಾಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಪ್ರಧಾನಿ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಮನೀರ್ ಟ್ರೋಲ್.

 

Read Full Story

01:18 PM (IST) Feb 03

Mole Astrology - ಮಹಿಳೆಯರಿಗೆ ಸೊಂಟದ ಮೇಲೆ, ಮೂಗಿನ ತುದಿಯಲ್ಲಿ ಮಚ್ಚೆ ಇದ್ರೆ ಏನರ್ಥ?

ದೇಹದ ಮೇಲೆ ಮಚ್ಚೆಗಳಿರುವುದು ಸಾಮಾನ್ಯ. ಆದರೆ, ಅವು ಇರುವ ಜಾಗ ನಮ್ಮ ಹಣೆಬರಹವನ್ನೇ ಬದಲಾಯಿಸುತ್ತೆ ಗೊತ್ತಾ? ಹಾಗಿದ್ರೆ, ಮಹಿಳೆಯರ ಸೊಂಟದ ಮೇಲೆ ಮಚ್ಚೆ ಇದ್ದರೆ ಏನೆಲ್ಲಾ ಫಲಗಳು ಸಿಗುತ್ತವೆ ಅಂತ ನೋಡೋಣ ಬನ್ನಿ.
Read Full Story

12:58 PM (IST) Feb 03

Stock Market - 20 ವರ್ಷಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ, ಇಂದು ನಿಮ್ಮ ಹಣ ಎಷ್ಟಾಗುತ್ತಿತ್ತು ಗೊತ್ತಾ?

ಶೇರು ಮಾರುಕಟ್ಟೆ ಅನ್ನೋದು ಯಾರಿಗೂ ಸುಲಭವಾಗಿ ಅರ್ಥವಾಗದ ಒಂದು ಮಾಯಾಲೋಕ. ಇಲ್ಲಿ ಲಕ್ಷಗಟ್ಟಲೆ ಸಂಪಾದಿಸಿದವರೂ ಇದ್ದಾರೆ, ಸರ್ವಸ್ವವನ್ನೂ ಕಳೆದುಕೊಂಡವರೂ ಇದ್ದಾರೆ. ಆದರೆ, ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿದ ಒಂದು ಶೇರಿನ ಕಥೆಯನ್ನು ಇಂದು ತಿಳಿಯೋಣ.
Read Full Story

12:38 PM (IST) Feb 03

ಆಗಲ್ಲ ಅಂದ್ರೆ ಬಂದ್ ಮಾಡಿ ಹೊರಡಿ, ಮೆಟಾಗೆ ಸುಪ್ರೀಂ ಕೋರ್ಟ್ ವಾರ್ನಿಂಗ್, ಸ್ಥಗಿತಗೊಳ್ಳುತ್ತಾ ವ್ಯಾಟ್ಸಾಪ್?

ಆಗಲ್ಲ ಅಂದ್ರೆ ಬಂದ್ ಮಾಡಿ ಹೊರಡಿ, ಮೆಟಾಗೆ ಸುಪ್ರೀಂ ಕೋರ್ಟ್ ವಾರ್ನಿಂಗ್, ಜಸ್ಟೀಸ್ ಸೂರ್ಯಕಾಂತ್ ನೀಡಿದ ಖಡಕ್ ವಾರ್ನಿಂಗ್ ಬೆನ್ನಲ್ಲೇ ಭಾರತದಲ್ಲೇ ವ್ಯಾಟ್ಸಾಪ್ ಸ್ಥಗಿತಗೊಳ್ಳುತ್ತಾ ಅನ್ನೋ ಪ್ರಶ್ನೆಗಳು ಶುರುವಾಗಿದೆ.

 

Read Full Story

12:35 PM (IST) Feb 03

ಮನೆಯಲ್ಲಿ ಹಣ ಇದ್ರೆ 84% ಟ್ಯಾಕ್ಸ್​ ಕಟ್ಬೇಕಾ? ಬ್ಯಾಂಕ್​ನಿಂದ ಕ್ಯಾಷ್​ ಡ್ರಾ ಮಾಡಿದ್ರೆ ಏನಾಗತ್ತೆ? ಇಲ್ಲಿದೆ ಫುಲ್ ಡಿಟೇಲ್ಸ್​

ಮನೆಯಲ್ಲಿ ನಗದು ಇಟ್ಟುಕೊಂಡರೆ 84% ತೆರಿಗೆ ಕಟ್ಟಬೇಕೆಂಬ ಸುದ್ದಿ ನಿಜನಾ? ಬ್ಯಾಂಕ್​ನಿಂದ ದೊಡ್ಡ ಮಟ್ಟದ ಕ್ಯಾಷ್​ ಪಡೆದರೆ ಏನಾಗುತ್ತದೆ? ಆಸ್ತಿ ಮಾರಾಟ ಮಾಡುವ ಸಮಯದಲ್ಲಿ ಏನು ಮಾಡಬೇಕು? ಎಲ್ಲಾ ಫುಲ್​ ಡಿಟೇಲ್ಸ್​ ಇದರಲ್ಲಿ ನೀಡಲಾಗಿದೆ.

Read Full Story

12:23 PM (IST) Feb 03

ಪಂಚಾಯತ್ ಚುನಾವಣೆಗೆ ನಿಲ್ಲುವುದಕ್ಕಾಗಿ ಮಗಳನ್ನೇ ಕೊಂದ ತಂದೆ

Election law tragedy: ಪಂಚಾಯತ್ ಚುನಾವಣೆಯಲ್ಲಿ ನಿಂತು ಗೆದ್ದು ಬರಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿದ್ದ ತಂದೆಯೊಬ್ಬ ತನಗಿದ್ದ ಮೂವರು ಮಕ್ಕಳಲ್ಲಿ ಒಬ್ಬಳು ಮಗಳ ಕತೆ ಮುಗಿಸಿದ್ದಾನೆ. ಮಹಾರಾಷ್ಟ್ರದ ನಾಂದೇಡ್‌ನ ಕೆರೂರ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Read Full Story

11:31 AM (IST) Feb 03

Jeffrey Epstein - ವಿಶ್ವದ ಶ್ರೀಮಂತರಿಗೆ 'ಚಿಕ್ಕ ಹುಡುಗಿಯರ ಸಪ್ಲೈ ಮಾಡೋ ಬ್ರೋಕರ್' ಇವನೇ ನೋಡಿ! ಕೊನೆಗೆ ದುರಂತ ಅಂತ್ಯ

ಜೆಫ್ರಿ ಎಪ್‌ಸ್ಟೀನ್ ಎಂಬ ಚಿಕ್ಕ ಹುಡುಗಿಯರ ಸಪ್ಲೈ ಬ್ರೋಕರ್‌ಗೆ 5400 ಕೋಟಿ ರೂ. ಆಸ್ತಿ ಇತ್ತು. ತನ್ನ ಕರಾಳ ದಂಧೆಗಾಗಿ ಸ್ವಂತ ದ್ವೀಪ, ಬೋಯಿಂಗ್ ವಿಮಾನವನ್ನೇ ಬಳಸುತ್ತಿದ್ದ. ಇತ್ತೀಚೆಗೆ ಬಹಿರಂಗವಾದ 'ಎಪ್‌ಸ್ಟೀನ್ ಫೈಲ್ಸ್' ಹಲವು ಸತ್ಯಗಳನ್ನು ಬಯಲು ಮಾಡಿದೆ.

Read Full Story

10:59 AM (IST) Feb 03

ರಾಜ್ಯಸಭೆಯಲ್ಲಿ ತಮ್ಮ ಎರಡು ಕೃತಕ ಕಾಲು ತೆಗೆದು ತೋರಿಸಿ ಕಮ್ಯುನಿಷ್ಟರ ಕ್ರೌರ್ಯ ಬಿಚ್ಚಿಟ್ಟ ಕೇರಳದ ಬಿಜೆಪಿ ಸಂಸದ

ಬಿಜೆಪಿ ಸದಸ್ಯ ಸದಾನಂದನ್ ಮಾಸ್ಟರ್ ತಮ್ಮ ಚೊಚ್ಚಲ ರಾಜ್ಯಸಭಾ ಭಾಷಣದಲ್ಲಿ, 31 ವರ್ಷಗಳ ಹಿಂದೆ ಸಿಪಿಐಎಂ ಕಾರ್ಯಕರ್ತರು ತಮ್ಮ ಕಾಲುಗಳನ್ನು ಕತ್ತರಿಸಿದ್ದಾರೆಂದು ಆರೋಪಿಸಿ ಕೃತಕ ಕಾಲುಗಳನ್ನು ಪ್ರದರ್ಶಿಸಿದರು. ಈ ಘಟನೆಯು ಸದನದಲ್ಲಿ ಕೋಲಾಹಲ ಸೃಷ್ಟಿಸಿತು.

Read Full Story

10:58 AM (IST) Feb 03

ಮೆಗಾ ಕುಡಿಗಳಿಗೆ ರಾಮ್ ಚರಣ್ ಯಾವ ಹೆಸರು ಇಡ್ತಾರೆ? ಗಂಡು ಮಗುವಿಗೆ ಏನು ಹೆಸರಿಡಬಹುದು?

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಅವಳಿ ಮಕ್ಕಳು ಜನಿಸಿದ್ದು, ಮೆಗಾ ಕುಟುಂಬ ಹಾಗೂ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ನಡುವೆ, ರಾಮ್ ಚರಣ್ ತಮ್ಮ ಮಕ್ಕಳಿಗೆ ಏನು ಹೆಸರಿಡಬಹುದು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.
Read Full Story

10:54 AM (IST) Feb 03

ಅಬ್ಬಬ್ಬಾ, ಇದಪ್ಪಾ ಭರ್ಜರಿ ಲಾಟರಿ - 5ನೇ ದಿನವೂ ಬಂಪರ್ ಕುಸಿತ ಕಂಡ ಚಿನ್ನ-ಬೆಳ್ಳಿ ಬೆಲೆ

ಜನವರಿ ಅಂತ್ಯದಿಂದ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಮುಖವಾಗಿದ್ದು, ಸತತ 5ನೇ ದಿನವೂ ಬೆಲೆ ಕುಸಿದಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ 14,200 ರೂ. ಮತ್ತು 1 ಕೆಜಿ ಬೆಳ್ಳಿ ಮೇಲೆ 20,000 ರೂ. ಇಳಿಕೆಯಾಗಿದ್ದು, ಇದು ಮಧ್ಯಮ ವರ್ಗದ ಖರೀದಿದಾರರಲ್ಲಿ ಸಂತಸ ಮೂಡಿಸಿದೆ.
Read Full Story

09:51 AM (IST) Feb 03

ಹೆಂಡ್ತಿ ಡಿವೋರ್ಸ್ ಕೇಳಿದ್ದಕ್ಕೆ ಮಗಳ ಕೊಂದ ಅಪ್ಪ - ತಡೆಯಲು ಬಂದ ದೊಡ್ಡಪ್ಪನ ಮೇಲೂ ಹಲ್ಲೆ

ಮಂಜೇಶ್ವರದ ಕುಂಜತ್ತೂರಿನಲ್ಲಿ, ಪತ್ನಿ ವಿಚ್ಛೇದನ ಕೇಳಿದ್ದಕ್ಕೆ ಕೋಪಗೊಂಡ ತಂದೆ ಉಮರ್ ಪಾಷಾ, ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕೌಟುಂಬಿಕ ಕಲಹದ ಘೋರ ದುರಂತದಲ್ಲಿ, ಅಡ್ಡ ಬಂದ ತನ್ನ ಅಣ್ಣನ ಮೇಲೂ ಆತ ಹಲ್ಲೆ ನಡೆಸಿದ್ದಾನೆ.

Read Full Story

09:07 AM (IST) Feb 03

ಗಂಡನ ಸಮಾಧಿ ಮೇಲೆಯೇ 8 ತಿಂಗಳು ಮಲಗುತ್ತಿದ್ದ ಪತ್ನಿ! ಆಮೇಲೆ ಆಗಿದ್ದೇನು? ನೀವೇ ನೋಡಿ

ಪತಿ ತೀರಿಕೊಂಡ ನಂತರ ಖಿನ್ನತೆಯಿಂದ ಮನೆ ಕಳೆದುಕೊಂಡ 55 ವರ್ಷದ ರಿಯಾ ಹೋಮ್ಸ್, ಸುಮಾರು 8 ತಿಂಗಳು ಗಂಡನ ಸಮಾಧಿ ಪಕ್ಕದಲ್ಲೇ ವಾಸವಿದ್ದರು. ಪೊಲೀಸ್ ಅಧಿಕಾರಿ ಜಾಮಿ ಅವರ ಸಹಾಯ ಮತ್ತು ದೇಣಿಗೆ ಸಂಗ್ರಹ ಅಭಿಯಾನದಿಂದಾಗಿ, ರಿಯಾ ಮತ್ತೆ ಹೊಸ ಸುಸಜ್ಜಿತ ಮನೆಯನ್ನು ಪಡೆದು ಹೊಸ ಜೀವನ ಆರಂಭಿಸಿದರು.

Read Full Story

08:35 AM (IST) Feb 03

ಕ್ರಿಕೆಟಿಂದಲೇ ಪಾಕ್‌ ಹೊರಗಟ್ಟುವ ಟೈಂ ಬಂತಾ? ಅಷ್ಟಕ್ಕೂ ಪಾಕ್‌ ಹೇಳಿದಂತೆ ಐಸಿಸಿ ಏಕೆ ಕೇಳಬೇಕು?

ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಮೂಲಕ ಪಾಕಿಸ್ತಾನವು ಐಸಿಸಿ ನಿಯಮಗಳನ್ನು ಉಲ್ಲಂಘಿಸಿದೆ. ಪಾಕ್ ಸರ್ಕಾರದ ಹಸ್ತಕ್ಷೇಪವೇ ಇದಕ್ಕೆ ಕಾರಣವಾಗಿದ್ದು, ಇದನ್ನೇ ಬ್ರಹ್ಮಾಸ್ತ್ರವಾಗಿ ಬಳಸಿ ಪಾಕಿಸ್ತಾನವನ್ನು ಕ್ರಿಕೆಟ್‌ನಿಂದಲೇ ಅಮಾನತುಗೊಳಿಸಲು ಬಿಸಿಸಿಐಗೆ ಪ್ರಬಲ ಅವಕಾಶ ಲಭಿಸಿದೆ.
Read Full Story

More Trending News