MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 14 ವರ್ಷದ ವೈಭವ್ ಸೂರ್ಯವಂಶಿ ಓದಿದ್ದು ಎಷ್ಟು? ಈಗ ಯಾವ ಕ್ಲಾಸ್? ಯಾವ ಸ್ಕೂಲ್? ಫೀ ಎಷ್ಟು?

14 ವರ್ಷದ ವೈಭವ್ ಸೂರ್ಯವಂಶಿ ಓದಿದ್ದು ಎಷ್ಟು? ಈಗ ಯಾವ ಕ್ಲಾಸ್? ಯಾವ ಸ್ಕೂಲ್? ಫೀ ಎಷ್ಟು?

Vaibhav Suryavanshi Education Qualification: ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಶಿಕ್ಷಣದ ಬಗ್ಗೆ ನಿಮಗೆ ಗೊತ್ತಾ? ತಾಜ್‌ಪುರದ ಪುಟ್ಟ ಹಳ್ಳಿಯಿಂದ ಬಂದ 14 ವರ್ಷದ ವೈಭವ್, ಯಾವ ಕ್ಲಾಸ್‌ನಲ್ಲಿ ಓದುತ್ತಿದ್ದಾರೆ, ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

2 Min read
Author : Naveen Kodase
Published : Feb 03 2026, 09:12 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ
Image Credit : Getty

ಭಾರತದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ

ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಅವರ ಶೈಕ್ಷಣಿಕ ಹಿನ್ನೆಲೆ ಮತ್ತು ಶಾಲಾ ಜೀವನದ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ. ವೈಭವ್ ಸೂರ್ಯವಂಶಿ ಕೇವಲ ಮೈದಾನದಲ್ಲಿ ಮಾತ್ರವಲ್ಲ, ತಮ್ಮ ಓದಿನ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. 14ನೇ ವಯಸ್ಸಿಗೆ ಕ್ರಿಕೆಟ್‌ ಮೈದಾನದಲ್ಲಿ ಸಂಚಲನ ಮೂಡಿಸಿರುವ ಅವರು ಸದ್ಯ ಶಾಲೆಯಲ್ಲಿ ಓದುತ್ತಿದ್ದಾರೆ.

26
ವೈಭವ್ ಸೂರ್ಯವಂಶಿ 9ನೇ ಕ್ಲಾಸ್ ಸ್ಟೂಡೆಂಟ್
Image Credit : Instagram/vaibhav_sooryavanshi09

ವೈಭವ್ ಸೂರ್ಯವಂಶಿ 9ನೇ ಕ್ಲಾಸ್ ಸ್ಟೂಡೆಂಟ್

ವೈಭವ್ ಸದ್ಯ 9ನೇ ತರಗತಿ ವಿದ್ಯಾರ್ಥಿ. ಆದರೆ, ಅವರ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ, ಓದಿನ ಹಾದಿ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ವೈಭವ್ ಅವರ ಆರಂಭಿಕ ಶಿಕ್ಷಣ ಸಮಸ್ತಿಪುರದ ತಾಜ್‌ಪುರ ಎಂಬ ತಮ್ಮ ಹಳ್ಳಿಯಲ್ಲಿ ಶುರುವಾಯಿತು. ಕ್ರಿಕೆಟ್‌ನಲ್ಲಿ ಸುಧಾರಣೆ ಕಂಡಂತೆ, ಓದು ಮತ್ತು ಅಭ್ಯಾಸದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಯಿತು.

Related Articles

Related image1
ಔಟಾಗಿ ಹೋಗುತ್ತಿದ್ದ ಪಾಕ್ ಆಟಗಾರನ ಮೇಲೆ ಮುಗಿಬಿದ್ದ ವೈಭವ್ ಸೂರ್ಯವಂಶಿ! ಅಗ್ರೆಸ್ಸಿವ್‌ನಲ್ಲಿ ಕೊಹ್ಲಿ ನೆನಪಿಸಿದ 14 ವರ್ಷದ ಆಟಗಾರ
Related image2
ಅಂಡರ್-19 ವಿಶ್ವಕಪ್: ವಿರಾಟ್ ಕೊಹ್ಲಿ ದಾಖಲೆ ಮುರಿದ ವೈಭವ್ ಸೂರ್ಯವಂಶಿ!
36
ಬೆಳಗ್ಗೆ ಶಾಲೆ, ಸಂಜೆ ಕ್ರಿಕೆಟ್
Image Credit : X/BCCI

ಬೆಳಗ್ಗೆ ಶಾಲೆ, ಸಂಜೆ ಕ್ರಿಕೆಟ್

ವೈಭವ್ ಬಿಹಾರದ ಡಾ. ಮುಕ್ತೇಶ್ವರ್ ಸಿನ್ಹಾ ಮಾಡೆಸ್ಟಿ ಶಾಲೆಯಲ್ಲಿ ಓದುತ್ತಿದ್ದಾರೆ. ಶಾಲೆಯ ವೆಬ್‌ಸೈಟ್ ಪ್ರಕಾರ, ವಾರ್ಷಿಕ ಶುಲ್ಕ 5,300 ರೂ. ಇದರಲ್ಲಿ 2,100 ರೂ. ಟ್ಯೂಷನ್, 800 ರೂ. ಪರೀಕ್ಷೆ ಮತ್ತು 2,400 ರೂ. ಚಟುವಟಿಕೆ ಶುಲ್ಕ ಸೇರಿದೆ. ಕೇವಲ 4 ವರ್ಷದವರಿದ್ದಾಗ ಅವರ ತಂದೆ ಕೈಗೆ ಬ್ಯಾಟ್ ಕೊಟ್ಟಿದ್ದರು. ಆದರೂ, ವೈಭವ್ ಅವರ ಪ್ರಾಥಮಿಕ ಶಿಕ್ಷಣ ನಿರಂತರವಾಗಿ ಸಾಗಿತ್ತು. ಬೆಳಿಗ್ಗೆ ಶಾಲೆ, ಸಂಜೆ ಕ್ರಿಕೆಟ್, ಎರಡೂ ಒಟ್ಟೊಟ್ಟಿಗೆ ನಡೆಯುತ್ತಿತ್ತು.

46
ಏನೇ ಮಾಡಿದರೂ ಮನಸ್ಸಿಟ್ಟು ಮಾಡಬೇಕು ಎನ್ನುವುದು ವೈಭವ್ ಗುರಿ
Image Credit : google

ಏನೇ ಮಾಡಿದರೂ ಮನಸ್ಸಿಟ್ಟು ಮಾಡಬೇಕು ಎನ್ನುವುದು ವೈಭವ್ ಗುರಿ

ನಿರಂತರ ಕ್ರಿಕೆಟ್ ಟೂರ್ನಮೆಂಟ್‌ಗಳು ಮತ್ತು ಪ್ರಯಾಣದಿಂದಾಗಿ ವೈಭವ್ ಅವರ ಓದಿನ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ವೈಭವ್ ತುಂಬಾ ಶ್ರಮಜೀವಿ, ಆದರೆ ಕ್ರಿಕೆಟ್‌ನಿಂದಾಗಿ ಓದುವ ಸಮಯ ಸ್ವಲ್ಪ ಕಡಿಮೆಯಾಗಿದೆ ಎನ್ನುತ್ತಾರೆ ಅವರ ಕೋಚ್. ವೈಭವ್ ಪ್ರಕಾರ, 'ಏನೇ ಮಾಡಿದರೂ ಮನಸ್ಸಿಟ್ಟು ಮಾಡಬೇಕು'. ಹಾಗಾಗಿಯೇ ಅವರು ಶಾಲೆಯ ಅಂಕಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರ ಗಮನ ಕೌಶಲ್ಯ, ಫಿಟ್‌ನೆಸ್ ಮೇಲೆ ಇದೆ.

56
ಭವಿಷ್ಯದ ತಾರೆಯಾಗಿ ಗುರುತಿಸಿಕೊಳ್ಳುತ್ತಿರುವ ವೈಭವ್
Image Credit : X

ಭವಿಷ್ಯದ ತಾರೆಯಾಗಿ ಗುರುತಿಸಿಕೊಳ್ಳುತ್ತಿರುವ ವೈಭವ್

ಶಿಕ್ಷಣವು ವೈಭವ್ ಸೂರ್ಯವಂಶಿ ಅವರ ಕ್ರಿಕೆಟ್ ಆಟವನ್ನು ಮತ್ತಷ್ಟು ಪರಿಪಕ್ವ ಮಾಡಿದೆ. ಪಂದ್ಯದ ಸನ್ನಿವೇಶವನ್ನು ಅರಿಯುವುದು, ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಇದೆಲ್ಲವನ್ನೂ ಅವರು ಶಾಲೆಯ ಮೂಲ ಶಿಕ್ಷಣದಿಂದಲೇ ಕಲಿತಿದ್ದಾರೆ. ಅಂಡರ್‌-19 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಸ್ಪೋಟಕ ಆರಂಭ ಒದಗಿಸಿಕೊಡುತ್ತಾ ಬಂದಿರುವ ವೈಭವ್ ಸೂರ್ಯವಂಶಿ, ಭಾರತದ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿದ್ದಾರೆ.

66
ಓದು ಮುಂದುವರೆಸುವ ಆಲೋಚನೆಯಲ್ಲಿದ್ದಾರೆ ವೈಭವ್ ಸೂರ್ಯವಂಶಿ
Image Credit : Getty

ಓದು ಮುಂದುವರೆಸುವ ಆಲೋಚನೆಯಲ್ಲಿದ್ದಾರೆ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ ಅವರು ಓದನ್ನು ಮುಂದುವರಿಸುವ ಆಲೋಚನೆ ಹೊಂದಿದ್ದಾರೆ. ಕ್ರಿಕೆಟ್ ಜೊತೆಗೆ ತಮ್ಮ ಶಿಕ್ಷಣವನ್ನೂ ಮುಂದುವರಿಸಲು ಅವರು ಬಯಸುತ್ತಾರೆ. ಇವರ ಪಯಣ ಒಂದನ್ನು ಸ್ಪಷ್ಟಪಡಿಸುತ್ತದೆ, ಅದೇನೆಂದರೆ, ಮನಸ್ಸಿದ್ದರೆ ಮಾರ್ಗವುಂಟು, ಆಟ-ಪಾಠ ಎರಡನ್ನೂ ಒಟ್ಟಿಗೆ ನಿಭಾಯಿಸಬಹುದು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ವೈಭವ್ ಸೂರ್ಯವಂಶಿ
ಟೀಮ್ ಇಂಡಿಯಾ

Latest Videos
Recommended Stories
Recommended image1
ವಿದೇಶದಲ್ಲೂ ಭಾರತೀಯರ ಹವಾ, 2026ರ ಟಿ20 ವಿಶ್ವಕಪ್ ನಲ್ಲಿ ಆಡಲಿದ್ದಾರೆ 40 ಇಂಡಿಯನ್ಸ್
Recommended image2
ಪಾಕಿಸ್ತಾನ ಕ್ರಿಕೆಟ್ ಬಂಡವಾಳ ಬಯಲು ಮಾಡಿದ ಪಾಕ್ ಮಾಜಿ ಕ್ರಿಕೆಟಿಗ! ಭಾರತ ಕೈಬಿಟ್ರೆ ಬಿಕಾರಿಯಾಗ್ತೇವೆ ಎಂದ ರಾಜಾ!
Recommended image3
ಔಟಾಗಿ ಹೋಗುತ್ತಿದ್ದ ಪಾಕ್ ಆಟಗಾರನ ಮೇಲೆ ಮುಗಿಬಿದ್ದ ವೈಭವ್ ಸೂರ್ಯವಂಶಿ! ಅಗ್ರೆಸ್ಸಿವ್‌ನಲ್ಲಿ ಕೊಹ್ಲಿ ನೆನಪಿಸಿದ 14 ವರ್ಷದ ಆಟಗಾರ
Related Stories
Recommended image1
ಔಟಾಗಿ ಹೋಗುತ್ತಿದ್ದ ಪಾಕ್ ಆಟಗಾರನ ಮೇಲೆ ಮುಗಿಬಿದ್ದ ವೈಭವ್ ಸೂರ್ಯವಂಶಿ! ಅಗ್ರೆಸ್ಸಿವ್‌ನಲ್ಲಿ ಕೊಹ್ಲಿ ನೆನಪಿಸಿದ 14 ವರ್ಷದ ಆಟಗಾರ
Recommended image2
ಅಂಡರ್-19 ವಿಶ್ವಕಪ್: ವಿರಾಟ್ ಕೊಹ್ಲಿ ದಾಖಲೆ ಮುರಿದ ವೈಭವ್ ಸೂರ್ಯವಂಶಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved