LIVE NOW
Published : Oct 28, 2026, 05:22 AM ISTUpdated : Oct 28, 2026, 10:37 PM IST

India Latest News Live: 'ಇಂದೇ ಟ್ರೀಟ್‌ಮೆಂಟ್‌ ಕೊಡಿಸಿ, ಇದರಲ್ಲಿ ತಡ ಮಾಡ್ಬೇಡಿ' - ದೇವಸ್ಥಾನದ ಮುಂದೆ ಬಡ ಮಹಿಳೆಯ ಸಂಕಷ್ಟಕ್ಕೆ ತಕ್ಷಣ ಮಿಡಿದ ಅನಂತ್‌ ಅಂಬಾನಿ!

ಸಾರಾಂಶ

ನವದೆಹಲಿ: ವಿಶೇಷ ಪತಪಟ್ಟಿ ಪರಿಷ್ಕರಣೆ ವಿರೋಧಿಸಿ ನ.1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಗೆ ದೆಹಲಿ ಪೊಲೀಸರು ಷರತ್ತುಬದ್ಧ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿದ್ದಾರೆ.

ಅ.23ರಿಂದ ನ.5ರ ವರೆಗೆ ಮೈದಾನವನ್ನು ಕಾಯ್ದಿರಿಸಲು ವಿಧಿಸಲಾಗಿರುವ ಷರತ್ತುಗಳ ಅನ್ವಯ, ಕಾರ್ಯಕ್ರಮ ಆಯೋಜಕರು ಪ್ರವೇಶ ಮತ್ತು ನಿರ್ಗಮನ ದ್ವಾರ, ವೇದಿಕೆ, ಮೈದಾನದ ಸುತ್ತಮುತ್ತಲಿನ ಪ್ರದೇಶ ಹಾಗೂ ಆಸನ ವ್ಯವಸ್ಥೆ ಇರುವ ಸ್ಥಳ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ಹೈ-ಡೆಫಿನಿಷನ್ (ಎಚ್‌ಡಿ) ಕ್ಯಾಮೆರಾಗಳನ್ನು ಅಳವಡಿಸಬೇಕು. ರೆಕಾರ್ಡಿಂಗ್ ಸೌಲಭ್ಯ, ಕನಿಷ್ಠ 5 ಪರದೆಗಳ ಮೇಲ್ವಿಚಾರಣಾ ವ್ಯವಸ್ಥೆ ಮತ್ತು ಪ್ರತ್ಯೇಕ ಸಿಸಿಟಿವಿ (ಸಿಸಿಟೀವಿ) ನಿಯಂತ್ರಣ ಕೊಠಡಿ ಇರಬೇಕು. ಜತೆಗೆ, ಸಾಕಷ್ಟು ನೀರಿನ ಟ್ಯಾಂಕರ್‌ ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಜನಸಂದಣಿಯನ್ನು ನಿರ್ವಹಣೆಗೆ ಸಮವಸ್ತ್ರ ಹಾಗೂ ಬ್ಯಾಡ್ಜ್‌ ಧಾರಿ ಸ್ವಯಂಸೇವಕರನ್ನು ನಿಯೋಜಿಸಬೇಕು. ನ.1ರ ಮೆರವಣಿಗೆಯನ್ನು ಸಂಜೆ 5ಕ್ಕೆ ಮುಗಿಸಬೇಕು. ಅಂತೆಯೇ, ಮೈದಾನ ಬಿಟ್ಟು ಬೇರೆಡೆ ಮೆರವಣಿಗೆ ನಡೆಸದಂತೆ ಎಚ್ಚರಿಸಲಾಗಿದೆ.

10:37 PM (IST) Oct 28

'ಇಂದೇ ಟ್ರೀಟ್‌ಮೆಂಟ್‌ ಕೊಡಿಸಿ, ಇದರಲ್ಲಿ ತಡ ಮಾಡ್ಬೇಡಿ' - ದೇವಸ್ಥಾನದ ಮುಂದೆ ಬಡ ಮಹಿಳೆಯ ಸಂಕಷ್ಟಕ್ಕೆ ತಕ್ಷಣ ಮಿಡಿದ ಅನಂತ್‌ ಅಂಬಾನಿ!

ಜಿಯೋ ಐಪಿಒ ಯಶಸ್ಸಿನ ಹಿನ್ನೆಲೆಯಲ್ಲಿ ಮುಂಬೈನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಅನಂತ್ ಅಂಬಾನಿ ಅವರು ಕಣ್ಣೀರಿಡುತ್ತಿದ್ದ ಬಡ ಮಹಿಳೆಯೊಬ್ಬಳ ಕಷ್ಟಕ್ಕೆ ಮಿಡಿದಿದ್ದಾರೆ. ಆಕೆಯ ತಾಯಿಯ ತುರ್ತು ಶಸ್ತ್ರಚಿಕಿತ್ಸೆಗೆ ತಕ್ಷಣವೇ ಸಂಪೂರ್ಣ ವೈದ್ಯಕೀಯ ನೆರವು ಒದಗಿಸುವಂತೆ ತಮ್ಮ ತಂಡಕ್ಕೆ ಆದೇಶಿಸಿದ್ದಾರೆ.

Read Full Story

10:16 PM (IST) Oct 28

ಜಿಯೋ ದಾಖಲೆ ಐಪಿಒ ಸಂಭ್ರಮ; ನೀಲಿ ಬೆಳಕಲ್ಲಿ ಮಿಂದೆದ್ದ ಮುಖೇಶ್ ಅಂಬಾನಿಯ 'ಆಂಟಿಲಿಯಾ' ಬಂಗಲೆ!

ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಈ ಯಶಸ್ಸನ್ನು ಮುಖೇಶ್ ಅಂಬಾನಿ ತಮ್ಮ 'ಆಂಟಿಲಿಯಾ' ನಿವಾಸವನ್ನು ಜಿಯೋದ ನೀಲಿ ಬಣ್ಣದ ಲೈಟಿಂಗ್ಸ್‌ನಿಂದ ಅಲಂಕರಿಸಿ ಸಂಭ್ರಮಿಸಿದ್ದಾರೆ. ಅಲ್ಲದೆ, 'ಥ್ಯಾಂಕ್ ಯು ಇಂಡಿಯಾ' ಎಂಬ ಸಂದೇಶದ ಮೂಲಕ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Read Full Story

09:47 PM (IST) Oct 28

RCB ಮತ್ತಷ್ಟು ಸ್ಟ್ರಾಂಗ್, ತಂಡ ಸೇರಿದ ನಾಲ್ವರು ಹೊಸ ಆಟಗಾರ್ತಿಯರು; ಯಾರು ಎಷ್ಟು ಲಕ್ಷ ಹಣಕ್ಕೆ ಬಂದರು?

WPL-2027 ಮಿನಿ ಹರಾಜಿನಲ್ಲಿ ಆರ್‍‌ಸಿಬಿ ತಂಡವು ನಾಲ್ಕು ಹೊಸ ಆಟಗಾರ್ತಿಯರನ್ನು ಖರೀದಿಸಿ ಮತ್ತಷ್ಟು ಬಲಿಷ್ಠವಾಗಿದೆ. ನಾಯಕಿ ಸ್ಮೃತಿ ಮಂಧಾನ ಯುವ ಪ್ರತಿಭೆಗಳಿಗೆ ಮಣೆಹಾಕುವ ಬಗ್ಗೆ ಒಲವು ತೋರಿದ್ದಾರೆ. ಹಳೆಯ 13 ಆಟಗಾರ್ತಿಯರನ್ನು ಉಳಿಸಿಕೊಂಡು ಹೊಸಬರ ಸೇರ್ಪಡೆಯೊಂದಿಗೆ ತಂಡವು ಸಜ್ಜಾಗಿದೆ.

Read Full Story

09:13 PM (IST) Oct 28

'ನನ್ನ ಆ 2 ಸಿನಿಮಾಗಳನ್ನು ನೋಡು ಸಾಕು'.. ಸಹನಟಿಗೆ ಹೀಗ್ಯಾಕೆ ಹೇಳಿದ್ದು ಕೀರ್ತಿ ಸುರೇಶ್? ಹಿಂದಿರೋ ಅಸಲಿಯತ್ತೇನು?

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಕೀರ್ತಿ ಸುರೇಶ್, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ತಮ್ಮ ಪ್ರತಿಭೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಆ 2 ಸಿನಿಮಾಗಳನ್ನೇ ನೋಡುವಂತೆ ಹೇಳಿದ್ಯಾಕೆ?

Read Full Story

08:43 PM (IST) Oct 28

ನ್ಯೂಜಿಲೆಂಡ್ ODI ಸರಣಿಗೂ ಮುನ್ನ ಸಂಕಷ್ಟದಲ್ಲಿ ಭಾರತ ತಂಡ; ಕನ್ನಡಿಗ ಔಟ್, ಬದಲಿ ಆಟಗಾರ ಯಾರು?

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನವೇ ಗಾಯದ ಸಮಸ್ಯೆಯಿಂದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಭಾರತ ಈಗಾಗಲೇ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.
Read Full Story

08:26 PM (IST) Oct 28

ಥ್ರಿಲ್ಲರ್ ಸಿನಿಮಾ ಪ್ರಿಯರೇ, ಈ ಲಿಸ್ಟ್ ನಿಮ್ಮದು - ಕಾದಂಬರಿ ಆಧಾರಿತ 5 ಬೆಸ್ಟ್ ಸಿನಿಮಾಗಳಿವು!

ಜನಪ್ರಿಯ ಕಾದಂಬರಿಗಳ ಆಧಾರದ ಮೇಲೆ ತಯಾರಾದ 5 ಬೆಸ್ಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ. ಊಹಿಸಲಾಗದ ಟ್ವಿಸ್ಟ್‌ಗಳು ಹಾಗೂ ಮೈಂಡ್ ಬೆಂಡಿಂಗ್ ಕಥೆಗಳಿರುವ ಈ ಸಿನಿಮಾಗಳು ಒಟಿಟಿಯಲ್ಲಿ ಲಭ್ಯವಿವೆ. ಥ್ರಿಲ್ಲರ್ ಪ್ರಿಯರು ಖಂಡಿತ ನೋಡಲೇಬೇಕಾದ ಸಿನಿಮಾಗಳಿವು.
Read Full Story

07:10 PM (IST) Oct 28

Ramayana Release - ಭಾರತ ಮಾತ್ರವಲ್ಲ, ಭಾರತೀಯ ಮಹಾಕಾವ್ಯ 'ರಾಮಾಯಣ' ಸಿನಿಮಾ ನೋಡಲಿವೆ 100ಕ್ಕೂ ಹೆಚ್ಚು ದೇಶಗಳು!

‘ರಾಮಾಯಣ’ ಸಿನಿಮಾ ಕೇವಲ ದೊಡ್ಡ ಬಜೆಟ್‌ನ ಚಿತ್ರವಾಗಿ ಮಾತ್ರವಲ್ಲದೆ, ಭಾರತೀಯ ಪರಂಪರೆಯನ್ನು ವಿಶ್ವದ ಮುಂದೆ ಪರಿಚಯಿಸುವ ಪ್ರಯತ್ನವಾಗಿಯೂ ಗಮನ ಸೆಳೆಯುತ್ತಿದೆ. ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ, ಕಥೆಯ ಭಾವನಾತ್ಮಕ ಆಳ, ಪಾತ್ರಗಳ ಚಿತ್ರಣ ಮತ್ತು ದೃಶ್ಯ ವೈಭವವನ್ನು ತೆರೆಯ ಮೇಲೆ ನೋಡಲು ಸಿದ್ಧರಾಗಿ!

Read Full Story

07:09 PM (IST) Oct 28

ಅಮ್ಮ ಶ್ರೀದೇವಿ ನಿಧನರಾದಾಗ ನನಗಾಗಿ ಲಂಡನ್ ಓದು ಬಿಟ್ಟು ಬಂದಿದ್ದ - ಜಾನ್ವಿ ಕಪೂರ್ ಭಾವುಕ

ತಾಯಿ ಶ್ರೀದೇವಿ ನಿಧನರಾದಾಗ ಶಿಖರ್ ಪಹಾರಿಯಾ ತಮ್ಮ ಓದಿಗೆ ವಿರಾಮ ನೀಡಿ ಬೆಂಬಲವಾಗಿ ನಿಂತಿದ್ದರು ಎಂದು ಜಾನ್ವಿ ಕಪೂರ್ ನೆನಪಿಸಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಂಚಿಕೊಂಡ ಈ ಭಾವುಕ ಘಟನೆ..

Read Full Story

06:19 PM (IST) Oct 28

ಧೋನಿಗೆ ಕ್ಯಾಪ್ಟನ್ಸಿ, ರೋಹಿತ್‌ಗೆ ಇಲ್ಲ ಚಾನ್ಸ್! ವೈಭವ್, ಅಭಿಷೇಕ್‌ಗೆ ಕ್ಲೀನ್‌ ಬೋಲ್ಡ್ ಆದ ಅನಯಾ ಬಂಗಾರ್

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿ ಅನಯಾ ಬಂಗಾರ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ತಂಡವನ್ನು ಪ್ರಕಟಿಸಿದ್ದಾರೆ. ಈ ವಿಶೇಷ ತಂಡದಲ್ಲಿ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಬ್ಬರಿಗೂ ಸ್ಥಾನ ನೀಡಲಾಗಿದ್ದು, ಎಂಎಸ್ ಧೋನಿ ನಾಯಕರಾಗಿದ್ದಾರೆ. ಸಚಿನ್, ಕೊಹ್ಲಿ ಸೇರಿದಂತೆ ಹಲವು ದಿಗ್ಗಜರು ಈ ತಂಡದಲ್ಲಿದ್ದಾರೆ.
Read Full Story

06:12 PM (IST) Oct 28

ಅನಿರುದ್ಧ್-ಕಾವ್ಯಾ ಮಾರನ್ ಮದುವೆ ಸುದ್ದಿ ಮತ್ತೆ ವೈರಲ್ - ಹಾಟ್ ಟಾಪಿಕ್ ವೆಡ್ಡಿಂಗ್ ಕಾರ್ಡ್‌ನಲ್ಲಿ ಏನಿದೆ?

ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಅವರ ಮದುವೆ ಕಾರ್ಡ್ ಎನ್ನಲಾದ ವಿಡಿಯೋ ವೈರಲ್ ಆಗಿದೆ. ನವೆಂಬರ್ 21ರಂದು ಚೆನ್ನೈನಲ್ಲಿ ಆರತಕ್ಷತೆ ನಡೆಯಲಿದೆ ಎಂಬ ವರದಿಗಳ ಕುರಿತ ವಿವರ ಇಲ್ಲಿದೆ.

Read Full Story

05:24 PM (IST) Oct 28

1942ರಲ್ಲಿ ಹಿಟ್ಲರ್‌ಗೆ ಸುಭಾಷ್ ಚಂದ್ರ ಬೋಸ್ ಹೇಳಿದ್ದೇನು? ಪ್ರಭಾಸ್ ‘ಫೌಜಿ’ ಟೀಸರ್‌ನಿಂದ ಶುರುವಾದ ಹೊಸ ವಿವಾದವೇನು?

ನಟ ಪ್ರಭಾಸ್ ಅಭಿನಯದ 'ಫೌಜಿ' ಚಿತ್ರದ ಟೀಸರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಕಾಲ್ಪನಿಕವಾಗಿ ಚಿತ್ರಿಸಿರುವುದಕ್ಕೆ ಅವರ ಕುಟುಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಟೀಸರ್ ಹಿಂಪಡೆಯಲು ಮತ್ತು ಸೆನ್ಸಾರ್ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲು ನೇತಾಜಿ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Read Full Story

05:23 PM (IST) Oct 28

11 ಸಾವಿರ ರೂಪಾಯಿಯ ಕ್ಯಾನ್ಸರ್‌ ಇಂಜೆಕ್ಷನ್‌ಗೆ ₹1.3 ಲಕ್ಷ ಬಿಲ್, ಈ ಹಗಲು ದರೋಡೆಗೆ ಏನ್‌ ಹೇಳ್ತೀರಿ? ಖಾಸಗಿ ಆಸ್ಪತ್ರೆಗಳಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ!

11,000 ರೂ. ಬೆಲೆಯ ಕ್ಯಾನ್ಸರ್ ಇಂಜೆಕ್ಷನ್‌ಗೆ 1.3 ಲಕ್ಷ ಬಿಲ್ ವಿಧಿಸಿದ ಖಾಸಗಿ ಆಸ್ಪತ್ರೆಗಳ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಔಷಧಗಳ ದರ ನಿಯಂತ್ರಣ ಮತ್ತು ಲಾಭದ ಮಿತಿ ನಿಗದಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದೆ.

Read Full Story

05:18 PM (IST) Oct 28

'ದಕ್ಷಿಣದ ಸಿನಿಮಾಗಳಲ್ಲಿ ಬಾಲಿವುಡ್ ನಟಿಯರಿಗೆ ಹೆಚ್ಚಿನ ಅವಕಾಶ ಏಕೆ?' ಸಂಚಲನ ಸೃಷ್ಟಿಸಿದ ನಟಿ ರಾಧಿಕಾ ಆಪ್ಟೆ ಹೇಳಿಕೆ!

ರಾಧಿಕಾ ಆಪ್ಟೆ ಅವರ ಈ ಅಭಿಪ್ರಾಯಗಳು ಚಿತ್ರರಂಗದಲ್ಲಿ ಪ್ರತಿಭೆಗೆ ಆದ್ಯತೆ ನೀಡುವುದು, ಮೈಬಣ್ಣದ ಆಧಾರದ ಮೇಲಿನ ತಾರತಮ್ಯವನ್ನು ಪ್ರಶ್ನಿಸುವುದು ಮತ್ತು ಸ್ಥಳೀಯ ಕಲಾವಿದರಿಗೆ ಸೂಕ್ತ ಅವಕಾಶ ಕಲ್ಪಿಸುವುದರ ಅಗತ್ಯವನ್ನು ಮತ್ತೆ ಮುನ್ನೆಲೆಗೆ ತಂದಿವೆ. ಇದೆಂಥಾ ಚರ್ಚೆ ಹುಟ್ಟುಹಾಕಿದೆ ನೋಡಿ..

Read Full Story

05:17 PM (IST) Oct 28

ಮಾನ್ ಸಾಗರ್ ಸರೋವರದಲ್ಲಿ ತೇಲುವ ಜೈಪುರದ ನಿಗೂಢ ಅರಮನೆ, ಜೈಪುರದ ‘ಜಲ್ ಮಹಲ್’ ಸೌಂದರ್ಯವೇ ಅದ್ಭುತ

ರಾಜಸ್ಥಾನದ ಜೈಪುರದಲ್ಲಿರುವ ಜಲ್ ಮಹಲ್ ಮಾನ್ ಸಾಗರ್ ಸರೋವರದ ಮಧ್ಯದಲ್ಲಿರುವ ಒಂದು ಐತಿಹಾಸಿಕ ಅರಮನೆಯಾಗಿದೆ. ಐದು ಅಂತಸ್ತುಗಳ ಈ ಕಟ್ಟಡದ ನಾಲ್ಕು ಅಂತಸ್ತುಗಳು ನೀರಿನೊಳಗೆ ಮುಳುಗಿರುವುದು ಇದರ ಅತ್ಯಂತ ವಿಶಿಷ್ಟ ಆಕರ್ಷಣೆಯಾಗಿದೆ. ಇದು ಇತಿಹಾಸ, ವಾಸ್ತುಶಿಲ್ಪ ಮತ್ತು ಪ್ರಕೃತಿಯ ಅಪೂರ್ವ ಸಂಗಮವಾಗಿದೆ.
Read Full Story

05:02 PM (IST) Oct 28

ನವೆಂಬರ್ 1ರ ಕಾಂಗ್ರೆಸ್‌ನ ದೆಹಲಿ ಚಲೋ ರ್ಯಾಲಿ ಪ್ಲಾನ್ ಹಾಳುಮಾಡಿದ ವಿಧಾನಪರಿಷತ್ ಚುನಾವಣಾ ಫಲಿತಾಂಶ!

ಇಂಡಿಯಾ ಮೈತ್ರಿಕೂಟವು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯಾನ ಮತ್ತು ದೆಹಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಲು ಸಿದ್ಧತೆ ನಡೆಸಿದೆ. ಆದರೆ ನಾಲ್ಕು ರಾಜ್ಯಗಳ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು, ಈ ಫಲಿತಾಂಶವು ಒಕ್ಕೂಟದ ಯೋಜನೆಗಳನ್ನು ತಲೆಕೆಳಗು ಮಾಡಿದೆ..

Read Full Story

04:52 PM (IST) Oct 28

ಇಂಜೆಕ್ಷನ್ ಸೂಜಿ ನೋಡ್ತಿದ್ದಂತೆ ಓಟ ಕಿತ್ತ ಪಾರ್ಶ್ವವಾಯು ಭಿಕ್ಷುಕ! ಖದೀಮನ ನಾಟಕ ಬಯಲು ಮಾಡಿದ ಯುವಕನ ವಿಡಿಯೋ ವೈರಲ್

ಪಾರ್ಶ್ವವಾಯು ಬಂದಂತೆ ನಟಿಸುತ್ತಿದ್ದ ಭಿಕ್ಷುಕನೊಬ್ಬ ಯುವಕನೊಬ್ಬ ಇಂಜೆಕ್ಷನ್ ಕೊಡಲು ಬಂದಾಗ ಎದ್ದು ಓಡಿರುವ ವಿಡಿಯೋ ವೈರಲ್ ಆಗಿದೆ. ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಬ್ಬಿಬ್ಬಾದ ಭಿಕ್ಷುಕ, ಸೂಜಿ ನೋಡಿದ ತಕ್ಷಣವೇ ಓಟ ಕಿತ್ತಿದ್ದಾನೆ. ಈ ಕಪಟಿ ಭಿಕ್ಷುಕನ ಬಣ್ಣ ಬಯಲಾಗಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
Read Full Story

04:31 PM (IST) Oct 28

ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ, ಸ್ಯಾಲರಿಯಲ್ಲಿ ಶೇ.3ರಷ್ಟು ಡಿಎ ಹೆಚ್ಚಳ

ದೀಪಾವಳಿ ಹಬ್ಬ ಆಗಮಿಸುತ್ತಿದೆ. ಹಬ್ಬದ ತಯಾರಿಯಲ್ಲಿರುವ ಜನರಿಗೆ ಕೇಂದ್ರ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಶೇಕಡಾ 3ರಷ್ಟು ಡಿಎ ಹೆಚ್ಚಳ ಘೋಷಣೆ ಹೊರಬಿದ್ದಿದೆ. ಇದು ನೌಕರರು ಹಾಗೂ ಪಿಂಚಣಿದಾರರಿಗೆ ಬಂಪರ್ ಕೊಡುಗೆಯಾಗಿದೆ.

Read Full Story

04:27 PM (IST) Oct 28

ಟಾಟಾ ಹಿಂದಿಕ್ಕಿದ ರಿಲಯನ್ಸ್; 30 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ದೇಶದ ನಂ.1 ಬಿಸಿನೆಸ್ ಗ್ರೂಪ್!

ಜಿಯೋ ಪ್ಲಾಟ್‌ಫಾರ್ಮ್ಸ್‌ ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಟಾಟಾ ಗ್ರೂಪ್ ಅನ್ನು ಹಿಂದಿಕ್ಕಿ 30 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ಮುನ್ನುಗ್ಗಿದೆ. ಐಪಿಒ ಬೆಲೆಗಿಂತ ಶೇ. 21.36ರಷ್ಟು ಲಾಭದೊಂದಿಗೆ ಪಟ್ಟಿಯಾಗಿರುವ ಜಿಯೋ, ರಿಲಯನ್ಸ್ ನಂತರದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಬ್ರೋಕರೇಜ್ ಸಂಸ್ಥೆಗಳು ನೀಡಿದ್ದ ಗುರಿಯನ್ನೂ ಮೀರಿ ಇದು ಹೂಡಿಕೆದಾರರಿಗೆ ಭಾರೀ ಲಾಭ ತಂದುಕೊಟ್ಟಿದೆ.

Read Full Story

04:06 PM (IST) Oct 28

WPL ಹರಾಜಿನಲ್ಲಿ ಹಣದ ಹೊಳೆ, ಸ್ಮೃತಿ ಮಂಧಾನಗೆ ₹3.40 ಕೋಟಿ! ಟಾಪ್ 5 ದುಬಾರಿ ಆಟಗಾರ್ತಿಯರ ಪಟ್ಟಿ ಇಲ್ಲಿದೆ ನೋಡಿ!

ಮಹಿಳಾ ಪ್ರೀಮಿಯರ್ ಲೀಗ್‌ (WPL) ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಟಗಾರ್ತಿಯರ ಸಂಭಾವನೆ ಗಣನೀಯವಾಗಿ ಏರಿಕೆಯಾಗಿದೆ. ಸ್ಮೃತಿ ಮಂಧಾನ ಸೇರಿದಂತೆ ಹಲವು ಆಟಗಾರ್ತಿಯರು ಕೋಟಿಗಟ್ಟಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ಟಾಪ್ ಐವರ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

Read Full Story

04:01 PM (IST) Oct 28

ಟೆನಿಸ್‌ ಟ್ರೇನಿಂಗ್‌ ಸೆಂಟರ್‌ಗಾಗಿ ಮೀಸಲಿಟ್ಟ ಜಾಗವನ್ನು ಮಸೀದಿ ಕಟ್ಟಲು ನೀಡಿದ ಸಾನಿಯಾ ಮಿರ್ಜಾ, ಅಜರುದ್ದೀನ್‌ರಿಂದ ಶಂಕುಸ್ಥಾಪನೆ

ಹೈದರಾಬಾದ್‌ನಲ್ಲಿ ಟೆನಿಸ್ ಅಕಾಡೆಮಿ ನಿರ್ಮಿಸಲು ಉದ್ದೇಶಿಸಿದ್ದ ತಮ್ಮ ಸ್ವಂತ ಜಾಗದಲ್ಲಿ ಸಾನಿಯಾ ಮಿರ್ಜಾ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮೊಹಮ್ಮದ್ ಅಜರುದ್ದೀನ್ ಅವರಿಂದ ಶಂಕುಸ್ಥಾಪನೆ ನೆರವೇರಿದ್ದು, ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ.

Read Full Story

03:41 PM (IST) Oct 28

ಸಂಜು ಸ್ಯಾಮ್ಸನ್ ನಿಸ್ವಾರ್ಥ ಗುಣಕ್ಕೆ ಅಭಿಷೇಕ್ ಶರ್ಮಾ ಫಿದಾ; ವೈಭವ್‌ಗಾಗಿ ಮಾಡಿದ ತ್ಯಾಗಕ್ಕೆ ಮೆಚ್ಚುಗೆ!

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಯುವ ಆಟಗಾರ ವೈಭವ್ ಸೂರ್ಯವಂಶಿಗಾಗಿ ತಮ್ಮ ಓಪನಿಂಗ್ ಸ್ಥಾನ ಬಿಟ್ಟುಕೊಟ್ಟ ಸಂಜು ಸ್ಯಾಮ್ಸನ್ ಅವರ ನಿಸ್ವಾರ್ಥ ನಡೆಯನ್ನು ಅಭಿಷೇಕ್ ಶರ್ಮಾ ಕೊಂಡಾಡಿದ್ದಾರೆ. ಈ ಪಂದ್ಯದಲ್ಲಿ ಭಾರತ ಪವರ್‌-ಪ್ಲೇನಲ್ಲಿ 118 ರನ್‌ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದೆ.
Read Full Story

03:13 PM (IST) Oct 28

ರೈಲು ಪ್ರಯಾಣಿಕರೇ ಗಮನಿಸಿ - ಇನ್ಮುಂದೆ ರಾತ್ರಿ ವೇಳೆ ರೈಲಿನಲ್ಲಿ ಈ ಸೇವೆ ಸಿಗಲ್ಲ! ರೈಲ್ವೆ ಇಲಾಖೆ ಮಹತ್ವದ ನಿರ್ಧಾರ

ಬೆಂಕಿ ಅವಘಡ ಮತ್ತು ಮೊಬೈಲ್ ಕಳ್ಳತನ ತಡೆಯುವ ಉದ್ದೇಶದಿಂದ ಭಾರತೀಯ ರೈಲ್ವೆಯು ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೆ ರೈಲುಗಳಲ್ಲಿ ಮೊಬೈಲ್ ಚಾರ್ಜಿಂಗ್ ಸ್ಥಗಿತಗೊಳಿಸಲು ಆದೇಶ. ಪ್ರಯಾಣಿಕರ ಸುರಕ್ಷತೆಗಾಗಿ ಈ ಕಠಿಣ ನಿಯಮ ಜಾರಿಗೆ ತಂದಿದೆ. ನಿಯಮ ಉಲ್ಲಂಘಿಸುವ ನೌಕರರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ.

Read Full Story

12:46 PM (IST) Oct 28

ರಾಯಚೂರಿನಿಂದ 8 ಗಂಟೆ ಜರ್ನಿ ಮಾಡಿ ಈ ಹಳ್ಳಿಗೆ ಬಂದ್ರೆ ಇಲ್ಲಿನ ಬೋರ್‌ವೆಲ್‌ನಲ್ಲಿ 365 ದಿನವೂ ಕೊತಕೊತ ಕುದಿಯುವ ನೀರು ಬರುತ್ತೆ..!

ತೆಲಂಗಾಣದ ಪಗಿಡೇರು ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಬೋರ್‌ವೆಲ್‌ಗಳಿಂದ 60 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಬಿಸಿ ನೀರು ನೈಸರ್ಗಿಕವಾಗಿ ಚಿಮ್ಮುತ್ತಿದೆ. ಈ ನೀರನ್ನು ತಂಪು ಮಾಡಿ ರೈತರು 200 ಎಕರೆ ಕೃಷಿ ಭೂಮಿಗೆ ಬಳಸುತ್ತಿದ್ದಾರೆ. ಇದೀಗ ಈ ನೈಸರ್ಗಿಕ ಉಷ್ಣಶಕ್ತಿಯನ್ನು ಬಳಸಿ 20 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸಲು ಸಿದ್ಧತೆ ನಡೆಸಲಾಗುತ್ತಿದೆ.
Read Full Story

12:28 PM (IST) Oct 28

Navika Kotia Breakup - ನಿಶ್ಚಿತಾರ್ಥ ಮುರಿದುಕೊಂಡ ನವಿಕಾ, ಈ ಖ್ಯಾತ ನಟಿಯ ಬ್ರೇಕ್‌ಅಪ್‌ಗೆ ಇದೇ ಕಾರಣವಾಯ್ತಾ?

ಉದ್ಯಮಿ ಮಝೆನ್ ಮೋದಿ ಜೊತೆಗಿನ ನಟಿ ನವಿಕಾ ಕೊಟಿಯಾ ಅವರ ನಿಶ್ಚಿತಾರ್ಥ ಮುರಿದುಬಿದ್ದಿರುವ ಸುದ್ದಿ ಈಗ ಮನರಂಜನಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ, ಈ ನಿರ್ಧಾರದ ಕುರಿತು ನಟಿಯ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಆದರೆ, ಈ ಬ್ರೇಕಪ್‌ಗೆ ‘ಆ ಒಂದು ಸಂಗತಿ’ಯೇ ಕಾರಣ ಎನ್ನಲಾಗುತ್ತಿದೆ!

Read Full Story

12:28 PM (IST) Oct 28

3 ವಿಭಿನ್ನ ದೇಹ, ಒಂದೇ ಆತ್ಮ - ಅನಂತ್​ ಅಂಬಾನಿ ಭಾಷಣಕ್ಕೆ ಅಪ್ಪ ಮುಖೇಶ್​ ಕಣ್ಣೀರು- JIO ಸಾಧನೆ ಕುರಿತು ಹೇಳಿದ್ದೇನು

ಜಿಯೋ ಪ್ಲಾಟ್‌ಫಾರ್ಮ್‌ಗಳ ಐಪಿಒ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಜಿಯೋವನ್ನು ದೇವಾಲಯಕ್ಕೆ ಹೋಲಿಸಿ ಭಾವುಕ ಭಾಷಣ ಮಾಡಿದರು. ಸಹೋದರ-ಸಹೋದರಿಯರೊಂದಿಗಿನ ಒಗ್ಗಟ್ಟನ್ನು ಸಾರಿದ ಅವರ ಮಾತುಗಳನ್ನು ಕೇಳಿ ಮುಖೇಶ್ ಅಂಬಾನಿ ಕಣ್ಣೀರು ಹಾಕಿದರು. ಇದೇ ವೇಳೆ ಜಿಯೋ ಷೇರುಗಳು ಶೇ.21ರಷ್ಟು ಏರಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.
Read Full Story

12:15 PM (IST) Oct 28

MLA ಅಥವಾ MLC ಇಬ್ಬರಲ್ಲಿ ಯಾರು ಪವರ್‌ಫುಲ್? ಯಾರ ಕೈಯಲ್ಲಿ ಹೆಚ್ಚು ಅಧಿಕಾರ?

ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಶಾಸಕರು (MLA) ಮತ್ತು ವಿಧಾನ ಪರಿಷತ್ ಸದಸ್ಯರ (MLC) ನಡುವಿನ ಅಧಿಕಾರದ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಲೇಖನವು ಇಬ್ಬರ ನಡುವಿನ ಚುನಾವಣಾ ಪ್ರಕ್ರಿಯೆ, ವಯಸ್ಸಿನ ಮಿತಿ, ಹಣಕಾಸು ಅಧಿಕಾರ ವ್ಯಾಪ್ತಿ ಬಗ್ಗೆ ವಿವರಿಸುತ್ತದೆ.

Read Full Story

11:28 AM (IST) Oct 28

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹೀರೋ - ವಿಮಾನ ದುರಂತ ತಪ್ಪಿಸಿದ ಭಾರತೀಯ ಮೂಲದ ಪೈಲೆಟ್‌ಗೆ ಪ್ರಥಮ ದರ್ಜೆ ಗೌರವ ಪ್ರದಾನ ಯುಎಇ

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಸಹಪೈಲಟ್ ಯತ್ನಿಸಿದಾಗ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮತ್ತು ಸಿಬ್ಬಂದಿ ಧೈರ್ಯದಿಂದ ಹೋರಾಡಿ ಭೀಕರ ದುರಂತವನ್ನು ತಪ್ಪಿಸಿದ್ದಾರೆ. ಈ ಸಾಹಸವನ್ನು ಮೆಚ್ಚಿ ಯುಎಇ ಸರ್ಕಾರವು ಕ್ಯಾಪ್ಟನ್ ಸ್ಮಿತ್ ಸೇರಿದಂತೆ ವಿಮಾನದ ಸಿಬ್ಬಂದಿಗೆ ಪ್ರತಿಷ್ಠಿತ ‘ಆರ್ಡರ್ ಆಫ್ ಜಾಯೆದ್ II’ ಪ್ರಶಸ್ತಿ ನೀಡಿ ಗೌರವಿಸಿದೆ.
Read Full Story

11:17 AM (IST) Oct 28

ಬೆಳ್ಳಿ ದರ 50% ಕುಸಿತ! ಈಗ ಅರ್ಧ ಬೆಲೆಗೆ ಸಿಗುತ್ತಿದೆ ಸಿಲ್ವರ್, ಖರೀದಿಸಬೇಕೆ? ಇನ್ನು ಕಾಯುವುದು ಉತ್ತಮವೇ?

2026ರ ಜನವರಿಯಲ್ಲಿ ಗರಿಷ್ಠ ಮಟ್ಟದಲ್ಲಿದ್ದ ಬೆಳ್ಳಿ ದರವು ಅಕ್ಟೋಬರ್ ವೇಳೆಗೆ ಶೇ.50ರಷ್ಟು ಭಾರಿ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ವಿದ್ಯಮಾನಗಳು ಮತ್ತು ಡಾಲರ್ ಮೌಲ್ಯದ ಏರಿಕೆಯೇ ಈ ದಿಢೀರ್ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಬೆಲೆ ಇಳಿಕೆಯಾಗಿರುವ ಈಗ ಬೆಳ್ಳಿ ಖರೀದಿಸಬೇಕೆ? ಇನ್ನಷ್ಟು ಸಮಯ ಕಾಯಬೇಕೆ?

Read Full Story

10:57 AM (IST) Oct 28

100ಕ್ಕೂ ಹೆಚ್ಚು ರೈಲು ರದ್ಧು, ವಿಮಾನ ಸೇವೆಯಲ್ಲಿ ವ್ಯತ್ಯಯ, ಪ್ರಯಾಣಕ್ಕೂ ಮುನ್ನ ಪರಿಶೀಲನೆಗೆ ಮನವಿ

100ಕ್ಕೂ ಹೆಚ್ಚು ರೈಲು ಸೇವೆ ರದ್ದಾಗಿದೆ, ಹಲವು ರೈಲು ಮಾರ್ಗ ಬದಲಿಸಲಾಗಿದೆ.ಇತ್ತ ಹಲವು ವಿಮಾನ ಸೇವೆಗಳು ಸ್ಥಗಿತಗೊಂಡಿದೆ. ಕೆಲ ವಿಮಾನಗಳನ್ನು ಮಾರ್ಗ ಮದ್ಯ ಡೈವರ್ಟ್ ಮಾಡಲಾಗಿದೆ. ಇದೀಗ ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ಪರಿಶೀಲಿಸಲು ಮನವಿ ಮಾಡಲಾಗಿದೆ.

Read Full Story

10:56 AM (IST) Oct 28

ಸಾಯಿ ಪಲ್ಲವಿ MBBS ಮುಗಿಸಿದ ಬಳಿಕ ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದೇಕೆ? ರಾಮಾಯಣದ ಸೀತೆ ಮಾತು ಕೇಳಿ ನಕ್ಕ ರಣಬೀರ್ ಕಪೂರ್

ಕೆಬಿಸಿ 18 ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಅವರ ಪ್ರಶ್ನೆಗೆ ಉತ್ತರಿಸಿದ ನಟಿ ಸಾಯಿ ಪಲ್ಲವಿ, ತಾವು ವೈದ್ಯಕೀಯ ಕ್ಷೇತ್ರ ಬಿಟ್ಟು ನಟನೆಗೆ ಬಂದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ರಣಬೀರ್ ಕಪೂರ್ ನೀಡಿದ ಹಾಸ್ಯಮಯ ಉತ್ತರ ಎಲ್ಲರ ಗಮನ ಸೆಳೆದಿದೆ. ಅಲ್ಲದೆ, ಇವರಿಬ್ಬರು ನಟಿಸುತ್ತಿರುವ 'ರಾಮಾಯಣ' ಚಿತ್ರದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ.
Read Full Story

10:53 AM (IST) Oct 28

ಕನ್ನಡಿಗ ಯಶ್ ದಾರಿಯಲ್ಲೇ ತಮಿಳು ಸೂರ್ಯ; 20 ವರ್ಷಗಳ ಬಳಿಕ ಕೊನೆಗೂ 'ಸೀತೆ' ಜೊತೆಗಿನ ಗುಟ್ಟು ಬಿಚ್ಚಿಟ್ಟ ನಟ!

Suriya and Jyothika viral secret: ಪ್ರೀತಿ ಎಂದರೆ ದೊಡ್ಡ ದೊಡ್ಡ ಉಡುಗೊರೆಗಳಲ್ಲ; ಪರಸ್ಪರರ ಸಣ್ಣ ಪ್ರಯತ್ನಗಳನ್ನು ಗುರುತಿಸಿ ಗೌರವಿಸುವುದೂ ಹೌದು.. ಜ್ಯೋತಿಕಾ ಬಗ್ಗೆ ತಮಿಳು ನಟ ಸೂರ್ಯ ಅವರು 20 ವರ್ಷಗಳ ಬಳಿಕ ಅದೇನು ಹೇಳಿದ್ದಾರೆ ನೋಡಿ!

Read Full Story

10:29 AM (IST) Oct 28

ಅಕ್ಷಯಾ ಗುರಿ ತಲುಪುತ್ತಿದ್ದಂತೆ ಕೋಚ್ ಕಣ್ಣಲ್ಲಿ ನೀರು ತುಂಬಿತ್ತು! ಚಿನ್ನದ ಪದಕ ಗೆದ್ದ ಬಾಲಕಿಯ ಕಣ್ಣೀರ ಕಥೆ

ಕೇರಳದ ಶಾಲಾ ಕ್ರೀಡಾಕೂಟದಲ್ಲಿ ಬಡತನವನ್ನೇ ಸ್ಫೂರ್ತಿಯಾಗಿಸಿಕೊಂಡು ಅಕ್ಷಯಾ ಎಂಬ ಬಾಲಕಿ 3000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ. ಅನಾರೋಗ್ಯ ಪೀಡಿತ ಕುಟುಂಬದ ಏಕೈಕ ಭರವಸೆಯಾಗಿರುವ ಈಕೆಯ ಕಥೆ ನಿಜಕ್ಕೂ ಕಣ್ಣೀರು ತರಿಸುತ್ತದೆ.

Read Full Story

10:29 AM (IST) Oct 28

ಬಿಗ್‌ಬಾಸ್ ಶೋಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಕೃಷ್ಣನ್ ಸಂಭಾವನೆ ಸಿಕ್ಕಾಪಟ್ಟೆ ಚರ್ಚೆ

ನಟ ವಿಜಯ್ ಸೇತುಪತಿ ಅವರ ಗಂಟಲು ನೋವಿನ ಸಮಸ್ಯೆಯಿಂದಾಗಿ, ನಟಿ ರಮ್ಯಾ ಕೃಷ್ಣನ್ ತಮಿಳು ಬಿಗ್ ಬಾಸ್ ಸೀಸನ್ 10ರ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ವೀಕೆಂಡ್ ಎಪಿಸೋಡ್‌ಗಳನ್ನು ನಡೆಸಿಕೊಡಲು ಅವರು ಪಡೆಯುತ್ತಿರುವ ಸಂಭಾವನೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.
Read Full Story

09:11 AM (IST) Oct 28

WPL ಹರಾಜು ಎಷ್ಟು ಗಂಟೆಯಿಂದ ಆರಂಭ? ಆರ್‌ಸಿಬಿ ಪರ್ಸ್‌ನಲ್ಲಿ ಎಷ್ಟು ಹಣವಿದೆ? ಎಲ್ಲಿ ನೇರ ಪ್ರಸಾರ?

ಮಹಿಳಾ ಪ್ರೀಮಿಯರ್ ಲೀಗ್ (WPL) 2027ರ ಹರಾಜು ಪ್ರಕ್ರಿಯೆ ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ. ಒಟ್ಟು 150 ಆಟಗಾರ್ತಿಯರು ಕೇವಲ 27 ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿದ್ದು, ಫ್ರಾಂಚೈಸಿಗಳು ತಮ್ಮ ತಂಡವನ್ನು ಬಲಪಡಿಸಲು ರಣತಂತ್ರ ರೂಪಿಸಿವೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಇದರ ನೇರಪ್ರಸಾರ ವೀಕ್ಷಿಸಬಹುದು.
Read Full Story

08:52 AM (IST) Oct 28

ಫಿಟ್ಸ್ ನಾಟಕವಾಡಿ ತಮಿಳುನಾಡು ಜೈಲಿಂದ 17 ಕೈದಿಗಳು ಎಸ್ಕೇಪ್! ಇದು ರಾಜ್ಯ ಕಂಡ ಅತ್ಯಂತ ದೊಡ್ಡ ಜೈಲ್‌ ಬ್ರೇಕ್‌

ತಮಿಳುನಾಡಿನ ಥೇನಿ ಜಿಲ್ಲೆಯ ಜೈಲಿನಲ್ಲಿ ಸಹ ಕೈದಿಗೆ ಫಿಟ್ಸ್ ಬಂದಿದೆ ಎಂದು ನಾಟಕವಾಡಿ 17 ಕೈದಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಡ್ರೋನ್ ಬಳಸಿ 13 ಕೈದಿಗಳನ್ನು ಮರಳಿ ವಶಕ್ಕೆ ಪಡೆದಿದ್ದಾರೆ. ಈ ಬೃಹತ್ ಜೈಲ್ ಬ್ರೇಕ್ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜೈಲು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
Read Full Story

08:11 AM (IST) Oct 28

ಮದ್ಯ ಖರೀದಿಗೆ ಡಿಜಿಟಲ್ ಪಾವತಿ ಕಡ್ಡಾಯ - ತಮಿಳುನಾಡಿನಲ್ಲಿ ಹೊಸ ನಿಯಮ ಬಂದಿದ್ಯಾಕೆ?

ತಮಿಳುನಾಡು ಸರ್ಕಾರವು ಮದ್ಯದ ಅಂಗಡಿಗಳಲ್ಲಿ ಮೂಲ ಬೆಲೆಗಿಂತ ಹೆಚ್ಚು ಹಣ ವಸೂಲಿ ಮಾಡುವುದನ್ನು ತಡೆಯಲು ಹೊಸ ನಿಯಮ ಜಾರಿಗೆ ತಂದಿದೆ. ನವೆಂಬರ್ 1ರಿಂದ 1000 ರೂ. ಮೇಲ್ಪಟ್ಟ ಮದ್ಯ ಖರೀದಿಗೆ ಡಿಜಿಟಲ್ ಪಾವತಿಯನ್ನು ಕಡ್ಡಾಯಗೊಳಿಸಲಾಗಿದೆ.

Read Full Story

07:41 AM (IST) Oct 28

ಬಂಡೀಪುರ ರಾತ್ರಿ ವಾಹನ ಸಂಚಾರ - ಪ್ರಿಯಾಂಕಾ ಸಮ್ಮುಖದಲ್ಲಿ ಡಿಕೆ, ಕೇರಳ ಸಿಎಂ ಚರ್ಚೆ

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಮತ್ತು ಕೇರಳ ಸರ್ಕಾರಗಳು ನಿರ್ಧರಿಸಿವೆ. ಈ ಕುರಿತು ಡಿ.ಕೆ. ಶಿವಕುಮಾರ್ ಮತ್ತು ಕೇರಳ ಸಿಎಂ ನಡುವಿನ ಮಾತುಕತೆಯಲ್ಲಿ ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ಕೂಡ ಭಾಗವಹಿಸಲಿದ್ದಾರೆ.

Read Full Story

07:26 AM (IST) Oct 28

ಅಬುಧಾಬಿ ಲಾಟ್ರಿ - 200 ಗ್ರಾಂ ಚಿನ್ನ ಗೆದ್ದ ಉಡುಪಿಯ ಅರುಣ್‌, ಬೆಂಗಳೂರಿನ ಷರೀಫ್‌!

ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಉಡುಪಿಯ ಅರುಣ್ ಮತ್ತು ಬೆಂಗಳೂರಿನ ಷರೀಫ್ 200 ಗ್ರಾಂ ಚಿನ್ನ ಗೆದ್ದಿದ್ದಾರೆ. ಅಕ್ಟೋಬರ್ 3ನೇ ವಾರದಲ್ಲಿ ಒಟ್ಟು ನಾಲ್ವರು ಭಾರತೀಯರು ಈ ಬಹುಮಾನ ಪಡೆದಿದ್ದಾರೆ. ಈ ಹಿಂದೆ ಫೆಬ್ರವರಿಯಲ್ಲಿ ಉಡುಪಿಯ ಮತ್ತೊಬ್ಬರು ಇದೇ ಲಾಟರಿಯಲ್ಲಿ ₹49 ಕೋಟಿ ಗೆದ್ದಿದ್ದರು.
Read Full Story

06:10 AM (IST) Oct 28

10 ಸಾವಿರ ಕೋಟಿ ಕೊಡ್ತೀವಿ ದಾಳಿ ನಿಲ್ಲಿಸಿಬಿಡಿ - ಹೌತಿಗೆ ಸೌದಿಯಿಂದ ಬಿಗ್ ಆಫರ್‌

ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದ ಮೇಲೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ನಿರಂತರ ದಾಳಿಯನ್ನು ತಡೆಯಲು ವಿಫಲವಾದ ಪಾಕಿಸ್ತಾನದ ನೆರವಿನ ಬದಲು, ಸೌದಿ ಸರ್ಕಾರವು ಹೌತಿಗಳಿಗೆ 10,000 ಕೋಟಿ ರೂ. ಲಂಚದ ಆಫರ್ ನೀಡಿದೆ ಎಂಬ ಅಚ್ಚರಿಯ ವಿಷಯ ಬಹಿರಂಗವಾಗಿದೆ.
Read Full Story

05:57 AM (IST) Oct 28

ಆಂಧ್ರ ಕರಾವಳಿಗಿಂದು ಅರ್ನಬ್‌ ದಾಳಿ; 1.37 ಲಕ್ಷ ಜನರ ಸ್ಥಳಾಂತರ, 50 ರೈಲು ಸಂಚಾರ ರದ್ದು

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ತೀವ್ರ ಸ್ವರೂಪದ 'ಅರ್ನಬ್‌' ಚಂಡಮಾರುತ ಆಂಧ್ರದ ಕರಾವಳಿಗೆ ಅಪ್ಪಳಿಸಲಿದ್ದು, ಆಂಧ್ರ ಮತ್ತು ಒಡಿಶಾದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಪರಿಹಾರ ಕೇಂದ್ರಗಳು ಹಾಗೂ ವೈದ್ಯಕೀಯ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
Read Full Story

More Trending News