Suriya and Jyothika viral secret: ಪ್ರೀತಿ ಎಂದರೆ ದೊಡ್ಡ ದೊಡ್ಡ ಉಡುಗೊರೆಗಳಲ್ಲ; ಪರಸ್ಪರರ ಸಣ್ಣ ಪ್ರಯತ್ನಗಳನ್ನು ಗುರುತಿಸಿ ಗೌರವಿಸುವುದೂ ಹೌದು.. ಜ್ಯೋತಿಕಾ ಬಗ್ಗೆ ತಮಿಳು ನಟ ಸೂರ್ಯ ಅವರು 20 ವರ್ಷಗಳ ಬಳಿಕ ಅದೇನು ಹೇಳಿದ್ದಾರೆ ನೋಡಿ!
ಸೂರ್ಯ–ಜ್ಯೋತಿಕಾ ದಾಂಪತ್ಯದ ಗುಟ್ಟು ರಟ್ಟು! ಸಣ್ಣ ಕೆಲಸಕ್ಕೂ ಈ ನಟಿ ಏನ್ ಮಾಡ್ತಾರಂತೆ?
ತಮಿಳು ಚಿತ್ರರಂಗದ ಜನಪ್ರಿಯ ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ಅವರ ಪ್ರೇಮಕಥೆ ಹಾಗೂ ದಾಂಪತ್ಯ ಜೀವನಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ತೆರೆಯ ಮೇಲೆ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಈ ಜೋಡಿ, ನಿಜ ಜೀವನದಲ್ಲೂ ಪರಸ್ಪರ ಪ್ರೀತಿ, ಗೌರವ ಮತ್ತು ಬೆಂಬಲಕ್ಕೆ ಹೆಸರಾಗಿದೆ. ಇದೀಗ ನಟ ಸೂರ್ಯ ತಮ್ಮ ದಾಂಪತ್ಯದ ಸುಂದರ ಕ್ಷಣಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಪತ್ನಿ ಜ್ಯೋತಿಕಾ ತೋರುವ ಪ್ರೀತಿಯ ಕುರಿತು ಹೇಳಿರುವ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.

ದುಬೈನಲ್ಲಿ ನಡೆದ ತಮ್ಮ ಹೊಸ ಸಿನಿಮಾದ ವಿಶೇಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೂರ್ಯ, ಅಭಿಮಾನಿಗಳ ಪ್ರೀತಿ ಮತ್ತು ವೈಯಕ್ತಿಕ ಜೀವನದಲ್ಲಿ ಜ್ಯೋತಿಕಾ ನೀಡುವ ಪ್ರೋತ್ಸಾಹದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ತಾವು ಮಾಡುವ ಪ್ರತಿಯೊಂದು ಪ್ರಯತ್ನಕ್ಕೂ ಅಭಿಮಾನಿಗಳು ಅಪಾರ ಪ್ರೀತಿ ನೀಡುತ್ತಾರೆ. ಆದರೆ, ತಮ್ಮ ಸಂಸಾರದಲ್ಲಿ ತಾವು ಮಾಡುವ ಸಣ್ಣಪುಟ್ಟ ಕೆಲಸಗಳಿಗೂ ಜ್ಯೋತಿಕಾ ತೋರುವ ಪ್ರೀತಿಯನ್ನು ತಾನು ಎಂದಿಗೂ ಸರಿಗಟ್ಟಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಸೂರ್ಯ ಮಾತನಾಡಿದ್ದಾರೆ. ಪತ್ನಿಯ ಮೇಲಿನ ಅವರ ಗೌರವ ಮತ್ತು ಪ್ರೀತಿ ಈ ಮಾತುಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.
20ನೇ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷ ಸಂಭ್ರಮ!
ಸೂರ್ಯ ಮತ್ತು ಜ್ಯೋತಿಕಾ ಇತ್ತೀಚೆಗೆ ತಮ್ಮ 20ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಸ್ಕಾಟ್ಲ್ಯಾಂಡ್ನ ಸುಂದರ ಪರಿಸರದಲ್ಲಿ ನಡೆದ ಈ ಖಾಸಗಿ ಸಮಾರಂಭದಲ್ಲಿ ಇಬ್ಬರೂ ಮತ್ತೊಮ್ಮೆ ಮದುವೆಯ ಪ್ರತಿಜ್ಞೆಗಳನ್ನು ಸ್ವೀಕರಿಸಿ ತಮ್ಮ ಪ್ರೀತಿಗೆ ಹೊಸ ಮೆರುಗು ನೀಡಿದ್ದಾರೆ. ಮಕ್ಕಳಾದ ದಿಯಾ ಮತ್ತು ದೇವ್ ಹಾಗೂ ಆಪ್ತ ಬಂಧುಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಹಿಮದಿಂದ ಆವೃತವಾದ ಸ್ಕಾಟ್ಲ್ಯಾಂಡ್ನ ರಮಣೀಯ ವಾತಾವರಣವು ತಮ್ಮ ಪ್ರೇಮಕಥೆಯ ಸುಂದರ ನೆನಪುಗಳನ್ನು ಮರುಕಳಿಸುವಂತೆ ಮಾಡಿತು ಎಂದು ಸೂರ್ಯ ತಿಳಿಸಿದ್ದಾರೆ. ಎರಡು ದಶಕಗಳ ದಾಂಪತ್ಯ ಜೀವನದ ಬಳಿಕವೂ ಪರಸ್ಪರ ಪ್ರೀತಿಯನ್ನು ಅದೇ ಉತ್ಸಾಹದಿಂದ ಸಂಭ್ರಮಿಸುತ್ತಿರುವ ಈ ಜೋಡಿಯನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸೆಟ್ನಲ್ಲಿ ಶುರುವಾದ ಪ್ರೀತಿ!
ಸೂರ್ಯ ಮತ್ತು ಜ್ಯೋತಿಕಾ ಅವರ ಪ್ರೇಮಕಥೆ ಆರಂಭವಾಗಿದ್ದು 1999ರಲ್ಲಿ. ‘ಪೂವೆಲ್ಲಾಂ ಕೇಟ್ಟುಪ್ಪಾರ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಮೊದಲ ಬಾರಿಗೆ ಭೇಟಿಯಾದ ಈ ಜೋಡಿ, ಕಾಲಕ್ರಮೇಣ ಪರಸ್ಪರ ಹತ್ತಿರವಾಯಿತು. ಹಲವು ವರ್ಷಗಳ ಪ್ರೀತಿಯ ಬಳಿಕ 2006ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರವೂ ಇಬ್ಬರೂ ತಮ್ಮ ವೃತ್ತಿಜೀವನದ ಜೊತೆಗೆ ಕುಟುಂಬಕ್ಕೂ ಸಮಾನ ಮಹತ್ವ ನೀಡುತ್ತಾ ಬಂದಿದ್ದಾರೆ.
ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಈ ಜೋಡಿ, ತೆರೆಮೇಲಿನ ಕೆಮಿಸ್ಟ್ರಿಯ ಜೊತೆಗೆ ನಿಜ ಜೀವನದ ಹೊಂದಾಣಿಕೆಯಿಂದಲೂ ಪ್ರೇಕ್ಷಕರ ಮನ ಗೆದ್ದಿದೆ. ಮದುವೆಯ ಬಳಿಕ ನಟನೆಯಿಂದ ವಿರಾಮ ಪಡೆದಿದ್ದ ಜ್ಯೋತಿಕಾ, 2015ರಲ್ಲಿ ಮತ್ತೆ ಚಿತ್ರರಂಗಕ್ಕೆ ಮರಳಿದರು. ಆ ನಂತರವೂ ತಮ್ಮ ವೃತ್ತಿಜೀವನವನ್ನು ಮುಂದುವರಿಸುವುದರ ಜೊತೆಗೆ ಸೂರ್ಯ ಅವರಿಗೂ ಬೆಂಬಲವಾಗಿ ನಿಂತಿದ್ದಾರೆ.
ನಟನೆಯಷ್ಟೇ ಅಲ್ಲ, ನಿರ್ಮಾಣದಲ್ಲೂ ಜೊತೆಯಾದ ಜೋಡಿ!
ಸೂರ್ಯ ಮತ್ತು ಜ್ಯೋತಿಕಾ ಈಗ ನಟನೆಯ ಜೊತೆಗೆ ನಿರ್ಮಾಣ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ತಮ್ಮದೇ ಆದ ‘2D ಎಂಟರ್ಟೈನ್ಮೆಂಟ್’ ನಿರ್ಮಾಣ ಸಂಸ್ಥೆಯ ಮೂಲಕ ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ನಿರ್ಮಿಸುತ್ತಾ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಅಂದಹಾಗೆ, ಪ್ರೀತಿ ಎಂದರೆ ದೊಡ್ಡ ದೊಡ್ಡ ಉಡುಗೊರೆಗಳಲ್ಲ; ಪರಸ್ಪರರ ಸಣ್ಣ ಪ್ರಯತ್ನಗಳನ್ನು ಗುರುತಿಸಿ ಗೌರವಿಸುವುದೂ ಹೌದು ಎಂಬ ಸಂದೇಶವನ್ನು ಸೂರ್ಯ ಅವರ ಮಾತುಗಳು ಸಾರುತ್ತವೆ. ಎರಡು ದಶಕಗಳ ದಾಂಪತ್ಯದ ಬಳಿಕವೂ ಒಬ್ಬರ ಮೇಲೊಬ್ಬರು ಇಟ್ಟುಕೊಂಡಿರುವ ಪ್ರೀತಿ ಮತ್ತು ನಂಬಿಕೆಯೇ ಈ ಜೋಡಿಯ ವಿಶೇಷತೆ. ಅದಕ್ಕಾಗಿಯೇ ಸೂರ್ಯ–ಜ್ಯೋತಿಕಾ ಜೋಡಿ ಇಂದಿಗೂ ಅಭಿಮಾನಿಗಳಿಗೆ ನೆಚ್ಚಿನ ತಾರಾ ದಂಪತಿಯಾಗಿ ಉಳಿದಿದೆ.
ಇಲ್ಲೊಂದು ಮಾತು.. ಇತ್ತೀಚೆಗಷ್ಟೇ ತಮ್ಮ 'ರಾಮಾಯಣ' ಚಿತ್ರದ ಪ್ರಚಾರದ ವೇಳೆ, ಎಲ್ಲರೆದುರು ನಟ ಯಶ್ ಅವರು ತಮ್ಮ ಪತ್ನಿ ರಾಧಿಕಾ ಬಗ್ಗೆ 'ಇವರು ನನ್ನ ಸೀತೆ' ಎಂದಿದ್ದರು. ಅದೇ ರೀತಿಯಲ್ಲಿ ತಮಿಳು ಸ್ಟಾರ್ ನಟ ಸೂರ್ಯ ಸಹ ತಮ್ಮ ಪತ್ನಿ ಜ್ಯೋತಿಕಾರನ್ನು ತಮ್ಮ ಜೀವನದಲ್ಲಿ ಬಂದ 'ಸೀತೆ' ಎಂಬ ಅರ್ಥದಲ್ಲೇ ಮಾತನ್ನಾಡಿದ್ದಾರೆ. ಹೀಗಾಗಿ, ನಟ ಸೂರ್ಯ ಅವರನ್ನು ಕನ್ನಡಿಗ ನಟ ಯಶ್ ಅವರಿಗೆ ಈ ಸಂಗತಿಯಲ್ಲಿ ಹೋಲಿಸಬಹುದು.






