ಮದ್ಯ ಖರೀದಿಗೆ ಡಿಜಿಟಲ್ ಪಾವತಿ ಕಡ್ಡಾಯ: ತಮಿಳುನಾಡಿನಲ್ಲಿ ಹೊಸ ನಿಯಮ ಬಂದಿದ್ಯಾಕೆ?
ತಮಿಳುನಾಡು ಸರ್ಕಾರವು ಮದ್ಯದ ಅಂಗಡಿಗಳಲ್ಲಿ ಮೂಲ ಬೆಲೆಗಿಂತ ಹೆಚ್ಚು ಹಣ ವಸೂಲಿ ಮಾಡುವುದನ್ನು ತಡೆಯಲು ಹೊಸ ನಿಯಮ ಜಾರಿಗೆ ತಂದಿದೆ. ನವೆಂಬರ್ 1ರಿಂದ 1000 ರೂ. ಮೇಲ್ಪಟ್ಟ ಮದ್ಯ ಖರೀದಿಗೆ ಡಿಜಿಟಲ್ ಪಾವತಿಯನ್ನು ಕಡ್ಡಾಯಗೊಳಿಸಲಾಗಿದೆ.

ಮದ್ಯ ಖರೀದಿಗೆ ಡಿಜಿಟಲ್ ಪಾವತಿ ಕಡ್ಡಾಯ
ಮದ್ಯದ ಅಂಗಡಿಗಳಲ್ಲಿ ಮೂಲ ಬೆಲೆಗಿಂತ ಹೆಚ್ಚು ಹಣ ವಸೂಲಿಗೆ ಕಡಿವಾಣಕ್ಕೆ ಮುಂದಾಗಿರುವ ತಮಿಳುನಾಡು ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಮದ್ಯದ ಅಂಗಡಿಗಳಲ್ಲಿ ನ.1ರಿಂದ ಜಾರಿಗೆ ಬರುವಂತೆ 1000 ರು. ಮೇಲ್ಪಟ್ಟ ಮದ್ಯ ಖರೀದಿಗೆ ಡಿಜಿಟಲ್ ಪಾವತಿ ಕಡ್ಡಾಯಗೊಳಿಸಿದೆ.
ಯಾರೆಲ್ಲಾ ನಗದು ಪಾವತಿ ಮಾಡಬಹುದು?
ಯುಪಿಎಐ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಈಗಾಗಲೇ ಸ್ವೀಕರಿಸಲಾಗುತ್ತಿದ್ದರೂ, ನಗದು ವಹಿವಾಟುಗಳೇ ಹೆಚ್ಚಾಗಿ ನಡೆಯುತ್ತಿದೆ. ಹೀಗಾಗಿ ಪಾರದರ್ಶಕತೆ ಜತೆಗೆ ನಗದು ಬಿಲ್ ಪಾವತಿ ವೇಳೆಯಲ್ಲಿನ ರಿಸ್ಕ್ ತಡೆಗೆ ಈ ಕ್ರಮ ಕೈಗೊಂಡಿದೆ. 1000 ರು.ಗಿಂತ ಕಡಿಮೆ ಮೊತ್ತದ ಮದ್ಯ ಖರೀದಿಸಿದವರು ನಗದು ಪಾವತಿ ಮಾಡಬಹುದು.
4,048 ಚಿಲ್ಲರೆ ಮದ್ಯದ ಅಂಗಡಿಗಳಿಗೆ ನಿಯಮ ಅನ್ವಯ
ಸರ್ಕಾರಿ ಸ್ವಾಮ್ಯದ 4,048 ಚಿಲ್ಲರೆ ಮದ್ಯದ ಅಂಗಡಿಗಳಿಗೆ ಇದು ಅನ್ವಯವಾಗಲಿದೆ. ಈ ನಿಯಮದ ಬಗ್ಗೆ ಅಂಗಡಿಗಳು ಬೋರ್ಡ್ಗಳನ್ನು ಅಳವಡಿಸಿ ಗ್ರಾಹಕರಿಗೆ ಅರಿವು ಮೂಡಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ಸ್ವಾಮ್ಯದ 4,048 ಚಿಲ್ಲರೆ ಮದ್ಯದ ಅಂಗಡಿಗಳಿಗೆ ಇದು ಅನ್ವಯವಾಗಲಿದೆ. ಈ ನಿಯಮದ ಬಗ್ಗೆ ಅಂಗಡಿಗಳು ಬೋರ್ಡ್ಗಳನ್ನು ಅಳವಡಿಸಿ ಗ್ರಾಹಕರಿಗೆ ಅರಿವು ಮೂಡಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ





