LIVE NOW
Asianet News   | PTI
Published : Jun 27, 2026, 07:14 AM ISTUpdated : Jun 27, 2026, 10:15 PM IST

India Latest News Live: Anushka Shetty - ರಾಜಮೌಳಿ ಬಗ್ಗೆ ದೇವಸೇನಾ ಹೇಳಿದ ಮಾತು ವೈರಲ್ - ಬಾಹುಬಲಿ ರಹಸ್ಯ ಬಯಲು

ಸಾರಾಂಶ

ಶಾಂತಿ ಒಪ್ಪಂದ ಮುರಿದ ಬೆನ್ನಲ್ಲೇ ಇರಾನ್ ವಿರುದ್ಧ ಕೆರಳಿರುವ ಅಮೆರಿಕ ಭೀಕರ ದಾಳಿ ನಡೆಸಿದೆ. ಹೊರ್ಮುಜ್‌ನಲ್ಲಿ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಇದೀಗ ಮಿಲಿಟರಿ ದಾಳಿ ಆರಂಭಿಸಿದೆ. ಪರಿಣಾಮ ಮತ್ತೆ ಹೊರ್ಮುಜ್ ಜಲಸಂಧಿಯಲ್ಲಿ ನಿರ್ಬಂಧ ಶುರುವಾಗಿದೆ. ಈಗಷ್ಟೇ ಭಾರತದಲ್ಲಿ ಗ್ಯಾಸ್ ಮೇಲಿನ ನಿರ್ಬಂಧ ತೆರವುಗೊಳಿಸಲಾಗಿತ್ತು. ಇತ್ತ ತೈಲ ಪೂರೈಕೆ ಪುನರ್ ಆರಂಭಗೊಳ್ಳುವಷ್ಟರಲ್ಲೇ ಕೊರತೆ ಆತಂಕ ಎದುರಾಗಿದೆ. ಅಯೋಧ್ಯೆ ರಾಮ ಮಂದಿರ ದೇಣಿಗೆ ಪ್ರಕರಣ ಸೇರಿದಂತೆ ದೇಶ ವಿದೇಶಗಳ ಇಂದಿನ ಲೈವ್ ನ್ಯೂಸ್ ಅಪ್‌ಡೇಟ್ ಇಲ್ಲಿದೆ.

Anushka Shetty

10:15 PM (IST) Jun 27

Anushka Shetty - ರಾಜಮೌಳಿ ಬಗ್ಗೆ ದೇವಸೇನಾ ಹೇಳಿದ ಮಾತು ವೈರಲ್ - ಬಾಹುಬಲಿ ರಹಸ್ಯ ಬಯಲು

Anushka Shetty: ನನ್ನ ಸಿನಿಮಾದಲ್ಲಿ ನಾಯಕಿಯರಿಗೆ ಅಷ್ಟೊಂದು ಪ್ರಾಮುಖ್ಯತೆ ಇರುವುದಿಲ್ಲ. ವಿಕ್ರಮಾರ್ಕುಡು ಚಿತ್ರದಲ್ಲೂ ಅಷ್ಟೇ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕು, ಹಾಡುಗಳಿರುತ್ತವೆ ಅಷ್ಟೇ' ಎಂದು ರಾಜಮೌಳಿ ಹೇಳಿದ್ದರಂತೆ.

Read Full Story

09:56 PM (IST) Jun 27

Rekha Vedavyas - 'ಮುದುಕಿ ಅಂತಾರೆ'.. 41 ಆದ್ರೂ ಮದುವೆಯಾಗದಿರಲು ಇದೇ ಕಾರಣ - ಜಿಂಕೆಮರಿ ರೇಖಾ!

Rekha Vedavyas: ‘ಹುಚ್ಚ’ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಅವರಿಗೆ 41 ವರ್ಷವಾದರೂ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ. ತಾವೇಕೆ ಇನ್ನೂ ಮದುವೆಯಾಗಿಲ್ಲ ಎನ್ನುವ ಸೀಕ್ರೆಟ್ ಅನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

Read Full Story

09:21 PM (IST) Jun 27

Bhagyaraj - ಪತ್ರ ಬರೆದಿಟ್ಟು ಎರಡು ಬಾರಿ ಹೊರಟ ಭಾಗ್ಯರಾಜ್ - ಭಾರತಿರಾಜ್ ಮಾಡಿದ ಕೆಲಸ ಕೇಳಿದರೆ ಭಾವುಕರಾಗ್ತೀರಾ!

Bharathiraja Assistant Director: ಖ್ಯಾತ ನಿರ್ದೇಶಕ ಭಾರತಿರಾಜ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವಾಗ, ಮನಸ್ತಾಪದಿಂದ ಭಾಗ್ಯರಾಜ್ ಒಮ್ಮೆ ಪತ್ರ ಬರೆದಿಟ್ಟು ಹೊರಟು ಹೋಗಿದ್ದರಂತೆ.

Read Full Story

09:04 PM (IST) Jun 27

Prabhas Shocking Secret - ಪ್ರಭಾಸ್ ಅಮ್ಮನೇ ಹೇಳಿದ್ರು 'ಡಾರ್ಲಿಂಗ್; ಸೀಕ್ರೆಟ್.. ಊಟಕ್ಕೆ ನಟ ಡಾರ್ಲಿಂಗ್ ಪ್ರಭಾಸ್ ಮಾಡೋ ಖರ್ಚು ಎಷ್ಟು?

ತಾಯಿ ಶ್ಯಾಮಲಾ ದೇವಿ ಅವರ ಮೇಲೆ ಅಪಾರ ಪ್ರೀತಿ-ಗೌರವ ಹೊಂದಿರುವ ಪ್ರಭಾಸ್, ಇಂದಿಗೂ ಕುಟುಂಬದ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಊಟ ಬಡಿಸುವುದರಲ್ಲಿ ಡಾ. ರಾಜ್‌ಕುಮಾರ್ ಅವರಂತೆಯೇ ಬಹಳಷ್ಟು ಅಷ್ಟೊಂದು ಪ್ರೀತಿ ತೋರಿಸುವ ನಟ ಪ್ರಭಾಸ್ ಎಂದು ಅನೇಕರು ಹೇಳುತ್ತಾರೆ.

Read Full Story

08:43 PM (IST) Jun 27

Huma Qureshi - SRK-ಐಶ್ವರ್ಯಾ ಹಾಡನ್ನು ರೀಮೇಕ್ ಮಾಡಿದ ಟಾಕ್ಸಿಕ್ ಬೆಡಗಿ! ಫ್ಯಾನ್ಸ್ ಗರಂ ಆಗಿದ್ದೇಕೆ?

Ishq Kameena Remake: ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸೂಪರ್‌ಹಿಟ್ 'ಇಷ್ಕ್ ಕಮೀನಾ' ಹಾಡನ್ನು ಹುಮಾ ಖುರೇಷಿ ಅವರ 'ಬೇಬಿ ಡು ಡೈ ಡು' ಚಿತ್ರಕ್ಕಾಗಿ ರೀಮೇಕ್ ಮಾಡಲಾಗಿದೆ. ಈ ಹೊಸ ವರ್ಷನ್‌ಗೆ..

Read Full Story

08:05 PM (IST) Jun 27

Mohanlal - ಜರ್ಮನಿಯಲ್ಲಿ ಮೋಹನ್‌ಲಾಲ್ ಫುಲ್ ಜೋಶ್! ಆ ಹಾಡಿಗೆ ಭರ್ಜರಿ ಸ್ಟೆಪ್ಸ್, ವಿಡಿಯೋ ವೈರಲ್

Mohanlal Viral Video: ಮೋಹನ್‌ಲಾಲ್ ಮತ್ತು ತಂಡ ಯೂರೋಪ್ ಪ್ರವಾಸದಲ್ಲಿದ್ದು, ಜರ್ಮನಿಯಲ್ಲಿ ನಡೆದ ಸ್ಟೇಜ್ ಶೋನಲ್ಲಿ ಅವರ ಪರ್ಫಾರ್ಮೆನ್ಸ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Read Full Story

07:29 PM (IST) Jun 27

Shah Rukh Khan - 'ಗಂಡನಿಗಿಂತ ನೀವೇ ಇಷ್ಟ' ಎಂದ ಅಭಿಮಾನಿಗೆ ಶಾರುಖ್ ಕೊಟ್ಟ ಉತ್ತರ ಕೇಳಿದ್ರೆ ನಗ್ತೀರಾ!

Shah Rukh Khan: ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು 'ನನ್ನ ಗಂಡನಿಗಿಂತ ನಿಮ್ಮನ್ನೇ ಹೆಚ್ಚು ಪ್ರೀತಿಸುತ್ತೇನೆ' ಎಂದಿದ್ದಾರೆ. ಇದಕ್ಕೆ ಶಾರುಖ್ ಕೊಟ್ಟ ಉತ್ತರ ಸಖತ್ ವೈರಲ್ ಆಗಿದೆ. ಏನಿದು ಘಟನೆ? ಇಲ್ಲಿದೆ ಡೀಟೇಲ್ಸ್.

Read Full Story

07:14 PM (IST) Jun 27

ಮಂಗಗಳಿಗೆ ಹಣ್ಣು ತಿನ್ನಿಸಿದ್ದೇ ತಪ್ಪಾಗೋಯ್ತು - ದೇವಾಲಯದ ಬೆಟ್ಟದಿಂದ ಬಿದ್ದು ನವವಿವಾಹಿತೆ ಸಾವು

ತಮಿಳುನಾಡಿನ ಕಜುಗುಮಲೈ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನವವಿವಾಹಿತೆ ಅನಿತಾ, ಮಂಗಗಳಿಗೆ ಹಣ್ಣು ನೀಡುವಾಗ ಆಯತಪ್ಪಿ ಗುಡ್ಡದಿಂದ ಬಿದ್ದು ಪತಿಯೆದುರೇ ಸಾವನ್ನಪ್ಪಿದ್ದಾರೆ. ಕೋತಿಗಳ ಹಿಂಡು ಸುತ್ತುವರೆದಾಗ ಭಯಭೀತಳಾಗಿ ಹಿಂದೆ ಸರಿದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

06:46 PM (IST) Jun 27

ಉತ್ತರ ಪ್ರದೇಶದ ದಿನಗೂಲಿ ಕಾರ್ಮಿಕನ ಮಗಳಿಗೆ ₹21 ಕೋಟಿ ಐಟಿ ನೋಟಿಸ್! ವಿದ್ಯಾರ್ಥಿನಿಗೆ ಅಷ್ಟು ದುಡ್ಡೆಲ್ಲಿಂದ?

ಉತ್ತರ ಪ್ರದೇಶದ ಉನ್ನಾವೋದಲ್ಲಿ, ದಿನಗೂಲಿ ಕಾರ್ಮಿಕನ ಮಗಳಿಗೆ ₹20.98 ಕೋಟಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಆಕೆಯ ಪ್ಯಾನ್ ಮತ್ತು ಆಧಾರ್ ಕಾರ್ಡ್ ಬಳಸಿ ದೆಹಲಿಯಲ್ಲಿ ನಕಲಿ ಸ್ಕ್ರ್ಯಾಪ್ ಸಂಸ್ಥೆ ತೆರೆದು ಈ ವಂಚನೆ ಎಸಗಲಾಗಿದ್ದು, ಸಂತ್ರಸ್ತ ಯುವತಿ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ.
Read Full Story

06:05 PM (IST) Jun 27

ಮೊಹರಂ ಮೆರವಣಿಗೆ - 40 ಅಡಿ ಎತ್ತರದಲ್ಲಿ ನಡೆದ ಆ ಭಯಾನಕ ಸ್ಫೋಟ- ಉದ್ದೇಶ ಏನು? ಶಾಕಿಂಗ್​ ವಿಡಿಯೋ ವೈರಲ್​

ಮಧ್ಯಪ್ರದೇಶದ ಬದ್ನಗರದಲ್ಲಿ ಮೊಹರಂ ಮೆರವಣಿಗೆ ವೇಳೆ, ಕ್ರೇನ್ ಮೂಲಕ ಕಾರನ್ನು 40 ಅಡಿ ಎತ್ತರಕ್ಕೆ ಎತ್ತಿ ಸ್ಫೋಟಿಸಲಾಗಿದೆ. ಈ ಅಪಾಯಕಾರಿ ಸಾಹಸದ ವಿಡಿಯೋ ವೈರಲ್ ಆಗಿದ್ದು, ಆಯೋಜಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದೊಂದು ಯೋಜಿತ ಪಿತೂರಿ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದು, ತನಿಖೆ ಮುಂದುವರೆದಿದೆ.

Read Full Story

05:02 PM (IST) Jun 27

ಐರ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಎರಡನೇ ಮ್ಯಾಚ್‌ಗೆ 3 ಬದಲಾವಣೆ ಫಿಕ್ಸ್..! ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್?

ಬೆಂಗಳೂರು: ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಟೀಂ ಇಂಡಿಯಾ ಆಡಿದ ಮೊದಲ ಪಂದ್ಯದಲ್ಲಿಯೇ ಐರ್ಲೆಂಡ್ ಎದುರು ಆಘಾತಕಾರಿ ಸೋಲು ಅನುಭವಿಸಿದೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಭಾರತ 3 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

Read Full Story

04:40 PM (IST) Jun 27

ಪ್ರಶ್ನೆ ಪತ್ರಿಕೆ ಲೀಕ್‌, ನಾಳೆ ನಡೆಯಬೇಕಿದ್ದ TET ಪರೀಕ್ಷೆ ಮುಂದೂಡಿಕೆ

ಥಾಣೆ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಜೂನ್ 28 ರಂದು ನಡೆಯಬೇಕಿದ್ದ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (TET) ದಿಢೀರ್ ಮುಂದೂಡಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಪರೀಕ್ಷಾ ಮಂಡಳಿಯು ಶೀಘ್ರದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸಲಿದೆ.
Read Full Story

04:32 PM (IST) Jun 27

Baahubali Movie - ಬಾಹುಬಲಿ ನನಗೆ ಸಿನಿಮಾ ಆಗಿರಲಿಲ್ಲ; ಯುದ್ಧ ಆಗಿತ್ತು - ನಟ ಪ್ರಭಾಸ್!

Prabhas Baahubali Movie: ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಾಯಿಸಿದ 'ಬಾಹುಬಲಿ' ಸಿನಿಮಾ ಸೃಷ್ಟಿಸಿದ ಅಲೆ ಹಾಗೂ ಅದರ ಹಿಂದಿನ ಕಠಿಣ ಪರಿಶ್ರಮ ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ '#BaahubaliTheTorchbearer' ಕಾರ್ಯಕ್ರಮದಲ್ಲಿ ಪ್ರಭಾಸ್ ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. 

 

Read Full Story

03:39 PM (IST) Jun 27

White Cloth on Dead Body - ಎಲ್ಲ ಧರ್ಮದಲ್ಲಿಯೂ ಹೆಣದ ಮೇಲೆ ಬಿಳಿ ಬಟ್ಟೆಯನ್ನೇ ಹೊದಿಸೋದು ಯಾಕೆ?

Wearing white to a funeral meaning: ಬಹುತೇಕ ಎಲ್ಲ ಧರ್ಮದಲ್ಲಿಯೂ ಕೂಡ ಸಾವಿನ ನಂತರದಲ್ಲಿ ಹೆಣದ ಮೇಲೆ ಬಿಳಿ ಬಟ್ಟೆಯನ್ನು ಹೊದಿಸಲಾಗುತ್ತದೆ. ಇದಕ್ಕೆ ಕಾರಣ ಏನು? ವೈಜ್ಞಾನಿಕ ವಿಷಯ ಏನು? 

Read Full Story

03:01 PM (IST) Jun 27

White Bed Sheets Train - ರೈಲು ಪ್ರಯಾಣಿಕರಿಗೆ ಬಿಳಿ ಬೆಡ್‌ ಶೀಟ್‌ ಕೊಡೋದು ಯಾಕೆ? ಇದೆ ಬಲವಾದ ಕಾರಣ!

ರೈಲುಗಳ ಎಸಿ ಕೋಚ್‌ಗಳಲ್ಲಿ ಕೊಡುವ ಬಿಳಿ ಬೆಡ್‌ಶೀಟ್‌ಗಳನ್ನು ನೋಡಿ, ಇದೇನಪ್ಪಾ ಆಸ್ಪತ್ರೆಯ ಶವಾಗಾರದಂತಿದೆ ಎಂದು ನೀವು ಮೀಮ್ಸ್‌ ನೋಡಿರಬಹುದು. ಆದರೆ, ರೈಲ್ವೆ ಇಲಾಖೆ ಬಿಳಿ ಬೆಡ್‌ಶೀಟ್‌ಗಳನ್ನು ಬಳಸುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ.

Read Full Story

02:45 PM (IST) Jun 27

'ಮೊನ್ನೆಯಷ್ಟೇ ನಗುನಗುತ್ತಿದ್ದ'.. ಕೆ ಭಾಗ್ಯರಾಜ್ ನಿಧನಕ್ಕೆ ದಿಗ್ಭ್ರಮೆಗೊಂಡು ಮೆಗಾಸ್ಟಾರ್ ಚಿರಂಜೀವಿ ಪೋಸ್ಟ್

ನೋವಿನ ಸಂಗತಿ ಏನೆಂದರೆ, ಭಾಗ್ಯರಾಜ್ ಅವರ ಗುರುಗಳು ಮತ್ತು ತಮಿಳು ಚಿತ್ರರಂಗದ ಭೀಷ್ಮ ಎಂದೇ ಕರೆಯಲ್ಪಡುತ್ತಿದ್ದ ಕೆ. ಭಾರತಿರಾಜ ಅವರು ನಿಧನರಾದ ಕೇವಲ ಎರಡೇ ವಾರಗಳಲ್ಲಿ ಅವರ ನೆಚ್ಚಿನ ಶಿಷ್ಯ ಭಾಗ್ಯರಾಜ್ ಕೂಡ ಇಹಲೋಕ ತ್ಯಜಿಸಿದ್ದಾರೆ. ಗುರು-ಶಿಷ್ಯರ ಈ ಅಗಲಿಕೆ ಸಿನಿಪ್ರೇಮಿಗಳ ಪಾಲಿಗೆ ಬರಸಿಡಿಲಾಗಿದೆ.

Read Full Story

02:12 PM (IST) Jun 27

ಐರ್ಲೆಂಡ್‌ ಎದುರು ಒಮ್ಮೆಯೂ ಸೋತಿಲ್ಲ ಈ ಮೂರು ತಂಡಗಳು..! ಲಿಸ್ಟ್‌ನಲ್ಲಿದೆ ಭಾರತದ ಒಂದು ನೆರೆಯ ದೇಶ

Teams Unbeaten Against Ireland: ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಭಾರತಕ್ಕೆ ಮುಖಭಂಗವಾಗಿದೆ. ಇದರ ಬೆನ್ನಲ್ಲೇ ಐರ್ಲೆಂಡ್ ಎದುರು ಸೋಲದ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಮೂರು ತಂಡಗಳು ಯಾವುವು ನೋಡೋಣ ಬನ್ನಿ.

 

Read Full Story

01:35 PM (IST) Jun 27

'ಸತ್ತು' 13 ದಿನಗಳ ಬಳಿಕ ವಾಪಸಾದ ವ್ಯಕ್ತಿ! ತನ್ನದೇ ತಿಥಿ ಕಾರ್ಯದ ದಿನ ಬಾಗಿಲು ತಟ್ಟಿ ಬೆಚ್ಚಿಬೀಳಿಸಿದ

ಗಾಜಿಯಾಬಾದ್‌ನಲ್ಲಿ, ಜೈಲಿನಿಂದ ಬಿಡುಗಡೆಯಾದ ನಂತರ ನಾಪತ್ತೆಯಾಗಿದ್ದ ಗಿರಿಧರ ಸಿಂಗ್ ಎಂಬ ವ್ಯಕ್ತಿಯ ಶವವೆಂದು ಭಾವಿಸಿ ಪೋಷಕರು ಅಂತ್ಯಸಂಸ್ಕಾರ ಮಾಡಿದ್ದರು. ಆದರೆ, ತಿಥಿ ಕಾರ್ಯ ಮುಗಿದ 13ನೇ ದಿನದಂದು ಆತ ಮನೆಗೆ ವಾಪಸ್ ಬಂದು ಎಲ್ಲರಿಗೂ ಆಘಾತ ನೀಡಿದ್ದಾನೆ. ಈ ವಿಚಿತ್ರ ಘಟನೆಯಿಂದಾಗಿ ಪೊಲೀಸರು ಪ್ರಕರಣದ ಮರುತನಿಖೆ ಆರಂಭಿಸಿದ್ದಾರೆ.
Read Full Story

01:24 PM (IST) Jun 27

SS Rajamouli Varanasi Secret - 'ವಾರಣಾಸಿ' ಸಿನಿಮಾದ ಹೊಸ ಅಪ್‌ಡೇಟ್ ಕೊಟ್ಟ ರಾಜಮೌಳಿ; ಹಲವು ಸೀಕ್ರೆಟ್‌ ಬಹಿರಂಗ!

'ಈ ಚಿತ್ರವನ್ನು ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದು ಕೇವಲ ಪ್ರಚಾರಕ್ಕಾಗಿ ಅಲ್ಲ, ಬದಲಾಗಿ ಕಥೆಯ ಬೇಡಿಕೆಗೆ' ಎಂದು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, 'ಈ ಚಿತ್ರದಲ್ಲಿ ಬರುವ ಸುಮಾರು 20 ನಿಮಿಷಗಳ ಸುದೀರ್ಘ 'ರಾಮಾಯಣ ಯುದ್ಧ'ದ ದೃಶ್ಯವು ರೋಚಕ' ಎಂದಿದ್ದಾರೆ.

Read Full Story

01:00 PM (IST) Jun 27

ಐರ್ಲೆಂಡ್ ಎದುರು ವೈಭವ್ ಸೂರ್ಯವಂಶಿ ಕೈಬಿಟ್ಟಿದ್ದೇಕೆ? ನಿಜವಾದ ಕಾರಣ ಬಿಚ್ಚಿಟ್ಟ ನಾಯಕ ಶ್ರೇಯಸ್ ಅಯ್ಯರ್

15 ವರ್ಷದ ವೈಭವ್ ಸೂರ್ಯವಂಶಿಗೆ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾದಾರ್ಪಣೆ ಮಾಡುವ ಅವಕಾಶ ತಪ್ಪಿಹೋಗಿದೆ. ಅನುಭವಿ ಆಟಗಾರರಿಗೆ ಆದ್ಯತೆ ನೀಡಿದ್ದಾಗಿ ನಾಯಕ ಶ್ರೇಯಸ್ ಅಯ್ಯರ್ ಸ್ಪಷ್ಟಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತವು ಐರ್ಲೆಂಡ್ ವಿರುದ್ಧ 34 ರನ್‌ಗಳ ಆಘಾತಕಾರಿ ಸೋಲನುಭವಿಸಿ, ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.
Read Full Story

12:36 PM (IST) Jun 27

ಪಾಕ್ ಶೋಯೆಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಪೆಹಲ್ಗಾಂ ಉಗ್ರ ದಾಳಿ ಮಾಸ್ಟರ್‌ಮೈಂಡ್ ಭಾಗಿ

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆ ಇದೀಗ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದೆ. ಈ ಅಂತ್ಯಕ್ರಿಯೆಯಲ್ಲಿ ಪೆಹಲ್ಗಾಂ ಉಗ್ರ ದಾಳಿಯ ಮಾಸ್ಟರ್ ಮೈಂಡ್ , ಲಷ್ಕರ್ ಇ ತೈಬಾದ ಹಲವು ಉಗ್ರರು ಪಾಲ್ಗೊಂಡಿದ್ದಾರೆ.

Read Full Story

12:30 PM (IST) Jun 27

Prabhas Bahubali - 'ಬಾಹುಬಲಿ' ಸೂಪರ್ ಹಿಟ್ ಹಿಟ್‌ ಆದ್ಮೇಲೆ ನಟ ಪ್ರಭಾಸ್ 2-3 ವರ್ಷ ನಿದ್ದೆ ಮಾಡಲಾಗದೇ ಒದ್ದಾಡಿದ್ದು ಏಕೆ?

"ಸಾಹೋ ಚಿತ್ರಕ್ಕೆ ಉತ್ತರ ಭಾರತದಲ್ಲಿ ಸಿಕ್ಕ ಪ್ರತಿಕ್ರಿಯೆ ಹಾಗೂ ಮೊದಲ ದಿನದ ಕಲೆಕ್ಷನ್ ನನಗೆ ನಿಜಕ್ಕೂ ಅಚ್ಚರಿ ಹುಟ್ಟಿಸಿತ್ತು. ಏಕೆಂದರೆ, ಅಲ್ಲಿ ಮೊದಲ ದಿನವೇ ಸುಮಾರು 26 ಕೋಟಿ ರೂಪಾಯಿ ಗಳಿಕೆಯಾಗಿತ್ತು. ಉತ್ತರ ಭಾರತದಲ್ಲಿ ಇಂಥದ್ದೊಂದು ಸಾಧನೆಗೆ ಸಾಧ್ಯವಾದ ಸೀಕ್ರೆಟ್ ಹೇಳಿಕೊಂಡಿದ್ದಾರೆ ಪ್ರಭಾಸ್..

Read Full Story

12:05 PM (IST) Jun 27

ದಕ್ಷಿಣ ಚಿತ್ರರಂಗದ ಖ್ಯಾತ ಡೈರೆಕ್ಟರ್, ನಿರ್ಮಾಪಕ, ಕನ್ನಡದಲ್ಲೂ ನಟಿಸಿದ್ದ ಭಾಗ್ಯರಾಜ್ ಹೃದಯಾಘಾತದಿಂದ ನಿಧನ

ಖ್ಯಾತ ತಮಿಳು ನಿರ್ದೇಶಕ, ನಟ ಕೆ. ಭಾಗ್ಯರಾಜ್ (73) ಅವರು ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ತಮ್ಮ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಟನೆಯ ಮೂಲಕ 'ಒನ್ ಮ್ಯಾನ್ ಆರ್ಮಿ' ಎಂದೇ ಖ್ಯಾತರಾಗಿದ್ದ ಅವರು, 'ಮುಂಧನೈ ಮುಡಿಚು' ನಂತಹ ಸಾರ್ವಕಾಲಿಕ ಹಿಟ್ ಚಿತ್ರಗಳನ್ನು ನೀಡಿದ್ದರು. ಅವರ ಅನಿರೀಕ್ಷಿತ ನಿಧನವು ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನುಂಟುಮಾಡಿದೆ.
Read Full Story

11:36 AM (IST) Jun 27

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ - ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಲೂಟಿ ಪ್ರಕರಣದ ಬಗ್ಗೆ ಉಗ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿಜೆಪಿಗೆ ಬಂದ ಶಾಸಕರು ಪಕ್ಷ ಕಟ್ಟಲು ಬಂದವರಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜಕೀಯದಲ್ಲಿನ ಕುದುರೆ ವ್ಯಾಪಾರವನ್ನು ಟೀಕಿಸಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಜೊತೆಗೆ, ಎನ್‌ಸಿಇಆರ್‌ಟಿ ಪಠ್ಯಪುಸ್ತಕದ ಹೆಸರಿನ ಬಗ್ಗೆಯೂ ಅವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.
Read Full Story

11:20 AM (IST) Jun 27

Indian Railway - ಓಣಂ ವಿಶೇಷ, Bharat Gaurav ರೈಲಿನಲ್ಲಿ ಇಡೀ ದೇಶ ಸುತ್ತುವ ಸುವರ್ಣಾವಕಾಶ, ಶೇ.33 ರಿಯಾಯಿತಿ

ಮುಂಬರುವ ಓಣಂ ಹಬ್ಬದ ರಜೆಗಾಗಿ ಭಾರತೀಯ ರೈಲ್ವೆಯು 'ಭಾರತ್ ಗೌರವ್ ರೈಲು' ಯೋಜನೆಯಡಿ 11 ದಿನಗಳ ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಿಸಿದೆ. ಸೌತ್ ಸ್ಟಾರ್ ರೈಲ್ ಸಹಯೋಗದ ಈ ಪ್ರವಾಸವು ದೆಹಲಿ, ಆಗ್ರಾ, ಏಕತಾ ಪ್ರತಿಮೆ ಮತ್ತು ಗೋವಾದಂತಹ ಪ್ರಮುಖ ತಾಣಗಳನ್ನು ಒಳಗೊಂಡಿದ್ದು, ಶೇ. 33ರಷ್ಟು ಭಾರಿ ಸಬ್ಸಿಡಿ ಸೌಲಭ್ಯವನ್ನು ಹೊಂದಿದೆ.
Read Full Story

11:01 AM (IST) Jun 27

ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ - ಸಿಯಾಗೆ ಪ್ರಚೋದನೆ ನೀಡಿದ್ದೇ ಪ್ರಿಯಕರ ಚೇತನ್? ತನಿಖೆಯಲ್ಲಿ ಹೊಸ ವಿಚಾರ ಬಹಿರಂಗ

ಪುಣೆಯ ಲೋಹಗಡ ಕೋಟೆಯಿಂದ ಭಾವಿ ಪತಿ ಕೇತನ್ ಅಗರ್ವಾಲ್‌ನನ್ನು ಪ್ರಪಾತಕ್ಕೆ ತಳ್ಳಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಯಾಳ ಪ್ರಿಯಕರ ಚೇತನ್ ಪ್ರಚೋದನೆ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ. ಕೇತನ್‌ ವಿಗ್‌ ಧರಿಸುತ್ತಿದ್ದ ಕಾರಣಕ್ಕೆ ಮದುವೆ ಇಷ್ಟವಿರಲಿಲ್ಲ, ಹಾಗಾಗಿ ಕೊಲೆ ಮಾಡಿದ್ದಾಗಿ ಸಿಯಾ ಒಪ್ಪಿಕೊಂಡಿದ್ದಾಳೆ. ಈ ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ಅಭಿಯೋಜಕರನ್ನು ನೇಮಿಸಲು ಸರ್ಕಾರ ಒಪ್ಪಿದೆ.
Read Full Story

10:15 AM (IST) Jun 27

Negative Thoughts - ನಮ್ಮ ಮೆದುಳು ನೆಗೆಟಿವ್ ವಿಷಯಗಳನ್ನೇ ಯಾಕೆ ಹೆಚ್ಚು ನೆನಪಿಟ್ಟುಕೊಳ್ಳುತ್ತೆ?

How does stress affect memory Psychology: ಹತ್ತು ಜನ ನಮ್ಮನ್ನು ಹೊಗಳಿ, ಒಬ್ಬರು ಮಾತ್ರ ಟೀಕಿಸಿದರೆ, ಆ ಟೀಕೆಯೇ ಮನಸ್ಸಲ್ಲಿ ಉಳಿದುಬಿಡುತ್ತದೆ. ನಮ್ಮ ಮೆದುಳು ಅದನ್ನೇ ಪದೇ ಪದೇ ಯೋಚಿಸುತ್ತದೆ. ನಮ್ಮ ಬ್ರೇನ್ ನೆಗೆಟಿವ್ ವಿಷಯಗಳನ್ನೇ ಯಾಕೆ ಹೆಚ್ಚು ನೆನಪಿಟ್ಟುಕೊಳ್ಳುತ್ತೆ?

Read Full Story

10:00 AM (IST) Jun 27

ಕರ್ನಾಟಕದ ನಿರ್ಮಾಪಕ ಕೆವಿಎನ್ ತಮಿಳುನಾಡು ವಿಶೇಷ ದೆಹಲಿ ಪ್ರತಿನಿಧಿಯಾಗಿ ನೇಮಕ, ಭಾರಿ ವಿರೋಧ

ತಮಿಳುನಾಡು ಸಿಎಂ ಜೊಸೆಫ್ ವಿಜಯ್ ನಿರ್ಧಾರ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ಕರ್ನಾಟಕದ ಖ್ಯಾತ ನಿರ್ಮಾಪಕ ಕಿವಿಎನ್ ಪ್ರೊಡಕ್ಷನ್ ಮಾಲೀಕರನ್ನು ತಮಿಳುನಾಡಿನ ವಿಶೇಷ ದೆಹಲಿ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ.

Read Full Story

09:23 AM (IST) Jun 27

ಸಿಯಾ ಗೊಯೆಲ್ ಚೇತನ್ ನಡುವಿನ ಪ್ರೀತಿಯಲ್ಲಿದೆ ಕ್ರಿಕೆಟ್ ಲಿಂಕ್, ಕೇತನ್ ಹತ್ಯೆ ತನಿಖೆ ಸ್ಫೋಟಕ ಮಾಹಿತಿ

ಕೇತನ್ ಅಗರ್ವಾಲ್ ಲೋಹಘಡ ಬೆಟ್ಟದಿಂದ ತಳ್ಳಿ ಹಾಕಿ ಕೊಂದ ಭಾವಿ ಪತ್ನಿ ಸಿಯಾ ಗೊಯೆಲ್ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸಿಯಾ ಹಾಗೂ ಪ್ರಿಯತಮ ಚೇತನ್ ಪ್ರೀತಿಗೆ ಕ್ರಿಕೆಟ್ ಕನೆಕ್ಷನ್ ಇದೆ. ಇವರಿಬ್ಬರ ನಡುವೆ ಕ್ರಿಕೆಟ್ ಪಾತ್ರವೇನು?

Read Full Story

08:52 AM (IST) Jun 27

FIFA World Cup 2026 - ನಾಲ್ಕು ಬಾರಿಯ ಚಾಂಪಿಯನ್ ಬಲಿಷ್ಠ ಜರ್ಮನಿಯ ಕೆಡವಿ ಈಕ್ವೆಡಾರ್‌ ನಾಕೌಟ್‌ಗೆ!

ಫಿಫಾ ವಿಶ್ವಕಪ್‌ನ ಪಂದ್ಯದಲ್ಲಿ, ಈಕ್ವೆಡಾರ್ ತಂಡವು 4 ಬಾರಿಯ ಚಾಂಪಿಯನ್ ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿ 2006ರ ಬಳಿಕ ಮೊದಲ ಬಾರಿಗೆ ನಾಕೌಟ್‌ ಹಂತ ಪ್ರವೇಶಿಸಿದೆ. ಈ ಐತಿಹಾಸಿಕ ಗೆಲುವಿಗಾಗಿ ಈಕ್ವೆಡಾರ್‌ನಲ್ಲಿ ರಾಷ್ಟ್ರೀಯ ರಜೆ ಘೋಷಿಸಲಾಯಿತು. ಇನ್ನೊಂದೆಡೆ, ನೆದರ್‌ಲೆಂಡ್ಸ್‌ ಕೂಡ ಟ್ಯುನೀಶಿಯಾ ವಿರುದ್ಧ ಗೆದ್ದು ನಾಕೌಟ್‌ಗೆ ಲಗ್ಗೆಯಿಟ್ಟಿದೆ.
Read Full Story

08:19 AM (IST) Jun 27

ಭಾವಿ ಪತ್ನಿ ಸಿಯಾಳಿಂದ ಕೇತನ್ ಹತ್ಯೆ ಪ್ರಕರಣ, ವಿಶೇಷ ಅಭಿಯೋಜಕರಾಗಿ ಕಸಬ್ ಗಲ್ಲಿಗೇರಿಸಿದ ಉಜ್ವಲ್ ನಿಕಂ

ಪಾಕಿಸ್ತಾನದ ಉಗ್ರ ಅಜ್ಮಲ್ ಕಸಬ್ ಗಲ್ಲಿಗೇರಿಸಿದ ವಕೀಲ ಉಜ್ವಲ್ ನಿಕಂ ಇದೀಗ ಕೇತನ್ ಹತ್ಯೆ ಪ್ರಕರಣದ ವಿಶೇಷ ಅಭಿಯೋಜಕರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

Read Full Story

07:31 AM (IST) Jun 27

NCERT 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ಕೆ SIR ಸೇರ್ಪಡೆ!

ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ(SIR) ವಿಷಯದ ಇದೀಗ ಎನ್‌ಸಿಇಆರ್‌ಟಿ(NCERT)ಯ 9ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯವಾಗಿ ಸೇರ್ಪಡೆಗೊಂಡಿದೆ.

 

Read Full Story

07:16 AM (IST) Jun 27

ಕದನ ವಿರಾಮ ಉಲ್ಲಂಘಿಸಿದ ಇರಾನ್ ಮೇಲೆ ದಾಳಿ

ಜೂನ್ 25ರಂದು ಸಿಂಗಾಪೂರ ಮೂಲದ ಹಡಗಿನ ಮೇಲೆ ಇರಾನ್ ದಾಳಿ ನಡೆಸಿತ್ತು. ಈ ಮೂಲಕ ಕದನ ವಿರಾಮ ಉಲ್ಲಂಘಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ನೇರವಾಗಿ ಇರಾನ್ ಮಿಲಿಟರಿ ತಾಣದ ಮೇಲೆ ದಾಳಿ ಮಾಡಿದೆ. ಈ ದಾಳಿಯಿಂದ ಹೊರ್ಮುಜ್ ಜಲಸಂಧಿಯಲ್ಲಿ ಆತಂಕದ ವಾತವಾರಣವಿದ್ದು, ಹಡಗಳ ಪ್ರಯಾಣ ಮತ್ತೆ ಸ್ಥಗಿತಗೊಂಡಿದೆ.


More Trending News