ಏರ್ ಇಂಡಿಯಾ ವಿಮಾನ ಮತ್ತೊಂದು ಎಡವಟ್ಟು ಮಾಡಿ ತೀವ್ರ ಆಕ್ರೋಶಕ್ಕೆ ತುತ್ತಾಗಿದೆ. ದೆಹಲಿ ಕೆನಡಾ ಏರ್ ಇಂಡಿಯಾ ವಿಮಾನ ಬರೋಬ್ಬರಿ 5 ಗಂಟೆ ಹಾರಾಟದ ಬಳಿಕ ಅಧಿಕಾರಿಗಳಿಗೆ ತಾವು ಕೆನಡಾಗೆ ಕಳುಹಿಸಿದ ವಿಮಾನಕ್ಕೆ ವಿದೇಶದಲ್ಲಿ ಲ್ಯಾಂಡ್ ಆಗಲು ಅನುಮತಿ ಇಲ್ಲ ಅನ್ನೋದು ಜ್ಞಾನೋದಯವಾಗಿದೆ. ತಕ್ಷಣವೇ ಏರ್ ಇಂಡಿಯಾ ವಿಮಾನ ಯೂ ಟೂರ್ನ್ ಪಡೆದು ಮರಳಿ ದೆಹಲಿಯಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ. ಅಧಿಕಾರಿಗಳಿಗೆ ತಪ್ಪಿನ ಅರಿವಾದಾಗ ವಿಮಾನ ಚೀನಾ ಗಡಿ ದಾಟಿತ್ತು. ಪಂಚ ರಾಜ್ಯ ಚುನಾವಣೆ ಅಪ್‌ಡೇಟ್, ಮದ್ಯಪ್ರಾಚ್ಯ ಯುದ್ಧ, ತೈಲ ಹಾಗೂ ಗ್ಯಾಸ್ ಕೊರತೆ ಸೇರಿದಂತೆ ಇಂದಿನ ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ.
10:56 PM (IST) Mar 21
ಉತ್ತರ ಪ್ರದೇಶದಲ್ಲಿ, ಅ*ತ್ಯಾಚಾ*ರ ಸಂತ್ರಸ್ತೆಯೊಬ್ಬರ ದೂರು ದಾಖಲಿಸಲು ಕಾನ್‌ಸ್ಟೆಬಲ್ ಒಬ್ಬರು ಲೈಂಗಿಕ ಸುಖಕ್ಕೆ ಬೇಡಿಕೆಯಿಟ್ಟ ಅಮಾನವೀಯ ಘಟನೆ ನಡೆದಿದೆ. ಸಂತ್ರಸ್ತೆ ನೀಡಿದ ಫೋನ್ ಸಂಭಾಷಣೆಯ ಆಡಿಯೋ ಸಾಕ್ಷ್ಯದ ಆಧಾರದ ಮೇಲೆ, ಆರೋಪಿ ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಿ ಎಫ್‌ಐಆರ್ ದಾಖಲಿಸಲಾಗಿದೆ.
09:48 PM (IST) Mar 21
ಮುಂಬೈನ ಪೃಥ್ವಿರಾಜ್ ಬೋಹ್ರಾ ಎಂಬುವವರು ಜುಹು ಬೀಚ್‌ನಲ್ಲಿ 'ಆಲಿಸುವ ಸೇವೆ'ಯನ್ನು ಆರಂಭಿಸಿದ್ದಾರೆ. ಜನರ ದುಃಖ, ಚಿಂತೆಗಳನ್ನು ಕೇಳಲು ಅವರು ನಿಗದಿತ ಶುಲ್ಕವನ್ನು ವಿಧಿಸುತ್ತಾರೆ. ನಗರ ಜೀವನದಲ್ಲಿನ ಒಂಟಿತನ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
09:07 PM (IST) Mar 21
08:08 PM (IST) Mar 21
ಸಂಗೀತ ನಿರ್ದೇಶಕ ಇಳಯರಾಜಾ ಅವರು ಭಾಗ್ಯರಾಜ್ ಚಿತ್ರಕ್ಕಾಗಿ ಕಂಪೋಸ್ ಮಾಡಿದ್ದ ಎರಡು ಹಾಡುಗಳನ್ನು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಚಿತ್ರಕ್ಕೆ ನೀಡಿದ್ದರು. ಆ ಕುತೂಹಲಕಾರಿ ಕಥೆಯನ್ನು ಇಲ್ಲಿ ನೋಡೋಣ.
07:58 PM (IST) Mar 21
07:38 PM (IST) Mar 21
07:25 PM (IST) Mar 21
'ಧುರಂಧರ್ 2' ಚಿತ್ರದಲ್ಲಿ ಖತರ್ನಾಕ್ ವಿಲನ್ ಆಗಿ ಮಿಂಚಿದ ನಟ ಅರ್ಜುನ್ ರಾಂಪಾಲ್ ಶೀಘ್ರದಲ್ಲೇ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದಲ್ಲಿ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
07:17 PM (IST) Mar 21
ಪಾಕಿಸ್ತಾನದ ಮುರಿದ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಕೇಂದ್ರದೊಳಗೆ, ಅಪರಿಚಿತ ದುಷ್ಕರ್ಮಿಗಳು ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯನ್ನು ಗುಂಡಿಕ್ಕಿ ಮತ್ತು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
07:06 PM (IST) Mar 21
20 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ. ನಾನು ತುಂಬಾ ಚೆನ್ನಾಗಿ ನಟಿಸಿದ್ದೇನೆ ಎಂಬುದು ನನಗೆ ಗೊತ್ತು. ಆದರೆ ಸಿನಿಮಾ ನೋಡಿದ ಮೇಲೆ ನನಗೆ ಆಘಾತವಾಯಿತುವ ಎಂದರು ನಟಿ ದಿವಿ ವಡತ್ಯಾ.
07:00 PM (IST) Mar 21
06:43 PM (IST) Mar 21
ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಹನಿಮೂನ್ ಫೋಟೋವೊಂದು ಹೊರಬಿದ್ದಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
06:31 PM (IST) Mar 21
06:30 PM (IST) Mar 21
06:15 PM (IST) Mar 21
ಅಮೆರಿಕ-ಇರಾನ್ ಸಂಘರ್ಷವು ಹಿಂದೂ ಮಹಾಸಾಗರಕ್ಕೆ ವಿಸ್ತರಿಸಿದ್ದು, ಇರಾನ್ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಬ್ರಿಟನ್ ಸೇನಾ ನೆಲೆಯ ಮೇಲೆ ವಿಫಲ ಕ್ಷಿಪಣಿ ದಾಳಿ ನಡೆಸಿದೆ. ಈ ಮಿಸೈಲ್ ಪ್ರಯಾಣ ಮಾಡಿರುವ ದೂರ ನೋಡಿ ಅಮೆರಿಕ ಕಂಗಾಲಾಗಿದೆ.
05:51 PM (IST) Mar 21
ರಾಜ್ಯದ ಮೊದಲ ಮಹಿಳಾ ಹೃದಯ ಕಸಿ ಸ್ವೀಕರಿಸಿದ ಕನ್ನಡತಿ ರೀನಾ ರಾಜು, 2009ರಲ್ಲಿಹೃದಯ ಕಸಿ ಮಾಡಿಸಿಕೊಂಡಿದ್ದಾರೆ. ಅವರು 'ಲೈಟ್ ಎ ಲೈಫ್' ಫೌಂಡೇಶನ್ ಮೂಲಕ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಕಸಿ ನಂತರವೂ ಸಕ್ರಿಯ ಜೀವನ ನಡೆಸಬಹುದು ಎಂಬುದಕ್ಕೆ ಸ್ಫೂರ್ತಿಯಾಗಿದ್ದಾರೆ.
05:38 PM (IST) Mar 21
05:28 PM (IST) Mar 21
'ಧುರಂಧರ್ 2' ಸಿನಿಮಾ ಬಗ್ಗೆ ವಿವಾದ ಜೋರಾಗುತ್ತಿದೆ. ಈಗ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ವಕ್ತಾರ ವಾರಿಸ್ ಪಠಾಣ್ ಈ ಸಿನಿಮಾವನ್ನು 'ಪ್ರಾಪಗಾಂಡ' ಎಂದು ನೇರವಾಗಿ ಕರೆದಿದ್ದಾರೆ.
05:12 PM (IST) Mar 21
ಪೋ*ರ್ನ್ ವಿಡಿಯೋಗಳಲ್ಲಿ ಗಂಟೆಗಟ್ಟಲೆ ನಡೆಯುವ ಕ್ರಿಯೆಯನ್ನು ನೋಡಿ ಅನೇಕರು ತಮ್ಮ ಲೈಂ*ಗಿಕ ಜೀವನದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಆದರೆ, ಖ್ಯಾತ ವೈದ್ಯೆ ಡಾ.ದುರ್ಗಶ್ರೀ ಶೆಟ್ಟಿ ಅವರು, ಈ ವಿಡಿಯೋ ಶೂಟಿಂಗ್‌ನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ಮಧ್ಯೆ ಬ್ರೇಕ್‌ಗಳು, ಹಾಸಿಗೆ ಹೇಗೆ ಅಲ್ಲಾಡತ್ತೆ, ಮಹಿಳೆಯರು ಏನು ಮಾಡ್ತಾರೆ ಸೇರಿದಂತೆ ಅಲ್ಲಿ ನಡೆಯುವುದೆಲ್ಲವನ್ನೂ ತಿಳಿಸಿದ್ದಾರೆ.
04:54 PM (IST) Mar 21
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಈ ಬಾರಿಯ ಈದ್ ಹಬ್ಬದ ಸಂಭ್ರಮ ಕಳೆಗುಂದಿದೆ. ಐತಿಹಾಸಿಕ ಅಲ್-ಅಕ್ಸಾ ಮಸೀದಿಯನ್ನು 1967ರ ನಂತರ ಮೊದಲ ಬಾರಿಗೆ ಮುಚ್ಚಲಾಗಿದ್ದು, ಗಲ್ಫ್ ರಾಷ್ಟ್ರಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಲಾಗಿದೆ.
04:04 PM (IST) Mar 21
ಅ*ತ್ಯಾಚಾ*ರ ಆರೋಪದ ಮೇಲೆ ಜ್ಯೋತಿಷಿ ಅಶೋಕ್ ಖರಾತ್‌ನನ್ನು ಬಂಧಿಸಲಾಗಿದ್ದು, ಆತನ ಬಳಿ ರಾಜಕಾರಣಿಗಳು ಸೇರಿದಂತೆ 250ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳಿವೆ ಎಂದು 'ಗುಲಾಬಿ ಗ್ಯಾಂಗ್' ಅಧ್ಯಕ್ಷೆ ಸಂಗೀತಾ ತಿವಾರಿ ಆರೋಪಿಸಿದ್ದಾರೆ.
03:35 PM (IST) Mar 21
ಭಾರತದ ಖ್ಯಾತ ರ‍್ಯಾಲಿ ಚಾಲಕ ಹರಿ ಸಿಂಗ್ ಅವರು ಮಾಲ್ಡೀವ್ಸ್‌ನಲ್ಲಿ ನಡೆದ ಸ್ಪೀಡ್‌ಬೋಟ್ ಅಪಘಾತದ ನಂತರ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಉದ್ಯಮಿ ಗೌತಮ್ ಸಿಂಘಾನಿಯಾ ಅವರನ್ನು ರಕ್ಷಿಸಲಾಗಿದ್ದು, ಹರಿ ಸಿಂಗ್ ಮತ್ತು ಇನ್ನೊಬ್ಬರಿಗಾಗಿ ಮಾಲ್ಡೀವ್ಸ್ ರಕ್ಷಣಾ ಪಡೆ ತೀವ್ರ ಶೋಧ ನಡೆಸುತ್ತಿದೆ.
03:14 PM (IST) Mar 21
ತೆಲಂಗಾಣ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ 'ದಿ ಗರ್ಲ್‌ಫ್ರೆಂಡ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ವೇದಿಕೆಯಲ್ಲೇ ತಮ್ಮ ನಟನೆಯನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ ಅವರು, ತೆಲುಗು ಚಿತ್ರರಂಗಕ್ಕೆ ಬಂದಾಗ ಮಗಳಂತೆ ನೋಡಿಕೊಂಡರು ಎಂದಿದ್ದಾರೆ.
02:49 PM (IST) Mar 21
ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ, ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ, ಈ ಪೈಕಿ 2 ವರ್ಷದ ಮಗು ಹೆಣ್ಣುಮುಗು ಸೇರಿದಂತೆ. ತಮ್ಮ ಮನೆ ಬಾಡಿಗೆ ನೀಡಿ ತೆರಳಿದ್ದ ಈ ಕುಟುಂಬ, ಬೇರೊಂದು ಬಾಡಿಗೆ ಮನೆಯಲ್ಲಿ ದುರಂತ ನಡೆದಿದೆ.
02:31 PM (IST) Mar 21
ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ 11 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿದ್ದು, ಕಾಂಗ್ರೆಸ್ ತೊರೆದು ಬಂದಿದ್ದ ಬಿ.ಎಸ್. ಅನೂಪ್, ಆರ್.ಎಸ್. ಅರುಣ್ ರಾಜ್‌ಗೂ ಟಿಕೆಟ್ ಸಿಕ್ಕಿದೆ. ಬಿಜೆಪಿ ಒಟ್ಟು 97 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ.
01:38 PM (IST) Mar 21
01:32 PM (IST) Mar 21
01:21 PM (IST) Mar 21
ಇಬ್ರು ಗೆಳತಿಯರ ಜೊತೆ ಮನೆಯಲ್ಲಿದ್ದೆ, ಮೈಕ್ ಆನ್ ಮರೆತು ಖುಲ್ಲಂ ಖುಲ್ಲಾ ಮಾತಾಡಿದ ಬ್ರಾವೋ, ಕೆಕೆಆರ್ ಸುದ್ದಿಗೋಷ್ಠಿಯಲ್ಲಿ ಬ್ರಾವೋ ಮಾತು ಇದೀಗ ಭಾರಿ ವೈರಲ್ ಆಗಿದೆ. ಅಜಿಂಕ್ಯ ರಹಾನೆ ಸೂಚನೆ ನೀಡುತ್ತಿದ್ದಂತೆ ಅಯ್ಯೋ ಎಂದು ಬ್ರಾವೋ ಮಾತು ನಿಲ್ಲಿಸಿದ್ದಾರೆ.
12:37 PM (IST) Mar 21
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಇಳಿಕೆ ಮುಂದುವರೆದಿದೆ. ಇದೀಗ ಮಾರ್ಚ್ 21ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮಹಾ ಕುಸಿತವಾಗಿದೆ. ಇಂದಿನ ಚಿನ್ನದ ರೇಟ್ ಎಷ್ಟು ನೋಡೋಣ ಬನ್ನಿ.
12:28 PM (IST) Mar 21
ಸ್ಪೀಡ್‌ಬೋಟ್ ಅಪಘಾತ; ರ‍್ಯಾಲಿ ದಿಗ್ಗಜ ಹರಿ ಸಿಂಗ್ ನಾಪತ್ತೆ, ರೇಮೆಂಡ್ MD ಗೌತಮ್ ಸಿಂಘಾನಿಯಾಗೆ ಗಾಯ, ಮಾಲ್ಡೀವ್ಸ್‌ನಲ್ಲಿ ನಡೆದ ಈ ಘಟನೆಯಲ್ಲಿ ಹರಿ ಸಿಂಗ್ ಜೊತೆ ಮತ್ತಿಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ.
12:13 PM (IST) Mar 21
ಕುಂಭಮೇಳದಲ್ಲಿ 'ರುದ್ರಾಕ್ಷಿ ಲೇಡಿ' ಎಂದು ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದು, ಇದು 'ಲವ್ ಜಿಹಾದ್' ಚರ್ಚೆಗೆ ಕಾರಣವಾಗಿದೆ. ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿ ರಕ್ಷಣೆ ಕೋರಿದ್ದಾರೆ.
11:33 AM (IST) Mar 21
ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಈದ್ ಪ್ರಾರ್ಥನೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೊದಲ ಬಾರಿಗೆ ಗೈರಾಗಿದ್ದರು. ಅವರ ಬದಲಿಗೆ ಪುತ್ರ ನಿಶಾಂತ್ ಕುಮಾರ್ ಭಾಗವಹಿಸಿದ್ದು, ಬಿಹಾರ ರಾಜಕೀಯದಲ್ಲಿ ಉತ್ತರಾಧಿಕಾರದ ಚರ್ಚೆಗೆ ಕಾರಣವಾಗಿದೆ. .
11:01 AM (IST) Mar 21
ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಮಾತನಾಡಿದ ಸಂಸದ ಅಸಾದುದ್ದೀನ್ ಓವೈಸಿ, ಪಾಕಿಸ್ತಾನವನ್ನು 'ಇಸ್ರೇಲ್‌ನ ಕಿರಿಯ ಸಹೋದರ' ಎಂದು ಕರೆದು ತೀವ್ರ ವಾಗ್ದಾಳಿ. ಕಾಬೂಲ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 400 ಅಮಾಯಕರು ಸಾವನ್ನಪ್ಪಿದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.
10:17 AM (IST) Mar 21
'ಕೆಡಿ' ಸಿನಿಮಾದ 'ಸರ್ಸೆ ಸರ್ಸೆ' ಹಾಡು ದೊಡ್ಡ ವಿವಾದ ಸೃಷ್ಟಿಸಿದೆ. ಈ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ನೋರಾ ಫತೇಹಿ, ತನಗೆ ಸಾಹಿತ್ಯದ ಅರ್ಥವೇ ತಿಳಿದಿರಲಿಲ್ಲ ಎಂದು ಹೇಳುವ ಮೂಲಕ ನಿರ್ದೇಶಕ ಪ್ರೇಮ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇದಕ್ಕೆ ಪ್ರೇಮ್ ತಿರುಗೇಟು ನೀಡಿದ್ದಾರೆ.
09:52 AM (IST) Mar 21
ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಪಾರ್ಟ್ನರ್ ಮಹಿಕಾ ಶರ್ಮಾಗೆ 10 ಕೋಟಿ ರೂ. ಮೌಲ್ಯದ ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೊಸ ಕಾರಿಗೆ ಮಹಿಕಾ ಪೂಜೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಲೇಖನವು ಕಾರಿನ ವಿಶೇಷತೆಗಳೇನು ನೋಡೋಣ ಬನ್ನಿ.
09:21 AM (IST) Mar 21
ಗುರೂಜಿ ರಾಸಲೀಲೆ ವಿಡಿಯೋ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಮಹಿಳಾ ಆಯೋಗ ಮುಖ್ಯೆಸ್ಥೆ ರಾಜೀನಾಮೆ, 35ರ ಮಹಿಳೆಯನ್ನು3 ವರ್ಷದಿಂದ ಬಳಸಿಕೊಂಡ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಗುರೂಜಿ ಪ್ರಕರಣ ಇದೀಗ ಕೆಲ ಟ್ವಿಸ್ಟ್ ಪಡೆದುಕೊಂಡಿದೆ.
08:39 AM (IST) Mar 21
08:24 AM (IST) Mar 21
ಐಪಿಎಲ್ 2024 ಆರಂಭಕ್ಕೆ ಮುನ್ನವೇ ಹಲವು ಫ್ರಾಂಚೈಸಿಗಳು ಆಟಗಾರರ ಗಾಯದ ಸಮಸ್ಯೆಯಿಂದ ಕಂಗೆಟ್ಟಿವೆ. ಜೋಶ್ ಹೇಜಲ್‌ವುಡ್, ಪ್ಯಾಟ್ ಕಮಿನ್ಸ್‌ರಂತಹ ಪ್ರಮುಖರು ಆರಂಭಿಕ ಪಂದ್ಯಗಳಿಗೆ ಗೈರಾದರೆ, ಸ್ಯಾಮ್ ಕರನ್, ನೇಥನ್ ಎಲ್ಲಿಸ್‌ರಂತಹ ಆಟಗಾರರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
08:22 AM (IST) Mar 21
ಯೂಟ್ಯೂಬರ್ ಧ್ರುವ್ ರಾಥಿ ಅವರು 'ಧುರಂಧರ್ 2' ಚಿತ್ರವನ್ನು ಕಳಪೆ 'ಪ್ರೊಪಗಾಂಡ' ಎಂದು ಟೀಕಿಸಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರನ್ನು 'ಬಿಜೆಪಿ ಪ್ರಚಾರಕ' ಎಂದು ಕರೆದಿದ್ದು, ಈ ಚಿತ್ರದ ಮೂಲಕ ಅದು ಎಲ್ಲರಿಗೂ ತಿಳಿಯಲಿದೆ ಎಂದಿದ್ದಾರೆ.
08:12 AM (IST) Mar 21
ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗಳು ಬಹುತೇಕ ಗುರಿ ತಲುಪಿವೆ ಮತ್ತು ಅಲ್ಲಿನ ಸರ್ಕಾರವನ್ನು ಬದಲಿಸುವ ಪ್ರಯತ್ನ ಯಶಸ್ವಿಯಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕದನ ವಿರಾಮದ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಹಾರ್ಮುಜ್ ವಿಚಾರದಲ್ಲಿ ನ್ಯಾಟೋವನ್ನು ಟೀಕಿಸಿದ್ದಾರೆ.
07:18 AM (IST) Mar 21
ಅಧಿಕಾರಿಗಳು ಬೋಯಿಂಗ್ 77-300 ER ವಿಮಾನದ ಬದಲು ಬೋಯಿಂಗ್ 777 ವಿಮಾನ AI185ವನ್ನು ಕೆನಡಾಗೆ ರೂಟ್ ಮಾಡಿದ್ದಾರೆ. ಪ್ರಯಾಣಿಕರ ಹೊತ್ತು ವಿಮಾನ ಚೀನಾ ಗಡಿ ದಾಟಿ ಸಾಗುತ್ತಿದ್ದಂತೆ ಅಧಿಕಾರಿಗಳಿಗೆ ತಪ್ಪಿನ ಅರಿವಾಗಿದೆ. ಬೋಯಿಂಗ್ 777 ವಿಮಾನಕ್ಕೆ ಕೆನಾಡ ಪ್ರವೇಶಿಸುವ ಅನುಮತಿ ಇರಲಿಲ್ಲ.