ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ, ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ, ಈ ಪೈಕಿ 2 ವರ್ಷದ ಮಗು ಹೆಣ್ಣುಮುಗು ಸೇರಿದಂತೆ. ತಮ್ಮ ಮನೆ ಬಾಡಿಗೆ ನೀಡಿ ತೆರಳಿದ್ದ ಈ ಕುಟುಂಬ, ಬೇರೊಂದು ಬಾಡಿಗೆ ಮನೆಯಲ್ಲಿ ದುರಂತ ನಡೆದಿದೆ. 

ಕೊಚ್ಚಿ (ಮಾ.21) : ಎರಡು ವರ್ಷದ ಪುಟ್ಟ ಕಂದಮ್ಮ, 4 ವರ್ಷ ಹಾಗೂ 14 ವರ್ಷದ ಇಬ್ಬರು ಮಕ್ಕಳು ಸಂಸಾರ ಅದು. ಪತಿ ದುರಂತ ಅಂತ್ಯಕಂಡ ಬಳಿಕ ಪತ್ನಿ ಮೂರು ಮಕ್ಕಳ ಜೊತೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರು. ಕೊನಗೆ ಸಂಸಾರದ ನಾಲ್ಕು ಮಂದಿ ಜೊತೆಗೆ ಸಂಬಂಧಿ ಮಹಿಳೆ ದುರಂತ ಅಂತ್ಯ ಕಂಡ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ತಿರುವಂತಪುರಂ ಮೂಲದ ಈ ಕುಟುಂಬ ಚಿಕಿತ್ಸೆಗಾಗಿ ವಡುತಲಗೆ ವರ್ಗಾವಣೆಗೊಂಡಿತ್ತು. ಘಟನಾ ಸ್ಥಳದಿಂದ ಡೆತ್ ನೋಟ್ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Add Asianetnews Kannada as a Preferred SourcegooglePreferred

ಚಿಕಿತ್ಸೆಗಾಗಿ ವರ್ಗಾಣೆಗೊಂಡಿದ್ದ ಕುಟುಂಬ

ಮೃತರನ್ನು ಶ್ರೀಕುಮಾರಿ, ಅವರ ಮಗಳು ಅಶ್ವತಿ ಎಸ್ ನಾಯರ್, ಕಾರ್ಣಿವನ್ (14), ಕೀರ್ತವನ್ (4) ಮತ್ತು ಎರಡು ವರ್ಷದ ಹೆಣ್ಣು ಮಗು ಎಂದು ಗುರುತಿಸಲಾಗಿದೆ. ಈ ಕುಟುಂಬ ಎರಡು ತಿಂಗಳ ಹಿಂದಷ್ಟೇ ವಡುತಲದಲ್ಲಿ ಬಾಡಿಗೆ ಮನೆಗೆ ಬಂದಿತ್ತು. ಆಸ್ಟರ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಪಡೆಯಲು ಇವರು ಎರ್ನಾಕುಲಂಗೆ ಬಂದಿದ್ದರು. 2025ರ ಫೆಬ್ರವರಿಯಿಂದ ತಿರುವನಂತಪುರಂನಲ್ಲಿರುವ ತಮ್ಮ ಸ್ವಂತ ಮನೆಯನ್ನುಬೇರೆಯವರಿಗೆ ಬಾಡಿಗೆಗೆ ನೀಡಿ ಇವರು ಎರ್ನಾಕುಲಂಗೆ ಬಂದಿದ್ದರು. ಚಿಕಿತ್ಸೆಗಾಗಿ ಈ ನಿರ್ಧಾರ ಮಾಡಿದ್ದರು.

ಡೆತ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಡೆತ್ ನೋಟ್ ಹಾಗೂ ಮೇಲ್ನೋಟಕ್ಕೆ ಇಂದೊಂದು ಸಾಮೂಹಿಕ ದುರಂತ ಅಂತ್ಯದ ಘಟನೆ ಎಂದು ಪೊಲೀಸರು ಹೇಳಿದ್ದಾರೆ. ಡೆತ್ ನೋಟ್‌ನಲ್ಲಿ ಪತಿ ಕುಟುಂಬಸ್ಥರ ವಿರುದ್ದ ಕೆಲ ಆರೋಪಗಳಿವೆ. ಪತಿ ಕುಟುಂಬಸ್ಥರು ನೀಡಿದ ಕಿರುಕುಳವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಪತಿ ಕೆಲ ತಿಂಗಳ ಹಿಂದೆ ಬದುಕು ಅಂತ್ಯಗೊಳಿಸಿದ್ದರು. ಪತಿ ಮರಣದ ನಂತರ, ಪತಿಯ ಕುಟುಂಬಸ್ಥರ ಕಿರುಕಳ ತೀವ್ರಗೊಂಡಿದೆ ಎಂದು ಆರೋಪಿಸಿದ್ದಾರೆ. ಈ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸೆಂಟ್ರಲ್ ಎಸಿಪಿ ಸಿ. ಪ್ರೇಮಾನಂದಕೃಷ್ಣನ್ ತಿಳಿಸಿದ್ದಾರೆ.

ಈ ಸಾಮೂಹಿಕ ಆತ್ಮಹತ್ಯೆಗೆ ಅಶ್ವತಿಯ ಪತಿಯ ಕುಟುಂಬವೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಲಾಗಿದೆ. ಪತಿಯ ಕುಟುಂಬದವರ ನಿಂದನೆಯೇ ಈ ದುರಂತಕ್ಕೆ ಕಾರಣ ಎಂದು ಪತ್ರದಲ್ಲಿ ಬರೆಯಲಾಗಿದೆ. ಅಶ್ವತಿಯ ಪತಿ ಕೂಡ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿಶೇಷ ಸೂಚನೆ: ಬದುಕು ಅಂತ್ಯಗೊಳಿಸುವ ನಿರ್ಧಾರ ಯಾವುದೇ ಹಂತದಲ್ಲೂ ಮಾಡಬೇಡಿ. ಇದು ಯಾವ ಸಮಸ್ಯೆಗೂ ಪರಿಹಾರವಲ್ಲ. ಮಾನಸಿಕ ತಜ್ಞರು, ಆಪ್ತರನ್ನು ಸಂಪರ್ಕಿಸಿ, ಉಚಿತ ಸಮಾಲೋಚನಾ ಕೇಂದ್ರಗಳಿಗೆ ಕರೆ ಮಾಡಿ